ಯಮರೂಪಿ ರಸ್ತೆ ಗುಂಡಿಗಳಿಗೆ ತೆಪೆ ಹಾಕಲು ಬಂದ್ರು ಅಧಿಕಾರಿಗಳು..! ಇದು ಪಬ್ಲಿಕ್ ಫಸ್ಟ್ ಇಂಪ್ಯಾಕ್ಟ್..!

ಯಮರೂಪಿ ರಸ್ತೆ ಗುಂಡಿಗಳಿಗೆ ತೆಪೆ ಹಾಕಲು ಬಂದ್ರು ಅಧಿಕಾರಿಗಳು..! ಇದು ಪಬ್ಲಿಕ್ ಫಸ್ಟ್ ಇಂಪ್ಯಾಕ್ಟ್..!

 ಮುಂಡಗೋಡ ಹೊರ ವಲಯದ ಮಹಾಲೆ ಮಿಲ್ ಹತ್ತಿರ PWD ಅಧಿಕಾರಿಗಳು ಬಂದಿಳಿದಿದ್ದಾರೆ. ನಿನ್ನೆಯಷ್ಟೇ ರಸ್ತೆಯಲ್ಲಿ ಬಾಯ್ತೆರೆದಿರೋ ಯಮರೂಪಿ ಗುಂಡಿಗಳ ಬಗ್ಗೆ ಪಬ್ಲಿಕ್ ಫಸ್ಟ್ ನ್ಯೂಸ್ ಪ್ರತ್ಯಕ್ಷ ವರದಿ ಬಿತ್ತರಿಸಿತ್ತು. ಈ ಹಿನ್ನೆಲೆಯಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಲಾಗ್ತಿದೆ. ವಾಹನ ಸವಾರರಿಗೆ ತಾತ್ಕಾಲಿಕವಾಗಿ ಕೊಂಚ ಸಮಾಧಾನ ಸಿಕ್ಕಂತಾಗಿದೆ. ಅಂದಹಾಗೆ, ಇದು ಪಬ್ಲಿಕ್ ಫಸ್ಟ್ ನ್ಯೂಸ್ ಇಂಪ್ಯಾಕ್ಟ್..! ನಿಜ, ಇದು ನಿನ್ನೆ ಮೊನ್ನೆಯ ಸಮಸ್ಯೆ ಅಲ್ಲ. ಪ್ರತೀ ವರ್ಷದ ಮಳೆಗಾಲ ಬಂತಂದ್ರೆ ಸಾಕು ಈ ರಸ್ತೆಯಲ್ಲಿ ಜಸ್ಟ್ ನಡೆದಾಡಲೂ ಆಗದ ಸ್ಥಿತಿ ಇರತ್ತೆ. ಅದೆಷ್ಟೇ ತೆಪೆ ಹಚ್ಚಿದ್ರೂ ಈ ರಸ್ತೆ ಇವತ್ತಿಗೂ ಶಾಶ್ವತ ಪರಿಹಾರಕ್ಕೆ ಸಾಕ್ಷಿ ಆಗಲೇ ಇಲ್ಲ. ಅವನೊಬ್ಬ ಬ್ರಷ್ಟ ಅಧಿಕಾರಿ ಅವತ್ತು ಸರಿಯಾಗಿ ಕಾರ್ಯ ನಿರ್ವಹಿಸಿದ್ದಿದ್ದರೆ, ಈ ಸ್ಥಿತಿ ಇರ್ತಾನೇ ಇರಲಿಲ್ಲ. ಈ ರಸ್ತೆಯ ಸಮಸ್ಯೆಗೆ ಅವತ್ತೇ ಮುಕ್ತಿ ಸಿಕ್ಕುಬಿಡ್ತಿತ್ತು ಅಂತಾರೆ ಇಲ್ಲಿನ ಜನ. ಅದೇನೇ ಆಗಲಿ, ಸದ್ಯ ರಸ್ತೆಯ ಗುಂಡಿಗಳನ್ನು ಮುಚ್ಚಲಾಗುತ್ತಿದೆ‌. ಆದ್ರೆ, ಇದೇ ಶಾಶ್ವರ ಪರಿಹಾರ ಅಲ್ಲ....

ಬಸ್ ಹಾಗೂ ಕಾರ್ ನಡುವೆ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ಸಾವು..!

ಬಸ್ ಹಾಗೂ ಕಾರ್ ನಡುವೆ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ಸಾವು..!

ಗದಗ: ಸಾರಿಗೆ ಬಸ್ ಮತ್ತು ಕಾರ್ ನಡುವೆ ಭಿಕರ ಅಪಘಾತ ನಡೆದಿದೆ. ಪರಿಣಾಮ ಕಾರನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಗದಗ ಜಿಲ್ಲೆ ನರಗುಂದ ತಾಲೂಕು ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಹಾವೇರಿ ಮೂಲದ ರುದ್ರಪ್ಪ ಅಂಗಡಿ(55), ಪತ್ನಿ ರಾಜೇಶ್ವರಿ (45), ಮಗಳು ಐಶ್ವರ್ಯ (16), ಮಗ ವಿಜಯ(12) ಸಾವು ಕಂಡಿದ್ದಾರೆ. ಇಳಕಲ್ ನಿಂದ ಹುಬ್ಬಳ್ಳಿ ಗೆ ಹೊರಟ್ಟಿದ್ದ ಸಾರಿಗೆ ಬಸ್, ಹಾವೇರಿಯಿಂದ ಕಲ್ಲಾಪೂರ ಕಡೆಗೆ ಹೊರಟ್ಟಿದ್ದ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ‌. ಮೃತರು ಕಲ್ಲಾಪೂರ ಬಸವೇಶ್ವರ ದೇವಸ್ಥಾನಕ್ಕೆ ಹೊರಟ್ಟಿದ್ದಾಗ ಘಟನೆ ನಡೆದಿದೆ. ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮುಂಡಗೋಡ ಮಹಾಲೆ ಮಿಲ್ ಬಳಿ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಗಂಭೀರ..!ಹೊಸ ಓಣಿಯ ಈ ಯುವಕನ ಸ್ಥಿತಿಗೆ ಕಾರಣ ಯಾರು..?

ಮುಂಡಗೋಡ ಮಹಾಲೆ ಮಿಲ್ ಬಳಿ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಗಂಭೀರ..!ಹೊಸ ಓಣಿಯ ಈ ಯುವಕನ ಸ್ಥಿತಿಗೆ ಕಾರಣ ಯಾರು..?

ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಮಹಾಲೆ ಮಿಲ್ ಹತ್ತಿರ ಭೀಕರ ಅಪಘಾತವಾಗಿದೆ. PWD ಇಲಾಖೆಯ ಬೇಜವಾಬ್ದಾರಿ ಹಾಗೂ ಸರ್ಕಾರದ ಖಬರಗೇಡಿತನಕ್ಕೆ ಈ ರಸ್ತೆ ಅನ್ನೋದು ಯಮರೂಪಿಯಾಗಿದೆ. ನಿತ್ಯವೂ ಹಲವರು ಇಲ್ಲಿ ಎದ್ದು, ಬಿದ್ದು ಓಡಾಡುವಂತಾಗಿದೆ. ಅಂತದ್ದರಲ್ಲಿ ಇವಾಗ ಮತ್ತೊಂದು ಅಪಘಾತಕ್ಕೆ ಇದೇ ರಸ್ತೆಯ ಗುಂಡಿಗಳು ಕಾರಣವಾಗಿವೆ. ಅಂದಹಾಗೆ, ಮುಂಡಗೋಡ ಪಟ್ಟಣದ ಹೊರ ವಲಯದ ಮಹಾಲೆ ಮಿಲ್ ಬಳಿ ರಸ್ತೆ ಗುಂಡಿಗೆ ಬೈಕ್ ಸವಾರನೊಬ್ಬ ಬಿದ್ದಿದ್ದಾನೆ. ಹೀಗಾಗಿ, ಗಂಭೀರ ಗಾಯಗೊಂಡಿರೋ ಬೈಕ್ ಸವಾರನನ್ನು ಸ್ಥಳೀಯರು 108 ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಗಂಭೀರವಾಗಿ ಗಾಯಗೊಂಡವನನ್ನು ಮುಂಡಗೋಡ ಹೊಸ ಓಣಿಯ ಮೊಹಮ್ಮದ್ ಜಾಫರ್ (22) ಅಂತಾ ಗುರುತಿಸಲಾಗಿದೆ. ಈ ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆಯ ದಿವ್ಯ ನಿರ್ಲಕ್ಷದಿಂದ ಪ್ರತಿದಿನ ಮುಂಡಗೋಡಿನ ಜನ ಈ ರಸ್ತೆಯಲ್ಲಿ ಸಂಚರಿಸುವಾಗ ಹಿಡಿಶಾಪ ಹಾಕುವಂತಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಕ್ರಮ ಗೋ ಸಾಗಾಟ, ಮುಂಡಗೋಡ ಪೊಲೀಸ್ರ ಭರ್ಜರಿ ರೈಡ್:  ಆರು ಜಾನುವಾರು ರಕ್ಷಣೆ..!

ಅಕ್ರಮ ಗೋ ಸಾಗಾಟ, ಮುಂಡಗೋಡ ಪೊಲೀಸ್ರ ಭರ್ಜರಿ ರೈಡ್: ಆರು ಜಾನುವಾರು ರಕ್ಷಣೆ..!

ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಟಾಟಾ ಎಸ್ ನಲ್ಲಿ ಸಾಗಿಸುತ್ತಿದ್ದ 6 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಥೇಟು ಸಿನಿಮಾ ಸ್ಟೈಲಿನಲ್ಲೇ ಚೇಸ್ ಮಾಡಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಅಂದಹಾಗೆ, ತಾಲೂಕಿನ ಬಡ್ಡಿಗೇರಿಯಿಂದ ಹಾನಗಲ್ಲಿಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಟಾಟಾ ಎಸ್ ನಲ್ಲಿ ಆರು ಜಾನುವಾರುಗಳನ್ನು ಅಮಾನುಷವಾಗಿ ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ತಿಳಿದ ಪೊಲೀಸರು ತಕ್ಷಣವೇ ಅಲರ್ಟ್ ಆಗಿದ್ದಾರೆ. ಹಾನಗಲ್ಲಿನ ಕಡೆಗೆ ವಾಹನ ಹೊರಟಿದೆ ಅನ್ನೊ ಮಾಹಿತಿ ತಿಳಿದ ಪೊಲೀಸ್ರು, ಪಟ್ಟಣದ ಹೊರ ವಲಯದ ಲೊಯೊಲಾ ಶಾಲೆ ಹತ್ತಿರ ಕಾದು ಕುಳಿತಿದ್ದರು‌. ಯಾವಾಗ ಪೊಲೀಸರು ನಮ್ಮನ್ನ ಫಾಲೋ ಮಾಡ್ತಿದಾರೆ ಅಂತಾ ಅಕ್ರಮಿಗಳಿಗೆ ಅರ್ಥವಾಯಿತೋ ಆ ಕ್ಷಣವೇ, ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಟಾಟಾ ಎಸ್ ನಲ್ಲೇ ಕಾರಿಗಿಂತಲೂ ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದರು. ಹೀಗಾಗಿ, ಛಲ ಬಿಡದ ಮುಂಡಗೋಡ ಪೊಲೀಸ್ರು ಟಾಟಾ ಎಸ್ ಬೆನ್ನತ್ತಿದ್ದಾರೆ. ಕಡೆಗೆ ಸಾಲಗಾಂವ್ ಹತ್ತಿರದ ಜೋಗೇಶ್ವರ ಹಳ್ಳದ ಹತ್ತಿರ ಕೊನೆಗೂ ಅಕ್ರಮಿಗಳನ್ನು ಪೊಲೀಸ್ರು ಹಿಡಿದಿದ್ದಾರೆ. ಜಾನುವಾರಗಳನ್ನು...

ನಾಳೆ ವೈದ್ಯರ ಮುಷ್ಕರ ಹಿನ್ನೆಲೆ ಸೈಲೆಂಟಾಯ್ತಾ ಮುಂಡಗೋಡಿನ IMA ತಾಲೂಕಾ ಘಟಕ..? ಬೆಂಬಲ ಇದೆಯೋ, ಇಲ್ವೋ..?

ನಾಳೆ ವೈದ್ಯರ ಮುಷ್ಕರ ಹಿನ್ನೆಲೆ ಸೈಲೆಂಟಾಯ್ತಾ ಮುಂಡಗೋಡಿನ IMA ತಾಲೂಕಾ ಘಟಕ..? ಬೆಂಬಲ ಇದೆಯೋ, ಇಲ್ವೋ..?

ಮುಂಡಗೋಡ: ಕೊಲ್ಕತ್ತಾದಲ್ಲಿ ಇತ್ತೀಚಿಗೆ ನಡೆದ ಮೆಡಿಕಲ್ ಸ್ನಾತಕೋತ್ತರ ಪದವಿಧರ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ದೇಶವ್ಯಾಪಿ ಮುಷ್ಕರದ ಕರೆಯ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ನಾಳೆ ಮುಷ್ಕರ ನಡೆಯುತ್ತಿದೆ. ಆದ್ರೆ ಮುಂಡಗೋಡಿನಲ್ಲಿ ಮಾತ್ರ ಮುಷ್ಕರದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನಾಳೆ ಶನಿವಾರ ಮುಂಜಾನೆ 6 ಗಂಟೆಯಿಂದ ರವಿವಾರ ಮುಂಜಾನೆ 6 ಗಂಟೆಯವರೆಗೆ ಎಲ್ಲಾ ಖಾಸಗಿ ಆಸ್ಪತ್ರೆ ಹಾಗೂ ದಂತ ಚಿಕಿತ್ಸಾ ಕೇಂದ್ರದಲ್ಲಿ ತುರ್ತು ಸೇವೆ ಮಾತ್ರ ಲಭ್ಯವಿರುತ್ತದೆ. ಯಾವುದೇ ಓ.ಪಿ.ಡಿ ಮತ್ತು ಶಸ್ತ್ರಚಿಕಿತ್ಸೆ ನಡೆಸುವುದಿಲ್ಲ. ಸರ್ಕಾರಿ ಆಸ್ಪತ್ರೆಯ ವೈದ್ಯರು ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿ ಸೇವೆ ಸಲ್ಲಿಸಲಿದ್ದಾರೆ ಅಂತಾ IMA ನಿರ್ಧರಿಸಿದೆ. ಹೀಗಾಗಿ, ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕಿನಲ್ಲೂ ತಾಲೂಕಾ ಘಟಕದ ಅಧ್ಯಕ್ಷರುಗಳು ಪತ್ರಿಕಾ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ, ಈ ಕ್ಷಣದವರೆಗೂ ಮುಂಡಗೋಡ ತಾಲೂಕಿನ ಯಾವೊಬ್ಬ...

ಕಾರವಾರದ ಕಾಳಿ ಸೇತುವೆ ಸುರಕ್ಷಿತ, ಸುಳ್ಳು ಮಾಹಿತಿ ಹರಡಿದವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ

ಕಾರವಾರದ ಕಾಳಿ ಸೇತುವೆ ಸುರಕ್ಷಿತ, ಸುಳ್ಳು ಮಾಹಿತಿ ಹರಡಿದವರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ

ಕಾರವಾರದಲ್ಲಿ ನೂತನವಾಗಿ ನಿರ್ಮಿಸಿರುವ ಕಾಳಿ ನದಿ ಸೇತುವೆಯಲ್ಲಿ ಬಿರುಕು ಬಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ವಿಡಿಯೋ ಸಾರ್ವಜನಿಕರಲ್ಲಿ ಅನಗತ್ಯ ಭಯ ಮತ್ತು ಆತಂಕ ಮೂಡಿಸಿದೆ. ಸದರಿ ವಿಷಯದ ಕುರಿತು ಜಿಲ್ಲಾಡಳಿತವು ಕೂಡಲೇ ಈ ಬಗ್ಗೆ ತನಿಖೆ ನಡೆಸಿ ವಿವರವಾದ ವರದಿ ನೀಡುವಂತೆ ಐ.ಆರ್.ಬಿ. ಗೆ ಸೂಚಿಸಿದ್ದು, ಸಂಪೂರ್ಣ ಪರಿಶೀಲನೆಯ ನಂತರ ವೀಡಿಯೊದಲ್ಲಿ ತೋರಿಸಿರುವ ಪ್ರದೇಶವು ನಿರ್ಮಾಣ ಹಂತದಲ್ಲಿ ಕಾಂಕ್ರೀಟ್ ಸ್ಲರಿಯ ಅತಿಕ್ರಮಿಸುವಿಕೆ (Concrete Stary Overlapping)ಯಿಂದ ಆಗಿರುವುದು ಎಂದು ಐ.ಆರ್.ಬಿ ದೃಢಪಡಿಸಿದೆ. ಸೇತುವೆಗೆ ಸಂಬಂಧಿಸಿದಂತೆ ಯಾವುದೇ ರಚನಾತ್ಮಕ ಹಾನಿ ಇರುವ ಸಂಭವವಿರುವುದಿಲ್ಲ ಎಂದು ಐ.ಆರ್.ಬಿ ವರದಿ ನೀಡಿದೆ. ಸಾರ್ವಜನಿಕರಲ್ಲಿ ಅನಗತ್ಯ ಭಯವನ್ನು ಉಂಟುಮಾಡುವ ಯಾವುದೇ ವೀಡಿಯೊಗಳು ಅಥವಾ ಮಾಹಿತಿಯನ್ನು ಹಂಚಿಕೊಳ್ಳದಂತೆ ಅಥವಾ ಪ್ರಸಾರ ಮಾಡದಂತೆ ಸಾರ್ವಜನಿಕರಿಗೆ ಜಿಲ್ಲಾಡಳಿತ ಸೂಚಿಸಿದೆ. ಇಂತಹ ತಪ್ಪು ಮಾಹಿತಿ ಹರಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ, ಈ ವಿಡಿಯೊವನ್ನು ವೈರಲ್ ಮಾಡಲು ಕಾರಣರಾದವರನ್ನು ಜಿಲ್ಲಾಡಳಿತವು ಸಕ್ರಿಯವಾಗಿ...

ಯಾರಾಗ್ತಾರೆ ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷೆ..?

ಯಾರಾಗ್ತಾರೆ ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷೆ..?

ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನದ ಆಯ್ಕೆ ಹಿನ್ನೆಲೆ ಅಸಲೀ ಮಜಕೂರಗಳು ಜಾರಿಯಲ್ಲಿವೆ. ಆಗಷ್ಟ 20 ರಂದು ನಡೆಯಲಿರೋ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಎರಡೂ ಪಕ್ಷಗಳಲ್ಲೂ ಒಳಗೊಳಗಿನ ಲೆಕ್ಕಾಚಾರಗಳು ಗರಿಗೆದರಿವೆ. ಇಲ್ಲಿ ಮೇಲ್ನೋಟಕ್ಕೆ ಕೈ ಪಡೆಗೆ ಆಡಳಿತದ ಚುಕ್ಕಾಣಿ ಅನಾಯಾಸವಾಗಿ ದಕ್ಕುವ ಎಲ್ಲಾ ಸಾಧ್ಯತೆಗಳಿದ್ದರೂ ಬಿಜೆಪಿಯ ಒಳಗೊಳಗಿನ ಮಸಲತ್ತುಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ಬಹುದೊಡ್ಡ ಗೇಮ್ ಪ್ಲ್ಯಾನ್ “ಕೈ”ಗೆತ್ತಿಗೊಂಡಿದೆ. 19 ಸಂಖ್ಯೆಯ ಆಟ..! ಅಸಲು, 19 ಸದಸ್ಯ ಬಲದ ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಸದ್ಯ ಬಿಜೆಪಿಗೆ 7 ಜನ ಗಟ್ಟಿ ಸದಸ್ಯರಿದ್ದಾರೆ‌. ಇನ್ನುಳಿದಂತೆ ಇಬ್ಬರು ಸದಸ್ಯರು ಅದ್ಯಾಕೋ ಏನೋ ಆಗಷ್ಟ ಇಪ್ಪತ್ತರ ಚುನಾವಣೆ ವರೆಗೂ ಹೇಗೋ ಏನೋ ಅನ್ನೋ ಸ್ಥಿತಿಯಲ್ಲಿದ್ದಾರೆ ಅನ್ನೋ ಮಾತಿದೆ. ಹೀಗಾಗಿ, ಅದ್ಯಾವ ಕಡೆಯಿಂದ ಎಣಿಕೆ ಹಾಕಿದ್ರೂ ಬಿಜೆಪಿಯ ಸಂಖ್ಯಾಬಲ 9+1 ಆಗತ್ತೆ. ಇದ್ರಲ್ಲಿ 7 ಜನ ಕಟ್ಟಾ ಬಿಜೆಪಿಗರು, ಇಬ್ಬರು ಅಸ್ಪಷ್ಟತೆಯ ಹಾದಿಯಲ್ಲಿದ್ದವರು. ಜೊತೆಗೆ ಸಂಸದ ಕಾಗೇರಿಯವರ ಬೆಂಬಲ ಸೇರಿ ಟೋಟಲ್ಲಾಗಿ 10 ಕ್ಕೆ ಬಂದು ನಿಂತಿದೆ ಬಲ.....

ಭಾರೀ ಮಳೆ, ಹುಬ್ಬಳ್ಳಿ ರಸ್ತೆಯ ವಡಗಟ್ಟಾ, ಬಾಚಣಕಿ ಬಳಿ ರಸ್ತೆ ಮೇಲೆ ಹರಿದ ಮಳೆ ನೀರು, ಸಂಚಾರ ಅಸ್ತವ್ಯಸ್ತ!

ಭಾರೀ ಮಳೆ, ಹುಬ್ಬಳ್ಳಿ ರಸ್ತೆಯ ವಡಗಟ್ಟಾ, ಬಾಚಣಕಿ ಬಳಿ ರಸ್ತೆ ಮೇಲೆ ಹರಿದ ಮಳೆ ನೀರು, ಸಂಚಾರ ಅಸ್ತವ್ಯಸ್ತ!

ಮುಂಡಗೋಡ ತಾಲೂಕಿನ ಬಾಚಣಕಿ, ಅರಶಿಣಗೇರಿ, ಹುನಗುಂದ ಸೇರಿದಂತೆ ಹಲವು ಕಡೆ ಭಾರೀ ಮಳೆಯಾಗಿದೆ. ಗುಡುಗು ಮಿಂಚು ಸಹಿತ ಮಳೆಗೆ ರಸ್ತೆ ಮೇಲೆ ಮಳೆ ನೀರು ಹರಿದಿದೆ. ಕೆಲವು ಕಡೆ ರಸ್ತೆ ಸಂಚಾರಕ್ಕೂ ಅಡಚಣೆಯಾಗಿದೆ. ಶಿರಸಿ- ಹುಬ್ಬಳ್ಳಿ ರಸ್ತೆಯ ಬಾಚಣಕಿ ಡ್ಯಾಂ ಬಳಿ ರಸ್ತೆಯ ಮೇಲೆ ನೀರು ತುಂಬಿ ಜಲಾವೃತವಾಗಿದೆ. ಅಲ್ಲದೇ ವಡಗಟ್ಟಾ ಬಳಿಯೂ ರಸ್ತೆಯ ಮೇಲೆ ನೀರಿ ಹರಿದು ಸಂಚಾರಕ್ಕೆ ಅಡಚಣೆಯಾಗಿದೆ.  

“ಹರ್ ಘರ್ ತಿರಂಗಾ” ಪ್ರಯುಕ್ತ ಕಾರವಾರದಲ್ಲಿ “ಸೈಕ್ಲೊತಾನ್” ಕಾರ್ಯಕ್ರಮ..!

“ಹರ್ ಘರ್ ತಿರಂಗಾ” ಪ್ರಯುಕ್ತ ಕಾರವಾರದಲ್ಲಿ “ಸೈಕ್ಲೊತಾನ್” ಕಾರ್ಯಕ್ರಮ..!

 ಕಾರವಾರ: ಉತ್ತರ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಕಾರವಾರ ಬೈಸಿಕಲ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾರತದ 78ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ “ಹರ್ ಘರ್ ತಿರಂಗ” ಕಾರ್ಯಕ್ರಮದ ಅಡಿಯಲ್ಲಿ “ಸೈಕ್ಲೊತಾನ್” ಕಾರ್ಯಕ್ರಮ ಕಾರವಾರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭವಾದ “ಸೈಕ್ಲೊತಾನ್” ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಚಾಲನೆ ನೀಡಿದ್ರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. “ಸೈಕ್ಲೊತಾನ್” ಕಾರ್ಯಕ್ರಮದಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು, ಕಾರವಾರ್ ಬೈಸಿಕಲ್ ಕ್ಲಬ್ ನ ಸದಸ್ಯರು ಸೇರಿದಂತೆ ಹಲವರು ಭಾಗಿಯಾಗಿದ್ದರು‌.

ಮುಂಡಗೋಡ ಬಸವನ ಹೊಂಡದಲ್ಲಿ ವ್ಯಕ್ತಿಯ ಶವ ಪತ್ತೆ, ಆತ್ಮಹತ್ಯೆ ಮಾಡಿಕೊಂಡನಾ ಕಂಬಾರಗಟ್ಟಿಯ ಶಿವಾಜಿ..?

ಮುಂಡಗೋಡ ಬಸವನ ಹೊಂಡದಲ್ಲಿ ವ್ಯಕ್ತಿಯ ಶವ ಪತ್ತೆ, ಆತ್ಮಹತ್ಯೆ ಮಾಡಿಕೊಂಡನಾ ಕಂಬಾರಗಟ್ಟಿಯ ಶಿವಾಜಿ..?

ಮುಂಡಗೋಡ ಪಟ್ಟಣದ ಬಸವನ ಹೊಂಡದಲ್ಲಿ ವ್ಯಕ್ತಿಯೋರ್ವನ ಶವ ದೊರೆತಿದೆ. ಬೆಳ್ಳಂ ಬೆಳಿಗ್ಗೆ ಹೊಂಡದಲ್ಲಿ ಶವ ತೇಲುತ್ತಿರುವುದನ್ನು ಕಂಡ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪಿಎಸ್ಐ ಪರಶುರಾಮ್ ಟೀಂ ಸ್ಥಳಕ್ಕೆ ಧಾವಿಸಿ ಶವ ಹೊರತೆಗೆದಿದ್ದಾರೆ‌. ಇನ್ನು ಹೊಂಡದಲ್ಲಿ ಪತ್ತೆಯಾಗಿರೋ ಶವ ಮುಂಡಗೋಡ ಪಟ್ಟಣದ ಕಂಬಾರಗಟ್ಟಿಯ ಶಿವಾಜಿ ಬಿಸೆಟ್ಟಿ (60) ಅಂತಾ ಗುರುತಿಸಲಾಗಿದೆ. ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತಾ ಶಂಕಿಸಲಾಗಿದೆ. ಸದ್ಯ ಶವ ಹೊರತೆಗೆಯಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  

error: Content is protected !!