ಮಳಗಿ ಧರ್ಮಾ ಜಲಾಶಯ ಭರ್ತಿ: ಮಳಗಿ- ದಾಸನಕೊಪ್ಪ ರಸ್ತೆ ಜಲಾವೃತ..! ಸಂಚಾರ ಬಂದ್..!!

ಮಳಗಿ ಧರ್ಮಾ ಜಲಾಶಯ ಭರ್ತಿ: ಮಳಗಿ- ದಾಸನಕೊಪ್ಪ ರಸ್ತೆ ಜಲಾವೃತ..! ಸಂಚಾರ ಬಂದ್..!!

 ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯ ಭರ್ತಿಯಾಗಿದೆ. ಹೀಗಾಗಿ, ಜಲಾಶಯ ಉಬ್ಬು ಬಿದ್ದು, ಮಳಗಿ- ದಾಸನಕೊಪ್ಪ ರಸ್ತೆ ಜಲಾವೃತವಾಗಿದೆ. ಮಿನಿ ಬ್ರಿಡ್ಜ್ ಮೇಲೆ ಮೂರು ಅಡಿಗಳಷ್ಟು ನೀರು ಹರಿಯುತ್ತಿರೊ ಕಾರಣ ರಸ್ತೆ ಸಂಚಾರ ಸ್ಥಗಿತವಾದಂತಾಗಿದೆ. ನಿರಂತರ ಮಳೆ ಹಿನ್ನೆಲೆಯಲ್ಲಿ ಧರ್ಮಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಹೀಗಾಗಿ, ಮಳಗಿ ಬನವಾಸಿ ರಸ್ತೆಯ ದಾಸನಕೊಪ್ಪ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ, ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿದೆ.  

ಉ.ಕನ್ನಡದಲ್ಲಿ ನಾಳೆ ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ, ನಿರಂತರ ಮಳೆ ಹಿನ್ನೆಲೆ ಡಿಸಿ ಆದೇಶ..!

ಉ.ಕನ್ನಡದಲ್ಲಿ ನಾಳೆ ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ, ನಿರಂತರ ಮಳೆ ಹಿನ್ನೆಲೆ ಡಿಸಿ ಆದೇಶ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಕಾರಣದಿಂದ, ಜಿಲ್ಲಾಧ್ಯಂತ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ಜಿಲ್ಲೆಯ ಕೆಲವು ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಶುಕ್ರವಾರ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ, ಜೋಯಿಡಾ, ಹಳಿಯಾಳ, ದಾಂಡೇಲಿ ಹಾಗೂ ಯಲ್ಲಾಪುರ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ, ನಾಳೆ ಶುಕ್ರವಾರ ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಎಲ್ಲ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 26 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ..

ಮಳಗಿ ಧರ್ಮಾ ಡ್ಯಾಂ ನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ..!

ಮಳಗಿ ಧರ್ಮಾ ಡ್ಯಾಂ ನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ..!

ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯದಲ್ಲಿ ಕೊಚ್ಚಿ ಹೋಗಿದ್ದ ಮೂಡಸಾಲಿಯ ಯುವಕನ ಶವ ಪತ್ತೆಯಾಗಿದೆ. ಮಾರಿಕಾಂಬಾ ಲೈಫ್ ಗಾರ್ಡ್ ಹಿರೇಕಲ್ ನ ಗೋಪಾಲ್ ನಾರಾಯಣ್ ಗೌಡಾರವರು ಶವ ಪತ್ತೆ ಹಚ್ಚಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರ ಜಂಟೀ ಕಾರ್ಯಾಚರಣೆಯಲ್ಲಿ ಶವ ಹೊರ ತೆಗೆಯಲಾಗಿದೆ. ಮುಂಡಗೋಡ ತಾಲೂಕಿನ ಮೂಡಸಾಲಿಯ ಶ್ರೀನಾಥ್ ಸೋಮಶೇಖರ್ ಹರಿಜನ್ (20) ಮಳಗಿ ಜಲಾಶಯದಲ್ಲಿ ಕೊಚ್ಚಿಕೊಂಡು ಹೋಗಿದ್ದ. ಹೀಗಾಗಿ, ನಿನ್ನೆಯಿಂದಲೂ ರಕ್ಷಣಾ ಕಾರ್ಯಾಚರಣೆ ನಡೆದಿದತ್ತು. ಇಂದು ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಮುಂಡಗೋಡ ಪಿಎಸ್ಐ ಪರಶುರಾಮ್ ಹಾಗೂ ಅವರ ಸಿಬ್ಬಂದಿಗಳು, ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರವಾಸಿಗರಿಗೆ ನಿರ್ಬಂಧ..! ಇನ್ನು ಮಳಗಿ ಧರ್ಮಾ ಜಲಾಶಯದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ತಾಲೂಕಾಡಳಿತ ಆದೇಶ ಹೊರಡಿಸಿದೆ. ಜಲಾಶಯದಲ್ಲಿ ಅಪಾಯ ಇರುವ ಕಾರಣ ಸದ್ಯ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ.

ಉ.ಕನ್ನಡದಲ್ಲಿ ನಾಳೆ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ, ನಿರಂತರ ಮಳೆ ಹಿನ್ನೆಲೆ ಡಿಸಿ ಆದೇಶ..!

ಉ.ಕನ್ನಡದಲ್ಲಿ ನಾಳೆ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ, ನಿರಂತರ ಮಳೆ ಹಿನ್ನೆಲೆ ಡಿಸಿ ಆದೇಶ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು. ಜಿಲ್ಲಾಧ್ಯಂತ ಇನ್ನಿಲ್ಲದ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ಜಿಲ್ಲೆಯ ಕೆಲವು ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಗುರುವಾರ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ, ಜೋಯಿಡಾ ಹಾಗೂ ದಾಂಡೇಲಿ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ, ನಾಳೆ ಗುರುವಾರ ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಎಲ್ಲ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 25 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ..

ಮಳಗಿ ಧರ್ಮಾ ಜಲಾಶಯದಲ್ಲಿ ಕೊಚ್ಚಿಕೊಂಡು ಹೋದ ಮೂಡಸಾಲಿಯ ಇಬ್ಬರು ಯುವಕರು, ಓರ್ವನ ರಕ್ಷಣೆ, ಮತ್ತೋರ್ವ ನಾಪತ್ತೆ..!

ಮಳಗಿ ಧರ್ಮಾ ಜಲಾಶಯದಲ್ಲಿ ಕೊಚ್ಚಿಕೊಂಡು ಹೋದ ಮೂಡಸಾಲಿಯ ಇಬ್ಬರು ಯುವಕರು, ಓರ್ವನ ರಕ್ಷಣೆ, ಮತ್ತೋರ್ವ ನಾಪತ್ತೆ..!

 ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯ ನೋಡಲು ಬಂದಿದ್ದ ಯುವಕನೋರ್ವ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಮತ್ತೋರ್ವನನ್ನು ರಕ್ಷಣೆ ಮಾಡಿರೋ ಘಟನೆ ನಡೆದಿದೆ. ಮುಂಡಗೋಡ ತಾಲೂಕಿನ ಮೂಡಸಾಲಿಯ ಶ್ರೀನಾಥ್ ಸೋಮಶೇಖರ್ ಹರಿಜನ್ (20) ಸದ್ಯ ಮಳಗಿ ಜಲಾಶಯದಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ. ಕೊಚ್ಚಿಕೊಂಡು ಹೋಗುತ್ತಿದ್ದಾಗ ಮತ್ತೋರ್ವ ಯುವಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ಫೀರಪ್ಪ ಹರಿಜನ್(25) ರಕ್ಷಣೆಗೊಳಗಾದ ಯುವಕನಾಗಿದ್ದಾನೆ. ಮಳಗಿ ಧರ್ಮಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ, ಮೂಡಸಾಲಿ ಗ್ರಾಮದಿಂದ ಆರು ಜನ ಸ್ನೇಹಿತರು ನೋಡಲು ಬಂದಿದ್ದರು. ಈ ವೇಳೆ ಜಲಾಶಯದ ಉಬ್ಬಿನ ಹತ್ತರಿ ಹೋದಾಗ ಏಕಾಏಕಿ ಇಬ್ಬರು ಯುವಕರು ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಅದ್ರಲ್ಲಿ, ಓರ್ವ ಯುವಕನನ್ನು ಸ್ಥಳೀಯರು ಬಚಾವ್ ಮಾಡಿದ್ದಾರೆ. ಆದ್ರೆ, ಶ್ರೀನಾಥ್ ಹರಿಜನ್ ನೀರಲ್ಲಿ ನಾಪತ್ತೆಯಾಗಿದ್ದಾನೆ. ಸದ್ಯ, ಸ್ಥಳಕ್ಕೆ ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್, ಪಿಎಸ್ಐ ಪರಶುರಾಮ್, ಕ್ರೈಂ ಪಿಎಸ್ಐ ಗುಡಗುಂಟಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ದೌಡಾಯಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬಂದಿಳಿದಿದ್ದಾರೆ. ಯುವಕನ...

ಕಲಕೇರಿಯಲ್ಲಿ ವಿದ್ಯುತ್ ಕಂಬ ಮುಟ್ಟಿದ ಎತ್ತು ಸ್ಥಳದಲ್ಲೇ ಸಾವು, ಅದೃಷ್ಟವಶಾತ್ ರೈತ ಪಾರು..!

ಕಲಕೇರಿಯಲ್ಲಿ ವಿದ್ಯುತ್ ಕಂಬ ಮುಟ್ಟಿದ ಎತ್ತು ಸ್ಥಳದಲ್ಲೇ ಸಾವು, ಅದೃಷ್ಟವಶಾತ್ ರೈತ ಪಾರು..!

ಮುಂಡಗೋಡ ತಾಲೂಕಿನ ಕಲಕೇರಿಯಲ್ಲಿ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿ ಎತ್ತು ಸಾವನ್ನಪ್ಪಿದ ಘಟನೆ ನಡೆದಿದೆ.. ಗದ್ದೆಯಲ್ಲಿ ಭತ್ತದ ನಾಟಿ ಕೆಲಸದ ತಯಾರಿ ನಡೆದಿತ್ತು. ಎತ್ತುಗಳ ಜೊತೆಯಲ್ಲಿ ರೈತ ರಾಜಣ್ಣ ಮುಕ್ಕನಕಟ್ಟಿ ಎಂಬುವವರು ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಎತ್ತು ವಿದ್ಯುತ್ ಕಂಬದ ಹತ್ತಿರ ಹೋದಾಗ ಆಕಸ್ಮಿಕವಾಗಿ ವಿದ್ಯುತ್ ಕಂಬಕ್ಕೆ ತಗುಲಿದೆ. ಹೀಗಾಗಿ, ತಕ್ಷಣವೇ ವಿದ್ಯುತ್ ಪ್ರವಹಿಸಿ ಹೋರಿ ಮೃತಪಟ್ಟಿದೆ. ಬಚಾವ್ ಮಾಡಲು ಹೋದ ರೈತನಿಗೂ ವಿದ್ಯುತ್ ಸಂಚಾರದ ಅನುಭವವಾಗಿದೆ. ಅದೃಷ್ಟವಶಾತ್ ರೈತನ ಸಮಯ ಪ್ರಜ್ಞೆಯಿಂದ ಅವ್ರಿಗೆ ಏನೂ ಆಗಿಲ್ಲ. ತಕ್ಷಣವೇ ಅಲ್ಲಿಂದ ಮತ್ತೊಂದು ಎತ್ತನ್ನು ಎಳೆದುಕೊಂಡು ಹೊರಗಡೆ ಬಂದಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಂಡಗೋಡ ಬಸವನ ಹೊಂಡದಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸಾವು..! ಪೊಲೀಸರಿಂದ ರಕ್ಷಣೆ, ಆದ್ರೂ ಬದುಕಲಿಲ್ಲ ಜೀವ.!

ಮುಂಡಗೋಡ ಬಸವನ ಹೊಂಡದಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸಾವು..! ಪೊಲೀಸರಿಂದ ರಕ್ಷಣೆ, ಆದ್ರೂ ಬದುಕಲಿಲ್ಲ ಜೀವ.!

 ಮುಂಡಗೋಡ ಪಟ್ಟಣದ ಬಸವನ ಹೊಂಡದಲ್ಲಿ ಆತ್ನಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಸ್ಥಳೀಯರ ಸಮಯಪ್ರಜ್ಞೆಯಿಂದ ರಕ್ಷಣೆ ಮಾಡಲಾಗಿತ್ತು. ಆದ್ರೂ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ದುರಂತ ಅಂದ್ರೆ, ಅದೇಷ್ಟೇ ಚಿಕಿತ್ಸೆ ನೀಡಿದ್ರೂ ಮಹಿಳೆ ಬದುಕುಳಿಯಲಿಲ್ಲ. ಅಂದಹಾಗೆ, ಮುಂಡಗೋಡ ಅಂಬೇಡ್ಲರ ಓಣಿಯ ರುಕ್ಮೀಣಿ ವಡ್ಡರ್ ಎನ್ನುವ 45 ವರ್ಷದ ಮಹಿಳೆ, ಮಂಗಳವಾರ ಬೆಳಿಗ್ಗೆ ಅದ್ಯಾವುದೋ ಕಾರಣಕ್ಕೆ ಮನನೊಂದು ಬಸವನ ಹೊಂಡಕ್ಕೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಹೀಗಾಗಿ ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪಿಎಸ್ಐ ಹಾಗೂ ಪೊಲೀಸರು ಮಹಿಳೆಯನ್ನು ಹೊಂಡದಿಂದ ಮೇಲಕ್ಕೇತ್ತಿ ಬಚಾವ್ ಮಾಡಿದ್ದಾರೆ. ಆದ್ರೆ, ತೀರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕಿತ್ಸೆ ನೀಡಲು ಪ್ರಯತ್ನಿಸಲಾಗಿದೆ. ಆದ್ರೂ ಮಹಿಳೆ ಪ್ರಾಣ ಉಳಿದಿಲ್ಲ.

ಪಾಳಾದಲ್ಲಿ ನಿರಂತರ ಮಳೆ ಮನೆ ಮೇಲೆ ಬಿದ್ದ ಮರ, ಇಬ್ಬರಿಗೆ ಸಣ್ಣಪುಟ್ಟ ಗಾಯ, ಮನೆಗೆ ಹಾನಿ..!

ಪಾಳಾದಲ್ಲಿ ನಿರಂತರ ಮಳೆ ಮನೆ ಮೇಲೆ ಬಿದ್ದ ಮರ, ಇಬ್ಬರಿಗೆ ಸಣ್ಣಪುಟ್ಟ ಗಾಯ, ಮನೆಗೆ ಹಾನಿ..!

 ಮುಂಡಗೋಡ ತಾಲೂಕಿನಲ್ಲಿ ಮಳೆಯ ಅವಾಂತರಗಳು ಶುರುವಾಗಿವೆ. ಪಾಳಾ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಮಳೆ, ಗಾಳಿಯಿಂದ ಮನೆಯ ಮೇಲೆ ಮರ ಬಿದ್ದು ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಮನೆಗೆ ಹಾನಿಯಾಗಿದೆ. ಧಾರಾಕಾರ ಮಳೆ ಮತ್ತು ಗಾಳಿಯಿಂದ ಬದ್ರಾಪುರದ ಹೊಸನಗರದಲ್ಲಿ ರಜಿಯಾ ಖಾಸಿಂಸಾಬ್ ಶೇಕ್ ಎಂಬುವರ ಮನೆ ಮೇಲೆ, ಮನೆ ಪಕ್ಕದಲ್ಲಿ ಇದ್ದ ಬೃಹತ್ ಗಾತ್ರದ ಮರ ಬಿದ್ದಿದೆ. ಮನೆ ಮೇಲೆ ಬಿದ್ದು ಹಾನಿಯಾಗಿದೆ. ಮನೆಯಲ್ಲಿದ್ದ ರಜಿಯಾ ಬೇಗಂ ಮತ್ತು ಮಗನಾದ ಮಕ್ಬುಲ್ ಅಹಮದ್ ಶೇಕ್ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಹೀಗಾಗಿ, ಘಟನೆ ನಡೆದ ಬಳಿಕ ತಡರಾತ್ರಿ ಮನೆಯಲ್ಲಿದ್ದ ಎಲ್ಲರನ್ನೂ ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ.

ಉ.ಕನ್ನಡದಲ್ಲಿ ನಾಳೆ ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ, ನಿರಂತರ ಮಳೆ ಹಿನ್ನೆಲೆ ಡಿಸಿ ಆದೇಶ..!

ಉ.ಕನ್ನಡದಲ್ಲಿ ನಾಳೆ ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ, ನಿರಂತರ ಮಳೆ ಹಿನ್ನೆಲೆ ಡಿಸಿ ಆದೇಶ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು. ಜಿಲ್ಲಾಧ್ಯಂತ ಇನ್ನಿಲ್ಲದ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ಜಿಲ್ಲೆಯ ಎಲ್ಲಾ ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಸೋಮವಾರವೂ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ, ಶಿರಸಿ, ಸಿದ್ದಾಪುರ, ಜೋಯಿಡಾ, ದಾಂಡೇಲಿ, ಯಲ್ಲಾಪುರ, ಮುಂಡಗೋಡ ಹಾಗೂ ಹಳಿಯಾಳ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ, ನಾಳೆ ಸೋಮವಾರ ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ, ಕಾರವಾರ, ಶಿರಸಿ, ಸಿದ್ದಾಪುರ, ಜೋಯಿಡಾ, ದಾಂಡೇಲಿ ಹಾಗೂ ಯಲ್ಲಾಪುರ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 22 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ..

ಕಾರವಾರದಲ್ಲಿ ಸಿಎಂ ಅಧ್ಯಕ್ಷತೆಯ ಸಭೆ,  ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಖಡಕ್ ಸೂಚನೆಗಳೇನು ಗೊತ್ತಾ..?

ಕಾರವಾರದಲ್ಲಿ ಸಿಎಂ ಅಧ್ಯಕ್ಷತೆಯ ಸಭೆ, ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಖಡಕ್ ಸೂಚನೆಗಳೇನು ಗೊತ್ತಾ..?

ಕಾರವಾರ: ಮುಖ್ಯಮಂತ್ರಿ ಅವರು ಕಾರವಾರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕೆಲವು ಪ್ರಮುಖ ಸೂಚನೆಗಳನ್ನು ನೀಡಿದರು.‌ ತಕ್ಷಣ ಹಾನಿಯ ವರದಿ ನೀಡಿ..! ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟಕ್ಕೆ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಪರಿಹಾರ ಒದಗಿಸಲು ತಕ್ಷಣ ಹಾನಿಯ ವರದಿ ಸಲ್ಲಿಸಿ. ಕದ್ರಾ ಅಣೆಕಟ್ಟೆಯಿಂದ ಹೊರಬಿಡುವ ನೀರಿನಿಂದ ತೊಂದರೆಗೊಳಗಾಗುವ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಅಂತಿಮ ತೀರ್ಮಾನ ಮಾಡಿ. ಮಳೆ ಅನಾಹುತ ಮತ್ತು‌ ಪ್ರವಾಹದಿಂದ ಆದ ಜೀವಹಾನಿಗೆ ತುರ್ತಾಗಿ ಪರಿಹಾರ ಕೊಡಬೇಕು. ಕೋಸ್ಟಲ್ ಲೈನ್ ನಲ್ಲಿ ವಿದ್ಯುತ್ ಕಂಬಗಳ ಅಳವಡಿಕೆ, ಅಗತ್ಯ ಇರುವ ಕಡೆ ವೈರ್ ಗಳ ದುರಸ್ತಿ ಮತ್ತು ಬದಲಾವಣೆಗೆ ಮಾಡಬೇಕು. ಹೆದ್ದಾರಿ ಟೋಲ್ ಸಂಗ್ರಹ ಬೇಡ..! ಜಿಲ್ಲೆಯಲ್ಲಿ ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಹೆದ್ದಾರಿ ಪ್ರಾಧಿಕಾರದವರು ಟೋಲ್ ಏಕೆ ಸಂಗ್ರಹಿಸುತ್ತಿದ್ದೀರಿ? ಇದು ಸರಿಯಿಲ್ಲ. 2016ಕ್ಕೆ ಕಾಮಗಾರಿ ಮುಕ್ತಾಯಗೊಳಿಸಬೇಕಿದ್ದರೂ ಸಹ ಇದುವರೆಗೆ...

error: Content is protected !!