ಖತರ್ನಾಕ ಕಳ್ಳಿಯರ ಗ್ಯಾಂಗ್ ಎಂಟ್ರಿ: ಹಾಡಹಗಲೇ ದರೋಡೆ, ಫಿನಾಯಿಲ್ ಮಾರುವ ನೆಪದಲ್ಲಿ ಕಳ್ಳತನ

ಖತರ್ನಾಕ ಕಳ್ಳಿಯರ ಗ್ಯಾಂಗ್ ಎಂಟ್ರಿ: ಹಾಡಹಗಲೇ ದರೋಡೆ, ಫಿನಾಯಿಲ್ ಮಾರುವ ನೆಪದಲ್ಲಿ ಕಳ್ಳತನ

ವಿಜಯಪುರ; ಕೊರೋನಾ ಸಂಕಷ್ಟದ ಮದ್ಯೆಯೂ ವಿಜಯಪುರದಲ್ಲಿ ಖತರ್ನಾಕ್ ಸುಂದರಿಯರ ರಾಬರೀ ಗ್ಯಾಂಗ್ ಫಿಲ್ಡಿಗಿಳಿದಿದೆಯಾ ಅನ್ನೋ ಅನುಮಾನ ಶುರುವಾಗಿದೆ.. ಯಾಕಂದ್ರೆ ವಿಜಯಪುರದ ಶಾಂತಿನಗರ ಏರಿಯಾದಲ್ಲಿ ನಡೆದಿರೊ ಈ ಒಂದು ಘಟನೆ ಇಲ್ಲಿನ ನಿವಾಸಿಗಳನ್ನ ಬೆಚ್ಚಿಬೀಳಿಸಿದೆ.. ಹೀಗಾಗಿ ಇಲ್ಲಿನ ಜನ ಆತಂಕಗೊಂಡಿದ್ದಾರೆ.. ಹೌದು ವಿಜಯಪುರದ ಶಾಂತಿ ನಗರದಲ್ಲಿ ಹಾಡಹಗಲೇ ಆತಂಕಕಾರಿ ಘಟನೆಯೊಂದು ನಡೆದಿದೆ.. ಮಟ ಮಟ ಮದ್ಯಾಹ್ನವೇ ಫಿನಾಯಿಲ್ ಮಾರುವ ವೇಷದಲ್ಲಿ ಬಂದಿದ್ದ ತಂಡವೊಂದು ಮನೆಮಂದಿಗೇಲ್ಲ ಮತ್ತು ಬರಿಸಿ ಚಿನ್ನ ಬೆಳ್ಳಿ ದೋಚಿಕೊಂಡು ಹೋಗಿದೆ.. ದುರಂತ ಅಂದ್ರೆ ಮನೆ ಕಾವಲಿಗಿದ್ದ ಪ್ರೀತಿಯ ಸಾಕು ನಾಯಿ ದುರುಳರ ವಿಷಪ್ರಾಶನಕ್ಕೆ ಜೀವ ಬಿಟ್ಟಿದೆ..   ಹೌದು, ವಿಜಯಪುರ ಶಾಂತಿನಗರದಲ್ಲಿ ವಾಸವಿರೋ, ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಸುನಂದಾ ತೋಳಬಂದಿ ಮನೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.. ಮನೆ ಮನೆಗೆ ಫಿನಾಯಿಲ್ ಮಾರಾಟ ಮಾಡಲು ಬಂದಿದ್ದ ಯುವತಿ ಕಳ್ಳತನದ ಸ್ಕೆಚ್ ಹಾಕಿದ್ದಾಳೆ.. ಮನೆಯ ಹೊರಗಡೆ ಕರೆದಾಗ ಬಂದ ಯುವಕನಿಗೆ ಮತ್ತು ಬರೋ ವಾಸನೆ ತೋರಿಸಿದ ಪ್ರಜ್ಞೆ ತಪ್ಪಿಸಿದ್ದಾಳೆ.. ಆ ನಂತ್ರ...

error: Content is protected !!