ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!

ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!

ಭಾರೀ ಕುತೂಹಲ ಕೆರಳಿಸಿದ್ದ ಇಂದೂರು ಹಾಗೂ ಚಿಗಳ್ಳಿ ಸೊಸೈಟಿ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಶಿವರಾಮ್ ಹೆಬ್ಬಾರರ ಪರಮಾಪ್ತ ರವಿಗೌಡ ಪಾಟೀಲರು ಹಾಗೂ ಮತ್ತೋರ್ವ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಲ್.ಟಿ. ಪಾಟೀಲ್ ಸ್ಪರ್ಧಿಸಿದ್ದ ಈ ಎರಡೂ ಕ್ಷೇತ್ರಗಳು ಎಲ್ಲರ ಗಮನ ಸೆಳೆದಿತ್ತು. ಆದ್ರೆ, ಅಚ್ಚರಿಯೆಂಬಂತೆ ಇಂದೂರು ಸೊಸೈಟಿಯಲ್ಲಿ ರವಿಗೌಡ ಪಾಟೀಲರು ಸೋಲು ಕಂಡಿದ್ದಾರೆ. ಚಿಗಳ್ಳಿಯಲ್ಲಿ ಎಲ್ಟಿ ಪಾಟೀಲರು ಜಯಭೇರಿ ಬಾರಿಸಿದ್ದಾರೆ. ಅಂದಹಾಗೆ, ಇಂದೂರು ಸೊಸೈಟಿಯಲ್ಲಿ ಸ್ಪರ್ಧಿಸಿದ್ದ ರವಿಗೌಡ ಪಾಟೀಲರು ಎದುರಾಳಿ ದೇವು ಕೆಂಚಗೊಣ್ಣವರ್ ಎದುರು 54 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. 414 ಮತಗಳನ್ನು ದೇವು ಕೆಂಚಗೊಣ್ಣವರ್ ಪಡೆದ್ರೆ, ಕೇವಲ 360 ಮತಗಳನ್ನು ಪಡೆದು ರವಿಗೌಡ ಪಾಟೀಲ್ ಸೋಲು ಒಪ್ಪಿಕೊಂಡಿದ್ದಾರೆ‌. ಇನ್ನಷ್ಟು ಮಾಹಿತಿ ನೀಡಲಾಗುವುದು..!  

ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!

ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!

ಮುಂಡಗೋಡ ತಾಲೂಕಿನ ಚವಡಳ್ಳಿ ಸೊಸೈಟಿ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದೆ‌. ತೀವ್ರ ತುರುಸು ಪಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಭರ್ಜರಿ ಜಯ ದಾಖಲಿಸಿದ್ದಾರೆ. ಬಿಜೆಪಿ ಕೇವಲ‌ ಒಂದೇ ಒಂದು ಸ್ಥಾನ ಪಡೆಯುವಲ್ಲಿ ಹರ ಸಾಹಸ ಪಟ್ಟಿದೆ‌. ಒಟ್ಟು 12 ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 11 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಶಂಕರ್ ಓಣಿಕೇರಿ, ತಾಜುದ್ದೀನ್ ದುಂಢಸಿ, ಮಹಾದೇವಿ ಹಳೆಬಂಕಾಪುರ, ನಿರ್ಮಲ ಮಡ್ಲಿ, ಪರಶುರಾಮ್ ತಹಶೀಲ್ದಾರ್, ಚಿದಾನಂದ ಪಾಟೀಲ್, ದ್ಯಾಮಣ್ಣ ಹೊನ್ನಳ್ಳಿ, ಬಸವರಾಜ್ ಉಗ್ನಿಕೇರಿ, ರಾಮಣ್ಣ ವಾಲ್ಮೀಕಿ, N.V. ವರ್ಗೀಸ್, ಕುಮಾರ್ ರಾಠೋಡ್ “ಕೈ” ಪಡೆಯ ಬೆಂಬಲದೊಂದಿಗೆ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ. ಇನ್ನು, ಬಿಜೆಪಿ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಅರ್ಜುನ್ ಜ್ಯೋತೆಪ್ಪನವರ್ ಗೆಲುವು ಸಾಧಿಸಿ ಬಿಜೆಪಿ ಬಾವುಟ ಗಟ್ಟಿಗೊಳಿಸಿದ್ದಾರೆ. ಇದ್ರೊಂದಿಗೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚವಡಳ್ಳಿ ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಕ್ರಮ ಮೆರೆದಿದೆ.

ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!

ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!

ಮುಂಡಗೋಡ: ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (LSMP)ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಸದಸ್ಯರು ಆಯ್ಕೆಗೊಂಡಿದ್ದಾರೆ. ಇದ್ರೊಂದಿಗೆ ತೀವ್ರ ಜಿದ್ದಾ ಜಿದ್ದಿನ ಕಣವಾಗಿದ್ದ ಸೊಸೈಟಿ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಪಾರುಪತ್ಯವಾದಂತಾಗಿದೆ. ಅಂದಹಾಗೆ, ಒಟ್ಟೂ12 ನಿರ್ದೇಶಕರ ಸ್ಥಾನಗಳಿಗಾಗಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಈ‌ ಮೊದಲೇ ಇಬ್ಬರು ಅವಿರೋಧ ಆಯ್ಕೆಯಾಗಿದ್ದರು. ಹೀಗಾಗಿ, ಇನ್ನುಳಿದ 10 ನಿರ್ದೇಶಕರ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆದಿತ್ತು. ಒಟ್ಟ 12ಸ್ಥಾನದ ನಿರ್ದೇಶಕರ ಸ್ಥಾನದಲ್ಲಿ 9 ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾದರೆ, ಬಿಜೆಪಿ ಬೆಂಬಲಿತ 3 ಸದಸ್ಯರು ಆಯ್ಕೆಯಾಗಿದ್ದಾರೆ. ಭಾರಿ ಕೂತುಹಲಕ್ಕೆ ಕಾರಣವಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದಂತಾಗಿದೆ. ಆಯ್ಕೆಯಾದ ನಿರ್ದೇಶಕರು..! ಪಕ್ಕೀರಪ್ಪ ಗೌಳಿ, ಮಂಜುನಾಥ ವೆರ್ಣೆಕರ್, ಬಸವಣ್ಣೆಪ್ಪಾ ಹೊತಗಣ್ಣನವರ, ಸುರೇಶ ಕುರಬರ, ಬಾಬುರಾವ್ ತಳವಾರ, ಮೌಲಾಲಿ ಶೇಖ್, ಶಿವಲಿಂಗಪ್ಪ ಗೌಳಿ, ವಿದ್ಯಾ ಉಪ್ಪಾರ, ಯಲ್ಲವ್ವಾ ಕುಂಬಾರ, ಸಂಪತ್ತಕುಮಾರ ಕ್ಯಾಮಣಕೇರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಸೋಮಲಪ್ಪ ಲಮಾಣಿ ಹಾಗೂ ಪ್ರಭು ಅರಶೀಣಗೇರಿ ಇಬ್ಬರು ಅವಿರೋಧ...

ಹುಬ್ಬಳ್ಳಿ ಸಿಲಿಂಡರ್​ ಬ್ಲಾಸ್ಟ್​: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!

ಹುಬ್ಬಳ್ಳಿ ಸಿಲಿಂಡರ್​ ಬ್ಲಾಸ್ಟ್​: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!

ಹುಬ್ಬಳ್ಳಿ: ಸಿಲಿಂಡರ್ ಸ್ಫೋಟಗೊಂಡು ತೀರ್ವವಾಗಿ ಗಾಯಗೊಂಡು ಕಿಮ್ಸ್​ಗೆ ದಾಖಲಾಗಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟಿದ್ದಾರೆ. ರಾಜು ಮೂಗೇರಿ (16) ಮೃತ ದುರ್ದೈವಿ. ಇದ್ರೊಂದಿಗೆ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಡಿಸೆಂಬರ್​ 22ರಂದು ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಸಿಲಿಂಡರ್ ಸ್ಫೋಟಗೊಂಡು 9 ಜನ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. 9 ಜನರನ್ನು ಕಿಮ್ಸ್​ಗೆ ದಾಖಲಿಸಲಾಗಿತ್ತು. ಈ ವರೆಗೆ ಮೂವರು ಮೃತಪಟ್ಟಿದ್ದು, ಆರು ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಹುಬ್ಬಳ್ಳಿಯ ಉಣಕಲ್ ಸಮೀಪ ಇರುವ ಅಚ್ಚವ್ಚನ ಕಾಲೋನಿಯಲ್ಲಿ ಡಿಸೆಂಬರ್​ 22 ರಂದು ಬೆಳಗಿನ ಜಾವ ಸಿಲಿಂಡರ್ ಸ್ಪೋಟಗೊಂಡು 9 ಜನ ಮಾಲಾಧಾರಿಗಳು ಗಾಯಗೊಂಡಿದ್ದರು. 9 ಜನರಿಗೆ ಹುಬ್ಬಳ್ಳಿಯ‌ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗತಿತ್ತು. ಬೆಂಗಳೂರಿನಿಂದ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಗುರುವಾರ (ಡಿ.26) ಚಿಕಿತ್ಸೆ ಫಲಿಸದೆ ಇಬ್ಬರು ಮೃತಪಟ್ಟಿದ್ದರು. ಇಂದು (ಡಿ.27) ಮತ್ತೊಬ್ಬ ಅಯ್ಯಪ್ಪ ಮಾಲಧಾರಿ ಸಾವಿಗೀಡಾಗಿದ್ದಾರೆ. 8 ವರ್ಷದ ನಿಜಲಿಂಗಪ್ಪ ಬೇಪುರಿ, 18 ವರ್ಷದ ಸಂಜಯ್ ಸವದತ್ತಿ, 16 ವರ್ಷದ ರಾಜು ಮೂಗೇರಿ...

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್(92) ವಿಧಿವಶರಾದ ಹಿನ್ನೆಲೆಯಲ್ಲಿ ರಾಜ್ಯಾಧ್ಯಂತ ಇಂದು ಶುಕ್ರವಾರ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ, ಶುಕ್ರವಾರ ರಾಜ್ಯದ ಶಾಲಾ ಕಾಲೇಜುಗಳು ಸೇರಿ ಸರ್ಕಾರಿ ಕಚೇರಿಗಳು ತೆರೆದಿರುವುದಿಲ್ಲ ಅಂತಾ ಸರ್ಕಾರ ಆದೇಶ ಹೊರಡಿಸಿದೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್(92) ವಿಧಿವಶರಾಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿರೋ ಅವ್ರು ಭಾರತದ 13 ನೇಯ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪಂಜಾಬಿನ ಗಾಹ್ ನಲ್ಲಿ ಜನಿಸಿದ್ದ ಮನಮೋಹನ್ ಸಿಂಗ್, 2004 ರಿಂದ 2014 ರವರೆಗೆ ಹತ್ತು ವರ್ಷಗಳ ಕಾಲ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಬೆಳಗಾವಿ ನಾಳಿನ ಕಾರ್ಯಕ್ರಮ ರದ್ದು..! ಇನ್ನು ಬೆಳಗಾವಿಯಲ್ಲಿ ನಾಳೆ ನಡೆಯಬೇಕಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ರದ್ದು ಮಾಡಲಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಇನ್ನು, ಬೆಳಗಾವಿಯಲ್ಲಿರೋ AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಹಲವು ಮುಖಂಡರು ದೆಹಲಿಯತ್ತ ಪ್ರಯಾಣ ಬೆಳಸಿದ್ದಾರೆ.

ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ

ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ

 ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ನಡೆಯಬಾರದ ಭಾರಿ ಘಟನೆಯೊಂದು ನಡೆದುಹೋಗಿದೆ. ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ ಪಾಪಿಗಳು. ಇಡೀ ಗ್ರಾಮವೇ ಈ ಘಟನೆಯಿಂದ ಅಕ್ಷರಶಃ ಥರಗುಟ್ಟಿ ಹೋಗಿದೆ. ಪ್ರಕಾಶ ಓಲೇಕಾರ (48) ಹತ್ಯೆಯಾದ ದುರ್ದೈವಿಯಾಗಿದ್ದಾನೆ. ಬೇರೆಯವರ ಪತ್ನಿಯೊಂದಿಗೆ ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ, ಬಸವರಾಜನ ಮನೆಗೆ ಹೋದಾಗ ಹತ್ತಕ್ಕೂ ಅಧಿಕ ಜನರಿಂದ ಹತ್ಯೆ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ, ಗಾಯಾಳುಗಳಿಗೆ ಹಾನಗಲ್ ‌ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!

ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!

ಹುಬ್ಬಳ್ಳಿಯಲ್ಲಿ ನಡೆದಿದ್ದ ಸಿಲಿಂಡರ್ ಬ್ಲಾಸ್ಟ್ ಆಗಿ 9 ಜನ ಗಂಭೀರವಾಗಿದ್ದ ಪ್ರಕರಣದಲ್ಲಿ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮಾಲಾಧಾರಿಗಳು ಸಾವು ಕಂಡಿದ್ದಾರೆ. ನಿಜನಿಂಗಪ್ಪ ಮಲ್ಲಪ್ಪ ಬೇಪೂರು (58), ಸಂಜಯ ಪ್ರಕಾಶ್ ಸವದತ್ತಿ (17) ಸಾವು ಕಂಡಿರೋ ಅಯ್ಯಪ್ಪ ಮಾಲಾಧಾರಿಗಳು. ಹುಬ್ಬಳ್ಳಿಯ ಅಚ್ಚವನ ಕಾಲೋನಿಯ ಈಶ್ವರ ದೇವಾಲಯದಲ್ಲಿ ಮೂರು ದಿನಗಳ ಹಿಂದೆ ಸಿಲಿಂಡರ್ ಸೋರಿಕೆ ಯಾಗಿ ಬೆಂಕಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಒಂಬತ್ತು ಜನ ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ಒಟ್ಟೂ ಒಂಬತ್ತು ಜನ ಅಯ್ಯಪ್ಪ ಮಾಲಾಧಾರಿಗಳಿಗೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ‌ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು..

ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ‌ ಕುಟುಂಬದ ನಾಲ್ವರು ದುರಂತ ಸಾವು..!

ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ‌ ಕುಟುಂಬದ ನಾಲ್ವರು ದುರಂತ ಸಾವು..!

ಶಿಗ್ಗಾವಿ ತಾಲೂಕಿನ ತಡಸ ಕ್ರಾಸ್ ಬಳಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದೆ. ಕಾರುಗಳ ನಡುವೆ ನಡೆದ ಮುಖಾಮುಕಿ ಡಿಕ್ಕಿಯಲ್ಲಿ ಒಂದೇ ಕುಟುಂಬದ ನಾಲ್ವರು ಭಯಾನಕ ಸಾವು ಕಂಡಿದ್ದಾರೆ‌. ಹಾವೇರಿ-ಧಾರವಾಡ ಗಡಿಯ ಸಮೀಪ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಬಿಳಿ ಮಹೀಂದ್ರಾ ಎಕ್ಸ್‌ಯುವಿ 700 ವಾಹನವು ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಹುಬ್ಬಳ್ಳಿಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೆಂಪು ಬಣ್ಣದ ಟಾಟಾ ಆಲ್ಕ್ರೋಜ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕೆಂಪು ವಾಹನದಲ್ಲಿ 10-12 ವರ್ಷದ ಒಂದು ಮಗು ಸೇರಿದಂತೆ 4 ಜನರಿದ್ದರು, ಅವರೆಲ್ಲರೂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 2 ಜನರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಮೃತ ಪಟ್ಟವರು ಚಂದ್ರಮ್ಮ( 59) , ಬೆಂಗಳೂರಿನ ಚಾಮರಾಜಪೇಟೆಯವರು, ಮೀನಾ(38) (ಮೃತ ಚಂದ್ರಮ್ಮ ಅವರ ಪುತ್ರಿ) ( ದಾವಣಗೆರೆ ಜಿಲ್ಲೆ ಹರಿಹರ ಮೂಲದವರು), ಮಹೇಶ್ ಕುಮಾರ್ ಸಿ (41) (ದಾವಣಗೆರೆ ಜಿಲ್ಲೆ ಹರಿಹರದವರು) (ಕಾರು ಚಾಲಕ ಹಾಗೂ ಮಾಲೀಕ), ಧನವೀರ್(11) (ದಾವಣಗೆರೆ ಜಿಲ್ಲೆ...

ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!

ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!

ಮುಂಡಗೋಡ: ತಾಲೂಕಿನ ಬೆಡಸಗಾಂವ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ ಮುಗಿದಿದೆ. ಇನ್ನೇನು ಚುನಾವಣೆಯ ಮತ ಎಣಿಕೆ ಕಾರ್ಯ ಮಾತ್ರ ಬಾಕಿ ಉಳಿದಿದೆ. ಹೀಗಿರೋವಾಗಲೇ ಧಾರವಾಡ ಹೈಕೋರ್ಟ್ ಪೀಠ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ತಡೆಯಾಜ್ಞೆ ನೀಡಿದೆ. ಏನಾಯ್ತು..? ಅಂದಹಾಗೆ, ಈಗ ತಾಲೂಕಿನೆಲ್ಲೆಡೆ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಚುನಾವಣೆ ನಡೀತಿದೆ. ಇಡೀ ತಾಲೂಕಿನಲ್ಲಿ ಈ ಚುನಾವಣೆ ಅನ್ನೋದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಈ ಕಾರಣಕ್ಕಾಗಿ, ಹೇಗಾದ್ರೂ ಸರಿ ಅಧಿಕಾರದ ಚುಕ್ಕಾಣಿ ನಮ್ಮ‌ ಸುಪರ್ದಿಯಲ್ಲೇ ಇರಬೇಕು ಅಂತ ಎರಡೂ ರಾಜಕೀಯ ಪಕ್ಷಗಳು ಮುಗಿಬಿದ್ದಿವೆ. ಹೀಗಾಗಿ, ಬೆಡಸಗಾಂವ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆ ಮಂಗಳವಾರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ವರೆಗೂ ನಡೆಯಿತು. ನಂತರ ಮತ ಎಣಿಕೆ ಕಾರ್ಯವನ್ನು ನಡೆಸಬೇಕಿತ್ತು. ಆದರೆ ಮತದಾನದ ಅನರ್ಹತೆಯಾದಿಯಲ್ಲಿನ ರೈತರು ಹಾಗೂ ಸಂಘದ ಸದಸ್ಯರು ಒಟ್ಟು ಹತ್ತೊಂಬತ್ತು ಜನರು ನಮಗೆ ಮತದಾನದ ಹಕ್ಕು ಬೇಕು ಎಂದು ಧಾರವಾಡ ಹೈಕೋರ್ಟ...

error: Content is protected !!