ವಿಜಯಪುರ: ಹಿರಿಯರ ವಿರೋಧದಿಂದ ಹೆದರಿ ಪರಸ್ಪರ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು ರಕ್ಷಣೆ ಕೋರಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳಿಗೆ ಮೊರೆ ಹೋಗಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಯಲ್ಲಪ್ಪ ಚೂರಿ ಹಾಗೂ ಅದೇ ಗ್ರಾಮದ ಯುವತಿ ಕೊಂತವ್ವ ಮಾನಕರ ಪರಸ್ಪರ ಕಳೆದ ನಾಲ್ಕು ವರ್ಷದಿಂದ ಪ್ರೀತಿಸುತ್ತಿ ದ್ದಾರೆ. ಆದರೆ ಈ ಪ್ರೀತಿಗೆ ಯುವತಿಯ ಕುಟುಂಬದವರು ವಿರೋಧ ವ್ಯಕ್ತಪಡಿಸಿ ದ್ದಾರೆ. ಆಕೆಗೆ ಬೇರೆ ಕಡೆ ಮದುವೆ ಸಹ ನಿಶ್ಚಯ ಮಾಡಿದ್ದಾರೆ. ಇದರಿಂದ ಬೇಸತ್ತು ಯುವ ಪ್ರೇಮಿಗಳು ಓಡಿ ಹೋಗಿದ್ದರು. ಆದರೆ ಯುವತಿ ಕುಟುಂಬ ದವರು ಸಾಯುವ ಬೆದರಿಕೆ ಹಾಕಿದ್ದ ಕಾರಣ ವಾಪಸ್ ಮನೆಗೆ ಬಂದಿದ್ದಾರೆ.
ಯುವಕ ಖಾಸಗಿ ಯಾಗಿ ಉದ್ಯೋಗ‌ ಮಾಡಿಕೊಂಡಿದ್ದಾನೆ. ಇತನ ಬೆಳವಣಿಗೆ ಸಹಿಸದ ಕೆಲ ಗ್ರಾಮಸ್ಥರು ಈ ರೀತಿ ತಮ್ಮ ಪ್ರೀತಿಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಯುವಕ ಯಲ್ಲಪ್ಪ ಚೂರಿ ಆರೋಪಿಸಿ ದ್ದಾನೆ.
ಇದರ ಜತೆ ಇವರಿಬ್ಬರ ಪ್ರೀತಿಗೆ ಅಡ್ಡವಾಗಿರುವ
ಯುವತಿಯ ಕುಟುಂಬ ದವರು ಆಕೆಗೆ ಬೇರೆ ಕಡೆ ಮದುವೆ ನಿಶ್ಚಯ ಮಾಡಿದ್ದಾರೆ. ಅವರಿಬ್ಬರು
ಒಬ್ಬರಿಗೊಬ್ಬರು ಬಿಟ್ಟಿರಲಾರದೆ. ಮತ್ತೆ ಮನಗೂಳಿ ಗ್ರಾಮದಿಂದ ಓಡಿ ಬಂದು ತಮಗೆ ರಕ್ಷಣೆ ನೀಡಬೇಕೆಂದು ನಗರದ ಎಸ್ಪಿ ಕಚೇರಿಗೆ ಆಗಮಿಸಿ ತಮಗೆ ಬೆದರಿಕೆ ಇದ್ದು, ರಕ್ಷಣೆ ನೀಡಬೇಕೆಂದು ಎಸ್ಪಿಯವರಿಗೆ ಬೇಡಿಕೊಂಡಿದ್ದಾರೆ.

error: Content is protected !!