“ಮುಂಡಗೋಡ ಮಹಾರಾಜ್” ಸ್ಪರ್ಧಾ ಹೋರಿ ಅಸ್ತಂಗತವಾಗಿ ಒಂದು ವರ್ಷ, ಅಭಿಮಾನಿಗಳಿಂದ ವಾರ್ಷಿಕ ಪುಣ್ಯತಿಥಿ..!


ಮುಂಡಗೋಡ: ತಾಲೂಕಿನ ಮೊಟ್ಟ ಮೊದಲ ಪೀಪಿ ಹೋರಿ ಅಂತ ಹೆಸರು ಮಾಡಿದ್ದ, ಮುಂಡಗೋಡಿನ ಮನೆ ಮಗ ಅಂತಲೇ ಕರೆಸಿಕೊಂಡಿದ್ದ “ಮುಂಡಗೋಡ ಮಹಾರಾಜ್” 181 ಪಿಪಿ ಸ್ಪರ್ಧಾ ಹೋರಿಯ ಒಂದನೇ ವರ್ಷದ ಪುಣ್ಯತಿಥಿ ಕಾರ್ಯವನ್ನು ಅಭಿಮಾನಿಗಳು ನಡೆಸಿದ್ರು.

ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದ ಸ್ಪರ್ಧಾ ಹೋರಿ “ಮುಂಡಗೋಡ ಮಹಾರಾಜ್” ಅನಾರೋಗ್ಯದಿಂದ ಮೃತಪಟ್ಟು ಇಂದಿಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ, ಅಭಿಮಾನಿಗಳು ತಮ್ಮ ನೆಚ್ಚಿನ ಹೋರಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ರು‌. ಅಲ್ಲದೇ ಹೋರಿಯ ನೆನಪಿನಲ್ಲಿ ಅನ್ನ ಸಂತರ್ಪಣೆ ಮಾಡಿದ್ರು‌.

ಆರಾಧ್ಯ ದೈವ..!
ಅಂದಹಾಗೆ, ಮುಂಡಗೋಡ ಮಹಾರಾಜ್ ಮುಂಡಗೋಡ ತಾಲೂಕಿನ ಹೋರಿಹಬ್ಬದ ಅಭಿಮಾನಿಗಳ ಆರಾಧ್ಯ ದೈವದಂತಾಗಿತ್ತು. ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ಹೋರಿ, ಸ್ಪರ್ಧಾ ಕಣದಲ್ಲಿ ಧುಮುಕಿದ್ರೆ ಎದುರು ಅದೇಂತದ್ದೆ ಜಟ್ಟಿಗಳೂ ಬಂದ್ರು ಚಿಮ್ಮಿ ಹಾಕುವ ತಾಕತ್ತು ಹಾಗೂ ವೇಗ ಹೊಂದಿತ್ತು. ಹೀಗಾಗಿ, ಸಾಕಷ್ಟು ಬಹುಮಾನಗಳನ್ನು ಬಾಚಿಕೊಂಡು ಮುಂಡಗೋಡ ತಾಲೂಕಿನ ಕೀರ್ತಿ ತಂದಿತ್ತು.
ಹೀಗಾಗಿ, ಇಡೀ ತಾಲೂಕಿನಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಗಳಿಸಿಕೊಂಡಿತ್ತು.

ಮರೆಯಲಾರದ ಮಾಣಿಕ್ಯ..!
ನಿಜ ಅಂದ್ರೆ “ಮುಂಡಗೋಡ ಮಹಾರಾಜ್” ಮೃತಪಟ್ಟು ಇವತ್ತಿಗೆ ಒಂದು ವರ್ಷವಾದ್ರೂ ಅಭಿಮಾನಿಗಳ ಹೃದಯದಲ್ಲಿ ನೆನಪು, ಅಭಿಮಾನ ಮಾತ್ರ ಒಂಚೂರೂ ಕಡಿಮೆಯಾಗಿಲ್ಲ‌. ಹೀಗಾಗಿ ಇವತ್ತು ಮುಂಡಗೋಡಿನ ಅಂಬೇಡ್ಕರ್ ಓಣಿಯಲ್ಲಿ ಅಭಿಮಾನಿಗಳು ತಮ್ಮ ಆರಾಧ್ಯ ದೈವದ ನೆನಪಲ್ಲಿ ಭಕ್ತಿ ಸಮರ್ಪಿಸಿದ್ದಾರೆ.

error: Content is protected !!