ಮುಂಡಗೋಡ; ಪಟ್ಟಣದಲ್ಲಿ ರವಿವಾರ 75 ನೇ ಸ್ವಾತಂತ್ರ ದಿನಾಚರಣೆ ಸಂಭ್ರಮ ಜೋರಾಗಿತ್ತು.. ಇಲ್ಲಿನ ಪ್ರತೀ ಗಲ್ಲಿಗಳಲ್ಲೂ ಭಾರತ ಮಾತೆಯ ತ್ರಿವರ್ಣಧ್ವಜ ರಾರಾಜಿಸುತ್ತಿತ್ತು.. ಪಟ್ಟಣದ ಸಂಘಸಂಸ್ಥೆಗಳು ವಿಶೇಷವಾಗಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿದ್ರು..ಇನ್ನು ಸ್ವಾತಂತ್ರ ದಿನಾಚರಣೆ ನಿಮಿತ್ತ ಮುಂಡಗೋಡಿನ ಪುಟ್ಟ ಪುಟಾಣಿ ಮಕ್ಕಳು ದೇಶಭಕ್ತಿಗೀತೆಗೆ ಹೆಜ್ಜೆ ಹಾಕಿದ್ದಾರೆ.. ಸ್ವಾತಂತ್ರ ಸಂಭ್ರಮದ ಕ್ಷಣಗಳನ್ನು ವಿನೂತನ ಡ್ಯಾನ್ಸ್ ಮಾಡುವ ಮೂಲಕ ದೇಶಭಕ್ತಿಯ ಕಂಪು ಹರಿಸಿದ್ದಾರೆ.. ಹಾಗಾದ್ರೆ ಆ ಸಕತ್ ಸ್ಟೆಪ್ ಹೇಗಿದೆ ಗೊತ್ತಾ.. ನೀವೂ ನೋಡಿ..
Top Stories
ಗೃಹ ಬಳಕೆಯ ಅನಿಲ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದಂತೆ ತಡೆಯಿರಿ: ಡಿಸಿ ಲಕ್ಷ್ಮೀ ಪ್ರಿಯ…!
ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಂದ ಮುರುಡೇಶ್ವರ ಗೃಹಕಚೇರಿಯಲ್ಲಿ ಜನತಾ ದರ್ಶನ..!
ಬಿಜೆಪಿ ಮುಖಂಡ, ಶಾಸಕ, ಜನಾರ್ದನರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷ ಪ್ರಕಟ..! ಓಬಳಾಪುರಂ ಮೈನಿಂಗ್ ಕೇಸಲ್ಲಿ ರೆಡ್ಡಿ ಅಪರಾಧಿ..!
ಮೇ. 7 ಮಾಕ್ ಡ್ರಿಲ್, ಅಷ್ಟಕ್ಕೂ ಈ ಮಾಕ್ ಡ್ರಿಲ್ ಅಂದರೇನು..? ಇಲ್ಲಿದೆ ಸಂಪೂರ್ಣ ಮಾಹಿತಿ..!
ಕಾರ್ ಹಾಗೂ ಲಾರಿ ನಡುವೆ ಮುಖಾಮುಕಿ ಡಿಕ್ಕಿ, ಕಾರಲ್ಲಿದ್ದ ,ಐವರು ಸ್ಥಳದಲ್ಲೇ ಸಾವು..!
ಪರಿಸರ ರಕ್ಷಣೆಗೆ ವಿದ್ಯಾರ್ಥಿಗಳೇ ಯೋಧರು : ಉಪ ರಾಷ್ಟ್ರಪತಿ ಜಗದೀಪ್ ಧನಕರ್
ಶಿರಸಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಾಯಿ ಹೆಸ್ರಲ್ಲಿ ಗಿಡ ನೆಟ್ಟರು..!
ಅತ್ತಿವೇರಿ ಡ್ಯಾಂ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವು ಕಂಡ ಹುನಗುಂದದ ಮಾನಸಿಕ ಅಸ್ವಸ್ಥ..!
ಮುಂಡಗೋಡ ಠಾಣೆಗೆ ವಿನೋದ್ ರೆಡ್ಡಿ ನೂತನ ಕ್ರೈಂ PSI, ನಿರೀಕ್ಷೆಗಳು ಒಂದಾ, ಎರಡಾ..?
ಕಾರವಾರ ಅಂಚೆ ವಿಭಾಗಕ್ಕೆ ಕರ್ನಾಟಕ ರಾಜ್ಯ ವೃತ್ತ ಮಟ್ಟದ ಪ್ರಶಸ್ತಿ
ಉತ್ತರ ಕನ್ನಡದಲ್ಲಿ ಮೇ.5 ರಿಂದ ಪ.ಜಾತಿ ಸಮುದಾಯದ ಸಮೀಕ್ಷೆ : ಜಿಲ್ಲಾಧಿಕಾರಿ
ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದಾರುಣ ಸಾವು..!
ಮುಂಡಗೋಡ ತಾಲೂಕಿಗೆ 65.3% ರಷ್ಟು SSLC ಫಲಿತಾಂಶ, ಮಳಗಿ ಪ್ರೌಢಶಾಲೆಯ ಭಾಗ್ಯಶ್ರೀ ಗೆ ಅತಿ ಹೆಚ್ಚು ಅಂಕ..!
ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನಲ್ಲಿ ಕೆಲಸದ ಸಮಯದಲ್ಲಿ ಬೃಹತ್ ಗಾತ್ರದ ಪ್ಯಾನಲ್ ಬಿದ್ದು ಗುತ್ತಿಗೆ ಕಾರ್ಮಿಕ ಸಾವು
ಮುಂಡಗೋಡ ತಾಲೂಕಿನ 79 ಶಾಲೆಗಳ ಸ್ಥಿತಿ ಚಿಂತಾಜನಕ, ಮಕ್ಕಳನ್ನು ಶಾಲೆಗೆ ಕಳಿಸೋಕೆ ಪಾಲಕರಿಗೆ ಭಾರೀ ಆತಂಕ..!
ಮೈನಳ್ಳಿಯಲ್ಲಿ ಸಿಡಿಲಾಘಾತ, ಐವರಿಗೆ ಸಿಡಿಲು ಬಡಿದು ಗಾಯ, ಆಸ್ಪತ್ರೆಗೆ ದಾಖಲು..!
ನಂದಿಪುರದಲ್ಲಿ ಸಿಡಿಲಿನಾರ್ಭಟ, ಮನೆಯ ವಿದ್ಯುತ್ ವೈಯರ್ ಗಳೇ ಭಸ್ಮ, ಟಿವಿ, ಪ್ರಿಡ್ಜು ಹರೋಹರ..! ಮನೆ ಮಂದಿಗೂ ಗಾಯ..!
ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ಸಮುದ್ರ ಪಾಲು, ಮತ್ತಿಬ್ಬರು ಬಚಾವ್..!
ಮುಂಡಗೋಡ ಪೊಲೀಸರ ಗಟ್ಟಿ ಕಾರ್ಯಾಚರಣೆ, ಗೋಹತ್ಯೆ ಕೇಸಿನಲ್ಲಿ ಓರ್ವ ಆರೋಪಿ ಅರೆಸ್ಟ್, ಮತ್ತೋರ್ವ ಪರಾರಿ..!
ಕಲಘಟಗಿಯಲ್ಲಿ 2 ಕಿಮೀ ಉದ್ದದ ರಾಷ್ಟ್ರಧ್ವಜದ ಮೆರವಣಿಗೆ, ಸಂತೋಷ ಲಾಡ್ ನೇತೃತ್ವ..!
ಕಲಘಟಗಿ: ಕೋವಿಡ್ ಆತಂಕದ ನಡುವೆಯೇ ಕಲಘಟಗಿಯಲ್ಲಿ ಅದ್ದೂರಿ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು. ಮಾಜಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ 2 ಕಿಮೀ ಉದ್ದದ 9 ಅಡಿ ಅಗಲ ಇರುವ ರಾಷ್ಟ್ರಧ್ವಜದ ಮೆರವಣಿಗೆ ನಡೆಯಿತು. ಮೆರವಣಿಗೆ ವೇಳೆ ಸಾವಿರಾರು ಜನರಿಂದ ರಾಷ್ಟ್ರಭಕ್ತಿಯ ಘೋಷಣೆಗಳು ಮೊಳಗಿದವು. ದೇಶಭಕ್ತಿಯ ಗೀತೆಗಳ ಮೂಲಕ, ಘೋಷಣೆ ಗಳ ಮೂಲಕ ವಿಶೇಷ ರಾಷ್ಟ್ರಧ್ವಜದ ಮೆರವಣಿಗೆ ನಡೆಸಲಾಯಿತು.
ಮುಂಡಗೋಡಿನಲ್ಲಿ ಸಂಗೊಳ್ಳಿ ರಾಯಣ್ಣನ ಜನ್ಮದಿನದ ಸಂಭ್ರಮ..!
ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ರಾಯಣ್ಣ ಅಭಿಮಾನಿಗಳ ಸಂಘದಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮ ದಿನ ಆಚರಿಸಲಾಯಿತು. ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ ರಾಯಣ್ಣನವರ ಶೌರ್ಯ ಹಾಗೂ ಬಲಿದಾನವನ್ನು ಸ್ಮರಿಸಲಾಯಿತು. ರಾಯಣ್ಣನವರ ಪರವಾಗಿ ಘೋಷಣೆ ಕೂಗಿ ಅಭಿಮಾನಿಗಳು ಸಂಭ್ರಮಿಸಿದ್ರು.
ಹುನಗುಂದದಲ್ಲಿ ರಾಯಣ್ಣ ಬಾಯ್ಸ್ ನಿಂದ ಸಂಭ್ರಮದ ಧ್ವಜಾರೋಹಣ..!
ಮುಂಡಗೋಡ; ತಾಲೂಕಿನ ಹುನಗುಂದ ಗ್ರಾಮದಲ್ಲಿ ರಾಯಣ್ಣ ಬಾಯ್ಸ್ ವತಿಯಿಂದ ಸಂಭ್ರಮದ ಧ್ವಜಾರೋಹಣ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದ್ರು. ಹುನಗುಂದದ ಮುಖ್ಯ ಸರ್ಕಲ್ ನಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಅಲ್ದೇ ಸರ್ಕಲ್ ನಲ್ಲಿ ಇರುವ ಧ್ವಜಸ್ತಂಭದ ಮೇಲೆ ಭಗವಾ ಧ್ವಜವನ್ನೂ ಹಾರಿಸಲಾಯಿತು. ಈ ವೇಳೆ ಗ್ರಾಮದ ರಾಯಣ್ಣ ಬಾಯ್ಸ್ ಸೇರಿದಂತೆ ಹಲವರು ಭಾಗಿಯಾಗಿದ್ರು.
ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ; ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು..!
ಹಾನಗಲ್: ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಸ್ಥಳದಲ್ಲೆ ಇಬ್ಬರು ಬೈಕ್ ಸವಾರರು ಸಾವಿಗೀಡಾದ ಘಟನೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಣಸಿಕಟ್ಟಿ ಕ್ರಾಸ್ ಬಳಿ ಶುಕ್ರವಾರ ಸಂಜೆ ನಡೆದಿದೆ. ಚೇತನ್ ಈಳಗೇರ್ (32) ಹಾಗೂ ಸುರೇಶ್ ಚಕ್ರಸಾಲಿ (33) ಮೃತ ಬೈಕ್ ಸವಾರರು. ಮೃತರಿಬ್ಬರೂ ಹಾನಗಲ್ ತಾಲೂಕಿನ ಬೆಳಗಾಲಪೇಟೆಯ ನಿವಾಸಿಗಳು ಎನ್ನಲಾಗಿದೆ. ಹಾನಗಲ್ ನಿಂದ ಸ್ವಗ್ರಾಮ ಬೆಳೆಗಾಲಪೇಟೆ ಗೆ ಹೋಗುವಾಗ ದುರಂತ ನಡೆದಿದೆ. ಅಪಘಾತ ತೀವ್ರತೆಗೆ ದೇಹಗಳು ಚಿದ್ರಗೊಂಡಿದ್ದು, ರಕ್ತಸ್ರಾವವಾಗಿ ಸ್ಥಳದಲ್ಲೆ ಸಾವು ಕಂಡಿದ್ದಾರೆ. ಸ್ಥಳಕ್ಕೆ ಹಾನಗಲ್ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾನಗಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಭಲೇ ಬಹಾದ್ದೂರ್..! ಒಂದೇ ನಿಮಿಷದಲ್ಲಿ 100 ಅಡಿ ದೂರ ಟ್ರಾಕ್ಟರ್ ಎಳೆದ ಪೈಲ್ವಾನ್..!
ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇಂದು ನಾಗರ ಪಂಚಮಿ ಪ್ರಯುಕ್ತ ಖಾಲಿ ಟ್ರಾಕ್ಟರ್ ಇಂಜಿನ್ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಯಲ್ಲಪ್ಪ ಫಕ್ಕೀರಪ್ಪ ತುಳಜಾನವರ್ ಎಂಬುವ ಯುವಕ, ಕೇವಲ ಒಂದು ನಿಮಿಷದಲ್ಲಿ100 ಅಡಿ ದೂರ ಟ್ರಾಕ್ಟರ್ ಎಳೆದು ಸಾಹಸ ತೋರಿಸಿದ್ರು. ಹೀಗಾಗಿ, ಗ್ರಾಮಸ್ಥರ ಸಂಭ್ರಮಕ್ಕೆ ಕಾರಣರಾದ್ರು. ಜಯಶಾಲಿ ಯುವಕನಿಗೆ ಕೊಪ್ಪ ಗ್ರಾಮಸ್ಥರು ಸನ್ಮಾನಿಸಿ ಬಹುಮಾನ ನೀಡಿದ್ರು.
ಬೊಮ್ಮಾಯಿ ಸಂಪುಟದ ಮೊದಲ ವಿಕೆಟ್ ಪತನ..? ನೂತನ ಸಿಎಂ ಗೆ ಸಂಕಷ್ಟ ಶುರು..!
ವಿಜಯನಗರ: ತಾವು ಬಯಸದ ಖಾತೆಯಿಂದ ತೀವ್ರ ಅಸಮಾಧಾನಗೊಂಡಿರೋ ಶಾಸಕ ಆನಂದ ಸಿಂಗ್ ಬುಧವಾರವೇ ತಮ್ಮ ಸಚಿವಸ್ಥಾನ ಹಾಗೂ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಸಾಧ್ಯತೆಗಳಿವೆ. ಇನ್ನೊಂದು ಮೂಲಗಳ ಪ್ರಕಾರ ಅವರು ಈಗಾಗಲೆ ಮುಖ್ಯಮಂತ್ರಿಗಳಿಗೆ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ. ತಮಗೆ ನೀಡಿರುವ ಪ್ರವಾಸೋದ್ಯಮ ಮತ್ತು ಪರಿಸರ, ಜೀವಿಶಾಸ್ತ್ರ ಖಾತೆಯಿಂದ ತೀವ್ರ ಅಸಮಾಧಾನಗೊಂಡಿರುವ ಆನಂದ ಸಿಂಗ್ ಈಗಾಗಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಖಾತೆ ಬದಲಾವಣೆ ಮಾಡಲು ವಿನಂತಿಸಿ, ಅದಕ್ಕೆ ಗಡುವನ್ನೂ ನೀಡಿದ್ದಾರೆ. ಗಡುವಿನೊಳಗೆ ಖಾತೆ ಬದಲಾಗದಿದ್ದರೆ ನನ್ನ ರಾಜಿನಾಮೆ ಅಂಗೀಕರಿಸಿ ಎಂದು ಪತ್ರವನ್ನೂ ಕೊಟ್ಟು ಬಂದಿದ್ದಾರೆ ಎನ್ನಲಾಗುತ್ತಿದೆ. ಶಾಸಕರ ಕಚೇರಿ ತೆರವು..! ಈ ಮಧ್ಯೆ ಮಂಗಳವಾರ ಸಂಜೆ ಹೊಸಪೆಟೆಯ ರಾಣಿಪೇಟೆಯಲ್ಲಿರುವ ಆನಂದ್ ಸಿಂಗ್ ಅವರ ಶಾಸಕರ ಕಚೇರಿಯ ನಾಮಫಲಕ ತೆರವುಗೊಳಿಸಲಾಗಿದೆ. ಬುಲ್ಡೋಜರ್ ಹಚ್ಚಿ ನಾಮಫಲಕ ತೆಗೆಯಲಾಗಿದೆ. ಬುಧವಾರದಿಂದ ಇಲ್ಲಿ ಶಾಸಕರು ಲಭ್ಯವಿರುವುದಿಲ್ಲ, ಸಾರ್ವಜನಿಕರ ಅಹವಾಲು ಸ್ವೀಕರಿಸುವುದಿಲ್ಲ ಎಂದು ತಿಳಿಸಲಾಗಿದೆ. ಧ್ವಜಾರೋಹಣವನ್ನೂ ಮಾಡಲ್ಲವಂತೆ..! ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಸಚಿವ...
ಇಬ್ಬರು ಅಂತರ್ ಜಿಲ್ಲಾ ಕಳ್ಳರ ಹೆಡೆಮುರಿ ಕಟ್ಟಿದ ಮುಂಡಗೋಡ ಪೊಲೀಸ್ರು..!
ಮುಂಡಗೋಡ: ಅವ್ರು ದೇವಸ್ಥಾನ, ಒಂಟಿ ಮನೆಗಳನ್ನು ಗುಡಿಸಿ ಗುಂಡಾಂತರ ಮಾಡೋ ಮಹಾನ್ ಖದೀಮರು, ಅವಕಾಶ ಸಿಕ್ರೆ ರಾಬರಿ ಮಾಡಿ ಬಾಚಿಕೊಂಡು ಹೋಗೋ ಖತರ್ನಾಕ ಕಿರಾತಕರು, ಆದ್ರೆ ಈಗ ಮುಂಡಗೋಡ ಪೊಲೀಸರ ಕೈಗೆ ತಗಲಾಕ್ಕೊಂಡು ಬಿಟ್ಟಿದ್ದಾರೆ. ತಾಲೂಕಿನ ಮಂದಿಗೆ ಒಂದಿಷ್ಟು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ದೇವರನ್ನೇ ಬಿಡದವರು..! ಯಸ್, ಇವ್ರು ಅಕ್ಷರಶಃ ಅಂತರ್ ಜಿಲ್ಲಾ ಪ್ರೊಫೆಷನಲ್ ಕಳ್ಳರು. ಮುಂಡಗೋಡ ತಾಲೂಕಿನಲ್ಲಿ ದೇವಸ್ಥಾನ, ಮನೆ ಕಳ್ಳತನ ಹಾಗೂ ರಾಬರಿ ಪ್ರಕರಣಗಳಲ್ಲಿ ಸೇರಿ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದವರು. ಆದ್ರೆ ನಸೀಬು ಕೆಟ್ಟು ಮುಂಡಗೋಡ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪರಿಣಾಮ, ಸುಮಾರು 1 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಇಲ್ಲಿನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂದಹಾಗೆ, ಇವ್ರಿಬ್ರೂ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನವ್ರು. ಅಬ್ದುಲ್ ಸತ್ತಾರ ಶೇಖ್ ಅಲಿಯಾಸ್ ಮಲಿಕ್, ಶ್ರೀಧರ ಅಲಿಯಾಸ್ ಸಿರಿ ಬಂಡಿವಡ್ಡರ ಬಂಧಿತ ಕಳ್ಳತನದ ಆರೋಪಿಗಳು. ಪಾಂಡುರಂಗನಿಗೇ ಕನ್ನ ಹಾಕಿದ್ರು..! ಈ ಖತರ್ನಾಕಿ ಕಿಲಾಡಿ ಜೋಡಿ, ತಾಲೂಕಿನ ಕೊಪ್ಪ ಗ್ರಾಮದ ಪಾಂಡುರಂಗ...
ಸವಣೂರಿನಲ್ಲಿ ನಿನ್ನೆ ನಡೆದ ಮರ್ಡರನ ಎದೆ ನಡುಗಿಸುವ ರಣಭೀಕರ ದೃಷ್ಯ..!
ಸವಣೂರು: ಇಲ್ಲಿನ ಕಾರಡಗಿ ಕ್ರಾಸ್ ಬಳಿ ನಿನ್ನೆ ರವಿವಾರ, ನಡು ರಸ್ತೆಯಲ್ಲೇ ನಡೆದಿದ್ದ ರೌಡಿಶೀಟರ್ ಬರ್ಬರ ಹತ್ಯೆಯ ಭಯಾನಕ ದೃಷ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಮಚ್ಚು ಹಾಗೂ ಕೊಡಲಿಯಿಂದ ಮನಸೊಯಿಚ್ಚೆ ಹೊಡೆದು ಕೊಂದು ಹಾಕಿದ್ದಾರೆ ಕೊಲೆ ಪಾತಕಿಗಳು. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಾರಡಗಿ ಕ್ರಾಸ್ ಬಳಿ ನಿನ್ನೆ ಸಂಜೆ ನಡೆದಿದ್ದ ಘಟನೆಯಲ್ಲಿ, ಅನ್ವರ ಶೇಕ್ ಅಲಿಯಾಸ್ ಹಜರತ್ ಅಲಿ ಮೂಮಿನ್ ಎಂಬುವ 40 ವರ್ಷ ವಯಸ್ಸಿನ ರೌಡಿಶೀಟರ್ ಬರ್ಬರ ಹತ್ಯೆಯಾಗಿದ್ದ. ಇಮ್ರಾನ್ ಚೌದರಿ (28) ಹಾಗೂ ಆತನ ಸಹಚರರು ಬರ್ಬರವಾಗಿ ಹತ್ಯೆ ಮಾಡಿದ್ರು. ಹಪ್ತಾ ವಸೂಲಿ ವಿಚಾರವಾಗಿ ಜಗಳವಾಡಿದ್ದ ಅನ್ವರ್ ಶೇಖ್ ಹಾಗೂ ಇಮ್ರಾನ್ ಚೌದರಿ, ಮದ್ಯೆ ಮಾತು ಮಾತಿಗೆ ಬೆಳೆದು, ಈ ವೇಳೆ ಜಗಳ ವಿಕೋಪಕ್ಕೆ ಹೋಗಿತ್ತು. ಆ ನಂತ್ರ ಕೊಡಲಿಯಿಂದ ಇಮ್ರಾನ್ ಹಾಗೂ ಸಹಚರರು ಅನ್ವರ್ ಶೇಖ್ ನನ್ನು ಅಟ್ಟಾಡಿಸಿ ಹೊಡೆದಿದ್ರು. ಈ ವೇಳೆ ಅಲ್ಲೇ ಇದ್ದವರೊಬ್ರು ತಮ್ಮ ಮೊಬೈಲ್ ನಲ್ಲಿ ದೃಷ್ಯ ಸೆರೆ ಹಿಡಿದಿದ್ದಾರೆ. ಆ...
ಎಸ್.ಎಸ್.ಎಲ್.ಸಿ ಫಲಿತಾಂಶ: ಶಿರಸಿ ಶೈಕ್ಷಣಿಕ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್..!
ಶಿರಸಿ: ಇಂದು ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಶಿರಸಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಸಿದ್ದಾಪುರದ ಪ್ರಶಾಂತಿ ವಿದ್ಯಾನಿಕೇತನದಲ್ಲಿ ಓದುತ್ತಿರೋ ವಿದ್ಯಾರ್ಥಿನಿ ಹೇಮಾ ಉಮೇಶ ಹೆಗಡೆ ಹಾಗೂ ಸಿದ್ದಾಪುರದ ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆಯ ಎಸ್.ಎನ್.ಸುನೈ ಮತ್ತು ರೇಷ್ಮಾ ಹೆಗಡೆ 625 ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಒಬ್ಬ ವಿದ್ಯಾರ್ಥಿನಿ 625 ಅಂಕ ಗಳಿಸಿ ಸಾಧನೆ ಮಾಡಿದ್ದಳು. ಆದರೆ ಈ ಬಾರಿ ಮೂವರು ವಿದ್ಯಾರ್ಥಿಗಳು 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರ ಸಾಧನೆಗೆ ಪಾಲಕರು ಹಾಗೂ ಶೈಕ್ಷಣಿಕ ಸಂಸ್ಥೆಯವರು ಸಂತೋಷ ವ್ಯಕ್ತಪಡಿಸಿದ್ದಾರೆ.