ಅನಧಿಕೃತ ಇಟ್ಟಿಗೆ ಭಟ್ಟಿಗಳು ಬಾಲ ಬಿಚ್ಚಂಗಿಲ್ಲ, ಮತ್ತೆ ದಂಧೆಗಿಳಿದ್ರೆ ಹುಶಾರ್ ಅಂತಾ ಎಚ್ಚರಿಸಿದ್ರು ತಹಶೀಲ್ದಾರ್..!

ಅನಧಿಕೃತ ಇಟ್ಟಿಗೆ ಭಟ್ಟಿಗಳು ಬಾಲ ಬಿಚ್ಚಂಗಿಲ್ಲ, ಮತ್ತೆ ದಂಧೆಗಿಳಿದ್ರೆ ಹುಶಾರ್ ಅಂತಾ ಎಚ್ಚರಿಸಿದ್ರು ತಹಶೀಲ್ದಾರ್..!

ಮುಂಡಗೋಡ ತಾಲೂಕಿನಲ್ಲಿ ಅಕ್ರಮ ಇಟ್ಟಿಗೆ ಭಟ್ಟಿ ದಂಧೆಗೆ ಬಹುತೇಕ ಮೂಗುದಾರ ಬಿದ್ದಂತಾಗಿದೆ. ತಾಲೂಕಿನಲ್ಲಿ ಇನ್ಮೇಲೆ ಮತ್ತೆ ಇಟ್ಟಿಗೆ ಭಟ್ಟಿ ದಂಧೆ ಶುರು ಮಾಡಿದ್ರೆ ಸುಮ್ನೆ ಬಿಡಲ್ಲ ಅಂತಾ ತಹಶೀಲ್ದಾರ್ ಶಂಕರ್ ಗೌಡಿ ಖಡಕ್ ವಾರ್ನಿಂಗ್ ಮಾಡಿದ್ದಾರೆ. ಈ ಕುರಿತು ಪತ್ರಕರ್ತರು ಹಾಗೂ ಅಧಿಕಾರಿಗಳ ವಾಟ್ಸಾಪ್ ಗ್ರೂಪ್ ನಲ್ಲಿ ತಹಶೀಲ್ದಾರ್ ಸಂದೇಶ ರವಾನಿಸಿದ್ದಾರೆ. ಎಲ್ಲವೂ ಅನಧಿಕೃತವಂತೆ..! ನಿಜ ಅಂದ್ರೆ ಮುಂಡಗೋಡ ತಾಲೂಕಿನಲ್ಲಿ ಎಲ್ಲವೂ ಅನಧಿಕೃತ ಇಟ್ಟಿಗೆ ಭಟ್ಟಿಗಳಂತೆ. ಇಲ್ಲಿ ಯಾರೊಬ್ರೂ ಅಧಿಕೃತ ಪರವಾನಗಿ ಪಡೆದು ದಂಧೆ ಮಾಡಿಯೇ ಇಲ್ಲ ಅನ್ನೋದು ತಹಶೀಲ್ದಾರ ಕಚೇರಿಯಿಂದ ಸಿಕ್ಕ ಮಾಹಿತಿ. ಹೀಗಾಗಿ, ಖಡಕ್ ಸಮರ ಸಾರಿರೋ ತಹಶೀಲ್ದಾರ್ ಸಾಹೇಬ್ರು, ಯಾರೊಬ್ಬರಿಗೂ ಸೊಪ್ಪು ಹಾಕುತ್ತಿಲ್ಲ. ಅದ್ಯಾರೇ ವಕಾಲತ್ತು ವಹಿಸಿದ್ರೂ ಯಾರಂದ್ರೆ ಯಾರಿಗೂ ಕ್ಯಾರೇ ಅಂತಿಲ್ಲ. ತಾಲೂಕಿನಲ್ಲಿ ಅದೇನೇ ಆದ್ರೂ ಅಕ್ರಮ ಇಟ್ಟಿಗೆ ಭಟ್ಟಿಗಳ ಹಾವಳಿ ನಿಯಂತ್ರಣಕ್ಕೆ ತೊಡೆ ತಟ್ಟಿ ನಿಂತಿದ್ದಾರೆ. ಹೀಗಾಗಿ, ಇಡೀ ತಾಲೂಕಿನ ಜನ ತಹಶೀಲ್ದಾರರ ಕ್ರಮಕ್ಕೆ ಮನತುಂಬಿ ಹರಸ್ತಿದಾರೆ. ಹೆಮ್ಮೆ ಪಡ್ತಿದಾರೆ. ಹಳ್ಳಿಗಳಲ್ಲಿ..! ಮುಂಡಗೋಡ ತಾಲೂಕಿನ...

ಚಿಗಳ್ಳಿಯಲ್ಲಿ ನೇಣಿಗೆ ಶರಣಾದ ವ್ಯಕ್ತಿ, ಕಲ್ಲಪ್ಪಜ್ಜನ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ..!

ಚಿಗಳ್ಳಿಯಲ್ಲಿ ನೇಣಿಗೆ ಶರಣಾದ ವ್ಯಕ್ತಿ, ಕಲ್ಲಪ್ಪಜ್ಜನ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ..!

ಮುಂಡಗೋಡ ತಾಲೂಕಿನ ಚಿಗಳ್ಳಿಯಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗ್ರಾಮದ ಹೊರ ವಲಯದಲ್ಲಿರೋ ಕಲ್ಲಪ್ಪಜ್ಜಯ್ಯನ ಗುಡ್ಡದ ದೇವಸ್ಥಾನದ ಬಳಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ತಿಳಿದು ಬಂದಿದೆ. ಚಿಗಳ್ಳಿಯ ಈರಪ್ಪ ಫಕ್ಕೀರಪ್ಪ ಲಕ್ಕಿಕೊಪ್ಪ (45) ಆತ್ಮಹತ್ಯೆ ಮಾಡಿಕೊಂಡಿರೋ ವ್ಯಕ್ತಿಯಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದ್ರೆ, ಯಾವುದೋ ಕಾರಣಕ್ಕೆ ಇಂದು ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಾನಗಲ್ ನಲ್ಲಿ ಎರಡು ಪುಟ್ಟ ಕಂದಮ್ಮಗಳೂ ಸೇರಿ ಮೂವರ ಬರ್ಬರ ಹತ್ಯೆ..! ಮೈದುನನಿಂದಲೇ ನಡೀತಾ ಕೃತ್ಯ..?

ಹಾನಗಲ್ ನಲ್ಲಿ ಎರಡು ಪುಟ್ಟ ಕಂದಮ್ಮಗಳೂ ಸೇರಿ ಮೂವರ ಬರ್ಬರ ಹತ್ಯೆ..! ಮೈದುನನಿಂದಲೇ ನಡೀತಾ ಕೃತ್ಯ..?

ಹಾನಗಲ್ ತಾಲೂಕಿನ ಯಳ್ಳೂರಿನಲ್ಲಿ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೈದುನನೇ ಅಣ್ಣನ ಹೆಂಡತಿ ಹಾಗೂ ಎರಡು ಪುಟ್ಟ ಪುಟ್ಟ ಕಂದಮ್ಮಗಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭೀಕರ ತ್ರಿಬಲ್ ಮರ್ಡರ್ ಆಗಿದೆ ಅನ್ನೋ ಅನುಮಾನ ವ್ಯಕ್ತವಾಗಿದ್ದು, ಗೀತಾ ಮರಿಗೌಡ್ರು (32), ಅಕುಲ್ (10), ಅಂಕಿತಾ (7) ಭೀಕರವಾಗಿ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಬೆಳಗಿನ ಜಾವ 3.30 ರ ಸುಮಾರಿನಲ್ಲಿ ಭೀಕರ ಹತ್ಯೆ ನಡೆದಿದೆ ಎನ್ನಲಾಗಿದೆ. ಕುಮಾರಗೌಡ್ ಮರಿಗೌಡ್ರು (35)ಎಂಬುವ ಮೈದುನನೇ ಕೊಲೆ ಮಾಡಿ ನಾಪತ್ತೆಯಾಗಿರೋ ಅನುಮಾನ ವ್ಯಕ್ತವಾಗಿದೆ.   ಪಾಪಿ ತಮ್ಮನೇ, ಸ್ವಂತ ಅಣ್ಣ ಹೊನ್ನೆಗೌಡ ಎಂಬುವವನ ಹೆಂಡತಿ ಮತ್ತು ಮಕ್ಕಳನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದ್ದು, ಮೃತ ಗೀತಾ ಪತಿ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೀಗಾಗಿ, ಸದ್ಯ ನಾಪತ್ತೆಯಾಗಿರೋ ಮೈದುನ ಕುಮಾರಗೌಡನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಹಾವೇರಿ ಎಸ್ಪಿ, ಹಾನಗಲ್ ಸಿಪಿಐ...

ಅವ್ರೊಬ್ಬ DyRFO ಸಾಹೇಬ್ರು..! ಅವ್ರ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್..! ಅರಣ್ಯಾಧಿಕಾರಿಗಳೇ ಯಾರಿಗಾಗಿ ಈ ದೌಲತ್ತು..?

ಅವ್ರೊಬ್ಬ DyRFO ಸಾಹೇಬ್ರು..! ಅವ್ರ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್..! ಅರಣ್ಯಾಧಿಕಾರಿಗಳೇ ಯಾರಿಗಾಗಿ ಈ ದೌಲತ್ತು..?

ಯಲ್ಲಾಪುರ ಅರಣ್ಯ ಇಲಾಖೆಯಲ್ಲಿ DyRFO ಒಬ್ರು ಹುಲಿ ಉಗುರಿನ ಪೆಂಡೆಂಟ್ ಧರಿಸಿ ಫೋಟೊಗೆ ಫೋಸ್ ನೀಡಿದ್ದಾರೆ. ಹಾಗಂತ ಸಾಕಷ್ಟು ಚರ್ಚೆಗಳು ಖುದ್ದು ಇಲಾಖೆಯ ಅಂಗಳದಲ್ಲೇ ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿದೆ. ಅಲ್ದೇ ಸಾಮಾಜಿಕ ಜಾಲತಾಣಗಳಲ್ಲಿ ಆ ಪೋಟೋಗಳೂ ಹರಿದಾಡ್ತಿವೆ. ಇಲಾಖೆಯ ಅಧಿಕಾರಿಗಳೇ ಹೀಗೆ ಮಾಡಿದ್ರೆ, ಸಾರ್ವಜನಿಕರ ಪಾಡೇನು ಅನ್ನೋ ಪ್ರಶ್ನೆ ನೆಟ್ಟಿಗರು ಕೇಳ್ತಿದಾರಂತೆ. ಅವರು ಹಾಗಾ..? ಅಸಲು, ಅವ್ರು ಇಡೀ ಕೆನರಾ ವಲಯದಲ್ಲೇ ಜಬರ್ದಸ್ತ್ ಪ್ರಭಾವಿಯಂತೆ. ಇಡೀ ಇಲಾಖೆಯೇ ಇವರ ಇಶಾರೆಯಲ್ಲಿ ಬದ್ರವಾಗಿದೆ ಅನ್ನೋ ಪುಕಾರು ಇದೆ. ಅಂತಹದ್ದೊಂದು ಹವಾ ಮೆಂಟೇನ್ ಮಾಡಿರೋ ಅವರ ವಿರುದ್ಧ ತುಟಿ ಬಿಚ್ಚಲು ಅಲ್ಲಿನ ಹಿರಿಯ ಅಧಿಕಾರಿಗಳೇ ಒಂದುಕ್ಷಣ ಬೆವರಿ ಬಿಡ್ತಾರೆ ಅನ್ನೋ ವಾತಾವರಣ ಇದೆಯಂತೆ. ಅದಕ್ಕಾಗೇ ನಾವೂ ಕೂಡ ಅವ್ರಿಗೆ “ಅವನು ಇವನು” ಅನ್ನದೇ ಫುಲ್ಲಿಲೋಡೇಡ್ ಗೌರವ ನೀಡುತ್ತಿದ್ದೆವೆ.. ಯಾಕಂದ್ರೆ, ಅದು ನಮ್ಮ ಪುಣ್ಯ ಅಂದುಕೊಂಡಿದ್ದಿವಿ. ನಮಗೂ ಬೆವರು ಕಣ್ರಿ..! ಅಲ್ದೇ ಅವರ ಹವಾ, ಬಲಿಷ್ಟ ಬಿರುಗಾಳಿಯ ಬಗ್ಗೆ ಹತ್ತಾರು ಜನ ಇಲಾಖೆಯ...

ಶಂಕರ್ ಫಕೀರಪ್ಪ ಗೆ ಪಿಹೆಚ್ ಡಿ ಪದವಿ ಪ್ರಧಾನ, ಸಿಹಿ ತಿನ್ನಿಸಿ ಸಂಭ್ರಮ..!

ಶಂಕರ್ ಫಕೀರಪ್ಪ ಗೆ ಪಿಹೆಚ್ ಡಿ ಪದವಿ ಪ್ರಧಾನ, ಸಿಹಿ ತಿನ್ನಿಸಿ ಸಂಭ್ರಮ..!

ಧಾರವಾಡ: ಶಂಕರ್ ಫಕೀರಪ್ಪ ಅವರು, ಧಾರವಾಡ ವಿಶ್ವ ವಿದ್ಯಾಲಯದಿಂದ ಗಣಿತ ಶಾಸ್ತ್ರದಲ್ಲಿ ಪಿಹೆಚ್ ಡಿ ಪದವಿ ಪಡೆದಿದ್ದಾರೆ. ನಿನ್ನೆ ಸೋಮವಾರ ಧಾರವಾಡ ವಿಶ್ವವಿದ್ಯಾಲಯ ದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ ಗೆಹ್ಲೊಟ್ ಪದವಿ ಪ್ರಧಾನ ಮಾಡಿದ್ರು. ಅಂದಹಾಗೆ, ಶಂಕರ್ ಫಕೀರಪ್ಪ ಇವ್ರು ಪಿಹೆಚ್ ಡಿ ಪದವಿ ಪಡೆದಿದ್ದಕ್ಕೆ, ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ ಸೇರಿದಂತೆ ಸಮಾಜದ ಹಲವು ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ. ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.

ಬೆಳ್ಳಂ ಬೆಳಿಗ್ಗೆ ಅರಣ್ಯ ಅಧಿಕಾರಿಗಳಿಗೆ ಶಾಕ್, RFO ಗಳ‌ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ..!

ಬೆಳ್ಳಂ ಬೆಳಿಗ್ಗೆ ಅರಣ್ಯ ಅಧಿಕಾರಿಗಳಿಗೆ ಶಾಕ್, RFO ಗಳ‌ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ..!

 ಹಾವೇರಿಯಲ್ಲಿ ಬೆಳ್ಳಂ ಬೆಳಿಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶಾಕ್ ನೀಡಲಾಗಿದೆ. ಇಬ್ಬರು RFO ಗಳ ಮನೆ, ಸೇರಿದಂತೆ 9 ಕಡೆ ಲೋಕಾ ದಾಳಿಯಾಗಿದೆ. RFO ಪರಮೇಶ್ವರ ಪೇರಲನವರ, RFO ಮಾಲತೇಶ ನ್ಯಾಮತಿ ಗೆ ಸೇರಿದ ಮನೆ ಹಾಗೂ ಫಾರ್ಮ್ ಹೌಸ್ ಸೇರಿ 9 ಕಡೆ ದಾಳಿ ನಡೆಸಲಾಗಿದೆ. ಹಾವೇರಿ ನಗರ ಹಾಗೂ ಕುರಬಗೊಂಡ ಗ್ರಾಮದಲ್ಲಿ ದಾಳಿ ನಡೆಸಲಾಗಿದೆ. RFO ಪರಮೇಶ್ವರ ಪೇರಲನವರಗೆ ಸೇರಿದ ಎರಡು ಮನೆ ಸೇರಿದಂತೆ 6 ಕಡೆ ದಾಳಿ ನಡೆದಿದೆ. ಇನ್ನು ಮತ್ತೋರ್ವ RFO ಮಾಲತೇಶ್ ನ್ಯಾಮತಿಯವರ ಮನೆ ಸೇರಿ ಮೂರು ಕಡೆ ದಾಳಿ ನಡೆದಿದೆ. ಹಾವೇರಿಯ ಶಿವಾಜಿನಗರ, ವರದಾನೇಶ್ವರಿ ನಗರ, ಕುರುಬಗೊಂಡ ಗ್ರಾಮದ ಮನೆ, ಫಾಮ್೯ ಹೌಸ್ ಗಳ ಮೇಲೆ ದಾಳಿ ನಡೆಸಿರೋ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಏನೇನು ಸಿಕ್ಕಿದೆ ಅನ್ನೋ ಬಗ್ಗೆ ಇನ್ನಷ್ಟೆ ಮಾಹಿತಿ ಬರಬೇಕಿದೆ.

ಕಾರವಾರದ ಯುವಕ ಆತ್ಮಹತ್ಯೆ ಕೇಸ್, ಪಿಐ, ಪಿಎಸ್ಐ ಸೇರಿ ಮೂವರು ಪೊಲೀಸರು ಸಸ್ಪೆಂಡ್..!

ಕಾರವಾರದ ಯುವಕ ಆತ್ಮಹತ್ಯೆ ಕೇಸ್, ಪಿಐ, ಪಿಎಸ್ಐ ಸೇರಿ ಮೂವರು ಪೊಲೀಸರು ಸಸ್ಪೆಂಡ್..!

ಪೊಲೀಸರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಕೇಸ್ ಗೆ ಮೂವರು ಪೊಲೀಸರ ಅಮಾನತ್ತಾಗಿದೆ‌. ಕಾರವಾರದಲ್ಲಿ ಮಾರುತಿ ನಾಯ್ಕ ಎಂಬಾತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ, ಪಿಎಸ್ಐ ಸೇರಿದಂತೆ ಮೂವರನ್ನು ಸಸ್ಪೆಂಡ್ ಮಾಡಿ ಎಸ್ಪಿ ವಿಷ್ಣುವರ್ಧನ್ ಆದೇಶಿಸಿದ್ದಾರೆ. CPI ಕುಸುಮಾಧರ ಕೆ, PSI ಶಾಂತಿನಾಥ ಹಾಗೂ ಕಾನಸ್ಟೆಬಲ್ ದೇವರಾಜ್ ಸಸ್ಪೆಂಡ್ ಆಗಿದ್ದಾರೆ. ಮಾರುತಿ ನಾಯ್ಕ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸುಸೈಡ್ ನೋಟ್ ಬರೆದು ವಿಡಿಯೋ ರೆಕಾರ್ಡ್ (video record)ಮಾಡಿದ್ದ. ತನ್ನ ಆತ್ಮಹತ್ಯೆಗೆ ಪೊಲೀಸರು, ಎಲಿಷಾ ಎಲಕಪಾಟಿ, ಬಸವರಾಜ, ಸುರೇಶ್ ಮತ್ತಿತರರ ಹೆಸರು ಬರೆದಿಟ್ಟಿದ್ದ. ಹೀಗಾಗಿ, ಪ್ರಕರಣದ ಗಂಭೀರತೆ ಬಯಲಾದ ಹಿನ್ನೆಲೆ ಪೊಲೀಸ್ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಲಾಗಿದ್ದು, ಆರೋಪಿಗಳನ್ನ ಬಂಧಿಸಲಾಗಿದೆ. ದಲಿತ ಮುಖಂಡ ಎಲಿಷಾ ಎಲಕಪಾಟಿ ಹಿಂದೂ ಧರ್ಮದ ವಿರುದ್ಧ ನೀಡಿದ ಹೇಳಿಕೆಯನ್ನ ಮಾರುತಿ ನಾಯ್ಕ್ ರೆಕಾರ್ಡ್ ಮಾಡಿದ್ದ. ಬಳಿಕ ಎಲಿಷ ಎಲಕಪಾಟಿ ಕುಟುಂಬಸ್ಥರು ಮಾರುತಿ ನಾಯ್ಕ್ ಮೇಲೆ ಹಲ್ಲೆ ನಡೆಸಿದ್ದರು. ಎಲಿಷಾ ಕುಟುಂಬಕ್ಕೆ ಪೊಲೀಸರು ಬೆಂಬಲವಾಗಿ...

ಭ.ಶಂಭವನಾಥ ಜಿನಮಂದಿರದಲ್ಲಿ ನವರಾತ್ರಿಯ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ..!

ಭ.ಶಂಭವನಾಥ ಜಿನಮಂದಿರದಲ್ಲಿ ನವರಾತ್ರಿಯ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ..!

ಮುಂಡಗೋಡಿನ ಭ.ಶಂಭವನಾಥ ತೀರ್ಥಂಕರರ ಜಿನಮಂದಿರದಲ್ಲಿ ನವರಾತ್ರಿಯ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಜಿನಮಂದರದಲ್ಲಿ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜಾಕೈಂಕರ್ಯಗಳನ್ನು ಜೈನ ಶ್ರಾವಕರು ಹಮ್ಮಿಕೊಂಡಿದ್ದರು. ಪದ್ಮಾವತಿ ಅಮ್ಮನವರಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಸುಮಂಗಲೆಯರು ಜಿನಭಕ್ತಿಗೀತೆಗಳೊಂದಿಗೆ ಅಮ್ಮನವರಿಗೆ ವಿಶೇಷ ಅರ್ಚನೆ ಮಾಡಿದ್ರು. ಈ ವೇಳೆ ಪಟ್ಟಣದ ಹಲವು ಜೈನ ಮುಖಂಡರು, ಶ್ರಾವಕ ಶ್ರಾವಕಿಯರು ಭಾಗಿಯಾಗಿದ್ರು.

ಮುಂಡಗೋಡ ಬೆಟ್ಟಿಂಗ್ ದಂಧೆಯಲ್ಲಿ ಅದ್ವಾನ, “ಬಾಬತ್ತು” ಎಜೇಂಟರನ ಯಡವಟ್ಟಿನಿಂದ ಅಮಾಯಕನಿಗೆ ಶಿಕ್ಷೆಯಾ..? ಇದು ಜಸ್ಟ್ ಬ್ರೇಕಿಂಗ್ ಮಾತ್ರ..!

ಮುಂಡಗೋಡ ಬೆಟ್ಟಿಂಗ್ ದಂಧೆಯಲ್ಲಿ ಅದ್ವಾನ, “ಬಾಬತ್ತು” ಎಜೇಂಟರನ ಯಡವಟ್ಟಿನಿಂದ ಅಮಾಯಕನಿಗೆ ಶಿಕ್ಷೆಯಾ..? ಇದು ಜಸ್ಟ್ ಬ್ರೇಕಿಂಗ್ ಮಾತ್ರ..!

ಮುಂಡಗೋಡಿನ ಅಕ್ರಮ ದಂಧೆಗಳ ಪೈಕಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಹಾಲೂ,ಹಣ್ಣು, ತುಪ್ಪ ಸುರಿದು ಸಲುಹುತ್ತಿರೋ ಅದೊಬ್ಬ ಸರ್ಕಾರಿ ಶೂರ ಯಡವಟ್ಟು ಮಾಡಿಕೊಂಡಿದ್ದಾನೆ ಅನ್ನೋ ಸುದ್ದಿ ಹರಿದಾಡ್ತಿದೆ. ಮಾನ್ಯ ಎಸ್ಪಿಯವರ ಹೆಸರಲ್ಲಿ ದಂಧೆಗಿಳಿದಿರೋ ಆ ಕಿಲಾಡಿಯ ಮಂಕು ಬುದ್ದಿಗೆ, ಅಸಲೀ ಆರೋಪಿಗಳು ಯಾರೂ ಅಂತಾನೇ ಅರ್ಥ ಆಗಿಲ್ಲ. ಹೀಗಾಗಿ, ತನ್ನ ದಂಧೆಯ ಕೊಂಡಿಯೊಬ್ಬ ನೀಡಿರೋ ಹೆಸರನ್ನೇ ಬರೆದುಕೊಂಡು ಕೇಸು ದಾಖಲಿಸಿರೋ ಆ ಅಡ್ನಾಡಿಗೆ ಇವಾಗ ಬಿಸಿ ಮುಟ್ಟುವ ಎಲ್ಲಾ ಸೂಚನೆ ಇದೆ. ಸದ್ಯ ಮೀಟಿಂಗ್ ನಡೀತಿದೆ.. ಅಲ್ಲಿ ಆತ ಬಹುತೇಕ ಕಾಲು ಬಿದ್ದು ತಪ್ಪಾಯ್ತು ಅಂತಾ ಹೇಳಿ ಇಡಿ ಇಡಿಯಾಗಿ ಕೇಸನ್ನೇ ತಿಪ್ಪೆ ಸಾರಿಸುವ ಯತ್ನ ಮಾಡಿಸ್ತಿದಾನೆ.. ಆದ್ರೆ, ಏನೂ ಅರಿಯದ ದಲಿತ ಹುಡುಗನೊಬ್ಬ ಆ ನಾಲಾಯಕನ ದುಡ್ಡಿನ ತೀಟೆಗೆ ಬಲಿಯಾಗುವ ಹಂತದಲ್ಲಿದ್ದಾನೆ. ದೊಡ್ಡವನ ದಡ್ಡತನ..! ದುರಂತ ಅಂದ್ರೆ, ಹೊಸತಾಗಿ ಬಂದಾಗ ಅದೇಂತದ್ದೋ ಪುರಾಣ ಪುಣ್ಯ ಕತೆ, ಶಿಸ್ತು ಅಂತೇಲ್ಲ ಹೇಳಿಕೊಂಡು ಬುರುಡೆ ಬಿಟ್ಟಿದ್ದ ದೊಡ್ಡವನು ನಮ್ಮನ್ನೇಲ್ಲ ದಡ್ಡರನ್ನಾಗಿಸಿದ್ದಾನೆ. ಕೈಯಿಂದ ಬಾಚಿಕೊಂಡರೆ ಉಳಿಯಬಹುದು...

ಮುಂಡಗೋಡ ಪಟ್ಟಣದ ಮೂರು ಶಿಶು ಪಾಲನ ಕೇಂದ್ರ ಮುಚ್ಚುವ ಆತಂಕ, ಪೋಷಕರಿಂದ ಮನವಿ ಸಲ್ಲಿಸಲು ನಿರ್ಧಾರ..!

ಮುಂಡಗೋಡ ಪಟ್ಟಣದ ಮೂರು ಶಿಶು ಪಾಲನ ಕೇಂದ್ರ ಮುಚ್ಚುವ ಆತಂಕ, ಪೋಷಕರಿಂದ ಮನವಿ ಸಲ್ಲಿಸಲು ನಿರ್ಧಾರ..!

ಮುಂಡಗೋಡ ಪಟ್ಟಣದ ಮೂರು ಸ್ಥಳಗಳಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸ್ತಿದ್ದ ಶಿಶು ಪಾಲನ ಕೇಂದ್ರಗಳನ್ನು ಮುಚ್ಚಲಾಗ್ತಿದೆಯಾ..? ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗಾಗಿ ತೆರೆದಿರೋ ಶಿಶು ಪಾಲನ ಕೇಂದ್ರಗಳನ್ನು  ಸದ್ಯ ಮುಚ್ಚಲಾಗ್ತಿದೆ ಅನ್ನೋ ಸುದ್ದಿ ತಿಳಿದು ಅಲ್ಲಿನ ಪೋಷಕರು ಆತಂಕಗೊಂಡಿದ್ದಾರೆ. ಹೀಗಾಗಿ, ಪೋಷಕರು ಶಿಶು ಪಾಲನ ಕೇಂದ್ರ ಮುಚ್ಚದಂತೆ ತಹಶೀಲ್ದಾರರಿಗೆ ಮನವಿ ಅರ್ಪಿಸಿದ್ದಾರೆ. ಜಿಲ್ಲೆ ಸೇರಿದಂತ ರಾಜ್ಯದ ಕೆಲವೆಡೆ ಶಿಶು ಪಾಲನ ಕೇಂದ್ರಗಳನ್ನು ಮುಚ್ಚಲಾಗುತ್ತಿದ್ದು, ಅದೇ ಭಯ ಇದೀಗ ಮುಂಡಗೋಡಿನ ಸುಭಾಷನಗರ, ಲಂಬಾಣಿ ತಾಂಡಾ ನಂ.3 ಹಾಗೂ ಗಣೇಶನಗರದ ಮಕ್ಕಳ ಪಾಲಕರಲ್ಲಿ ಶುರುವಾಗಿದೆ. ಕಾರಣ ಈ ಮೂರೂ ಶಿಶು ಪಾಲನ ಕೇಂದ್ರಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಜೊತೆಗೆ ಉತ್ತಮ ಶಿಕ್ಷಣ ದೊರಕುತ್ತಿದೆ. ಇದನ್ನು ಮುಚ್ಚಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಅನ್ನೋದು ಪೋಷಕರ ಅಳಲು. ಅಂದಹಾಗೆ, ಇಲ್ಲಿ ಇವಾಗ ನೂರಾರು ಪುಟ್ಟ ಪುಟ್ಟ ಮಕ್ಕಳು ಶಿಶು ಕೇಂದ್ರಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದ್ದರಿಂದ ಇಲ್ಲಿನ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಾರೆ ಅಂತಾ ಆತಂಕದಲ್ಲಿರೋ ಇಲ್ಲಿನ...

error: Content is protected !!