ಮುಂಡಗೋಡ: ತಾಲೂಕಿನ ಕಾಳಗಿನಕೊಪ್ಪದ ಮಹಿಳೆಯರು ಸಿಡಿದು ನಿಂತಿದ್ದಾರೆ. ತಮ್ಮ ಗ್ರಾಮದಲ್ಲಿ ಯುವಕರನ್ನ ದಾರಿ ತಪ್ಪಿಸ್ತಿರೋ ಸರಾಯಿ, ಗುಟ್ಕಾ, ಸಿಗರೇಟ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಹೌದು, ಮುಂಡಗೋಡ ತಾಲೂಕಿನ ಕಾಳಗಿನ ಕೊಪ್ಪದ ಮಹಿಳೆಯರಿಗೆ ಇವತ್ತು ಆಕ್ರೋಶದ ಕಟ್ಟೆಯೊಡೆದಿದೆ. ನಿತ್ಯವೂ ಕುಡಿದು ನಶೆಯಲ್ಲಿ ತೇಲಾಡುವ, ಗುಟ್ಕಾ ತಿಂದು ಕಂಡ ಕಂಡಲ್ಲೆ ಗಲೀಜು ಮಾಡುವ, ಸಿಗರೇಟು ಸೇದುತ್ತು ಮಸ್ತಿ ಮಾಡುವ ಯುವಕರನ್ನು ಹಾಗೂ ತಮ್ಮ ಮನೆ ಯುವ ಹುಡುಗರನ್ನು ಹೇಗಾದ್ರೂ ಸರಿ ದಾರಿಗೆ ತರಲೇ ಬೇಕು ಅಂತಾ ಟೊಂಕ ಕಟ್ಟಿ ನಿಂತಿದ್ರು. ಅಂದಹಾಗೆ, ಕಾಳಗಿನಕೊಪ್ಪದ ಮಹಿಳೆಯರು ಇಂದು ಗ್ರಾಮದಲ್ಲಿನ ಕೆಲವು ಅನಧಿಕೃತವಾಗಿ ಮದ್ಯ ಮಾರಾಟ ಮಾಡುವವರಿಗೂ ತಕ್ಕ ಪಾಠ ಕಲಿಸಿದ್ದಾರೆ.ಮದ್ಯ ಮಾರಾಟ ಮಾಡುವ ಅಂಗಡಿಗಳಲ್ಲಿನ ಮದ್ಯದ ಬಾಕ್ಸ್ ಗಳನ್ನು ಹೊರಹಾಕಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇನ್ಮೇಲೆ ಗ್ರಾಮದಲ್ಲಿ ಮದ್ಯ ಮಾರಾಟ ಮಾಡಿದ್ರೆ ಹುಶಾರ್ ಅಂತಾ ಎಚ್ಚರಿಸಿದ್ದಾರೆ. ಅಂದಹಾಗೆ, ಮುಂಡಗೋಡ ತಾಲೂಕಿನಲ್ಲಿ ಅಧಿಕೃತ ಸರಾಯಿ ಅಂಗಡಿಗಳು ಎಷ್ಟಿವೆಯೋ ಗೊತ್ತಿಲ್ಲ, ಆದ್ರೆ ಅನಧೀಕೃತವಾಗಿ ತಾಲೂಕಿನ...
Top Stories
ನಿವೃತ್ತ IPS ಅಧಿಕಾರಿ DG-IGP ಓಂ ಪ್ರಕಾಶ್ ಬರ್ಬರ ಹತ್ಯೆ..! ಪತ್ನಿಯೇ ಕೊಲೆ ಮಾಡಿರೋ ಶಂಕೆ..!
ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬಿದ್ದ ಕಾರವಾರ, ನಗರಸಭೆಯ ಮಾಜಿ ಸದಸ್ಯನ ಭೀಕರ ಹತ್ಯೆ, ಸತೀಶ್ ಕೊಳಂಕರ್ ನ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ..!
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
“ನಮ್ಮ ಊರಾಗ್ ಇನ್ ಸೆರೇ ಮಾರಂಗಿಲ್ಲ” ಕಾಳಗಿನಕೊಪ್ಪ ಮಹಿಳೆಯರ ಖಡಕ್ ಎಚ್ಚರಿಕೆ..!
KDCC ಬ್ಯಾಂಕ್ ಎದುರು ಅನ್ನದಾತರ ಪರದಾಟ: ಬೆಳೆಸಾಲ ಪಡೆಯಲು ಹರಸಾಹಸ..!
ಮುಂಡಗೋಡ: ಪಟ್ಟಣದ KDCC ಬ್ಯಾಂಕ್ ಎದುರು ಅನ್ನದಾತರ ಪರದಾಟ ಇನ್ನೂ ನಿಂತಿಲ್ಲ. ತಮ್ಮ ಬೆಳೆಸಾಲದ ಹಣಕ್ಕಾಗಿ ದಿನವಿಡೀ ಬಿಸಿಲು, ಮಳೆಯಲ್ಲೇ ಕಾಯಬೇಕಾದ ದುಸ್ತಿತಿ ತಪ್ಪಿಲ್ಲ.. ಬ್ಯಾಂಕ್ ಎದುರು ಅರ್ಧ ಕಿಲೋ ಮೀಟರ್ ವರೆಗೂ ಸರತಿ ಸಾಲಲ್ಲಿ ನಿಂತು ಬಸವಳಿಯುತ್ತಿರೋ ಅನ್ನದಾತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಯಾರೂ ತೋರುತ್ತಿಲ್ಲ. ಈ ಸುದ್ದಿಯ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. ಹೌದು, ಮುಂಡಗೋಡ ತಾಲೂಕಿನ ರೈತರಿಗೆ ಸಿಗಬೇಕಾದ ಬೆಳೆಸಾಲಕ್ಕೆ ಅನ್ನದಾತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ KDCC ಬ್ಯಾಂಕ್ ಎದುರು ದಿನವಿಡೀ ಸರತಿ ಸಾಲಲ್ಲಿ ನಿಂತು ತಮ್ಮ ಬೆಳೆಸಾಲ ಪಡೆದುಕೊಳ್ಳುವ ಅನಿವಾರ್ಯತೆ ಎದಿರಾಗಿದೆ. ಹೀಗಾಗಿ, ಲಾಕ್ ಡೌನ್ ನಡುವೆಯೂ ಅನ್ನದಾತ ತನ್ನ ಸಾಲದ ಬಾಬತ್ತು ಪಡೆಯಲು ಪರದಾಡುತ್ತಿದ್ದಾನೆ. KDCC ಬ್ಯಾಂಕ್ ಆಡಳಿತ ವರ್ಗ ರೈತರಿಗೆ ಆಗುತ್ತಿರೋ ಇಂತಹ ತೊಂದರೆ ನೀಗಿಸಲು ಸುಲಭವಾದ ಪರ್ಯಾಯ ಮಾರ್ಗ ಅನುಸರಿಸಬೇಕಿದೆ ಅಂತಾ ಮುಂಡಗೋಡ ರೈತ ಮುಖಂಡ ರಾಮಣ್ಣ ಕುನ್ನೂರ್ ಆಗ್ರಹಿಸಿದ್ದಾರೆ. ಅಂದಹಾಗೆ, ಕೊರೋನಾ...
ಮುಂಡಗೋಡಿನಲ್ಲಿ ಇಂದಿನಿಂದ 4 ನೇ ಹಂತದ ಲಾಕ್ ಡೌನ್: ಅಗತ್ಯ ವಸ್ತುಗಳ ಖರೀಧಿಗೆ ಮುಗಿಬಿದ್ದ ಜನ..!
ಮುಂಡಗೋಡ-ಪಟ್ಟಣದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಇಂದಿನಿಂದ ಪ್ರಾರಂಭವಾಗಿದೆ. ನಿನ್ನೆಯಷ್ಟೇ ಉತ್ತರ ಕನ್ನಡ ಜಿಲ್ಲಾಧಿಕಾರಿ ಪರಿಷ್ಕೃತ ಆದೇಶ ಹೊರಡಿಸಿದ್ದಾರ. ಈ ಹಿನ್ನೆಲೆಯಲ್ಲಿ ಇಂದಿನಿಂದ ಸೋಮವಾರ, ಮಂಗಳವಾರ, ಬುಧವಾರ ಹಾಗೂ ಗುರುವಾರ ಹೀಗೆ ನಾಲ್ಕು ದಿನಗಳ ಕಾಲ, ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಇಂದು ಮುಂಡಗೋಡ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀಧಿಗೆ ಜನ ಮುಗಿಬಿದ್ದಿದ್ರು. ಇಲ್ಲಿನ ದಿನಸಿ ಅಂಗಡಿಗಳ ಎದುರು ಜನ ಜಂಗುಳಿಯೇ ಸೇರಿತ್ತು. ಇನ್ನು ಅನಗತ್ಯ ತಿರುಗಾಡುವ ವಾಹನಗಳ ಬಗ್ಗೆ ಪೊಲಿಸ್ರು ಹದ್ದಿನ ಕಣ್ಣು ಇಟ್ಟಿದ್ರು..
ಮುಂಡಗೋಡಿನಲ್ಲಿ ಛತ್ರಿ, ರೇನ್ ಕೋಟ್ ಮಾರಾಟಕ್ಕೆ ಅನುಮತಿ: ಪಪಂ ನಿಂದ ಧ್ವನಿವರ್ದಕದ ಮೂಲಕ ಸೂಚನೆ..!
ಮುಂಡಗೋಡ: ಪಟ್ಟಣದಲ್ಲಿ ಮಳೆಗಾಲಕ್ಕೆ ಅವಶ್ಯಕವಾಗಿರೋ ಛತ್ರಿ, ರೇನ್ ಕೋಟ್ ಸೇರಿದಂತೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ಕಲ್ಪಿಸಲಾಗಿದ್ದು ಪಟ್ಟಣ ಪಂಚಾಯತ ಈ ಕುರಿತು ಧ್ವನಿ ವರ್ಧಕದ ಮೂಲಕ ಪಟ್ಟಣದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ. ಛತ್ರಿ ರೇನ್ ಕೋಟ್ ಸೇರಿದಂತೆ ಮಳೆಗಾಲಕ್ಕೆ ಉಪಯೋಗಿಸುವ ಪಾದರಕ್ಷೆಗಳ ಮಾರಾಟಗಾರರು ತಮ್ಮ ಅಂಗಡಿಗಳಲ್ಲೆ ಬೆಳಿಗ್ಗೆ 8 ರಿಂದ 12 ಗಂಟೆಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಪಬ್ಲಿಕ್ ಫಸ್ಟ್ ನ್ಯೂಸ್ ನ ಇವತ್ತಿನ TOP 5 ನ್ಯೂಸ್
ಪಬ್ಲಿಕ್ ಫಸ್ಟ್ ನ್ಯೂಸ್ ನ ಇವತ್ತಿನ ಟಾಪ್ 5 ನ್ಯೂಸ್ ನೋಡಲು ಈ ಕೆಳಗಿನ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. Subscribe ಮಾಡಿ.. https://youtu.be/CJbeBeJyGuk
ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಹೈಕಮಾಂಡ್ ಸೂಚಿಸಿದ್ರೆ ರಾಜೀನಾಮೆ ಕೊಡಲು ಸಿದ್ದ ಅಂತಾ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸಚಿವರು ಸಿಎಂ ರಾಜೀನಾಮೆ ಮಾತಿಗೆ ಹೇಳಿದ್ದಾದ್ರೂ ಏನು..? ತಿಳಿಬೇಕಾ ಈ ಕೆಳಗಿನ ಯೂಟ್ಯೂಬ್ ಲಿಂಕ್ ಗೆ ಕ್ಲಿಕ್ ಮಾಡಿ.. ಇತ್ತೀಚೆಗೆ ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಪದೇ ಪದೇ ಚರ್ಚೆ ಆಗ್ತಿದೆ, ಪದೇ ಪದೇ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಸಿಎಂ ಈ ರೀತಿ ಹೇಳಿರಬಹುದು. ಕೋವಿಡ್ ಸಮಯದಲ್ಲಿ ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಸಿಎಂ ರಾಜೀನಾಮೆ ಕೊಡಿಸುವ ಯಾವ ಪ್ರಶ್ನೆ ಪಕ್ಷದ ಮುಂದಿಲ್ಲ. ಹೈಕಮಾಂಡ್ ನಿಂದಲೂ ಯಾವುದೇ ರೀತಿಯ ಸೂಚನೆ ಅವರಿಗಿಲ್ಲ ಅಂತಾ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ನಂದಿಕಟ್ಟಾ ಗ್ರಾಮದ ಕೊರೋನಾ ಸೋಂಕು ಪೀಡಿತರ ಕುಟುಂಬಗಳಿಗೆ ದಿನಸಿ ಕಿಟ್..!
ಮುಂಡಗೋಡ:ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಕೊರೋನಾ ಪಾಸಿಟಿವ್ ಪೀಡಿತರ ಕುಟುಂಬಗಳಿಗೆ, ಗ್ರಾಮ ಪಂಚಾಯತಿ ಸದಸ್ಯರು ಆಹಾರದ ಕಿಟ್ ವಿತರಿಸಿದ್ರು. ಕೊರೋನಾ ಎರಡನೇ ಅಲೆಯ ಪರಿಣಾಮ ಲಾಕ್ ಡೌನ್ ಜಾರಿಯಾದ ಹಿನ್ನಲೆಯಲ್ಲಿ ನಂದಿಕಟ್ಟಾ ಗ್ರಾಮದ ಬಡ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ. ಅದ್ರಲ್ಲೂ ಕೊರೋನಾ ಪಾಸಿಟಿವ್ ದೃಢಪಟ್ಟ ಕೆಲವು ಕುಟುಂಬಗಳ ಪಾಡು ಹೇಳತೀರದ್ದಾಗಿದೆ. ಹೀಗಾಗಿ, ಗ್ರಾಮ ಪಂಚಾಯತಿ ಸದಸ್ಯ ಸಂತೋಷ ಭೋಸ್ಲೆ ಸೇರಿದಂತೆ ಹಲವು ಸದಸ್ಯರು ಅಂತಹ ಬಡ ಕುಟುಂಬಗಳಿಗೆ ಆಹಾರದ ದಿನಸಿ ಕಿಟ್ ವಿತರಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ, ಸಂತೋಷಿ ಮಾತಾ ಕಾಳಿಕಾ ಮಠದಿಂದ ಆಹಾರ ಪೊಟ್ಟಣ ವಿತರಣೆ..!
ಹಳಿಯಾಳ : ಜೊಯಿಡಾ ತಾಲೂಕಿನ ಕ್ಯಾಸರಲಾಕ್ ಸಮೀಪದ ಕುಣಗಿನಿಯಲ್ಲಿರುವ ಶ್ರೀ ಸಂತೋಷಿ ಮಾತಾ ಕಾಳಿಕಾ ಮಠದ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ರೋಗಿಗಳಿಗೆ ಆಶ್ರಮದ ಶ್ರೀ ರಘುವೀರ ಗುರೂಜಿಯವರು ಒಂದು ದಿನದ ಊಟದ ಪೊಟ್ಟಣವನ್ನು ವಿತರಿಸಿದರು. 150 ಕ್ಕೂ ಹೆಚ್ಚು ಊಟದ ಪೊಟ್ಟಣವನ್ನು ವಿತರಿಸಲಾಯ್ತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಚವ್ವಾಣ, ಪ್ರಮುಖರಾದ ಮಾರುತಿ ನರಗುಂದಕರ, ಯಲ್ಲಪ್ಪಾ ಮಾಲವಣಕರ, ಯಶವಂತ ಪಟ್ಟೇಕರ, ಬಸವರಾಜ ಹಿರೆಮೊರಬ, ಆಶ್ರಮದ ರೂಪೇಶ ನಾಯ್ಕ, ಪಾಂಡುರಂಗ ಶೇಠ, ರಿಶ್ವಿತ್ ನಾಯ್ಕ, ಸಿದ್ದಾಂತ ಪರಬ ಮೊದಲಾದವರು ಇದ್ದರು.
ಮಳಗಿ: ಮೀನು ಹಿಡಿಯಲು ಹೋದ ಯುವಕ ಕೆರೆಯಲ್ಲಿ ಮುಳುಗಿ ಸಾವು..!
ಮುಂಡಗೋಡ: ತಾಲೂಕಿನ ಮಳಗಿಯಲ್ಲಿ, ಮೀನು ಹಿಡಿಯಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಉಮೇಶ್ ಶಿವಪ್ಪ ಬೋವಿ(25) ಮೃತಪಟ್ಟ ಯುವಕನಾಗಿದ್ದಾನೆ. ಮಳಗಿ ಗ್ರಾಮದ ಸಿದ್ದಾಪುರ ಓಣಿಯ ನಿವಾಸಿಯಾಗಿರೊ ಯುವಕ ಶನಿವಾರ ಮದ್ಯಾನ ಮೀನು ಹಿಡಿಯಲೆಂದು ಕೆರೆಗೆ ಹೋಗಿದ್ದ. ಈ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಅಂತಾ ಸಂಬಂಧಿ ಜಯಮ್ಮ ಹನ್ಮಂತ ಬೋವಿ ಎಂಬುವವರು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬನವಾಸಿ ಭಾಗದ ಗ್ರಾಮಗಳಿಗೆ ಸಚಿವ ಹೆಬ್ಬಾರ್ ಭೇಟಿ: ಕೋವಿಡ್ ನಿರ್ವಹಣೆ ಕುರಿತು ಚರ್ಚೆ..!
ಶಿರಸಿ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಇಂದು ಶಿರಸಿ ತಾಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಯ ಬದನಗೋಡ, ಬಿಸಲಕೊಪ್ಪ, ಅಂಡಗಿ ಹಾಗೂ ಸುಗಾವಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ, ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಚರ್ಚಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು ಹಾಗೂ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಬ್ಬಾರ್ ಕೋವಿಡ್ ಕೇರ್ ಕಿಟ್ ಅನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಆಶಾ ಕಾರ್ಯಕರ್ತೆರು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.