ಕೊಪ್ಪದಲ್ಲಿ ವಿಷಕಾರಿ ಹಾವು ಕಚ್ಚಿ ರೈತ ಸಾವು..? ಭತ್ತಕ್ಕೆ ಔಷಧಿ ಸಿಂಪಡಿಸುವಾಗ ಘಟನೆ..!


ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದಲ್ಲಿ ವಿಷಕಾರಿ ಹಾವು ಕಚ್ಚಿ ರೈತನೋರ್ವ ಮೃತಪಟ್ಟಿರೋ ಶಂಕೆ ವ್ಯಕ್ತವಾಗಿದೆ. ಭತ್ತದ ಗದ್ದೆಯಲ್ಲಿ ಔಷಧಿ ಸಿಂಪಡಿಸುವ ವೇಳೆ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದ್ದು, ಅಸಲು ಹಾವು ಕಚ್ಚಿಯೇ ಮೃತಪಟ್ಟಿದ್ದಾನಾ ಅಥವಾ ಬೇರೆ ಯಾವುದೋ ಕಾರಣಕ್ಕೆ ಮೃತಪಟ್ಟಿದ್ದಾನಾ..? ಮಾಹಿತಿ ಲಭ್ಯವಾಗಬೇಕಿದೆ. 

ಕೊಪ್ಪ ಗ್ರಾಮದ ಚಂದ್ರು ಗಾಂಜಿ(56) ಎಂಬುವವನೇ ಮೃತಪಟ್ಟ ರೈತನಾಗಿದ್ದಾನೆ. ಇಂದು ಮುಂಜಾನೆ ತನ್ನ ಭತ್ತದ ಗದ್ದೆಯಲ್ಲಿ ಔಷಧಿ ಸಿಂಪಡಿಸಲು ಗದ್ದೆಗೆ ತೆರಳಿದ್ದ ಚಂದ್ರು ಮದ್ಯಾನದವರೆಗೂ ಭತ್ತಕ್ಕೆ ಔಷಧಿ ಸಿಂಪಡಿಸಿದ್ದಾನೆ. ಆದ್ರೆ ಅದ್ಯಾವಾಗ ಹಾವು ಕಚ್ಚಿದೆಯೋ ಗೊತ್ತಿಲ್ಲ. ಹಾವು ಕಚ್ಚಿರೋ ಬಗ್ಗೆ ಅರಿಯದ ರೈತ ಕೆಲ ಹೊತ್ತಿನಲ್ಲೇ ಗದ್ದೆಯಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಎನ್ನಲಾಗಿದೆ‌.

ಆದ್ರೆ ಮದ್ಯಾನ 3 ಗಂಟೆ ಸುಮಾರಿಗೆ ಪಕ್ಕದ ಗದ್ದೆಯ ರೈತನೋರ್ವ ನೋಡಿದಾಗ, ಚಂದ್ರು ಗಾಂಜಿ ಗದ್ದೆಯಲ್ಲೇ ಬಿದ್ದಿರುವುದನ್ನು ಕಂಡಿದ್ದಾರೆ. ಹೀಗಾಗಿ, ತಕ್ಷಣವೇ ಆತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಅಷ್ಟೊತ್ತಿಗಾಗಲೇ ನಿಸ್ತೇಜ ಸ್ಥಿತಿಗೆ ತಲುಪಿದ್ದ ರೈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ, ಅರ್ಧ ದಾರಿಯಲ್ಲೆ ರೈತ ಕೊನೆಯುಸಿರು ಎಳೆದಿದ್ದಾನೆ ಎನ್ನಲಾಗಿದೆ‌. ಮುಂಡಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!