ಪ್ರವೀಣ್ ಶವಯಾತ್ರೆ ವೇಳೆ ಲಾಠಿ ಬೀಸಿದ್ದ ಇಬ್ಬರು ಪಿಎಸ್ಐಗಳ ವರ್ಗಾವಣೆ..!

ಪ್ರವೀಣ್ ಶವಯಾತ್ರೆ ವೇಳೆ ಲಾಠಿ ಬೀಸಿದ್ದ ಇಬ್ಬರು ಪಿಎಸ್ಐಗಳ ವರ್ಗಾವಣೆ..!

ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಶವಯಾತ್ರೆ ವೇಳೆ ಲಾಠಿ ಚಾರ್ಜ್ ಮಾಡಿದ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣೆಯ ಪಿಎಸ್ ಐಗಳನ್ನು ವರ್ಗಾವಣೆ ಮಾಡಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ. ಬೆಳ್ಳಾರೆಗೆ ನೂತನ ಪಿಎಸೈ ಆಗಿ ಕುಂದಾಪುರ ಠಾಣೆಯ ಸುಹಾಸ್ ಹಾಗೂ ವಿಟ್ಲ ಠಾಣಾ ಪಿಎಸ್‌ಐ ಆಗಿದ್ದ ಮಂಜುನಾಥ್ ಅವರನ್ನು ಸುಬ್ರಹ್ಮಣ್ಯ ಠಾಣೆಗೆ ನೇಮಕ ಮಾಡಲಾಗಿದೆ. ವರ್ಗಾವಣೆಯಾದ ಪಿಎಸೈಗಳಿಗೆ ಜಾಗ ತೋರಿಸದೇ ಮಂಗಳೂರು ಐಜಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸನವಳ್ಳಿ ಭಾಗದಲ್ಲಿ ಕಾಡಾನೆಗಳ ಹಿಂಡು, ಗದ್ದೆಗಳಲ್ಲಿ ಗಜರಾಜನ ಹೆಜ್ಜೆ ಗುರುತು ಪತ್ತೆ..! ಆತಂಕದಲ್ಲಿ ರೈತರು..!!

ಸನವಳ್ಳಿ ಭಾಗದಲ್ಲಿ ಕಾಡಾನೆಗಳ ಹಿಂಡು, ಗದ್ದೆಗಳಲ್ಲಿ ಗಜರಾಜನ ಹೆಜ್ಜೆ ಗುರುತು ಪತ್ತೆ..! ಆತಂಕದಲ್ಲಿ ರೈತರು..!!

 ಮುಂಡಗೋಡ: ತಾಲೂಕಿನ ಸನವಳ್ಳಿ ಭಾಗದಲ್ಲಿ ಕಾಡಾನೆಗಳ ಹಿಂಡು ಠಿಕಾಣಿ ಹೂಡಿದೆಯಾ..? ಇಂತಹದ್ದೊಂದು ಅನುಮಾನ ಈ ಭಾಗದ ರೈತರಿಗೆ ನಿದ್ದೆಗೆಡಿಸಿದೆ. ನಿನ್ನೆ ರಾತ್ರಿ ಸನವಳ್ಳಿ ಭಾಗದ ಕಾಡಂಚಿನ ಗದ್ದೆಗಳಲ್ಲಿ ಕಾಡಾನೆಗಳು ಓಡಾಡಿ ಹೋಗಿರೋ ಕುರುಹುಗಳು ಸಿಕ್ಕಿವೆ. ಸನವಳ್ಳಿಯ ಫಕ್ಕೀರಪ್ಪ ಬೋಕಿಯವರ್, ಪಕ್ಕಿರೇಶ್ ಕೆರಿಹೊಲದವರ, ರಮೇಶ್ ಅರಶೀಣಗೇರಿಯವರ ನಾಟಿ‌ ಮಾಡಿರೋ ಬತ್ತದ ಗದ್ದೆಗಳಲ್ಲಿ, ಗೋವಿನಜೋಳದ ಗದ್ದೆಗಳಲ್ಲಿ ಆನೆಗಳು ನಡೆದಾಡಿರೋ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಇನ್ನು ಅಡಿಕೆ ತೋಟದಲ್ಲಿ ನುಗ್ಗಿರೋ ಆನೆಗಳು ಕೆಲವು ಅಡಿಕೆ ಗಿಡಗಳಿಗೆ ಹಾನಿ ಮಾಡಿವೆ. ಹೀಗಾಗಿ ಈ ಭಾಗದ ರೈತರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಅಂತಾ ರೈತರ ಆಗ್ರಹವಾಗಿದೆ.

ಮತ್ತೆ ಭಾರೀ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ..!

ಮತ್ತೆ ಭಾರೀ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ..!

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ಮಹಾಮಳೆಯ ಗಂಡಾಂತರ ಶುರುವಾಗಲಿದೆಯಾ ಅನ್ನೋ ಆತಂಕ ಶುರುವಾಗಿದೆ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಆ.1ರ ಅವಧಿಯೊಳಗೆ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮತ್ತೆ ಎಚ್ಚರಿಸಿದೆ. ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಜಾರ್ಖಂಡ, ಬಿಹಾರ ಹಾಗೂ ಜಮ್ಮು- ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ. ಆದರೆ ಕರ್ನಾಟಕ, ತಮಿಳುನಾಡು, ಪಂಜಾಬ್, ಹರಿಯಾಣಾ, ಹಿಮಾಚಲಪ್ರದೇಶ, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಿ ಕೇಂದ್ರೀಕೃತ ಮೋಡಗಳಿಂದ ಭೀಕರ ಪ್ರಮಾಣದ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಗಳು ತಿಳಿಸಿವೆ.

ನಂದಿಕಟ್ಟಾ ಗ್ರಾಮದಲ್ಲಿ ಬಾಲಕನಿಗೆ ಕಚ್ಚಿದ ಉರಿಮಂಡಲ ಹಾವು, ಕಿಮ್ಸ್ ಗೆ ದಾಖಲು..!

ನಂದಿಕಟ್ಟಾ ಗ್ರಾಮದಲ್ಲಿ ಬಾಲಕನಿಗೆ ಕಚ್ಚಿದ ಉರಿಮಂಡಲ ಹಾವು, ಕಿಮ್ಸ್ ಗೆ ದಾಖಲು..!

ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ 16 ವರ್ಷದ ಬಾಲಕನಿಗೆ ಉರಿಮಂಡಲ ಹಾವು ಕಚ್ಚಿದೆ. ಪರಿಣಾಮ ಗಾಯಗೊಂಡ ಬಾಲಕನಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ‌. ನಂದಿಕಟ್ಟಾ ಗ್ರಾಮದಲ್ಲಿ ಸಂಜೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಕಟ್ಟಿಗೆ ಮೇಲೆ ಕಾಲಿಟ್ಟ ಬಾಲಕ ನಂದನ್ ರವಿ ತೇರಗಾಂವ್(16) ಎಂಬುವವನಿಗೆ ಕಟ್ಟಿಗೆಯಡಿ ಇದ್ದ ಹಾವು ಕಾಲಿಗೆ ಕಚ್ಚಿದೆ‌. ತಕ್ಷಣವೇ ಬಾಲಕನನ್ನು ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ‌. ಅಲ್ಲಿಂದ ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಬಾಲಕನ ಆರೋಗ್ಯ ಸ್ಥಿರವಾಗಿದೆ ಅಂತಾ ಕುಟುಂಬದ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಂಗಳೂರಿನ ಸುರತ್ಕಲ್ ನಲ್ಲಿ ಮತ್ತೊಂದು ಬರ್ಬರ ಹತ್ಯೆ, ತಲವಾರನಿಂದ ಕೊಚ್ಚಿ ಯುವಕನ ಕೊಲೆ..!

ಮಂಗಳೂರಿನ ಸುರತ್ಕಲ್ ನಲ್ಲಿ ಮತ್ತೊಂದು ಬರ್ಬರ ಹತ್ಯೆ, ತಲವಾರನಿಂದ ಕೊಚ್ಚಿ ಯುವಕನ ಕೊಲೆ..!

 ಮಂಗಳೂರು: ಬೆಳ್ಳಾರೆಯಲ್ಲಿ ಪ್ರವೀಣ್ ಕೊಲೆಯ ಬೆನ್ನಲ್ಲೇ ಮಂಗಳೂರಿನ ಸುರತ್ಕಲ್ ಸಮೀಪ ಯುವಕನ ಬರ್ಬರ ಹತ್ಯೆ ನಡೆದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಮಂಗಳೂರಿನಲ್ಲಿ ಇದ್ದಾವಾಗಲೇ ಮತ್ತೊಂದು ಹೆಣ ಬಿದ್ದಿದೆ. ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಯುವಕನಿಗೆ ಹಿಗ್ಗಾಮುಗ್ಗಾ ದಾಳಿ ನಡೆಸಿ ಕೊಚ್ಚಿ ಹಾಕಿದ್ದಾರೆ. ಹಲ್ಲೆಗೊಳಗಾಗಿ ಮೃತಪಟ್ಟಿರೋ ಯುವಕನನ್ನು ಸುರತ್ಕಲ್ ಮಂಗಳಪೇಟೆ ನಿವಾಸಿ ಮೊಹಮ್ಮದ್ ಫಾಝಿಲ್ ಎಂದು ಗುರುತಿಸಲಾಗಿದೆ. ಚಪ್ಪಲಿ ಖರೀದಿಗೆ ಬಂದಿದ್ದ ಫಾಝಿಲ್ ಮೇಲೆ ಕಾರಿನಲ್ಲಿ ಬಂದಿದ್ದ ನಾಲ್ಕು ಜನ ದುಷ್ಕರ್ಮಿಗಳಿಂದ ದಾಳಿ ನಡೆದಿದೆ. ಅಂಗಡಿಯ ಎದುರಿನ ಜಗಲಿಯಲ್ಲೇ ತಲವಾರಿನಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದರು ಸಾಧ್ಯವಾಗಲಿಲ್ಲ. ಭಾರೀ ಪ್ರಮಾಣದಲ್ಲಿ ರಕ್ತ ಸ್ರಾವ ವಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಫಾಝಿಲ್ ನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಅವನ್ನಪ್ಪಿದ್ದಾನೆ ಎನ್ನಲಾಗಿದೆ. ಆದ್ರೆ ಈ ಭೀಕರ ಹತ್ಯೆಗೆ ಕಾರಣ ಏನು ಅಂತಾ ಇನ್ನು ತಿಳಿದು ಬಂದಿಲ್ಲ ಅನ್ನುವ ಮಾಹಿತಿ ಲಭ್ಯವಾಗಿದೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ....

ಕೊಪ್ಪದಲ್ಲಿ ವಿಷಕಾರಿ ಹಾವು ಕಚ್ಚಿ ರೈತ ಸಾವು..? ಭತ್ತಕ್ಕೆ ಔಷಧಿ ಸಿಂಪಡಿಸುವಾಗ ಘಟನೆ..!

ಕೊಪ್ಪದಲ್ಲಿ ವಿಷಕಾರಿ ಹಾವು ಕಚ್ಚಿ ರೈತ ಸಾವು..? ಭತ್ತಕ್ಕೆ ಔಷಧಿ ಸಿಂಪಡಿಸುವಾಗ ಘಟನೆ..!

 ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದಲ್ಲಿ ವಿಷಕಾರಿ ಹಾವು ಕಚ್ಚಿ ರೈತನೋರ್ವ ಮೃತಪಟ್ಟಿರೋ ಶಂಕೆ ವ್ಯಕ್ತವಾಗಿದೆ. ಭತ್ತದ ಗದ್ದೆಯಲ್ಲಿ ಔಷಧಿ ಸಿಂಪಡಿಸುವ ವೇಳೆ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದ್ದು, ಅಸಲು ಹಾವು ಕಚ್ಚಿಯೇ ಮೃತಪಟ್ಟಿದ್ದಾನಾ ಅಥವಾ ಬೇರೆ ಯಾವುದೋ ಕಾರಣಕ್ಕೆ ಮೃತಪಟ್ಟಿದ್ದಾನಾ..? ಮಾಹಿತಿ ಲಭ್ಯವಾಗಬೇಕಿದೆ.  ಕೊಪ್ಪ ಗ್ರಾಮದ ಚಂದ್ರು ಗಾಂಜಿ(56) ಎಂಬುವವನೇ ಮೃತಪಟ್ಟ ರೈತನಾಗಿದ್ದಾನೆ. ಇಂದು ಮುಂಜಾನೆ ತನ್ನ ಭತ್ತದ ಗದ್ದೆಯಲ್ಲಿ ಔಷಧಿ ಸಿಂಪಡಿಸಲು ಗದ್ದೆಗೆ ತೆರಳಿದ್ದ ಚಂದ್ರು ಮದ್ಯಾನದವರೆಗೂ ಭತ್ತಕ್ಕೆ ಔಷಧಿ ಸಿಂಪಡಿಸಿದ್ದಾನೆ. ಆದ್ರೆ ಅದ್ಯಾವಾಗ ಹಾವು ಕಚ್ಚಿದೆಯೋ ಗೊತ್ತಿಲ್ಲ. ಹಾವು ಕಚ್ಚಿರೋ ಬಗ್ಗೆ ಅರಿಯದ ರೈತ ಕೆಲ ಹೊತ್ತಿನಲ್ಲೇ ಗದ್ದೆಯಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಎನ್ನಲಾಗಿದೆ‌. ಆದ್ರೆ ಮದ್ಯಾನ 3 ಗಂಟೆ ಸುಮಾರಿಗೆ ಪಕ್ಕದ ಗದ್ದೆಯ ರೈತನೋರ್ವ ನೋಡಿದಾಗ, ಚಂದ್ರು ಗಾಂಜಿ ಗದ್ದೆಯಲ್ಲೇ ಬಿದ್ದಿರುವುದನ್ನು ಕಂಡಿದ್ದಾರೆ. ಹೀಗಾಗಿ, ತಕ್ಷಣವೇ ಆತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಅಷ್ಟೊತ್ತಿಗಾಗಲೇ ನಿಸ್ತೇಜ ಸ್ಥಿತಿಗೆ ತಲುಪಿದ್ದ ರೈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ, ಅರ್ಧ ದಾರಿಯಲ್ಲೆ...

ಸನವಳ್ಳಿ ಮಾರಿಕಾಂಬೆಯ ಆಭರಣ ಕದ್ದಿದ್ದ ಚಾಲಾಕಿ ಅರೆಸ್ಟ್, ಅಷ್ಟಕ್ಕೂ ಕಳ್ಳತನದ ಆರೋಪಿ ಯಾರು ಗೊತ್ತಾ..?

ಸನವಳ್ಳಿ ಮಾರಿಕಾಂಬೆಯ ಆಭರಣ ಕದ್ದಿದ್ದ ಚಾಲಾಕಿ ಅರೆಸ್ಟ್, ಅಷ್ಟಕ್ಕೂ ಕಳ್ಳತನದ ಆರೋಪಿ ಯಾರು ಗೊತ್ತಾ..?

 ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಶ್ರೀಮಾರಿಕಾಂಬಾದೇವಿ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಕೇಸ್ ಕೂಡ ಬಟಾ ಬಯಲಾಗಿದೆ. ಮುಂಡಗೋಡ ಪೊಲೀಸರ ಖಡಕ್ ತನಿಖೆಯಲ್ಲಿ ಆ ಗ್ರಾಮದಲ್ಲೇ ಅಡಗಿ ಕುಳಿತಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಈ ಮೂಲಕ ಪಿಐ ಸಿದ್ದಪ್ಪ ಸಿಮಾನಿ ಹಾಗೂ ಪಿಎಸ್ ಐ ಬಸವರಾಜ್ ಮಬನೂರು ಕಳ್ಳತನದ ಕೇಸ್ ಬಯಲು ಮಾಡಿದ್ದಾರೆ. ಮಳ್ಳನಂತಿದ್ದ ಕಳ್ಳ..! ಅಸಲಿಗೆ, ಊರ ದೇವಿಯ ಆಭರಣವನ್ನೇ ಎಗರಿಸಿ ಮಳ್ಳನಂತೆ ಕುಳಿತಿದ್ದ, ಸನವಳ್ಳಿ ಗ್ರಾಮದ ಮಹಾಂತೇಶ್ ಅರ್ಜುನ್ ಆರೆಗೊಪ್ಪ ಎಂಬುವ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ಈತನ ಬಗ್ಗೆ ಖಚಿತ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದ ಪಿಎಸ್ಐ ಬಸವರಾಜ್ ಮಬನೂರು ಮಾಲು ಸಮೇತ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ. ಅಂದಹಾಗೆ, ಜುಲೈ 26 ರಂದು ಸನವಳ್ಳಿ ಗ್ರಾಮದ ಗ್ರಾಮದೇವಿ ಮಾರಿಕಾಂಬೆ ದೇವಸ್ಥಾನದ ಬಾಗಿಲ ಬೀಗ ಮುರಿದು ದೇವಿಯ ಕೊರಳಲ್ಲಿದ್ದ ಸುಮಾರು 40 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಡಿಕೆ ಕಳ್ಳತನ ಕೇಸ್ ಬೇಧಿಸಿದ ಮುಂಡಗೋಡ ಪೊಲೀಸರು, ಕೊಪ್ಪ ಗ್ರಾಮದವನೇ ಅಡಿಕೆ ಕದ್ದವನಂತೆ..!

ಅಡಿಕೆ ಕಳ್ಳತನ ಕೇಸ್ ಬೇಧಿಸಿದ ಮುಂಡಗೋಡ ಪೊಲೀಸರು, ಕೊಪ್ಪ ಗ್ರಾಮದವನೇ ಅಡಿಕೆ ಕದ್ದವನಂತೆ..!

 ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಡಿಕೆ ಕಳ್ಳತನ ಮಾಡಿದ್ದ ಆರೋಪಿಯನ್ನು ರಾತ್ರೋ ರಾತ್ರಿ ಎಳೆದು ತಂದಿದ್ದಾರೆ. ಈ‌ ಮೂಲಕ ಪಿಐ ಸಿದ್ದಪ್ಪ ಸಿಮಾನಿ ಮತ್ತವರ ತಂಡ ಅಡಿಕೆ ಕಳ್ಳತನದ ಕೇಸ್ ಸಾರಾಸಗಟಾಗಿ ಬೇಧಿಸಿದೆ. ಕೊಪ್ಪ (ಇಂದೂರು) ಗ್ರಾಮದ ಫಕ್ಕಿರೇಶ ಮಲ್ಲಪ್ಪ ದೊಡ್ಮನಿ ಎಂಬುವವನೇ ಅಡಿಕೆ ಕಳ್ಳತನದ ಆರೋಪಿಯಾಗಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈತನನ್ನು ಖಚಿತ ಸುಳಿವಿನ ಮೇರೆಗೆ ಪಿಐ ಸಿದ್ದಪ್ಪ ಸಿಮಾನಿ, ಪಿಎಸ್ ಐ ಬಸವರಾಜ್ ಮಬನೂರು ಸೇರಿದಂತೆ ಮತ್ತವರ ತಂಡ ದಾಳಿ ಮಾಡಿ (ಇಂದೂರು)ಕೊಪ್ಪದಲ್ಲಿ ವಶಕ್ಕೆ ಪಡೆದಿದೆ. ಸಾಲ ತೀರಿಸಲು ಕಳ್ಳತನ..! ಅಂದಹಾಗೆ, ಇಂದೂರು ಕೊಪ್ಪ ಗ್ರಾಮದ ಆರೋಪಿ ಫಕ್ಕಿರೇಶ್ ದೊಡ್ಮನಿ ವಿಪರೀತ ಸಾಲ‌ಮಾಡಿಕೊಂಡಿದ್ದನಂತೆ. ಹೀಗಾಗಿ, ಹೇಗಾದ್ರೂ ಸರಿ ಸಾಲ ತೀರಿಸಬೇಕು ಅಂತಾ ಫಿಲ್ಡಿಗೆ ಇಳಿದಿದ್ದ ಈತ ಕೊನೆಗೆ ಕಳ್ಳತನದ ಸುಲಭ ಮಾರ್ಗ ಕಂಡುಕೊಂಡಿದ್ದನಂತೆ. ಕಬ್ಬಿಣದ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹಾಗೋ ಹೀಗೊ ಸಾಲದ ಬಾಬತ್ತು ಹೊಂದಿಸಿಕೊಳ್ಳುತ್ತಿದ್ದ ಆರೋಪಿಗೆ ಅಡಿಕೆಯ ಕಳ್ಳತನದ ಮತ್ತೊಂದು ಮಾರ್ಗ ಸಿಕ್ಕಿದೆ. ಹೀಗಾಗಿ,...

ಜನನ-ಮರಣ ನೋಂದಣಿ ನೂತನ ಆದೇಶ ಹಿಂಪಡೆಯಿರಿ, ಸರ್ಕಾರಕ್ಕೆ ಮುಂಡಗೋಡಿನ ವಕೀಲರ ಆಗ್ರಹ..!

ಜನನ-ಮರಣ ನೋಂದಣಿ ನೂತನ ಆದೇಶ ಹಿಂಪಡೆಯಿರಿ, ಸರ್ಕಾರಕ್ಕೆ ಮುಂಡಗೋಡಿನ ವಕೀಲರ ಆಗ್ರಹ..!

ಮುಂಡಗೋಡ : ಪಟ್ಟಣದಲ್ಲಿ ಇಂದು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ, ವಕೀಲರ ಸಂಘ ಮನವಿಯೊಂದನ್ನ ಅರ್ಪಿಸಿದೆ. ಜನನ-ಮರಣ ನೋಂದಣಿ ಸಂಬಂಧ ರಾಜ್ಯ ಸರ್ಕಾರದ ಅಧಿಸೂಚನೆ ವಾಪಸ್ ಪಡೆದು, ಈ ಹಿಂದಿನಂತೆ ಜೆ.ಎಮ್.ಎಫ್‌.ಸಿ. ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿಯನ್ನು ನೀಡುವಂತೆ ಆಗ್ರಹಿಸಿದ್ದಾರೆ. ಜನನ-ಮರಣ ನೋಂದಣಿ ಸಂದರ್ಭದಲ್ಲಿ ವಿಳಂಭ ಅಥವಾ ಬೇರೆ ಯಾವುದೋ ವಿವಾದಕ್ಕೆ ಸಂಬಂಧಿಸಿದಂತೆ, ತಿದ್ದುಪಡಿ ಅವಶ್ಯಕತೆ ಇದ್ದಲ್ಲಿ ಅಂತಹ ವ್ಯಕ್ತಿಗಳು ಈ ಹಿಂದೆ, ಜನನ-ಮರಣ ನೋಂದಣಿ ಕಾಯ್ದೆ ಕಲಂ, 13 ರ ಪ್ರಕಾರ ಸ್ಥಳೀಯ ಜೆ.ಎಮ್.ಎಫ್.ಸಿ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ನೀಡಿ, ನ್ಯಾಯಾಲಯದ ಆದೇಶದ ನಂತರ ಸಂಬಂಧಪಟ್ಟ ಪ್ರಾಧಿಕಾರಗಳು ಅಂತಹ ವ್ಯಕ್ತಿಯ ಜನನ-ಮರಣ ಪ್ರಮಾಣ ಪತ್ರ ನೀಡುತ್ತಿದ್ದವು. ಆದ್ರೆ, ಸದ್ಯ ಕರ್ನಾಟಕ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಈಗಿರುವ ಜೆ.ಎಮ್.ಎಫ್.ಸಿ. ನ್ಯಾಯಾಲಯದ ಅಧಿಕಾರವನ್ನು ತೆಗೆದು ಆಯಾ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ನೀಡಿದೆ. ಹೀಗಾಗಿ ಈ ಆದೇಶದ ವಿರುದ್ಧ ಅಸಮಾಧಾನಗೊಂಡಿರೋ ವಕೀಲರು, ಇದು ಸಾಮಾನ್ಯ ಜನರಿಗೆ ತೊಂದರೆ ನೀಡುವ ಮತ್ತು ಕ್ರಮ ಬದ್ದ ರೀತಿಯಲ್ಲಿ...

ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಕೇಸ್, ಇಬ್ಬರು ಆರೋಪಿಗಳು ಅರೆಸ್ಟ್..!

ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಕೇಸ್, ಇಬ್ಬರು ಆರೋಪಿಗಳು ಅರೆಸ್ಟ್..!

ಮಂಗಳೂರು: ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ ಕೊಟ್ಟಾರು ಹತ್ಯೆ ಕೇಸ್ ನಲ್ಲಿ ಇಬ್ಬರು ಆತೋಪಿಗಳು ಅರೆಸ್ಟ್ ಆಗಿದ್ದಾರೆ. ಝಾಕೀರ್ ಮತ್ತು ಮಹ್ಮದ್ ಶಫೀಕ್ ಎಂಬುವ ಇಬ್ಬರು ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ಮಾಡಲಾಗುತ್ತಿದೆ ಅಂತಾ ದಕ್ಷಿಣ ಕನ್ನಡ ಎಸ್ಪಿ ಹೃಷಿಕೇಶ್ ಸೋನಾವಣೆ ಹೇಳಿಕೆ ನೀಡಿದ್ದಾರೆ‌. ಬೆಳ್ಳಾರೆ ನಿವಾಸಿ ಶಫೀಕ್ ಹಾಗೂ ಸವಣೂರು ನಿವಾಸಿ ಝಾಕೀರ್ ನನ್ನು ಬಂಧಿಸಿರೋ ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಇನ್ನು ಬಂಧಿತ ಇಬ್ಬರೂ ಆರೋಪಿಗಳಿಗೆ PPI ಸಂಘಟನೆ ನಂಟು ಇದೆಯಾ ಅಂತಾ ವಿಚಾರಣೆ ನಡೆಸಲಾಗ್ತಿದೆ.

error: Content is protected !!