ಮುಂಡಗೋಡ; ಹುನಗುಂದ ಗ್ರಾಮಕ್ಕೂ ವಕ್ಕರಿಸಿದ ಕೊರೋನಾ..?

ಮುಂಡಗೋಡ- ಮಹಾರಾಷ್ಟ್ರದ ಪೂನಾದಿಂದ ಸ್ವಗ್ರಾಮ ಹುನಗುಂದಕ್ಕೆ ವಾಪಸ್ ಆಗಿದ್ದ ಇಬ್ಬರು ಯುವಕರ ಪೈಕಿ ಓರ್ವ ಯುವಕನಿಗೆ ಕೊರೋನಾ ಸೋಂಕು ದೃಢವಾಗಿದ್ದು ಮದ್ಯಾಹ್ನದ ಬಳಿಕ ಅಧಿಕೃತ ಘೋಷಣೆ ಹೊರಬೀಳಲಿದೆ. ಹೀಗಾಗಿ ಹುನಗುಂದ ಗ್ರಾಮದಲ್ಲಿ ಮೊದಲ ಪ್ರಕರಣ ಇದಾಗಿದ್ದು ಆತಂಕ ಶುರುವಾಗಿದೆ.

ಉತ್ತರ ಕನ್ನಡದಲ್ಲಿ ಮುಂದುವರೆದ ಮಳೆ, ನಾಳೆ ಸಚಿವ ಆರ್.ಅಶೋಕ್ ಜಿಲ್ಲೆಗೆ ಭೇಟಿ

ಕಾರವಾರ- ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ ಮತ್ತೆ ಮುಂದುವರೆದಿದೆ.. ಬೆಳಿಗ್ಗೆಯಿಂದ ಸ್ವಲ್ಪ ಬಿಡುವು ಕೊಟ್ಟಿದ್ದ ಮಳೆ ಸಂಜೆಗೆ ಮಲೆನಾಡು ತಾಲೂಕುಗಳಾದ ಸಿದ್ದಾಪುರ, ಶಿರಸಿ, ಯಲ್ಲಾಪುರ, ಮುಂಡಗೋಡು, ಹಳಿಯಾಳ ಗಳಲ್ಲಿ ಮತ್ತೆ ವರುಣನ ಅಬ್ಬರ ಪ್ರಾರಂಭವಾಗಿದೆ.. ಪಶ್ಚಿಮ ಘಟ್ಟಗಳಲ್ಲಿ ಉತ್ತಮ ಮಳೆಯಾಗುತ್ತಿರೋ ಹಿನ್ನೆಲೆ ಶರಾವತಿ, ಅಘನಾಶಿನಿ ನದಿಗಳ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಪ್ರವಾಹ ಪರಿಸ್ಥಿತಿ ಅವಲೋಕನಕ್ಕಾಗಿ ನಾಳೆ ಹೊನ್ನಾವರಕ್ಕೆ ಕಂದಾಯ ಆರ್.ಅಶೋಕ್ ಭೇಟಿ‌ ನೀಡಲಿದ್ದಾರೆ. ಶರಾವತಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲಿರೋ ಸಚಿವ ಅಶೋಕ, ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಉತ್ತರ ಕನ್ನಡ ಇಬ್ಬರು ಕಳ್ಳರ ಬಂಧನ

  ಕುಮಟಾ ಹಾಗೂ ಹೊನ್ನಾವರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 14 ಕಳ್ಳತನ ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದರಿಂದ ಶೀಘ್ರವೇ ಪ್ರಕರಣಗಳನ್ನು ಬೇಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಒಂದು ತಂಡವನ್ನು ರಚಿಸಿದ್ದರು. ಈ ತಂಡ ಆರೋಪಿಗಳಾದ ಚಂದಾವರದ ಸಜ್ಜಾದ ಅಹ್ಮದ್ ಹಾಗೂ ಮುಬಾಸೀರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹೊನ್ನಾವರ ಪೊಲೀಸ್ ಠಾಣೆಯ 11 ಪ್ರಕರಣಗಳು ಹಾಗೂ ಕುಮಟಾ ಠಾಣೆಯ 3 ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಆರೋಪಿತರ ಕಡೆಯಿಂದ ಜಪ್ತಿಪಡಿಸಿಕೊಳ್ಳಲಾಗಿದೆ. ಅಲ್ಲದೇ ಆರೋಪಿತರು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಸುಮಾರು 2,50,000 ರೂ. ಬೆಲೆಯ ಮಾರುತಿ ಕಂಪನಿಯ ರಿಟ್ಜ್ ಕಾರು ಹಾಗೂ ಸುಮಾರು 25,000 ರೂ. ಬೆಲೆಯ ಪಲ್ಸರ್ ಬೈಕ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಭಟ್ಕಳ ಉಪ ವಿಭಾಗದ ಎಎಸ್ ಪಿ ನಿಖಿಲ್ ಬಿ. ಮಾರ್ಗದರ್ಶನದಲ್ಲಿ ಹೊನ್ನಾವರ ಠಾಣೆಯ ಸಿಪಿಐ ವಸಂತ...

ಉತ್ತರ ಕನ್ನಡ; ಮಳೆ..ಮಳೆ..ಮಳೆ.. ಹಲವು ರಸ್ತೆ ಸಂಚಾರ ಬಂದ್

ಕಾರವಾರ- ಉತ್ತರ ಕನ್ನಡದಲ್ಲಿ ಗುರುವಾರವೂ ಮಳೆ ಮುಂದುವರೆದಿದೆ.. ಜಿಕ್ಕೆಯ ಹಲವು ಭಾಗಗಳಲ್ಲಿ ಗದ್ದೆಗಳಿಗೆ ನೀರು ನುಗ್ಗಿದೆ. ನದಿಗಳು ತುಂಬಿ ಹರಿಯುತ್ತಿರೋ ಪರಿಣಾಮ ರಸ್ತೆಯಲ್ಲಿ ನೀರು ತುಂಬಿದೆ. ಹಲವೆಡೆ ತಾತ್ಕಾಲಿಕವಾಗಿ ರಸ್ತೆ ಸಂಚಾರ ಬಂದ್ ಆಗಿದೆ.. ಇನ್ನು ಗಾಳಿಯ ಅಬ್ಬರಕ್ಕೆ ಮರಗಳು ಧರೆಗುರುಳಿದ್ದು, ಯಲ್ಲಾಪುರ-ಅಂಕೋಲಾ, ಶಿರಸಿ-ಕುಮಟಾ, ಸಿದ್ದಾಪುರ-ಕುಮಟಾ, ಸಿದ್ದಾಪುರ-ಸಾಗರ ರಾಜ್ಯ ಹೆದ್ದಾರಿಗಳು ತಾತ್ಕಾಲಿಕ ಸ್ಥಗಿತವಾಗಿವೆ..

ಉತ್ತರ ಕನ್ನಡ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಓರ್ವನ ರಕ್ಷಣೆ, ಮತ್ತೋರ್ವ ನಾಪತ್ತೆ

  ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಹಾಗೂ ಯಲ್ಲಾಪುರ ಸಂಪರ್ಕಿಸುವ ಸುಂಕಸಾಳ ಹೆದ್ದಾರಿಯಲ್ಲಿ ತುಂಬಿದ್ದ ನೆರೆ ನೀರಿನಲ್ಲಿ ಬೈಕ್ ಸವಾರ ಹಾಗೂ ಸಹ ಸವಾರನು ಕೊಚ್ಚಿಹೋಗಿದ್ದು ಕೊಚ್ಚಿಹೋದ ಸಹ ಸವಾರ ಕೇಶವ್ ನಾಯ್ಕ ಎಂಬುವವರನ್ನು ಅಂಕೋಲ ಪಿ.ಎಸ್.ಐ ಸಂಪತ್ ರವರು ರಕ್ಷಣೆಮಾಡಿ ಕರೆತಂದಿದ್ದಾರೆ‌. ಇನ್ನು ಬೈಕ್ ಸವಾರ ಹೊನ್ನಾವರ ಮೂಲದ ಸಂತೋಷ್ ನಾಯ್ಕ್ (30) ನೀರಿನಲ್ಲಿ ಕೊಚ್ಚಿ ಹೋಗಿದ್ದು ಈತನಿಗಾಗಿ ಅರಣ್ಯದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ರಸ್ತೆಯನ್ನು ಬೈಕ್‌ನಲ್ಲಿ ದಾಟುವಾಗ ಆಯತಪ್ಪಿ ಬಿದ್ದು ಕೊಚ್ಚಿ ಹೋದ ಸಂತೋಷ್ ನಾಯ್ಕ್ ಕಳೆದ 6 ತಿಂಗಳಿಂದ ಹೆಗ್ಗಾರದ ಕೇಶವ ನಾಯ್ಕ್ ಎಂಬವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ತನ್ನ ಕುಟುಂಬದೊಂದಿಗೆ ವಾಸ್ತವ್ಯ ಮಾಡಿಕೊಂಡಿದ್ದ ಸಂತೋಷ್ ಇಂದು ತನ್ನ ಮಾವನ ಜತೆ ದಿನಸಿ ಪದಾರ್ಥ ತರಲು ಗುಳ್ಳಾಪುರಕ್ಕೆ ಹೋಗಿ ಬರುವಾಗ ಈ ಘಟನೆ ನಡೆದಿದೆ. ಇನ್ನು ನೀರಿನಲ್ಲಿ ಕೊಚ್ಚಿಹೋದ ಸಂತೋಷ್ ದಟ್ಟ ಅರಣ್ಯದಲ್ಲಿ ಸಿಲುಕಿರುವ ಸಾಧ್ಯತೆಗಳಿದ್ದು ಈತನಿಗಾಗಿ ಹುಡುಕಾಟ ನಡೆದಿದೆ.

ಉತ್ತರ ಕನ್ನಡದಲ್ಲೂ ರಾಮಪೂಜೆ

ಉತ್ತರ ಕನ್ನಡದಲ್ಲೂ ರಾಮಪೂಜೆ

  ಅಯೋಧ್ಯೆಯಲ್ಲಿ ಇಂದು ಶ್ರೀರಾಮ ಮಂದಿರಕ್ಕೆ ಪ್ರಧಾನಿ ಮೋದಿಯವರು ಭೂಮಿಪೂಜೆ ನೆರವೇರಿಸಿದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕೂಡ ವಿಶೇಷ ಪೂಜೆಗಳು ನೆರವೇರಿದವು. ರಾಮ ಮಂದಿರ ನಿರ್ಮಾಣ ನಿರ್ವಿಘ್ನವಾಗಿ ನಿರ್ಮಾಣ ವಾಗಲಿ ಎಂದು ಕಾರವಾರದಲ್ಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಕಾರವಾರದ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಿಜೆಪಿ ಕಚೇರಿಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ಮಾಡಿದ ಕರಸೇವಕರನ್ನು ಸನ್ಮಾನಿಸಿದರು.

ಉತ್ತರ ಕನ್ನಡ, ಜಿಲ್ಲೆಯಲ್ಲಿ ವರುಣನ ಅರ್ಭಟ

  ಕಾರವಾರ- ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆರಾಯನ ಅರ್ಭಟ ಜೋರಾಗಿದೆ..ನಿನ್ನೆ ರಾತ್ರಿಯಿಂದ ಎಡಬಿಡದೆ ಗಾಳಿ ಮಳೆ ಸುರಿಯುತ್ತಿದೆ..ಗಾಳಿ ಮಳೆಯ ಅಬ್ಬರಕ್ಕೆ ಉತ್ತರ ಕನ್ನಡ ಜಿಲ್ಲೆ ತತ್ತರಿಸಿದೆ.. ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಭರ್ಜರಿ ಮಳೆಯಾಗುತ್ತಿದ್ದು, ಜಿಲ್ಲೆಯ ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಕಗ್ಗತ್ತಲಲ್ಲಿ ಮುಳುಗಿದೆ.. ಅಬ್ಬರಿಸುತ್ತಿರುವ ಗಾಳಿ ಮಳೆಯಿಂದ ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.. ಜಿಲ್ಲೆಗೆ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆಯಾಗಿತ್ತು.. ಜಿಲ್ಲೆಯ ಹಲವು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ..ಮಲೆನಾಡು ಭಾಗಗಳಲ್ಲಂತೂ ವ್ಯಾಪಕ ಮಳೆಯಾಗುತ್ತಿದೆ..ಗಾಳಿ ಮಳೆಯ ಅಬ್ಬರಕ್ಕೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ..ಭಾರೀ ಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ..

ಮಂಗಳೂರಲ್ಲಿ ಅಯೋಧ್ಯಾ ಸಂಭ್ರಮ

  ಅತ್ತ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿಪೂಜೆ ನಡೆಯುತ್ತಿದ್ದಂತೆ ಮಂಗಳೂರಿನ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸಂಭ್ರಮದ ಕಳೆ ಎದ್ದಿದೆ. ಕಳೆದ ಅನೇಕ ವರ್ಷಗಳಿಂದ ಎದುರುನೋಡುತ್ತಿದ್ದ ಸಂಭ್ರಮದ ಕ್ಷಣ ಬರುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು. 1992ರ ಅಯೋಧ್ಯೆ ಕರಸೇವೆಯಲ್ಲಿ ಕರಾವಳಿಯ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಪೈಕಿ ಅನೇಕ ಮಂದಿ ಇಂದು ಸಂಭ್ರಮ ಪಟ್ಟಿದ್ದಾರೆ. ಮಂಗಳೂರಿನ ವಿಹಿಂಪ ಕಚೇರಿಯಲ್ಲಿ ರಾಮಚಂದ್ರನಿಗೆ ಪೂಜೆ ಅರ್ಪಿಸಿ ನಮಿಸಿದ ಕಾರ್ಯಕರ್ತರು, ಅಯೋಧ್ಯೆಯಿಂದ ಶಿಲಾನ್ಯಾಸ ಕಾರ್ಯಕ್ರಮವನ್ನು ನೇರ ಪ್ರಸಾರ ವ್ಯವಸ್ಥೆಯಲ್ಲಿ ವೀಕ್ಷಿಸಿ ಸಂಭ್ರಮಿಸಿದರು. ಬಳಿಕ ಹೊರಭಾಗದಲ್ಲಿ ಚೆಂಡೆ, ತಮಟೆ ಬಾರಿಸುವ ಮೂಲಕ ಕುಣಿದಾಡಿದರು. ಸೆಕ್ಷನ್ 144 ಜಾರಿಯಲ್ಲಿದ್ದ ಕಾರಣ ಸಂಭ್ರಮಾಚರಣೆಯನ್ನು ಕಚೇರಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು.

ಅಯೋಧ್ಯೆಯಲ್ಲಿ ಇಙದು ಶಿಲಾನ್ಯಾಸ- ಹೆಬ್ಬಾರ್ ಸಂತಸ

ಅಯೋಧ್ಯೆಯಲ್ಲಿ ಇಙದು ಶಿಲಾನ್ಯಾಸ- ಹೆಬ್ಬಾರ್ ಸಂತಸ

  ಅಯೋಧ್ಯೆಯಲ್ಲಿ ಸರ್ವಭೂತಹಿತ, ಮರ್ಯಾದಾ ಪುರಷೋತ್ತಮ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣದ ಭೂಮಿ ಪೂಜೆ ಅನ್ನು ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಇಂದು ನೆರವೇರಿಸಲಿದ್ದಾರೆ. ಈ ಐತಿಹಾಸಿಕ ಪುಣ್ಯ ಕ್ಷಣಕ್ಕೆ ವಿವಿಧ ಮಠದ ಮಠಾಧೀಶರು, ಸಾಧು ಸಂತರು, ಶ್ರೀರಾಮ ಭಕ್ತರು ಸಾಕ್ಷಿಯಾಗುತ್ತಿದ್ದಾರೆ,ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ ರಾಮ ಭಕ್ತರ ಪರಿಶ್ರಮ,ಬಲಿದಾನವನ್ನು ಸ್ಮರಿಸುತ್ತಾ,ಈ ಶುಭ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸೋಣ,ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸೋಣ ಅಂತಾ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ..

ಹಿರಿಯರ ವಿರೋಧದಿಂದ ಹೆದರಿ ಪರಸ್ಪರ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು ರಕ್ಷಣೆ ಕೋರಿ

ವಿಜಯಪುರ: ಹಿರಿಯರ ವಿರೋಧದಿಂದ ಹೆದರಿ ಪರಸ್ಪರ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು ರಕ್ಷಣೆ ಕೋರಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳಿಗೆ ಮೊರೆ ಹೋಗಿದ್ದಾರೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಯಲ್ಲಪ್ಪ ಚೂರಿ ಹಾಗೂ ಅದೇ ಗ್ರಾಮದ ಯುವತಿ ಕೊಂತವ್ವ ಮಾನಕರ ಪರಸ್ಪರ ಕಳೆದ ನಾಲ್ಕು ವರ್ಷದಿಂದ ಪ್ರೀತಿಸುತ್ತಿ ದ್ದಾರೆ. ಆದರೆ ಈ ಪ್ರೀತಿಗೆ ಯುವತಿಯ ಕುಟುಂಬದವರು ವಿರೋಧ ವ್ಯಕ್ತಪಡಿಸಿ ದ್ದಾರೆ. ಆಕೆಗೆ ಬೇರೆ ಕಡೆ ಮದುವೆ ಸಹ ನಿಶ್ಚಯ ಮಾಡಿದ್ದಾರೆ. ಇದರಿಂದ ಬೇಸತ್ತು ಯುವ ಪ್ರೇಮಿಗಳು ಓಡಿ ಹೋಗಿದ್ದರು. ಆದರೆ ಯುವತಿ ಕುಟುಂಬ ದವರು ಸಾಯುವ ಬೆದರಿಕೆ ಹಾಕಿದ್ದ ಕಾರಣ ವಾಪಸ್ ಮನೆಗೆ ಬಂದಿದ್ದಾರೆ. ಯುವಕ ಖಾಸಗಿ ಯಾಗಿ ಉದ್ಯೋಗ‌ ಮಾಡಿಕೊಂಡಿದ್ದಾನೆ. ಇತನ ಬೆಳವಣಿಗೆ ಸಹಿಸದ ಕೆಲ ಗ್ರಾಮಸ್ಥರು ಈ ರೀತಿ ತಮ್ಮ ಪ್ರೀತಿಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಯುವಕ ಯಲ್ಲಪ್ಪ ಚೂರಿ ಆರೋಪಿಸಿ ದ್ದಾನೆ. ಇದರ ಜತೆ ಇವರಿಬ್ಬರ ಪ್ರೀತಿಗೆ ಅಡ್ಡವಾಗಿರುವ ಯುವತಿಯ ಕುಟುಂಬ ದವರು ಆಕೆಗೆ...

error: Content is protected !!