ಶಿರಸಿಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಟ್ಕಾ ಅಡ್ಡೆಯ ಮೇಲೆ ದಾಳಿ ನಡೆಸಿರೋ ಪೊಲೀಸರು ಬುಕ್ಕಿ ಸೇರಿ,15 ಕ್ಕೂ ಹೆಚ್ಚು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಉತ್ತರ ಕನ್ನಡ ಎಸ್ಪಿ, ಡಾ.ಸುಮನಾ ಪೆನ್ನೇಕರ್ ರಚಿಸಿರೋ ವಿಶೇಷ ಪೊಲೀಸ್ ಟೀಂ ಕಾರ್ಯಾಚರಣೆ ನಡೆಸಿದ್ದು, ಮಟ್ಕಾ ಆಡಿಸುತ್ತಿದ್ದ ದಂಧೆಕೋರರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆನೆ, ಮಟ್ಕಾ ದಂಧೆಯಲ್ಲಿಬಕೈ ಬದಲಾಯಿಸುತ್ತ ಅಂದಾಜು 3-4 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಶಿರಸಿ ನಗರ ಹಾಗೂ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಇನ್ನು ಎಸ್ಪಿ ಮೇಡಂ ರವರ ಟೀಂ ಮಾಡಿರೋ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
Top Stories
ಖಾಸಗಿ ಫೈನಾನ್ಸ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಶಿಕ್ಷಕ..! ಹಾಗಿದ್ರೆ ಅವರ ಮೇಲೆ ಕ್ರಮ ಯಾಕಿಲ್ಲ ಬಿಇಓ ಮೇಡಂ..?
ಮಾ.21 ರಿಂದ SSLC ಪರೀಕ್ಷೆ, ಸುಸೂತ್ರವಾಗಿ ನಡೆಸಲು ಸನ್ನದ್ಧ- ಡಿಸಿ ಲಕ್ಷ್ಮೀ ಪ್ರಿಯ
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಸರ್ಕಾರಿ ಅಧಿಕಾರಿ ಭಾಗಿ ಕೇಸ್, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ ಬಿಇಓ..!
ಪ್ರಯಾಣಿಕರ ಚಿನ್ನದ ಒಡವೆ ಕದಿಯುತ್ತಿದ್ದ ಕಳ್ಳಿಯರ ಗ್ಯಾಂಗ್ ಅರೇಸ್ಟ್..
ಪೊಲೀಸ್ ಠಾಣೆಯಲ್ಲಿ ಇಸ್ಪೀಟ್ ಆಟ.. ಐವರು ಪೋಲೀಸರು ಅಮಾನತು..!
ಆಹಾರ ಸಂಸ್ಕರಣಾ ಉದ್ಯಮದ ಬಗ್ಗೆ ಅರಿವು ಮೂಡಿಸಿ : ಈಶ್ವರ ಕಾಂದೂ
ಬನವಾಸಿ ಕದಂಬೋತ್ಸವಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳಿ : ಅಧಿಕಾರಿಗಳಿಗೆ ಸೂಚಿಸಿದ ಕೆ.ಲಕ್ಷ್ಮೀಪ್ರಿಯ
ಅನ್ನಭಾಗ್ಯದ ಅಕ್ಕಿ ದುರುಪಯೋಗ ಆಗದಿರಲಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ
ಮುಂಬರುವ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ತಡೆಯಲು ಸರ್ವ ಸನ್ನಧ್ದರಾಗಿ-ಡಿಸಿ ಲಕ್ಷ್ಮೀ ಪ್ರಿಯ
ಮುಂಡಗೋಡಲ್ಲಿ ಖಾಸಗಿ GL ಫೈನಾನ್ಸ್ ಗೆ ರಿಬ್ಬನ್ ಕಟ್ ಮಾಡಿದ ಸರ್ಕಾರಿ ಅಧಿಕಾರಿ..! ಆ ಗೋಲ್ಡ್ ಲೋನ್ ಫೈನಾನ್ಸ್ ಕಂಪನಿಗೂ, ಶಿಕ್ಷಣ ಇಲಾಖೆಗೂ ಏನಯ್ಯ ಸಂಬಂಧ..?
ಪತ್ರಕರ್ತನಿಗೆ ದಂಡ ತೀರ್ಪಿಗೆ ಜಿಲ್ಲಾ ಕೋರ್ಟ್ ತಡೆಯಾಜ್ಞೆ
ಮುಂಡಗೋಡಿನಲ್ಲಿ ಆರ್.ವಿ.ದೇಶಪಾಂಡೆ ಜನ್ಮದಿನ ಆಚರಣೆ, ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ..!
ಅಗಡಿಯಲ್ಲಿ ಜೋಡೇತ್ತುಗಳ ಕಳ್ಳತನ, ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳನ್ನೇ ಹೊತ್ತೊಯ್ದ ಕಳ್ಳರು..!
ಮುಂಡಗೋಡ ನೆಹರು ನಗರದಲ್ಲಿ ಜೇನುದಾಳಿ 6 ಜನರಿಗೆ ಗಾಯ, ಮೂವರು ಗಂಭೀರ..!
ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಕಾಲಿಗೆ ಪೊಲೀಸರ ಗುಂಡೇಟು
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಲಾರಿ, ಕಾರಿನಲ್ಲಿ ಇಬ್ಬರು ಸಿಲುಕಿ ನರಳಾಟ, ಹೊರತೆಗೆಯಲು ಹರಸಾಹಸ..!
ತಿಂಗಳಾಂತ್ಯಕ್ಕೆ ಹೆಬ್ಬಾರ್ ಹಾಗೂ ST ಸೋಮಶೇಖರ್, ಬಿಜೆಪಿ ಪಕ್ಷದಿಂದ ಉಚ್ಚಾಟನೆ ಗ್ಯಾರಂಟಿ- ಲಿಂಗರಾಜ ಪಾಟೀಲ್
ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ
ಶಿಗ್ಗಾವಿಯಲ್ಲಿ ಮುಂಡಗೋಡಿನ ಟಿಪ್ಪರ್ ಮಾಲೀಕ ಮರ್ಡರ್..! ಸಿಎಂ ತವರು ಕ್ಷೇತ್ರದಲ್ಲಿ ಏನಿದೇಲ್ಲ..?
ಸಿಎಂ ಬಸವರಾಜ್ ಬೊಮ್ಮಾಯಿಯವರ ತವರು ಕ್ಷೇತ್ರ ಶಿಗ್ಗಾವಿ ಕ್ರೈಮುಗಳ ಸಿಟಿಯಾಯ್ತಾ..? ಇಂತಹದ್ದೊಂದು ಅನುಮಾನ ಇಡೀ ಕ್ಷೇತ್ರದ ಪ್ರಜ್ಞಾವಂತರನ್ನ ಬೆಂಬಿಡದೇ ಕಾಡ್ತಿದೆ. ಇಲ್ಲಿ ಕೊಲೆ ಅನ್ನೋದು ಕಾರಣಗಳೇ ಇಲ್ಲದೇ ನಡೆದು ಹೋಗ್ತಿವೆ. ನಿನ್ನೆ ಸಂಜೆ ನಡೆದದ್ದೂ ಇದೆ. ಸರಗೊಲು ಆಡುತ್ತಿದ್ದಾಗ ಕೋಲು ಬಡಿಸಿಕೊಂಡ ಟಿಪ್ಪರ್ ಮಾಲೀಕನೊಬ್ಬ ಪ್ರಶ್ನೆ ಮಾಡಿದ್ದಕ್ಕೆ ಅನಾಮತ್ತಾಗಿ ಮರ್ಡರ್ ಆಗಿದ್ದಾನೆ ಅನ್ನೊ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ತಾಲೂಕಿನ ಚಿಗಳ್ಳಿಯ ಉಮೇಶ್ ಶಿವಜೋಗಿಮಠ್ (45) ಎಂಬುವವನನ್ನು ಬರೋಬ್ಬರಿ ಏಳು ಜನರ ತಂಡ ಮನಬಂದಂತೆ ಥಳಿಸಿ ಕೊಂದು ಹಾಕಿದ್ದಾರೆ ಎನ್ನಲಾಗಿದೆ. ಘಟನೆ ಏನು..? ನಿನ್ನೆ ಬುಧವಾರ, ಅದು ಸಂಜೆಯ ಹೊತ್ತು. ಶಿಗ್ಗಾವಿಯ ಎಪಿಎಂಸಿ ಬಳಿ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ಟಿಪ್ಪರ್ ಮಾಲೀಕ ಕಂ ಚಾಲಕ, ಉಮೇಶ್ ತನ್ನ ಟಿಪ್ಪರ್ ಗೆ ಗ್ರೀಸಿಂಗ್ ಮಾಡ್ತಾ ನಿಂತಾಗ, ಅದೇ ಎಪಿಎಂಸಿ ಆವರಣದಲ್ಲಿ ಯುವಕರು ಸರಗೋಲು ಆಟವಾಡ್ತಿದ್ದಾಗ ಕೋಲು ಬಂದು ಟಿಪ್ಪರ್ ಗೆ ಬಿದ್ದಿದೆ, ಹೀಗಾಗಿ ಉಮೇಶ್ ಆ ಯುವಕರನ್ನ ಯಾಕ್ರಯ್ಯಾ ಹೀಗೆ ಮಾಡಿದ್ರಿ ನಿಮಗೆ...
ಮುಂಡಗೋಡ ತಾಲೂಕಿನ ಮೂರು ಕಡೆ ಮಟ್ಕಾ ಅಡ್ಡೆಗಳ ಮೇಲೆ ಪೊಲೀಸರ ದಾಳಿ, 7 ಜನರ ವಿರುದ್ಧ ಕೇಸ್..!
ಮುಂಡಗೋಡ ಪೊಲೀಸರು ನಿನ್ನೆಯಿಂದ ಭರ್ಜರಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಮಟ್ಕಾ ಅಡ್ಡೆಗಳ ಮೇಲೆ ಬಲೆ ಬೀಸಿರೋ ಮುಂಡಗೋಡ ಪಿಎಸ್ಐ ಬಸವರಾಜು ಮಬನೂರು ಮತ್ತವರ ತಂಡ ಮೂರು ಕಡೆ ಪ್ರತ್ಯೇಕ ದಾಳಿ ನಡೆಸಿ ಹಲವು ದಂಧೆಕೋರರ ಹೆಡೆಮುರಿ ಕಟ್ಟಿದ್ದಾರೆ. 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದ್ರೊಂದಿಗೆ ಮೂರೂ ಕೇಸುಗಳಲ್ಲಿ ಒಟ್ಟೂ 10 ಸಾವಿರಕ್ಕೂ ಹೆಚ್ಚು ನಗದು ವಶಪಡಿಸಿಕೊಂಡಿದ್ದಾರೆ. ದಾಳಿ ನಂಬರ್-1 ಮುಂಡಗೋಡ ತಾಲೂಕಿನ ಕಾತೂರಿನ ಬಸ್ ನಿಲ್ದಾಣದ ಪಕ್ಕದಲ್ಲಿ ನಿಂತು ಮಟ್ಕಾ ಆಡಿಸುತ್ತಿದ್ದ, ನಾಗರಾಜ ಅಡಿವೆಪ್ಪ ಆಡಿನವರ ಎಂಬುವವನ ಮೇಲೆ ಕೇಸು ದಾಖಲಿಸಲಾಗಿದೆ. ಇವನ ಜೊತೆ ಮಟ್ಕಾ ದಂಧೆಯಲ್ಲಿ ಸಂಗ್ರಹವಾದ ಹಣವನ್ನು ಪಡೆಯುತ್ತಿದ್ದ ಆರೋಪದ ಮೇಲೆ, ಪಾಳಾ ಗ್ರಾಮದ ಮೌಲಾಲಿ, ಹಾಗೂ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೆರೂರಿನ ಅತಾವುಲ್ಲಾ ಎಂಬುವವನ ಮೇಲೂ ಕೇಸು ಜಡಿಯಲಾಗಿದೆ. ಇದೇ ವೇಳೆ 910 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ. ದಾಳಿ ನಂಬರ್-2 ಮುಂಡಗೋಡ ಪಟ್ಟಣದ ಬಂಕಾಪೂರ ರಸ್ತೆಯ ಪಕ್ಕದ ಚಿಕನ್ ಅಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ...
ಮುಂಡಗೋಡಿನ ಆನಂದ್ ಕಡಗಿ ಕಣ್ಮರೆ, ಅಷ್ಟಕ್ಕೂ CCTV ದೃಷ್ಯದಲ್ಲಿ ಕಂಡದ್ದು ಏನು..?
ಮುಂಡಗೋಡಿನ ಶಿಕ್ಷಕ ಆನಂದ್ ಕಡಗಿ ನಾಪತ್ತೆಯಾಗಿದ್ದಾರೆ. ರವಿವಾರ ದಿ.29 ರಂದು ಬೆಳಿಗ್ಗೆ 11 ಗಂಟೆಯಷ್ಟೊತ್ತಿಗೆ ಬರಿಗಾಲಲ್ಲೇ ಮನೆ ಬಿಟ್ಟು ಹೋಗಿರೋ ಆನಂದ್, ಹಸಿರು ಬಣ್ಣದ ಸಿಮೆಂಟ್ ಕಂಪನಿ ಹೆಸರಿರೋ ಟೀಶರ್ಟ್, ಹಾಗೇ ಖಾಕಿ ಬಣ್ಣದ ತ್ರಿಪೋರ್ಥ್ ತೊಟ್ಟು ಉಟ್ಟುಡುಗೆಯಲ್ಲೇ ನಾಪತ್ತೆಯಾಗಿದ್ದಾರೆ. ಮೊಬೈಲ್, ಪರ್ಸ್ ಏನು ಅಂದ್ರೆ ಏನೂ ತೆಗೆದುಕೊಂಡು ಹೋಗಿಲ್ಲ. ಹೀಗಾಗಿ, ಕುಟುಂಬದವರು ಆತಂಕಗೊಂಡಿದ್ದಾರೆ. ಸಿಸಿಟಿವಿಯಲ್ಲಿ..! ಅಸಲು, ಆನಂದ್ ಕಡಗಿ ರವಿವಾರ ಬೆಳಿಗ್ಗೆ ಮಕ್ಕಳನ್ನು ಸಲೂನ್ ಶಾಪ್ ಗೆ ಕರೆದುಕೊಂಡು ಹೋಗಿ ಬಂದಿದ್ದರು. ತಾವೂ ಕೂಡ ಕಟ್ಟಿಂಗ್ ಮಾಎಇಸಿಕೊಂಡು ಬಂದಿದ್ರು. ಆ ನಂತರ ಮಕ್ಕಳಿಗೆ ಸ್ನಾನ ಮಾಡಿಸಲು ಮನೆಯವರು ಒಳಗಡೆ ಹೋದಾಗ, 11ಗಂಟೆಯ ಹೊತ್ತಿಗೆ ಮನೆಯಿಂದ ಹೊರಟವರು, ಸಮಾಜ ಕಲ್ಯಾಣ ಇಲಾಖೆಯ ಎದುರೇ ಹಾದು ಹೋಗಿದ್ದಾರೆ. ಅಲ್ಲಿನ ಸಿಸಿಟಿವಿಯಲ್ಲಿ ಆತ ಏಕಾಂಗಿಯಾಗಿ ನಡೆದುಕೊಂಡು ಹೋಗ್ತಿರೋ ದೃಷ್ಯ ಸೆರೆಯಾಗಿದೆ. ಅದೇನೋ ಧಾವಂತದಲ್ಲಿ ಹೋಗುವ ಹಾಗೂ ಕಂಡಿಲ್ಲ. ಸ್ವಾಭಾವಿಕವಾಗಿ ನಿರ್ಲಿಪ್ತ ಹೆಜ್ಜೆಗಳು ಆ ದೃಷ್ಯದಲ್ಲಿ ಕಾಣತ್ತೆ. ಆ ದೃಷ್ಯ ಕಂಡರೆ ಬಹುತೇಕ ಸ್ವಾಭಾವಿಕ ಭಾವನೆಗಳೇ...
ಮುಂಡಗೋಡಿನ ಶಿಕ್ಷಕ ಆನಂದ್ ಕಡಗಿ ನಾಪತ್ತೆ, ಪ್ರಕರಣ ದಾಖಲು..!
ಮುಂಡಗೋಡ ರೋಟರಿ ಖಾಸಗಿ ಶಾಲೆಯ ಶಿಕ್ಷಕ ಆನಂದ್ ಕಡಗಿ ನಾಪತ್ತೆಯಾಗಿದ್ದಾರೆ ಅಂತಾ ಕುಟುಂಬಸ್ಥರು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದ ಆನಂದ್, ಪರೀಕ್ಷೆಯಲ್ಲಿ ಪಾಸ್ ಆಗಿರಲಿಲ್ಲ. ಹೀಗಾಗಿ, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು, ಮೇ.29 ರಂದು ಮನೆಯಿಂದ ಹೋದವನು, ಮರಳಿ ಬಂದಿಲ್ಲ ಅಂತಾ ದೂರಿನಲ್ಲಿ ತಿಳಿಸಿದ್ದಾರೆ. ಮೇ.29 ರ ರವಿವಾರ ಬೆಳಿಗ್ಗೆ ಸನವಳ್ಳಿ ರಸ್ತೆ ಕಡೆಗೆ ನಡೆದುಕೊಂಡೇ ಹೋಗಿದ್ದನ್ನ ಕೆಲವ್ರು ನೋಡಿದ್ದಾರೆ ಅನ್ನೋ ಮಾಹಿತಿ ಇದ್ದು ಮನೆ ಮಗನನ್ನು ಹುಡುಕಿ ಕೊಡಿ ಅಂತಾ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇಂದಿನಿಂದ ಯಲ್ಲಾಪುರ ಕ್ಷೇತ್ರದಲ್ಲಿ ಪರಿಷತ್ ಪ್ರಚಾರ ಶುರು, ಯಲ್ಲಾಪುರಕ್ಕೆ ಬಂದಿಳಿದ ಅಭ್ಯರ್ಥಿ ಬಸವರಾಜ್ ಹೊರಟ್ಟಿ
ಯಲ್ಲಾಪುರ: ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣಾ ಪ್ರಚಾರ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಪರಿಷತ್ ಅಭ್ಯರ್ಥಿ ಬಸವರಾಜ ಹೊರಟ್ಟಿ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ. ಹೀಗಾಗಿ ಇಂದು ಯಲ್ಲಾಪುರ ಪಟ್ಟಣಕ್ಕೆ ಆಗಮಿಸಿದ ಬಸವರಾಜ್ ಹೊರಟ್ಟಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರವರನ್ನು ಸಚಿವ ಶಿವರಾಮ್ ಹೆಬ್ಬಾರ್ ಸ್ವಾಗತಿಸಿಕೊಂಡ್ರು. ನಾಯಕರನ್ನು ಶಾಲು ಹೊದಿಸಿ ಸನ್ಮಾನಿಸಿ ಕ್ಷೇತ್ರಕ್ಕೆ ಬರಮಾಡಿಕೊಂಡ್ರು.
ಮುಂಡಗೋಡ ಕಿಲ್ಲೆ ಓಣಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿ ವಶ..!
ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ ನಡೆದಿದೆ. ಪಟ್ಟಣದ ಕಿಲ್ಲೆ ಓಣಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 45 ಕ್ವಿಂಟಾಲ್ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಮುಂಡಗೋಡ ಪಟ್ಟಣದ ಕಿಲ್ಲೆ ಓಣಿಯ ಸಿರಾಜ್ ಮುಲ್ಲಾ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಇಡಲಾಗಿತ್ತು. ಈ ಕುರಿತು ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ ಪಿಎಸ್ಐ ಮತ್ತವರ ತಂಡ ಅಕ್ರಮ ಪಡಿತರ ಅಕ್ಕಿ ವಶಪಡಿಸಿಕೊಂಡಿದೆ. ನಂತರದಲ್ಲಿ ಮುಂಡಗೋಡ ತಹಶೀಲ್ದಾರ್ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ವಶಪಡಿಸಿಕೊಂಡ ಪಡಿತರ ಅಕ್ಕಿಯನ್ನು ತಹಶೀಲ್ದಾರ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಮುಂಡಗೋಡ ಠಾಣೆಯಲ್ಲಿ ಕೇಸು ದಾಖಲಾಗಿದೆ.
“ಮುಂಡಗೋಡ ಮಹಾರಾಜ್” ಸ್ಪರ್ಧಾ ಹೋರಿ ಅಸ್ತಂಗತವಾಗಿ ಒಂದು ವರ್ಷ, ಅಭಿಮಾನಿಗಳಿಂದ ವಾರ್ಷಿಕ ಪುಣ್ಯತಿಥಿ..!
ಮುಂಡಗೋಡ: ತಾಲೂಕಿನ ಮೊಟ್ಟ ಮೊದಲ ಪೀಪಿ ಹೋರಿ ಅಂತ ಹೆಸರು ಮಾಡಿದ್ದ, ಮುಂಡಗೋಡಿನ ಮನೆ ಮಗ ಅಂತಲೇ ಕರೆಸಿಕೊಂಡಿದ್ದ “ಮುಂಡಗೋಡ ಮಹಾರಾಜ್” 181 ಪಿಪಿ ಸ್ಪರ್ಧಾ ಹೋರಿಯ ಒಂದನೇ ವರ್ಷದ ಪುಣ್ಯತಿಥಿ ಕಾರ್ಯವನ್ನು ಅಭಿಮಾನಿಗಳು ನಡೆಸಿದ್ರು. ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದ ಸ್ಪರ್ಧಾ ಹೋರಿ “ಮುಂಡಗೋಡ ಮಹಾರಾಜ್” ಅನಾರೋಗ್ಯದಿಂದ ಮೃತಪಟ್ಟು ಇಂದಿಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ, ಅಭಿಮಾನಿಗಳು ತಮ್ಮ ನೆಚ್ಚಿನ ಹೋರಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ರು. ಅಲ್ಲದೇ ಹೋರಿಯ ನೆನಪಿನಲ್ಲಿ ಅನ್ನ ಸಂತರ್ಪಣೆ ಮಾಡಿದ್ರು. ಆರಾಧ್ಯ ದೈವ..! ಅಂದಹಾಗೆ, ಮುಂಡಗೋಡ ಮಹಾರಾಜ್ ಮುಂಡಗೋಡ ತಾಲೂಕಿನ ಹೋರಿಹಬ್ಬದ ಅಭಿಮಾನಿಗಳ ಆರಾಧ್ಯ ದೈವದಂತಾಗಿತ್ತು. ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ಹೋರಿ, ಸ್ಪರ್ಧಾ ಕಣದಲ್ಲಿ ಧುಮುಕಿದ್ರೆ ಎದುರು ಅದೇಂತದ್ದೆ ಜಟ್ಟಿಗಳೂ ಬಂದ್ರು ಚಿಮ್ಮಿ ಹಾಕುವ ತಾಕತ್ತು ಹಾಗೂ ವೇಗ ಹೊಂದಿತ್ತು. ಹೀಗಾಗಿ, ಸಾಕಷ್ಟು ಬಹುಮಾನಗಳನ್ನು ಬಾಚಿಕೊಂಡು ಮುಂಡಗೋಡ ತಾಲೂಕಿನ ಕೀರ್ತಿ ತಂದಿತ್ತು. ಹೀಗಾಗಿ, ಇಡೀ ತಾಲೂಕಿನಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಗಳಿಸಿಕೊಂಡಿತ್ತು. ಮರೆಯಲಾರದ ಮಾಣಿಕ್ಯ..! ನಿಜ ಅಂದ್ರೆ...
ಕೊಪ್ಪ ಗ್ರಾಮದಲ್ಲಿ ಕಳೆನಾಶಕ ಸೇವಿಸಿ ಯುವಕ ಆತ್ಮಹತ್ಯೆ, ಕಾರಣವಾದ್ರೂ ಏನು..?
ಮುಂಡಗೋಡ: ತಾಲೂಕಿನ ಕೊಪ್ಪದಲ್ಲಿ ಎಮರ್ಜೆನ್ಸಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಕೊಪ್ಪ ಗ್ರಾಮದ ಚನ್ನಪ್ಪ ಬಸಪ್ಪ ಶ್ಯಾಬಾಳ್ (30) ಎಂಬುವವನೇ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವ. ನಿನ್ನೆ ಬಾನುವಾರ ಬೆಳಿಗ್ಗೆ ತನ್ನ ಗದ್ದೆಯಲ್ಲೇ ಎಮರ್ಜೆನ್ಸಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಹೀಗಾಗಿ, ತಕ್ಷಣವೇ ಆತನನ್ನು ತಾಲೂಕಾಸ್ಪತ್ರೆಗ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತ ಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ. ಇನ್ನು,ಯುವಕನ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಿಬೇಟಿಯನ್ ಕಾಲೋನಿಗೆ ಅಕ್ರಮ ಗೋ ಮಾಂಸ ಸಾಗಿಸುತ್ತಿದ್ದ ವಾಹನ ಸಮೇತ ಓರ್ವ ಪೊಲೀಸರ ವಶಕ್ಕೆ..?
ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಗೆ ಸಾಗಾಣಿಕೆ ಮಾಡಲಾಗುತ್ತಿದ್ದ ಅಕ್ರಮ ಗೋ ಮಾಂಸದ ವಾಹನವನ್ನು ಮುಂಡಗೋಡ ಪೊಲೀಸರು ಕಾರ್ಯಾಚರಣೆ ನಡೆಸಿ ಸೀಜ್ ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಕಲಘಟಗಿ ಕಡೆಯಿಂದ ಸಾಗಿಸಲಾಗುತ್ತಿದ್ದ ಸುಮಾರು ಒಂದು ಕ್ವಿಂಟಾಲ್ ಗೂ ಹೆಚ್ಚು ತೂಗುವ ಗೋಮಾಂಸವನ್ನು ವಾಹನ ಸಮೇತ ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಅನ್ನೊ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ಇನ್ನೂ ಬರಬೇಕಿದೆ.