ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕೈ ಟಿಕೆಟ್ ಗಾಗಿ ಇಡೀ ಕ್ಷೇತ್ರದ ಕಾಂಗ್ರೆಸ್ ಪಾಳಯ ಬಹುತೇಕ ಇಬ್ಬಾಗವಾದಂತಾಗಿದೆ. ಅದ್ಯಾವುದೋ ಕಾಣದ ಕೈ ಇಲ್ಲಿನ ಕಾಂಗ್ರೆಸ್ ಗೆ ಕೂಸು ಹುಟ್ಟೊಕೆ ಮುಂಚೆಯೇ ಕುಲಾಯಿ ಹೊಲಿಸೋ ಮೂಡ್ ಕ್ರಿಯೇಟ್ ಮಾಡಿ ಮಜಾ ತಕ್ಕೊತಿದೆಯಾ ಅನ್ನೋ ಅನುಮಾನ ಶುರುವಾಗಿದೆ.

ಅಂದಹಾಗೆ, ಇವತ್ತು ಸಚಿವ ಸತೀಶ ಜಾರಕೀಹೊಳಿ ಶಿಗ್ಗಾವಿಗೆ ಆಗಮಿಸುತ್ತಿದ್ದಾರೆ. ಆದ್ರೆ, ಅದಕ್ಕೂ ಮೊದಲು ಶಿಗ್ಗಾವಿ ಪ್ರವಾಸಿ ಮಂದಿರದಲ್ಲಿ ಎರಡು ಬಣಗಳ ನಡುವೆ ಮಾತಿನ ಚಕಮಕಿಯೇ ನಡೆದು ಹೋಗಿದೆ.
ಜಾರಕಿಹೋಳಿ ಸಾಹೇಬರ ಆಗಮನಕ್ಕೂ ಮುನ್ನವೇ ಎರಡು ಬಣಗಳ ನಡುವೆ ಕಿತ್ತಾಟ ಮಾಡಿಕೊಂಡಿವೆ.

ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಬಣ ಮತ್ತು ಯಾಸೀರ್ ಖಾನ್ ಬಣದ ನಡುವೆ ಮಾತಿನ ಚಕಮಕಿ ನಡೆದಿದೆ. ಒಂದೆಡೆ, ಪ್ರವಾಸಿ ಮಂದಿರದ ಹೊರಗಡೆ ಬೆಂಬಲಿಗರೊಂದಿಗೆ ಅಜ್ಜಂಪೀರ್ ಖಾದ್ರಿ ಕುಳಿತಿದ್ದಾರೆ. ಅತ್ತ, ಪ್ರವಾಸಿ ಮಂದಿರದ ಒಳಗೆ ಕುಳಿತ ಯಾಸೀರ್ ಖಾನ್ ಪಠಾಣ್, ಮಾಜಿ ಎಂಎಲ್ ಸಿ ಸೋಮಣ್ಣ ಬೇವಿನಮರದ ಭಾರೀ ಚರ್ಚೆಯಲ್ಲಿ ತೊಡಗಿಕೊಂಡಿದ್ದಾರೆ.

error: Content is protected !!