ಗ್ರಾಮಕ್ಕೆ ಬಾರದ ಬಸ್, ಹುನಗುಂದ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ..!

ಕಳೆದ ಒಂದು ವಾರದಿಂದ ಮುಂಡಗೋಡ ತಾಲೂಕಿನ ಹುನಗುಂದಕ್ಕೆ ಸಾರಿಗೆ ಬಸ್ ಸಂಚಾರ ಬಹುತೇಕ ಸ್ಥಗಿತವಾಗಿದೆ. KSRTC ಬಸ್ ಚಾಲಕ ಹಾಗೂ ನಿರ್ವಾಹಕರ ಬೇಜವಾಬ್ದಾರಿಗಳಿಂದ ನಿತ್ಯವೂ ವಿದ್ಯಾಭ್ಯಾಸಕ್ಕಾಗಿ ಮುಂಡಗೋಡ ಸೇರಿದಂತೆ ವಿವಿದೆಡೆ ಪ್ರಯಾಣಿಸುವ ನೂರಾರು ವಿದ್ಯಾರ್ಥಿಗಳ ಜೀವನ ಅತಂತ್ರವಾಗಿದೆ. ಹೀಗಾಗಿ, ಗುರುವಾರ ಬೆಳಿಗ್ಗೆ ವಿದ್ಯಾರ್ಥಿಗಳು ಬಸ್ ಗಾಗಿ ಪ್ರತಿಭಟನೆ ನಡೆಸಿದ್ರು.

ಹುನಗುಂದ ಬಸ್ ನಿಲ್ದಾಣದ ಬಳಿ ಬಸ್ ಗಾಗಿ ವಿದ್ಯಾರ್ಥಿಗಳು ಬೆಳಗ್ಗಿನಿಂದಲೂ ಕಾಯ್ದು ಕುಳಿತಿದ್ದರು. ಆದ್ರೆ, ಬಸ್ ಬರಲೇ ಇಲ್ಲ. ಹೀಗಾಗಿ, ವಿದ್ಯಾರ್ಥಿಗಳಿಗೆ ಬಸ್ ಬರದೇ ಇರುವ ಕಾರಣಕ್ಕೆ ವಾಪಸ್ ಮನೆಗೆ ತೆರಳುವ ಅನಿವಾರ್ಯತೆ ಏದುರಾಗಿದೆ. ಹೀಗಾಗಿ ಪೋಷಕರು ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಬಸ್ ಗಾಗಿ ಪ್ರತಿಭಟನೆ ನಡೆಸಿದ್ದಾರೆ.

KSRTC ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ತರಾಟೆಗೆ ಪಡೆದ ಗ್ರಾಮಸ್ಥರು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

error: Content is protected !!