ಮುಂಡಗೋಡ: ತಾಲೂಕಿನ ಕಾತೂರು ಅರಣ್ಯ ವ್ಯಾಪ್ತಿಯಲ್ಲಿ ಅನ್ನದಾತನ ಮೇಲೆ ಕರಡಿ ದಾಳಿ ಮಾಡಿದೆ. ಮರಗಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಫಕ್ಕಿರೇಶ ರಾಮಣ್ಣ ಗೊಲ್ಲರ್ ಎಂಬುವನ ಮೇಲೆ ಮಾರಣಾಂತಿಕ ದಾಳಿ ಮಾಡಿದೆ. ಮರಿಗಳೊಂದಿಗೆ ಆಹಾರ ಅರಸಿ ಬಂದಿದ್ದ ಕರಡಿ ರೈತನನ್ನು ನೋಡಿ ಪ್ರಾಣಭಯದಿಂದ ದಾಳಿ ಮಾಡಿದೆ ಎನ್ನಲಾಗಿದೆ. ಅಂದಹಾಗೆ, ಗದ್ದೆಯಲ್ಲಿ ಮಂಗಗಳ ಹಾವಳಿ ಕಾರಣಕ್ಕೆ ಗೋವಿನಜೋಳ ರಕ್ಷಣೆಗಾಗಿ ಕಟ್ಟಿದ್ದ ಶ್ವಾನಗಳಿಗೆ ಆಹಾರ ಕೊಡಲು ಹೋದಾಗ ಘಟನೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ತಕ್ಷಣವೇ ಸ್ಥಳೀಯರು ರೈತನ ನೆರವಿಗೆ ಬಂದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರೈತನಿಗೆ ಕಾತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ನಂತರ ತಾಲೂಕಾಸ್ಪತ್ರೆಗೆ ಸಾಗಿಸಿದ್ದಾರೆ. ಅರಣ್ಯ ಇಲಾಖೆ ಆಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಮುಂಡಗೋಡ-ಯಲ್ಲಾಪುರ ಗಡಿಯ ಕಾಡಲ್ಲಿದೆ ನಟೋರಿಯಸ್ ಗ್ಯಾಂಗ್..! ಎಚ್ಚರ ತಪ್ಪಿದ್ರೆ ನಿಮಗೂ ಹಾಕ್ತಾರೆ ಗಾಳ..!
ಯಲ್ಲಾಪುರ ಪೊಲೀಸರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಇಡೀ ಯಲ್ಲಾಪುರ ತಾಲೂಕಿನ ಜನರ ನಿದ್ದೆಗೆಡಿಸಿದ್ದ ಅದೊಂದು ನಟೋರಿಯಸ್ ದರೋಡೆಕೋರರ ಭಯಾನಕ ಕೃತ್ಯ ಈಗಷ್ಟೇ ಅರ್ಧ ಬಯಲಾದಂತಾಗಿದೆ. ಬರೋಬ್ಬರಿ ಒಂದೂವರೇ ತಿಂಗಳು, ಹಗಲು ರಾತ್ರಿ ಕಾರ್ಯಾಚರಣೆ ನಡೆಸಿ, ಅರ್ದದಷ್ಟು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ ಯಲ್ಲಾಪುರ ಪೊಲೀಸರು. ಅಸಲು, ಯಲ್ಲಾಪುರದ ದಕ್ಷ ಪಿಐ ಸುರೇಶ್ ಯಳ್ಳೂರು ಹಾಗು ಮತ್ತವರ ಪಡೆಗೆ ಅಕ್ಷರಶಃ ನಿದ್ದೆ ಕಸಿದುಕೊಂಡಿದ್ದ ಕೇಸ್ ಇದು. ಅದು ಭಯಾನಕ ಗ್ರಾಮ..! ಇಲ್ಲಿ ಈ ಸ್ಟೋರಿ ಹೇಳೋಕಿಂತ ಮುಂಚೆ ಈ ಗ್ರಾಮದ ಬಗ್ಗೆ ಹೇಳಲೇ ಬೇಕು. ಅಂದಹಾಗೆ, ಯಲ್ಲಾಪುರ ತಾಲೂಕಿನಲ್ಲಿ ಬಹುತೇಕ ಈ ಊರಿನ ಹೆಸ್ರು ಕೇಳಿದ್ರೆ ಬೆಚ್ಚಿ ಬೀಳೋ ಅದೇಷ್ಟೋ ಜನರಿದ್ದಾರೆ. ಯಲ್ಲಾಪುರ ತಾಲೂಕಿನ ಮಂಚಿಕೇರಿಯಿಂದ ಸರಿ ಸುಮಾರು 10 ಕಿ.ಮೀ ಅಂತರದಲ್ಲಿರೋ ಈ ಗ್ರಾಮ, ಮುಂಡಗೋಡ ತಾಲೂಕಿನ ಸುಳ್ಳಳ್ಳಿಯಿಂದ ಕೇವಲ 6-7 ಕೀ.ಮೀ ದೂರದಲ್ಲಿದೆ. ಅಸಲು, ಈ ಗ್ರಾಮದಲ್ಲಿರೋದೇ ಕೇವಲ 9 ರಿಂದ 10 ಮನೆಗಳಂತೆ. ಆದ್ರೆ, ಆ ಮನೆಗಳಲ್ಲಿ ನಡೆಯುವ ಭಯಾನಕ...
ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪೊಲೀಸ್ ವಶಕ್ಕೆ..!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ದಿನದಲ್ಲಿ ಬರೋಬ್ಬರಿ 3 ಕೊಲೆಗಳಾಗಿದೆ. ಇಡೀ ಜಿಲ್ಲೆಯಾದ್ಯಂತ ಪರಿಸ್ಥಿತಿ ಉದ್ವಿಗ್ನವಾಗಿದೆ. ಇದರಿಂದಾಗಿ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ನಿರ್ಬಂಧವಿದ್ದರೂ ನಗರಕ್ಕೆ ಬಂದ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಅಪಾಯ ಇರುವ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ಅವರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಮುತಾಲಿಕ್ ಅವರ ದಕ್ಷಿಣ ಕನ್ನಡ ಜಿಲ್ಲೆಯ ಭೇಟಿಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದರು. ಆದರೆ, ನಗರಕ್ಕೆ ಬಂದ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರವೀಣ್ ಶವಯಾತ್ರೆ ವೇಳೆ ಲಾಠಿ ಬೀಸಿದ್ದ ಇಬ್ಬರು ಪಿಎಸ್ಐಗಳ ವರ್ಗಾವಣೆ..!
ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಶವಯಾತ್ರೆ ವೇಳೆ ಲಾಠಿ ಚಾರ್ಜ್ ಮಾಡಿದ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣೆಯ ಪಿಎಸ್ ಐಗಳನ್ನು ವರ್ಗಾವಣೆ ಮಾಡಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ. ಬೆಳ್ಳಾರೆಗೆ ನೂತನ ಪಿಎಸೈ ಆಗಿ ಕುಂದಾಪುರ ಠಾಣೆಯ ಸುಹಾಸ್ ಹಾಗೂ ವಿಟ್ಲ ಠಾಣಾ ಪಿಎಸ್ಐ ಆಗಿದ್ದ ಮಂಜುನಾಥ್ ಅವರನ್ನು ಸುಬ್ರಹ್ಮಣ್ಯ ಠಾಣೆಗೆ ನೇಮಕ ಮಾಡಲಾಗಿದೆ. ವರ್ಗಾವಣೆಯಾದ ಪಿಎಸೈಗಳಿಗೆ ಜಾಗ ತೋರಿಸದೇ ಮಂಗಳೂರು ಐಜಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಸನವಳ್ಳಿ ಭಾಗದಲ್ಲಿ ಕಾಡಾನೆಗಳ ಹಿಂಡು, ಗದ್ದೆಗಳಲ್ಲಿ ಗಜರಾಜನ ಹೆಜ್ಜೆ ಗುರುತು ಪತ್ತೆ..! ಆತಂಕದಲ್ಲಿ ರೈತರು..!!
ಮುಂಡಗೋಡ: ತಾಲೂಕಿನ ಸನವಳ್ಳಿ ಭಾಗದಲ್ಲಿ ಕಾಡಾನೆಗಳ ಹಿಂಡು ಠಿಕಾಣಿ ಹೂಡಿದೆಯಾ..? ಇಂತಹದ್ದೊಂದು ಅನುಮಾನ ಈ ಭಾಗದ ರೈತರಿಗೆ ನಿದ್ದೆಗೆಡಿಸಿದೆ. ನಿನ್ನೆ ರಾತ್ರಿ ಸನವಳ್ಳಿ ಭಾಗದ ಕಾಡಂಚಿನ ಗದ್ದೆಗಳಲ್ಲಿ ಕಾಡಾನೆಗಳು ಓಡಾಡಿ ಹೋಗಿರೋ ಕುರುಹುಗಳು ಸಿಕ್ಕಿವೆ. ಸನವಳ್ಳಿಯ ಫಕ್ಕೀರಪ್ಪ ಬೋಕಿಯವರ್, ಪಕ್ಕಿರೇಶ್ ಕೆರಿಹೊಲದವರ, ರಮೇಶ್ ಅರಶೀಣಗೇರಿಯವರ ನಾಟಿ ಮಾಡಿರೋ ಬತ್ತದ ಗದ್ದೆಗಳಲ್ಲಿ, ಗೋವಿನಜೋಳದ ಗದ್ದೆಗಳಲ್ಲಿ ಆನೆಗಳು ನಡೆದಾಡಿರೋ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇನ್ನು ಅಡಿಕೆ ತೋಟದಲ್ಲಿ ನುಗ್ಗಿರೋ ಆನೆಗಳು ಕೆಲವು ಅಡಿಕೆ ಗಿಡಗಳಿಗೆ ಹಾನಿ ಮಾಡಿವೆ. ಹೀಗಾಗಿ ಈ ಭಾಗದ ರೈತರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಅಂತಾ ರೈತರ ಆಗ್ರಹವಾಗಿದೆ.
ಮತ್ತೆ ಭಾರೀ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ..!
ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಮಹಾಮಳೆಯ ಗಂಡಾಂತರ ಶುರುವಾಗಲಿದೆಯಾ ಅನ್ನೋ ಆತಂಕ ಶುರುವಾಗಿದೆ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಆ.1ರ ಅವಧಿಯೊಳಗೆ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮತ್ತೆ ಎಚ್ಚರಿಸಿದೆ. ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಜಾರ್ಖಂಡ, ಬಿಹಾರ ಹಾಗೂ ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ. ಆದರೆ ಕರ್ನಾಟಕ, ತಮಿಳುನಾಡು, ಪಂಜಾಬ್, ಹರಿಯಾಣಾ, ಹಿಮಾಚಲಪ್ರದೇಶ, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಿ ಕೇಂದ್ರೀಕೃತ ಮೋಡಗಳಿಂದ ಭೀಕರ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಗಳು ತಿಳಿಸಿವೆ.
ನಂದಿಕಟ್ಟಾ ಗ್ರಾಮದಲ್ಲಿ ಬಾಲಕನಿಗೆ ಕಚ್ಚಿದ ಉರಿಮಂಡಲ ಹಾವು, ಕಿಮ್ಸ್ ಗೆ ದಾಖಲು..!
ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ 16 ವರ್ಷದ ಬಾಲಕನಿಗೆ ಉರಿಮಂಡಲ ಹಾವು ಕಚ್ಚಿದೆ. ಪರಿಣಾಮ ಗಾಯಗೊಂಡ ಬಾಲಕನಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂದಿಕಟ್ಟಾ ಗ್ರಾಮದಲ್ಲಿ ಸಂಜೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಕಟ್ಟಿಗೆ ಮೇಲೆ ಕಾಲಿಟ್ಟ ಬಾಲಕ ನಂದನ್ ರವಿ ತೇರಗಾಂವ್(16) ಎಂಬುವವನಿಗೆ ಕಟ್ಟಿಗೆಯಡಿ ಇದ್ದ ಹಾವು ಕಾಲಿಗೆ ಕಚ್ಚಿದೆ. ತಕ್ಷಣವೇ ಬಾಲಕನನ್ನು ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿಂದ ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಬಾಲಕನ ಆರೋಗ್ಯ ಸ್ಥಿರವಾಗಿದೆ ಅಂತಾ ಕುಟುಂಬದ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಂಗಳೂರಿನ ಸುರತ್ಕಲ್ ನಲ್ಲಿ ಮತ್ತೊಂದು ಬರ್ಬರ ಹತ್ಯೆ, ತಲವಾರನಿಂದ ಕೊಚ್ಚಿ ಯುವಕನ ಕೊಲೆ..!
ಮಂಗಳೂರು: ಬೆಳ್ಳಾರೆಯಲ್ಲಿ ಪ್ರವೀಣ್ ಕೊಲೆಯ ಬೆನ್ನಲ್ಲೇ ಮಂಗಳೂರಿನ ಸುರತ್ಕಲ್ ಸಮೀಪ ಯುವಕನ ಬರ್ಬರ ಹತ್ಯೆ ನಡೆದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಮಂಗಳೂರಿನಲ್ಲಿ ಇದ್ದಾವಾಗಲೇ ಮತ್ತೊಂದು ಹೆಣ ಬಿದ್ದಿದೆ. ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಯುವಕನಿಗೆ ಹಿಗ್ಗಾಮುಗ್ಗಾ ದಾಳಿ ನಡೆಸಿ ಕೊಚ್ಚಿ ಹಾಕಿದ್ದಾರೆ. ಹಲ್ಲೆಗೊಳಗಾಗಿ ಮೃತಪಟ್ಟಿರೋ ಯುವಕನನ್ನು ಸುರತ್ಕಲ್ ಮಂಗಳಪೇಟೆ ನಿವಾಸಿ ಮೊಹಮ್ಮದ್ ಫಾಝಿಲ್ ಎಂದು ಗುರುತಿಸಲಾಗಿದೆ. ಚಪ್ಪಲಿ ಖರೀದಿಗೆ ಬಂದಿದ್ದ ಫಾಝಿಲ್ ಮೇಲೆ ಕಾರಿನಲ್ಲಿ ಬಂದಿದ್ದ ನಾಲ್ಕು ಜನ ದುಷ್ಕರ್ಮಿಗಳಿಂದ ದಾಳಿ ನಡೆದಿದೆ. ಅಂಗಡಿಯ ಎದುರಿನ ಜಗಲಿಯಲ್ಲೇ ತಲವಾರಿನಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದರು ಸಾಧ್ಯವಾಗಲಿಲ್ಲ. ಭಾರೀ ಪ್ರಮಾಣದಲ್ಲಿ ರಕ್ತ ಸ್ರಾವ ವಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಫಾಝಿಲ್ ನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಅವನ್ನಪ್ಪಿದ್ದಾನೆ ಎನ್ನಲಾಗಿದೆ. ಆದ್ರೆ ಈ ಭೀಕರ ಹತ್ಯೆಗೆ ಕಾರಣ ಏನು ಅಂತಾ ಇನ್ನು ತಿಳಿದು ಬಂದಿಲ್ಲ ಅನ್ನುವ ಮಾಹಿತಿ ಲಭ್ಯವಾಗಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ....
ಕೊಪ್ಪದಲ್ಲಿ ವಿಷಕಾರಿ ಹಾವು ಕಚ್ಚಿ ರೈತ ಸಾವು..? ಭತ್ತಕ್ಕೆ ಔಷಧಿ ಸಿಂಪಡಿಸುವಾಗ ಘಟನೆ..!
ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದಲ್ಲಿ ವಿಷಕಾರಿ ಹಾವು ಕಚ್ಚಿ ರೈತನೋರ್ವ ಮೃತಪಟ್ಟಿರೋ ಶಂಕೆ ವ್ಯಕ್ತವಾಗಿದೆ. ಭತ್ತದ ಗದ್ದೆಯಲ್ಲಿ ಔಷಧಿ ಸಿಂಪಡಿಸುವ ವೇಳೆ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದ್ದು, ಅಸಲು ಹಾವು ಕಚ್ಚಿಯೇ ಮೃತಪಟ್ಟಿದ್ದಾನಾ ಅಥವಾ ಬೇರೆ ಯಾವುದೋ ಕಾರಣಕ್ಕೆ ಮೃತಪಟ್ಟಿದ್ದಾನಾ..? ಮಾಹಿತಿ ಲಭ್ಯವಾಗಬೇಕಿದೆ. ಕೊಪ್ಪ ಗ್ರಾಮದ ಚಂದ್ರು ಗಾಂಜಿ(56) ಎಂಬುವವನೇ ಮೃತಪಟ್ಟ ರೈತನಾಗಿದ್ದಾನೆ. ಇಂದು ಮುಂಜಾನೆ ತನ್ನ ಭತ್ತದ ಗದ್ದೆಯಲ್ಲಿ ಔಷಧಿ ಸಿಂಪಡಿಸಲು ಗದ್ದೆಗೆ ತೆರಳಿದ್ದ ಚಂದ್ರು ಮದ್ಯಾನದವರೆಗೂ ಭತ್ತಕ್ಕೆ ಔಷಧಿ ಸಿಂಪಡಿಸಿದ್ದಾನೆ. ಆದ್ರೆ ಅದ್ಯಾವಾಗ ಹಾವು ಕಚ್ಚಿದೆಯೋ ಗೊತ್ತಿಲ್ಲ. ಹಾವು ಕಚ್ಚಿರೋ ಬಗ್ಗೆ ಅರಿಯದ ರೈತ ಕೆಲ ಹೊತ್ತಿನಲ್ಲೇ ಗದ್ದೆಯಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಎನ್ನಲಾಗಿದೆ. ಆದ್ರೆ ಮದ್ಯಾನ 3 ಗಂಟೆ ಸುಮಾರಿಗೆ ಪಕ್ಕದ ಗದ್ದೆಯ ರೈತನೋರ್ವ ನೋಡಿದಾಗ, ಚಂದ್ರು ಗಾಂಜಿ ಗದ್ದೆಯಲ್ಲೇ ಬಿದ್ದಿರುವುದನ್ನು ಕಂಡಿದ್ದಾರೆ. ಹೀಗಾಗಿ, ತಕ್ಷಣವೇ ಆತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಅಷ್ಟೊತ್ತಿಗಾಗಲೇ ನಿಸ್ತೇಜ ಸ್ಥಿತಿಗೆ ತಲುಪಿದ್ದ ರೈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ, ಅರ್ಧ ದಾರಿಯಲ್ಲೆ...
ಸನವಳ್ಳಿ ಮಾರಿಕಾಂಬೆಯ ಆಭರಣ ಕದ್ದಿದ್ದ ಚಾಲಾಕಿ ಅರೆಸ್ಟ್, ಅಷ್ಟಕ್ಕೂ ಕಳ್ಳತನದ ಆರೋಪಿ ಯಾರು ಗೊತ್ತಾ..?
ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಶ್ರೀಮಾರಿಕಾಂಬಾದೇವಿ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಕೇಸ್ ಕೂಡ ಬಟಾ ಬಯಲಾಗಿದೆ. ಮುಂಡಗೋಡ ಪೊಲೀಸರ ಖಡಕ್ ತನಿಖೆಯಲ್ಲಿ ಆ ಗ್ರಾಮದಲ್ಲೇ ಅಡಗಿ ಕುಳಿತಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಈ ಮೂಲಕ ಪಿಐ ಸಿದ್ದಪ್ಪ ಸಿಮಾನಿ ಹಾಗೂ ಪಿಎಸ್ ಐ ಬಸವರಾಜ್ ಮಬನೂರು ಕಳ್ಳತನದ ಕೇಸ್ ಬಯಲು ಮಾಡಿದ್ದಾರೆ. ಮಳ್ಳನಂತಿದ್ದ ಕಳ್ಳ..! ಅಸಲಿಗೆ, ಊರ ದೇವಿಯ ಆಭರಣವನ್ನೇ ಎಗರಿಸಿ ಮಳ್ಳನಂತೆ ಕುಳಿತಿದ್ದ, ಸನವಳ್ಳಿ ಗ್ರಾಮದ ಮಹಾಂತೇಶ್ ಅರ್ಜುನ್ ಆರೆಗೊಪ್ಪ ಎಂಬುವ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ಈತನ ಬಗ್ಗೆ ಖಚಿತ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದ ಪಿಎಸ್ಐ ಬಸವರಾಜ್ ಮಬನೂರು ಮಾಲು ಸಮೇತ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ. ಅಂದಹಾಗೆ, ಜುಲೈ 26 ರಂದು ಸನವಳ್ಳಿ ಗ್ರಾಮದ ಗ್ರಾಮದೇವಿ ಮಾರಿಕಾಂಬೆ ದೇವಸ್ಥಾನದ ಬಾಗಿಲ ಬೀಗ ಮುರಿದು ದೇವಿಯ ಕೊರಳಲ್ಲಿದ್ದ ಸುಮಾರು 40 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.