ಮುಂಡಗೋಡ: ತಾಲೂಕಿನ ಸನವಳ್ಳಿ ಭಾಗದಲ್ಲಿ ಕಾಡಾನೆಗಳ ಹಿಂಡು ಠಿಕಾಣಿ ಹೂಡಿದೆಯಾ..? ಇಂತಹದ್ದೊಂದು ಅನುಮಾನ ಈ ಭಾಗದ ರೈತರಿಗೆ ನಿದ್ದೆಗೆಡಿಸಿದೆ. ನಿನ್ನೆ ರಾತ್ರಿ ಸನವಳ್ಳಿ ಭಾಗದ ಕಾಡಂಚಿನ ಗದ್ದೆಗಳಲ್ಲಿ ಕಾಡಾನೆಗಳು ಓಡಾಡಿ ಹೋಗಿರೋ ಕುರುಹುಗಳು ಸಿಕ್ಕಿವೆ.
ಸನವಳ್ಳಿಯ ಫಕ್ಕೀರಪ್ಪ ಬೋಕಿಯವರ್, ಪಕ್ಕಿರೇಶ್ ಕೆರಿಹೊಲದವರ, ರಮೇಶ್ ಅರಶೀಣಗೇರಿಯವರ ನಾಟಿ ಮಾಡಿರೋ ಬತ್ತದ ಗದ್ದೆಗಳಲ್ಲಿ, ಗೋವಿನಜೋಳದ ಗದ್ದೆಗಳಲ್ಲಿ ಆನೆಗಳು ನಡೆದಾಡಿರೋ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇನ್ನು ಅಡಿಕೆ ತೋಟದಲ್ಲಿ ನುಗ್ಗಿರೋ ಆನೆಗಳು ಕೆಲವು ಅಡಿಕೆ ಗಿಡಗಳಿಗೆ ಹಾನಿ ಮಾಡಿವೆ. ಹೀಗಾಗಿ ಈ ಭಾಗದ ರೈತರು ಆತಂಕಗೊಂಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಅಂತಾ ರೈತರ ಆಗ್ರಹವಾಗಿದೆ.