ಆ ಪುಟ್ಟ ಕಂದಮ್ಮನ ಸಾವಿಗೆ “ಅಯ್ಯೋ ಪಾಪ ಹೀಗೆ ಆಗಬಾರದಿತ್ತು” ಅಂದ್ರಷ್ಟೇ ಸಾಕಾ..? ಹಾಗಾದ್ರೆ ಇನ್ನೇಷ್ಟು ಬಲಿ ಬೇಕು..?

ನಿಜ, ಮಮ್ಮಲ ಮರುಗುತ್ತಿದೆ ಇಡೀ ಮುಂಡಗೋಡ..!

ಹಾಗೇ ಒಮ್ಮೆ ಕಲ್ಪಿಸಿಕೊಳ್ಳಿ, ಆ ಕಂದಮ್ಮ ಸಾವು ಬದುಕಿನ ಮದ್ಯೆ ಹೋರಾಡುತ್ತ, ಹುಬ್ಬಳ್ಳಿಯ ಕಿಮ್ಸ್ ICU ಬೆಡ್ಡಿನ ಮೇಲೆ ನರಳಿತ್ತಿರೋ ಸಂದರ್ಭ, ಆ ಹೆತ್ತ ಕರುಳುಗಳು ಪಟ್ಟಿರೋ ಸಂಕಟ ಎಷ್ಟಿರಬಹುದು ಅಲ್ವಾ..? ಇದೇಲ್ಲ ಸಾಕ್ಷಿ ಕೇಳುವವರಿಗೆ ಯಾಕೆ ಅರ್ಥವಾಗ್ತಿಲ್ಲ..? ಇದು, ಮುಂಡಗೋಡ ತಾಲೂಕಿನ ಜನರ ಮಿಲಿಯನ್ ಡಾಲರ್ ಪ್ರಶ್ನೆ.

ಸಾಕ್ಷಿ ಬೇಕಂತೆ..?

ಎಲ್ಲಿಂದ ನಗಬೇಕೋ ಅರ್ಥವೇ ಅಗುತ್ತಿಲ್ಲ ಕಣ್ರಿ, ಆ ಮುಗ್ದ ಕಂದಮ್ಮನ ಸಾವಿಗೆ ಕಾರಣನಾದ ವೈದ್ಯನ ವಿರುದ್ಧ ಕ್ರಮ‌ ಕೈಗೊಳ್ಳಲು ಸಾಕ್ಷಿ ಬೇಕಂತೆ..! ಹಾಗಾದ್ರೆ ಇನ್ಮುಂದೆ, ಮುಂಡಗೋಡ ತಾಲೂಕಿನ ಹಳ್ಳಿಗಳ ಮುಗ್ದ ಜನರು ಇಲ್ಲಿನ ಖಾಸಗಿ ಆಸ್ಪತ್ರೆಗೆ ಹೋಗಬೇಕು ಅಂದ್ರೆ ಅದಕ್ಕೆ ಪೂರಕವಾದ ಸಾಕ್ಷಿ ಇಟ್ಕೊಂಡೆ ಹೋಗಬೇಕೆನೋ..? ಅಷ್ಟಕ್ಕೂ, ಸಾಕ್ಷಿಯ ಹೆಸರಲ್ಲಿ ಬಡವರನ್ನು ಹೆದರಿಸಿ ಇನ್ನೇಷ್ಟು ಮುಗ್ದ ಪ್ರಾಣಗಳ ಜೊತೆ ಚೆಲ್ಲಾಟವಾಡೋದು..? ಆ ಹೆತ್ತವರ ಕರುಳ ಕಣ್ಣೀರಿನ ಶಾಪ ಸುಮ್ನೆ ಬಿಡತ್ತಾ..?

ಅಂದಹಾಗೆ, ಇಲ್ಲಿ ಸಾಕ್ಷಿ ಕೊಡಿ ಅಂತಾ ಕೇಳ್ತಿರೋರು ನಮ್ಮ ಪೊಲೀಸರು ಅಂತಾ ಅನಕೋಬೇಡಿ. ಯಾಕಂದ್ರೆ ನಮ್ಮ ಮುಂಡಗೋಡಿನ ಪೊಲೀಸ್ರು ಧಕ್ಷರಿದ್ದಾರೆ. ಆದ್ರೆ ಅವ್ರಿಗೆ ಕ್ರಮ ಕೈಗೊಳ್ಳಲು ದೂರು ಕೊಡುವವರು ಬೇಕಲ್ವಾ..?

ದುರಂತ ಅಂದ್ರೆ ಕುಟುಂಬದವರ, ಹೊಟ್ಟೆಯಲ್ಲಿದ್ದ ಬೆಟ್ಟದಷ್ಟು ನೋವು ಆಕ್ರೋಶವಾಗಿ, ಸಾತ್ವಿಕ ಕೋಪದ ಕಟ್ಟೆಯೊಡೆದು ಕಾನೂನಾತ್ಮಕವಾಗಿ ದೂರು ಕೊಡಬೇಕು ಅನ್ನುವಷ್ಟರಲ್ಲೇ ಅವ್ರಿಗೆ “ಸಾಕ್ಷಿ ಬೇಕು” ಎಂಬ ಭಯದ ಭೂತ ಬಿಟ್ಟಿದ್ದನಾ ಆ ವೈದ್ಯ.? ಹಾಗಂತ ಮುಂಡಗೋಡಿನ ಮಂದಿ ಮಾತಾಡಿಕೊಳ್ತಿದಾರೆ.

ನೆನಪಿರಲಿ, ಈ ವೈದ್ಯ ಮಹಾಶಯ ಈ ಹಿಂದೆ ಆತನ ಮೇಲೆ ಬಂದಿದ್ದ ಡಜನ್ನುಗಟ್ಟಲೇ ಆರೋಪಗಳಲ್ಲೂ ಇದೇ ಮಾತು ಹೇಳಿ ಬಚಾವ್ ಆಗಿದ್ದ ಎನ್ನಲಾಗ್ತಿದೆ‌. ಎಷ್ಟೋ ಸಂಘಟನೆಗಳು ಇದೇ ವೈದ್ಯನ ವಿರುದ್ಧ ದನಿ ಎತ್ತಿದ್ದಾಗಲೂ ಯಾರಿಗೂ ಇವನನ್ನ ಕರೆದು ಮಾತಾಡಿಸುವಷ್ಟೂ ದೈರ್ಯ ಬರಲೇ ಇಲ್ಲ. ಹೀಗಾಗಿ ಆನೆ ನಡೆದದ್ದೇ ದಾರಿ ಎಂಬಂತಾಗಿದೆ ಅಂತಾ ಪ್ರಜ್ಞಾವಂತರು ಆಕ್ರೋಶಗೊಂಡಿದ್ದಾರೆ.

ಯಾವಾಗ ಕೊನೆ ಇದೇಲ್ಲ..?

ಬಹುತೇಕ ಮೈಗೇಲ್ಲ ಎಣ್ಣೆ ಹಚ್ಕೊಂಡೆ ಫಿಲ್ಡಿಗಿಳಿಯೊ ಖತರ್ನಾಕ ಖದೀಮರಿಗೆ ಮುಂಡಗೋಡದಲ್ಲಿ ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸೋ ವ್ಯವಸ್ಥೆ ಯಾವಾಗ ಖತಂ ಆಗತ್ತೋ..? ಹಣದ ಬಲೆಯಲ್ಲಿ ಕೆಲವು ಬಾಲಂಗೋಚಿಗಳನ್ನು ಬೀಳಿಸಿಕೊಂಡು ಆಟವಾಡೋ ಹೀನ ಮನಸ್ಥಿತಿಗಳಿಗೆ ಕಡಿವಾಣ ಯಾವಾಗ ಬೀಳತ್ತೋ..? ಹಾಗಂತ ಮುಂಡಗೋಡಿನ ಸಮಸ್ತ ಪ್ರಜ್ಞಾವಂತರು ಕೇಳುತ್ತಿದ್ದಾರೆ.

ಒಟ್ನಲ್ಲಿ ವ್ಯವಸ್ಥೆಯ ಕರಾಳತೆಯಲ್ಲಿ ಜೀವ ಕೊಟ್ಟು ಬೂದಿಯಾಗಿರೋ ಆ ಪುಟ್ಟ ಕಂದಮ್ಮನ ಆತ್ಮ ಮಾತ್ರ ಇಂಥವರಿಗೇಲ್ಲ ಶಾಪ ಹಾಕುತ್ತಿದೆಯೆನೋ..?

ಛೇ. ಧಿಕ್ಕಾರವಿರಲಿ ವ್ಯವಸ್ಥೆಗೆ..

error: Content is protected !!