ಮುಂಡಗೋಡ: ಶ್ರೀರಾಮ ನವಮಿಯ ನಿಮಿತ್ತ ಶ್ರೀರಾಮ ಸೇನೆ ಮತ್ತು ಹಿಂದೂ ಜಾಗರಣ ವೇದಿಕೆಯ ವತಿಯಿಂದ ಪ್ರಭು ಶ್ರೀರಾಮಚಂದ್ರರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಸೇರಿದ್ದ ಕಾರ್ಯಕರ್ತರು, ಶ್ರೀರಾಮಚಂದ್ರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಜಯಘೋಷ ಮೊಳಗಿಸಿದ್ರು.
Top Stories
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ಸಂಸದ ಸ್ಥಾನಕ್ಕೆ ರಾಜೀನಾಮೆ, ಬಿಜೆಪಿಗೂ ಗುಡ್ ಬೈ ಹೇಳಿದ ಪ್ರಭಾವಿ ಮುಖಂಡ..!
ಕೊಪ್ಪಳ: ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕೊನೆಗೂ ಬಿಜೆಪಿ ಸಂಸದ ಕರಡಿ ಸಂಗಣ್ಣ, ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. ಅಲ್ದೆ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಗೆ ಸಂಸದ ಸ್ಥಾನಕ್ಕೆ ಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ ಕರಡಿ ಸಂಗಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬಹುತೇಕ ಕರಡಿ ಸಂಗಣ್ಣ ನಾಳೆ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ನಿಚ್ಚಳವಾಗಿದೆ. ಈಗಾಗಲೇ ಸಿಎಂ, ಡಿಸಿಎಂ ಜೊತೆಗೆ ಮಾತುಕತೆ ನಡೆಸಿರುವ ಕರಡಿ ಸಂಗಣ್ಣ, ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ. ನಿನ್ನೆ ಕರಡಿ ಸಂಗಣ್ಣ ನಿವಾಸಕ್ಕೆ ಶಾಸಕ ಲಕ್ಷ್ಮಣ ಸವದಿ ಭೇಟಿ ನೀಡಿ ಚರ್ಚಿಸಿದ್ದರು. ಅದ್ರಂತೆ ಇಂದು ಕರಡಿ ಸಂಗಣ್ಣ ನಿವಾಸಕ್ಕೆ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಕೂಡ ಭೇಟಿ ನೀಡಿದ್ದರು. ಹೀಗಾಗಿ, ಕಾಂಗ್ರೆಸ್ ಸೇರ್ಪಡೆ ಸಲುವಾಗಿನೇ ಕರಡಿ ಸಂಗಣ್ಣರವರು ಬೆಂಗಳೂರಿಗೆ ತೆರಳಿದ್ದಾರೆ ಅನ್ನೊಇ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ನಾಮಪತ್ರ, ಉ.ಕನ್ನಡ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ..!
ಕಾರವಾರ: ಉತ್ತರ ಕನ್ನಡ ಲೋಕಸಭಾ ಕೈ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ನಾಮಪತ್ರ ಸಲ್ಲಿಸಿದ್ದಾರೆ. ಕಾರವಾರ ಡಿಸಿ ಕಚೇರಿಯಲ್ಲಿ ಚುನಾವಣಾಧಿಕಾರಿ ಗಂಗೂಬಾಯಿ ಮಾನಕರ್ ಗೆ ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರೊಂದಿಗೆ ಸೇರಿ ಜಿಲ್ಲಾ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಅದಕ್ಕೂ ಮೊದಲು, ಕಾರವಾರದ ಸಿದ್ದಿವಿನಾಯಕ ದೇವಸ್ಥಾನಕ್ಕೆ ಬೇಟಿ ನೀಡಿ ದರ್ಶನ ಪಡೆದ ಡಾ. ಅಂಜಲಿ, ನಾಮಪತ್ರವನ್ನು ಸಿದ್ದಿವಿನಾಯಕನ ಮುಂದೆ ಇಟ್ಟು ಸಂಕಲ್ಪ ಮಾಡಿಕೊಂಡು ಪೂಜೆ ಸಲ್ಲಿಸಿದ್ರು. ಇನ್ನು ಮತ್ತೊಮ್ಮೆ ಕಾರವಾರದ ಮಾಲಾದೇವಿ ಮೈದಾನದಿಂದ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ಸಲ್ಲಿಸಲಿದ್ದಾರೆ.
ಉತ್ತರ ಕನ್ನಡದಲ್ಲಿ ಇಂದು 3 ನಾಮಪತ್ರ ಸಲ್ಲಿಕೆ, ಮುಂಡಗೋಡಿನ ಚಿದಾನಂದ ಹರಿಜನ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ..!
ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂದಿಸಿದಂತೆ, ನಾಮಪತ್ರಗಳ ಸಲ್ಲಿಕೆಗೆ ಎರಡನೇ ದಿನವಾದ ಇಂದು, ಜಿಲ್ಲೆಯಲ್ಲಿ ಒಟ್ಟು 3 ನಾಮಪತ್ರಗಳು ಸಲ್ಲಿಕೆಯಾಗಿವೆ. ಪಕ್ಷೇತರ ಅಭ್ಯರ್ಥಿಗಳಾದ ಚಿದಾನಂದ ಹೆಚ್ ಹರಿಜನ, ಕೃಷ್ಣಾಜಿ ಪಾಟೀಲ್, ನಿರಂಜನ್ ಉದಯಸಿನ್ಹಾ ಸರ್ದೇಸಾಯಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇದ್ರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ 7 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರಗಳ ಸಲ್ಲಿಕೆಗೆ ಏಪ್ರಿಲ್ 19 ಕೊನೆಯ ದಿನವಾಗಿದ್ದು, 20 ರಂದು ನಾಮಪತ್ರಗಳ ಪರಿಶೀಲನೆ, 22 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದ್ದು, ಮೇ 7 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಮುಂಡಗೋಡ ಬಿಜೆಪಿಗೆ ನೂತನ ಪದಾಧಿಕಾರಿಗಳ ಆಯ್ಕೆ, ಯಾರ್ಯಾರು ಗೊತ್ತಾ..?
ವಿವೇಕ್ ಹೆಬ್ಬಾರ್ ಬಳಗ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ನಂತರ ಮುಂಡಗೋಡ ಬಿಜೆಪಿ ಮೈಕೊಡವಿ ಎದ್ದಿದೆ. ಒಂದಿಷ್ಟು ಯುವಕರ ಪಡೆ ಸ್ಥಳೀಯ ಬಿಜೆಪಿಯನ್ನ ಬಲಿಷ್ಟಗೊಳಿಸಲು, ಇನ್ನಿಲ್ಲದ ಕಾರ್ಯತಂತ್ರ ರೂಪಿಸುತ್ತಿದೆ. ಮಂಡಲಾಧ್ಯಕ್ಷ ಮಂಜುನಾಥ ಪಾಟೀಲ್ ನೇತೃತ್ವದಲ್ಲಿ ಇಡೀ ತಾಲೂಕಿನ ಬೂತ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ. ನೂತನ ಪದಾಧಿಕಾರಿಗಳ ಆಯ್ಕೆ..! ಅಂದಹಾಗೆ, ಬಿಜೆಪಿ ತೊರೆದು ಕೈ ಪಡೆಗೆ ಜಿಗಿದ ಹಲವು ಬಿಜೆಪಿ ಪದಾಧಿಕಾರಿಗಳಿಂದ ತೆರವಾದ ಸ್ಥಾನಗಳಿಗೆ, ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ. ಮುಂಡಗೋಡಿನಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರುಗಳು ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇವ್ರು ಬಿಜೆಪಿ ಹೊಸ ಪದಾಧಿಕಾರಿಗಳು..! ಮುಂಡಗೋಡ ಬಿಜೆಪಿ ಮಂಡಲದ ಉಪಾಧ್ಯಕ್ಷರನ್ನಾಗಿ, ಮಂಜುನಾಥ ಹರ್ಮಲ್ಕರ್, ರವಿ ಕಲಘಟಗಿ, ಸುಭಾಷ ಲಮಾಣಿ ನೇಮಕಗೊಂಡಿದ್ದಾರೆ. ಇನ್ನು ಕಾರ್ಯದರ್ಶಿಯಾಗಿ ಶ್ರೀಮತಿ ತೃಪ್ತಿ ಭಜಂತ್ರಿ ಯವರನ್ನು ಆಯ್ಕೆ ಮಾಡಲಾಗಿದೆ. ಮಹಾಶಕ್ತಿಕೇಂದ್ರ ಅಧ್ಯಕ್ಷರುಗಳು..! ಮುಂಡಗೋಡ ತಾಲೂಕಿನ ಬಿಜೆಪಿ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರನ್ನು ನೂತನವಾಗಿ ಆಯ್ಕೆ ಮಾಡಲಾಗಿದೆ. ಅದ್ರಂತೆ, ಚಿಗಳ್ಳಿ ಮಹಾಶಕ್ತಿ ಕೇಂದ್ರಕ್ಕೆ, ಸಂತೋಷ್ ಅಂತೋಜಿ,...
ಕೊಪ್ಪ ಗ್ರಾಮದ ಮೋಹನ್ ಪಾಣತ್ರಿಯಲ್ ನಿಧನ..!
ಮುಂಡಗೋಡ: ಪಟ್ಟಣದಲ್ಲಿ ಹೊಟೇಲ್ ನಡೆಸುತ್ತಿದ್ದ ಕೊಪ್ಪ ಗ್ರಾಮದ ಮೋಹನ್ ಪಾಣತ್ರಿಯಲ್ (68) ದೈವಾಧೀನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮೋಹನ್ ರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಬೆಳಗಿನ ಜಾವ ಕೊನೆ ಉಸಿರೆಳೆದಿದ್ದಾರೆ. ಮೃತರು ಪತ್ನಿ, 7 ಜನ ಗಂಡು ಮಕ್ಕಳು, ಅಣ್ಣ ತಮ್ಮಂದಿರು, ಸಹೋದರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ..! ಸಲೈನ್ ಹಚ್ಚಿಕೊಂಡೇ ಪ್ರಚಾರಕ್ಕಿಳಿದಿರೋ ಕೈ ಅಭ್ಯರ್ಥಿ..!!
ಕುಮಟಾ: ಕಳೆದ ಒಂದು ತಿಂಗಳಿನಿಂದಲೂ ನಿರಂತರವಾಗಿ ಪ್ರಚಾರದಲ್ಲಿರುವ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್, ಅನಾರೋಗ್ಯದ ನಡುವೆಯೂ ಪ್ರಚಾರ ಮುಂದುವರಿಸಿ ಕಾರ್ಯಕರ್ತರ ಹುರುಪು ಹೆಚ್ಚಿಸಿದ್ದಾರೆ. ಕಾಂಗ್ರೆಸ್ನಿಂದ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಪ್ರಚಾರಕ್ಕೆ ಇಳಿದಿದ್ದ ಡಾ.ಅಂಜಲಿ ನಿಂಬಾಳ್ಕರ್, ಈಗಾಗಲೇ ಬ್ಲಾಕ್ ಮಟ್ಟದ ಸಭೆಗಳನ್ನ ಪೂರ್ಣಗೊಳಿಸಿ ಜಿಲ್ಲಾ ಪಂಚಾಯತಿ ಮಟ್ಟದಲ್ಲಿ ಸಭೆಗಳನ್ನ ನಡೆಸುತ್ತಿದ್ದಾರೆ. ಸತತವಾಗಿ ವಿರಾಮವಿಲ್ಲದೆ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಅವರಿಗೆ ಕೊಂಚ ಆರೋಗ್ಯದಲ್ಲಿ ಏರುಪೇರಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ವೈದ್ಯಕೀಯ ತಪಾಸಣೆಗೆ ಒಳಗಾಗಿ ವೈದ್ಯಕೀಯ ಉಪಚಾರ ಪಡೆದಿರುವ ಅವರು, ವಾಸ್ತವ್ಯ ಹೂಡುವ ಸ್ಥಳದಲ್ಲೇ ಸಲೈನ್ (ಡ್ರಿಪ್ಸ್) ಹಚ್ಚಿಕೊಂಡು ಪ್ರಚಾರ ಕಾರ್ಯಗಳನ್ನ ಮುಂದುವರಿಸಿದ್ದಾರೆ. ಕೈನಲ್ಲಿ ಸಲೈನ್ನ ಕ್ಯಾನುಲಾ (ಸೂಜಿ) ಇಟ್ಟುಕೊಂಡೇ ಕ್ಷೇತ್ರದಲ್ಲಿ ಪ್ರಚಾರಕ್ಕಿಳಿದಿರುವ ಡಾ.ಅಂಜಲಿಯವರ ಬದ್ಧತೆ ಕಾರ್ಯಕರ್ತರಲ್ಲೂ ಹುರುಪು ತಂದಿದೆ. ಕೆಲವೆಡೆ ಕಾರ್ಯಕರ್ತರೇ ‘ತಾವು ವಿಶ್ರಾಂತಿ ಪಡೆಯಿರಿ. ತಮಗಾಗಿ ನಾವು ಪ್ರಚಾರ ನಡೆಸುತ್ತೇವೆ’ ಎನ್ನುತ್ತಿದ್ದಾರೆ. ‘ನನ್ನ ಜನರಿಗಾಗಿ ಈ ಚುನಾವಣೆ ನಡೆಯುತ್ತಿದೆ. ನನ್ನೆಲ್ಲ ಕಾರ್ಯಕರ್ತರು, ನಾಯಕರು ನಮಗಾಗಿ ದುಡಿಯುತ್ತಿರುವಾಗ...
ಪಾಳಾ ಸಮೀಪದ ಕಲಕೊಪ್ಪದಲ್ಲಿ ಭಾರೀ ಅನಾಹುತ, ಸಿಡಿಲು ಬಡಿದು 5 ಹಸುಗಳು ದಾರುಣ ಸಾವು..!
ಮುಂಡಗೋಡ ತಾಲೂಕಿನ ಪಾಳಾ ಸಮೀಪದ ಕಲಕೊಪ್ಪದಲ್ಲಿ ಭಾರೀ ಅನಾಹುತ ಸಂಭವಿಸಿದೆ. ಮೊದಲ ದಿನದ ಮಳೆಯಲ್ಲೇ ಐದು ಹಸುಗಳು ದಾರುಣ ಸಾವು ಕಂಡಿವೆ. ಸಿಡಿಲು ಬಡಿದು ಗದ್ದೆಯಲ್ಲಿದ್ದ 5 ಹಸುಗಳು ಮೃತಪಟ್ಟಿವೆ. ಪಾಳಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲಕೊಪ್ಪ ಗ್ರಾಮದ ಪಕ್ಕೀರ ಗೌಡ ಕಡಬಗೇರಿ ಎಂಬುವವರ ಐದು ಹಸುಗಳು ಗದ್ದೆಯಲ್ಲಿ ಸಿಡಿಲು ಬಡಿದು ದಾರುಣವಾಗಿ ಸಾವನ್ನಪ್ಪಿವೆ. ಇಂದು ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಲ್ಲಿ ಸಿಡಿಲ ಅರ್ಭಟದಿಂದ ಅನಾಹುತ ಸಂಭವಿಸಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡ “ಕೈ”ಪಡೆಯಲ್ಲಿ ಬದಲಾವಣೆ ಬಿರುಗಾಳಿ, ಹೆಬ್ಬಾರ್ “ಬೆಂ”ಬಲದ ಅಲೆಯಲ್ಲಿ ಕೊಚ್ಚಿ ಹೋಗುವವರೇಷ್ಟು..?
ಮುಂಡಗೋಡ: ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಪಡೆ ಸದ್ಯ ಬಿಜೆಪಿಯಿಂದ ಕಾಂಗ್ರೆಸ್ ಕಡೆ ಜಂಪ್ ಮಾಡಿದೆ. ಹೀಗಾಗಿ, ವಿಧಾನಸಭೆ ಚುನಾವಣೆ ಬಳಿಕ ಬಹುತೇಕ ಕೊಸರಾಟದಲ್ಲೇ ತೊಡಗಿದ್ದ ಮುಂಡಗೋಡ ಕಾಂಗ್ರೆಸ್ ಗೆ ಹೆಬ್ಬಾರ್ ಪಡೆಯ ಆಗಮನ ಆನೆ ಬಲ ತಂದಿದ್ದು, ಒಳಗೊಳಗಿನ ಅಸಮಾಧಾನ, ಕಚ್ಚಾಟಗಳಿಗೆ “ಪವರ್ ಬ್ರೇಕ್” ಬೀಳೋ ಸಾಧ್ಯತೆ ಇದೆ. ಹೀಗಾಗಿ, ಸೋತ ಮನೆಯಲ್ಲಿ ನಾ ಹೆಚ್ಚು ನೀ ಹೆಚ್ಚು ಅಂತಾ ಕತ್ತಿ ಮಸೆಯುತ್ತಿದ್ದ “ಐರನ್ನು” ಮುಖಂಡರುಗಳಿಗೆ ಈಗ ತಮ್ಮ ಸ್ಥಾನಮಾನಗಳದ್ದೇ ಚಿಂತೆ ಹೆಚ್ಚಾಗಿದೆ. ಅವ್ರ ಕತೆಯೇನು..? ಇನ್ನು, ಪಕ್ಷದ ಪ್ರಮುಖ ಜವಾಬ್ದಾರಿ ಹೊತ್ತಿದ್ದ ಕೆಲವರು, ಸದ್ಯ ಅದೇಲ್ಲೇಲ್ಲೋ ಚೇಳು ಕಡಿದವರಂತೆ ಓಡಾಡುತ್ತಿದ್ದಾರಂತೆ. ತಮ್ಮ ಸ್ಥಾನಗಳಿಗೆ ಬರಬಹುದಾದ ಸಂಚಕಾರ ತಪ್ಪಿಸಿಕೊಳ್ಳಲು ಯಲ್ಲಾಪುರದ ಕಡೆ ಮುಖ ಮಾಡಿ ಕುಳಿತಿದ್ದಾರಂತೆ. ಯಾಕಂದ್ರೆ, ಕೆಲವರ ಬಗ್ಗೆ ಈಗಾಗಲೇ ಪಕ್ಷದಲ್ಲಿ ಸಾಕಷ್ಟು ವಿರೋಧಗಳು ಇದ್ದರೂ, ಎಲೆಕ್ಷನ್ ಮುಗಿಯೋವರೆಗೂ ಹೇಗಾದ್ರೂ ಸಹಿಸಿಕೊಳ್ಳಿ ಅಂತಾ ಜಿಲ್ಲಾ ಮುಖಂಡರು ತಾಮಣಿ ಮಾಡಿದ್ದರು. ಆದ್ರೆ, ಇವಾಗ ಹೆಬ್ಬಾರ್ ಬಳಗದ...
ಕೊಪ್ಪ ಕೆರೆಯ ಬಳಿ ಬೆಳ್ಳಂ ಬೆಳಿಗ್ಗೆ ಬೈಕ್ ಅಫಘಾತ, ಮೂವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು..!
ಮುಂಡಗೋಡ ತಾಲೂಕಿನ ಕೊಪ್ಪದ ಕೆರೆ ಬಳಿ ಬೆಳ್ಳಂ ಬೆಳಿಗ್ಗೆ ಬೈಕ್ ಅಪಘಾತವಾಗಿದೆ. ಪರಿಣಾಮ ಮೂವರಿಗೆ ಗಂಭೀರ ಗಾಯವಾಗಿದೆ. ರಸ್ತೆ ಬದಿಯ ಕಲ್ಲಿಗೆ ಬೈಕ್ ಡಿಕ್ಕಿ ಹೊಡೆದು ಅಪಘಾತವಾಗಿದೆ. ಕೊಪ್ಪ ಇಂದಿರಾನಗರದ ಲಕ್ಷ್ಮಣ ರಾಮಣ್ಣ ಬೋವಿವಡ್ಡರ (36), ಬಸವರಾಜ್ ಹನ್ಮಂತಪ್ಪ ಕುಂಕೂರ್ (36), ಮುಂಡಗೋಡಿನ ಸಾದಿಕ್ ಜಲಾಲ್ ಸಾಬ್ ಹುಬ್ಬಳ್ಳಿ(36) ಗಂಭೀರ ಗಾಯಗೊಂಡಿದ್ದಾರೆ. ಅಪಘಾತವಾದ ತಕ್ಷಣವೇ ಗ್ರಾಮಸ್ಥರು ಗಾಯಗೊಂಡವರನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.