ಮುಂಡಗೋಡ ಪಟ್ಟಣದ ಸಂತೆ ಮಾರುಕಟ್ಟೆ ಹತ್ತಿರ ಶ್ರೀಗಂಧ ಮರ ಕಳ್ಳತನ ವಿಫಲ ಯತ್ನ ನಡೆದಿದೆ. ಎಸ್.ನಾರಾಯಣರಾವ್ ಎಂಬುವವರ ಮನೆ ಆವರಣದಲ್ಲಿ ಘಟನೆ ನಡೆದಿದ್ದು ಮರ ಕಡಿದು ಸಾಗಿಸಲಾಗದೇ ಕಳ್ಳರು ಅಲ್ಲೇ ಬಿಟ್ಟು ಹೋಗಿದ್ದಾರೆ. ಅಂದಹಾಗೆ, ಇದೇ ಸ್ಥಳದಲ್ಲಿ ಈ ಹಿಂದೆಯೂ ಶ್ರೀಗಂಧದ ಮರಗಳ ಕಳ್ಳತನದ ವಿಫಲ ಯತ್ನಗಳು ನಡೆದಿತ್ತು. ಆದ್ರೆ, ಇವತ್ತು ನಡೆದಿರೋ ಘಟನೆ ಖಚಿತತೆಯಿಂದಲೇ ಕಳ್ಳರು ಬಂದು, ಇನ್ನೇನು ಸಾಗಿಸುವ ಹಂತದಲ್ಲಿ ಅರ್ದಕ್ಕೆ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮತ್ತದೇ ಪ್ರಕರಣ ದಾಖಲಿಸಿಕೊಂಡು ಮುಂದಿನ “ಕಠಿಣ” ಕ್ರಮಕ್ಕೆ ಮುಂದಾಗಿದ್ದಾರೆ.
Top Stories
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕಿರೇಸೂರ್ ಸಮೀಪ ಲಾರಿ ಕಾರ್ ಡಿಕ್ಕಿ ; ಒಂದೇ ಕುಟುಂಬದ ಮೂವರು ಸಾವು..!
ಹುಬ್ಬಳ್ಳಿ,: ತಾಲೂಕಿನ ಕಿರೆಸೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕೊಪ್ಪಳ ತಾಲೂಕಿನ ಮಂಗಳಾಪುರ ಗ್ರಾಮದ ನಿವಾಸಿಗಳಾದ ಜಾಫರ್ಸಾಬ್ (60), ಮೊಹ್ಮದ್ ಮುಸ್ತಫಾ (36), ಶೋಹೆಬ್ (6) ಮೃತ ದುರ್ದೈವಿಗಳು. ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೂವರನ್ನು ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಜಾಪರಸಾಬ್ ಓಮಿನ್ ಕಾರ್ನಲ್ಲಿ ಕುಟುಂಬದವರ ಜೊತೆ ಪಾರ್ಶವಾಯು ಔಷಧಿ ತರಲು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಳಗಾ ಗ್ರಾಮದಲ್ಲಿನ ಸೇಂಟ್ ಮೇರಿ ಆಸ್ಪತ್ರೆಗೆ ಹೋಗಿದ್ದರು. ಔಷಧಿ ಪಡೆದು ಮರಳಿ ಊರಿಗೆ ಹೋಗುತ್ತಿದ್ದ ವೇಳೆ ರಾತ್ರಿ 10 ಗಂಟೆ ಸಮಾರಿಗೆ ಲಾರಿ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡವರನ್ನು ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವೇಶ್ಯಾವಾಟಿಕೆ ಮಾಡಿಸುವವರಿಂದಲೂ, ಬಡ್ಡಿ ದಂಧೆಕೋರರಿಂದಲೂ ಪೊಲೀಸರು ಹಣ ವಸೂಲಿ ಮಾಡ್ತಾರೆ: ಶಾಸಕ ಬೆಲ್ಲದ
ಧಾರವಾಡ: ಹಣ ಕೊಟ್ಟು ವರ್ಗಾವಣೆ ಮಾಡಿಕೊಂಡು ಬಂದ ಪೊಲೀಸ್ ಅಧಿಕಾರಿಗಳು ಕಳ್ಳ, ಕಾಕರಿಂದ, ಬಡ್ಡಿ ದಂಧೆಕೋರರಿಂದ ಹಾಗೂ ವೇಶ್ಯಾವಾಟಿಕೆ ಮಾಡಿಸುವವರಿಂದಲೂ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಪರಾಧ ಕೃತ್ಯಗಳು ಆಗಲು ಎರಡು ಕಾರಣಗಳಿವೆ. ಒಬ್ಬರು ಹುಟ್ಟುತ್ತಲೇ ಕ್ರೈಂ ಮಾಡಿಕೊಂಡು ಬಂದವರು ಮತ್ತೊಬ್ಬರು ಬಡ್ಡಿ ದಂಧೆಕೋರರಿಂದ ಕ್ರೈಂಗಳು ಆಗುತ್ತಿವೆ. ಬಡ್ಡಿ ದಂಧೆ ಮಾಡುವವರು ಫೈನಾನ್ಸ್ ಕಂಪೆನಿಯಿಂದ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಫೈನಾನ್ಸ್ ಕಂಪೆನಿಗಳು ಸರ್ಕಾರದಿಂದ ಇಂತಿಷ್ಟೆ ಬಡ್ಡಿ ವಸೂಲಿ ಮಾಡಬೇಕು ಎಂಬ ನಿಯಮ ಹೇರುತ್ತದೆ. ಆದರೆ, ಅವಳಿನಗರದಲ್ಲಿ ಕಾನೂನು ಬಾಹಿರ ಬಡ್ಡಿ ದಂಧೆ ನಡೆಯುತ್ತಿದೆ ಎಂದರು. ಪೊಲೀಸರು ಕೂಡ ಬಡ್ಡಿ ದಂಧೆಕೋರರ ಜೊತೆ ಶಾಮೀಲಾಗಿದ್ದಾರೆ. ದಂಧೆಕೋರರು ಬಡ್ಡಿ, ಚಕ್ರಬಡ್ಡಿ ಸಹಿತ ಸುಲಿಗೆ ಮಾಡುತ್ತಿದ್ದಾರೆ. ಸಾಲ ಕೊಟ್ಟವರು ಸಾಲ ವಸೂಲಿ ಮಾಡಲು ಅಟ್ಯಾಕ್ ಮಾಡುವ ಕೆಲಸಕ್ಕೆ ಇಳಿಯುತ್ತಾರೆ. ಡ್ರಗ್ಸ್ ಸೇವಿಸಿ ಕೊಲೆ, ಸುಲಿಗೆ ಮಾಡಲು ಇಳಿಯುತ್ತಿದ್ದಾರೆ ಎಂದರು. ಪೊಲೀಸ್...
ಮೀಟರ್ ಬಡ್ಡಿ ಮಾಫಿಯಾಗೆ ಬಲೆ ಬೀಸಿದ ಪೊಲೀಸ್ರು, 25 ಬಡ್ಡಿ ದಂಧೆಕೋರರ ಬಂಧನ..!
ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಮೀಟರ್ ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ಭರ್ಜರಿ ಯುದ್ಧ ಸಾರಿದ್ದಾರೆ. ಪರಿಣಾಮ 25 ಮೀಟರ್ ಬಡ್ಡಿ ದಂಧೆಕೋರರನ್ನು ಹೆಡೆಮುರಿ ಕಟ್ಟಿದ್ದಾರೆ. ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಮೀಟರ್ ಬಡ್ಡಿ ಹಾವಳಿಯ ಬಗ್ಗೆ ನೋವು ತೋಡಿಕೊಂಡಿದ್ದರಲ್ಲದೇ ನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡುವಂತೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ತಮ್ಮ ಠಾಣೆ ವ್ಯಾಪ್ತಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಪತ್ತೆಗೆ ಮುಂದಾಗಿ ಹುಬ್ಬಳ್ಳಿ, ಧಾರವಾಡ ಸೇರಿದಂತೆ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ 7 ಪ್ರಕರಣ ದಾಖಲಿಸಿ 25 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಧಾರವಾಡದ ಉಪನಗರ ಠಾಣೆ-2, ಶಹರ ಠಾಣೆ-2, ಪ್ರಕರಣ ವಿದ್ಯಾನಗರ ಠಾಣೆ-2 ಹಾಗೂ ಹುಬ್ಬಳ್ಳಿ ಬೆಂಡಿಗೇರಿ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿವೆ. ಬಂಧಿತರಿಂದ 10 ದ್ವಿಚಕ್ರ ವಾಹನಗಳು, 10 ಮೊಬೈಲ್, ಹರಿತವಾದ ಆಯುಧ, ಮೀಟರ್ ಬಡ್ಡಿ ದಂಧೆಯ ವಿವರ ನಮೂದಿಸಿದ ದಾಖಲೆಗಳು, ಬಾಂಡ್ ಗಳನ್ನು ಜಪ್ತು ಮಾಡಲಾಗಿದೆ...
ಕಾತೂರು ಅರಣ್ಯ ವಲಯದ RFO ಮಂಜುನಾಥ್ ನಾಯ್ಕ್ ಎತ್ತಂಗಡಿ, ವೀರೇಶ್ ಈಗ ನೂತನ RFO..!
ಮುಂಡಗೋಡ ತಾಲೂಕಿನ ಕಾತೂರು ಅರಣ್ಯ ವಲಯದ RFO ಮಂಜುನಾಥ್ ನಾಯ್ಕ್ ರನ್ನು ವರ್ಗಾವಣೆ ಮಾಡಲಾಗಿದೆ. ಯಲ್ಲಾಪುರದ ಇಡಗುಂದಿ ಅರಣ್ಯ ವಲಯಕ್ಕೆ ನಿಯುಕ್ತಿ ಮಾಡಲಾಗಿದ್ದು ಇವ್ರ ಜಾಗಕ್ಕೆ ಅಂದ್ರೆ ಕಾತೂರು ಅರಣ್ಯ ವಲಯಕ್ಕೆ ವೀರೇಶ್ ಎಂಬುವವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಮುಂಡಗೋಡ ಪ.ಪಂಚಾಯತಿಯ ಮುಚ್ಚಂಡಿ ಸಾಹೇಬ್ರು ವರ್ಗವಾಗಿ 20 ದಿನ ಆಯ್ತು..! ಆದ್ರೂ ಇಲ್ಲೇ ಇದಾರಲ್ರಿ..? ಅದ್ಯಾರ ಕೃಪೆ..?
ಮುಂಡಗೋಡ ಪಟ್ಟಣ ಪಂಚಾಯತಿಯ ಬಿಲ್ ಕಲೆಕ್ಟರ್ ಮಂಜುನಾಥ್ ಮುಚ್ಚಂಡಿ ಅಂತೂ ಇಂತೂ ಟ್ರಾನ್ಸಪರ್ ಆಗಿದ್ದಾರೆ. ಜುಲೈ 31 ರಂದೇ ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದ್ದರೂ ಸಾಹೇಬ್ರು ಮಾತ್ರ ಇನ್ನೂ ಜಾಗ ಕದಲಿಸಿಲ್ಲ. ಅದ್ಯಾರ ಕೃಪೆಯೋ ಅಥವಾ, ತಮಗಿರೋ ಭಾರೀ ಪ್ರಭಾವ ಬಳಸಿ ಇಲ್ಲೇ ಮುಂದುವರಿಯೋ ಮಹಾ ಪ್ಲ್ಯಾನೋ ಯಾರಂದ್ರೆ ಯಾರಿಗೂ ಅರ್ಥವಾಗಿಲ್ಲ. ಹೀಗಾಗಿ, ಸಾರ್ವಜನಿಕ ವಲಯದಲ್ಲಿ ಇದು ಭಾರೀ ಚರ್ಚೆಗೆ ಕಾರಣವಾಗ್ತಿದೆ. ಗುಸು, ಗುಸು ಪಿಸು, ಪಿಸು ನಡೀತಿದೆ..! ಅಸಲು, ಸಾಕಷ್ಟು ಆಕ್ರೋಶಗಳು, ಆರೋಪಗಳು ಮಾರ್ದನಿಸಿದ ಹಿನ್ನೆಲೆಯಲ್ಲಿ, ಮುಚ್ಚಂಡಿ ಸಾಹೇಬ್ರನ್ನು ಸರ್ಕಾರ ವರ್ಗಾವಣೆಗೊಳಿಸಿದೆ ಅನ್ನೊ ಮಾಹಿತಿ ಸಿಕ್ಕಿದೆ. ಅಂದಹಾಗೆ, ಸರ್ಕಾರ ಇವರನ್ನು ವರ್ಗಾವಣೆಗೊಳಿಸಿ ಮುಂದಿನ ಕಾರ್ಯಸ್ಥಳವನ್ನೇ ನೀಡಿಲ್ಲ. ಆದ್ರೆ, ಮುಂದೆ ಸ್ಥಳ ಸೂಚಿಸುವ ವರೆಗೂ ಬೆಂಗಳೂರಿನ ಕೇಂದ್ರ ಸ್ಥಾನದಲ್ಲಿ ಇರುವಂತೆ ಸೂಚಿಸಲಾಗಿದೆ. ಹೀಗಾಗಿ, ಶಿರಿಸಿಯಿಂದ ಬರುವ ಹುಚ್ಚಯ್ಯ ಹಿರೇಮಠರು ಖೋ… ಅಂದಕೂಡಲೇ ಮುಚ್ಚಂಡಿ ಸಾಹೇಬ್ರು ಬೆಂಗಳೂರಿನ ಬಸ್ ಹತ್ತಬೇಕಿದೆ. ಜನಾಕ್ರೋಶವಿತ್ತು..! ಅಸಲು, ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಒಂದಿಷ್ಟು ಮುಖಗಳು ಮುಂಡಗೋಡಿಗರ ಕಣ್ಣು ಕೆಂಪಗಾಗಿಸಿವೆ....
ಶಿಡ್ಲಗುಂಡಿ ಬಸ್ ಸ್ಟಾಪ್ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆ! ಯಾರಿಗಾದ್ರೂ ಈತನ ಗುರುತು ಇದ್ರೆ ಮಾಹಿತಿ ನೀಡಿ..
ಮುಂಡಗೋಡ ತಾಲೂಕಿನ ಶಿಡ್ಲಗುಂಡಿ ಗ್ರಾಮದ ಬಸ್ ಸ್ಟಾಪ್ ಹತ್ತಿರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 60-65 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು ಯಾರಿಗಾದ್ರೂ ಈತನ ಬಗ್ಗೆ ಗುರುತು ಇದ್ರೆ ಮುಂಡಗೋಡ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ. ಮುಂಡಗೋಡ ಪೊಲೀಸ್ ಠಾಣೆ ಫೋನ್ ನಂಬರ್ 08301 222211 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕ್ರೈ ಪಿಎಸ್ಐ ಹೆಚ್.ಬಿ.ಕುಡುಗುಂಟಿ ತಿಳಿಸಿದ್ದಾರೆ
ಪದವಿ ಪೂರ್ವ ಕಾಲೇಜುಗಳಲ್ಲಿ ಪೊಕ್ಸೋ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ- ಹೆಚ್ಚು ಮೊಬೈಲ್ ಬಳಕೆಯಿಂದಲೇ ಡೇಂಜರ್- ಡಾ.ತಿಪ್ಪೇಸ್ವಾಮಿ ಕೆ.ಟಿ. ಆತಂಕ
ಕಾರವಾರ; ರಾಜ್ಯದಲ್ಲಿ ಅತೀ ಹೆಚ್ಚು ಪೋಕ್ಸೋ ಪ್ರಕರಣ ಗಳು 18 ವರ್ಷದೊಳಗಿನ ವಯೋಮಿತಿಯಲ್ಲಿ ಕಂಡು ಬರುತ್ತಿರುವುದರಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾಗ್ರತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಜಾಗೃತಿ ಮೂಡಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಕರೆ ನೀಡಿದ್ರು. ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 18 ವರ್ಷದೊಳಗಿನವರೂ ಕೂಡಾ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವ್ಯಾಪ್ತಿಗೆ ಬರಲಿದ್ದು, ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ 44 ಪೋಕ್ಸೋ ಪ್ರಕರಣಗಳು ದಾಖಲಾಗಿದೆ. ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೋಕ್ಸೋ ಪ್ರಕರಣಗಳಿಗೆ ಸಿಲುಕುತ್ತಿದ್ದಾರೆ. ಟೀನೇಜ್ ಪ್ರೆಗ್ನೆನ್ಸಿ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ. ಆದ್ದರಿಂದ ಎಲ್ಲಾ ಪದವಿ ಪೂರ್ವ ಕಾಲೇಜುಗಳು, ಐ.ಟಿ.ಐ . ಡಿಪ್ಲೋಮೋ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪೋಕ್ಸೋ ಕುರಿತಂತೆ ಹೆಚ್ಚಿನ ಅರಿವು ಮೂಡಿಸಬೇಕು ಎಂದ ಅವರು, ಈ...
ಜಸ್ಟ್ ಪೋನಿನಲ್ಲಿ ಮಹಿಳೆ ಜೊತೆ ಮಾತಾಡಿದ ಅಂತಾ ಮೂಳೆ ಮುರಿಯುವಂಗೆ ಹೊಡೆದ್ರು..!
ಧಾರವಾಡ: ಮಹಿಳೆ ಜೊತೆ ಪೋನಿನಲ್ಲಿ ಮಾತನಾಡಿದ್ದಾನೆಂದು ಸಂಶಯ ಪಟ್ಟು ಟಂಟಂ ಚಾಲಕನ ಮೇಲೆ ಒಂದೇ ಕುಟುಂಬದವರಿಂದ ಹಲ್ಲೆ ನಡೆದಿದೆ. ಧಾರವಾಡ ತಾಲೂಕಿನ ವೆಂಕಟಾಪೂರ ಗ್ರಾಮದ ಮಾವಿನ ತೋಟದಲ್ಲಿ ಘಟನೆ ನಡೆದಿದೆ. ಇಮಾಮ್ ಸಾಬ್ ದೇವರಮನೆ (34) ಎನ್ನುವ ಟಂಟಂ ಚಾಲಕನ ಮೇಲೆ, ಸುಮಾರು 10 ಜನರಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ತೀವ್ರ ಹಲ್ಲೆಗೆ ಒಳಗಾದ ಇಮಾಮಸಾಬ್ ನ ಎರಡು ಕೈ ಮುರಿತಗೊಂಡಿವೆ. ಎಲುಬು ಮುರಿಯುವಂತೆ ಹೊಡೆದು ಕೈ ಮುರಿದಿರುವ ದುಷ್ಕರ್ಮಿಗಳು. ಕೊಟೂರು ಗ್ರಾಮದ ಅಗಸಿಮನಿ ಎಂಬ ಕುಟುಂಬದ ಹತ್ತು ಜನರ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಅಗಸಿಮನಿ ಕುಟುಂಬದ ಮಹಿಳೆ ಜೊತೆ ಟಂಟಂ ಚಾಲಕ ಇಮಾಮ್ ಮಾತಾಡಿದ್ದಾನೆ ಎಂದು ಸಂಶಯ ಪಟ್ಟು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಸ್ಲಂ, ಇಸಾಕ್, ಶಕೀಲ್, ಅಪ್ಪಲಾಲ್, ನಿಸಾರ್, ಹಜರುದ್ದೀನ್, ಮುಜಮೀಲ್ ಸೇರಿ ಒಟ್ಟು 10 ಜನರಿಂದ ಹಲ್ಲೆ ನಡೆದಿದೆ. ಹಲ್ಲೆ ಮಾಡಿದ 10 ಜನರ ಮೇಲೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ...
ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷೆ ಜಯಸುಧಾ ಭೋವಿಗೆ ಮೊದಲ ದಿನವೇ ಹೈಕೋರ್ಟ್ ಶಾಕ್..! ಮೀಸಲಾತಿಗೆ ತಡೆಯಾಜ್ಞೆ..!
ಮುಂಡಗೋಡ ಪಟ್ಟಣ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಜಯಸುಧಾ ಭೋವಿ ಆಯ್ಕೆಯಾಗಿದ್ದಾರೆ. ಆದ್ರೆ, ಅಧ್ಯಕ್ಷರಾದ ಮೊದಲ ದಿನವೇ ಶಾಕ್ ಎದುರಾಗಿದೆ. ಮುಂಡಗೋಡ ಪಟ್ಟಣ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಗೆ, ಮಾನ್ಯ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ. ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಅದರ ವಿರುದ್ಧ ನಾಲ್ವರು ಪಟ್ಟಣ ಪಂಚಾಯತಿ ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ, ವಿಚಾರಣೆ ನಡಸಿರೊ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ. ಹೀಗಾಗಿ, ಅಧ್ಯಕ್ಷ ಪದವಿಗೇರಿದ್ರೂ ಜಯಸುಧಾ ಭೋವಿ ಮೇಡಂ ಸದ್ಯ ಕೋರ್ಟ್ ಮುಂದಿನ ಆದೇಶದ ವರೆಗೂ ನಾಮಕೆವಾಸ್ತೆ ಅನ್ನುವಂತಾಗಿದೆ..? ಅಸಲು, ಅಚ್ಚರಿಯೆಂಬಂತೆ ಕೊನೆ ಕ್ಷಣದಲ್ಲಿ ಅಧ್ಯಕ್ಷ ಪದವಿಗೇರಿದ್ದ ಜಯಸುಧಾ ಭೋವಿ ಎರಡನೇ ಬಾರಿ ಹುದ್ದೆ ಅಲಂಕರಿಸಿದ್ದಾರೆ. ಇನ್ನು, ಉಪಾಧ್ಯಕ್ಷರಾಗಿ ರಹಿಮಾಬಾನು ಕುಂಕೂರ್ ನಿರಾಯಾಸವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಸದಸ್ಯರಾದ ರಝಾ ಖಾನ್ ಪಠಾಣ್, ಶಿವರಾಜ್ ಸುಬ್ಬಾಯವರ್, ಫಣಿರಾಜ್ ಹದಳಗಿ ಸೇರಿದಂತೆ ಹಲವರು ಕೋರ್ಟ್ ಮೆಟ್ಟಿಲೇರಿದ್ದರು ಅನ್ನೊ ಮಾಹಿತಿ ಲಭ್ಯವಾಗಿದೆ.