ಶಿರಸಿ: ನಗರದ ಭತ್ತದ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಚಿನ್ನ ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಉಷಾ ದಾಮೋದರ ಪೈ ಎಂಬುವ ಮಹಿಳೆಯೇ ಚಿನ್ನ ಕಳೆದುಕೊಂಡವರು. ಬಿಳಿ ಕಾರಿನಲ್ಲಿ ಬಂದ ದರೋಡೆಕೋರರು, ಕುಮಟಾಕ್ಕೆ ಹೋಗುವ ಮಾರ್ಗ ಕೇಳಿ ಮಹಿಳೆಯ ಕುತ್ತಿಗೆಯಲ್ಲಿನ ಸರ ಹರಿದು ಪರಾರಿಯಾಗಿದ್ದಾರೆ. ಸುಮಾರು 1,10,000 ರೂಪಾಯಿ ಮೌಲ್ಯದ ಚಿನ್ನದ ಸರ ದೋಚಿದ್ದಾರೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ***************************************
Top Stories
ಮುಂಡಗೋಡಿನಲ್ಲಿ ಇಂದು ಪೊಲೀಸ್ ಜನಸಂಪರ್ಕ ಸಭೆ..! ಎಸ್ಪಿ ಎಂ ನಾರಾಯಣ್ ರಿಂದ ಮಹತ್ವದ ಹೆಜ್ಜೆ..!!
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲು; ಉಸ್ತುವಾರಿ ಹೊತ್ತಿದ್ದ ಮುರುಗೇಶ್ ನಿರಾಣಿ ಸಾಹೇಬ್ರು ಏನ್ ಹೇಳಿದ್ರು ಗೊತ್ತಾ..?
ಹಾನಗಲ್ ಉಪ ಚುನಾವಣೆ ಫಲಿತಾಂಶ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಅಂತಾ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಪ್ರತಿಪಾದಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ಹೇಳಿಕೆ ನೀಡಿರೋ ಸಚಿವ, ಹಾನಗಲ್ ಕ್ಷೇತ್ರದಲ್ಲೂ ಗೆಲುವಿನ ವಿಶ್ವಾಸ ಇತ್ತು, ಮತದಾರರ ನಿರ್ಧಾರಕ್ಕೆ ತಲೆಬಾಗುತ್ತೇವೆ. ಸೋಲಿನ ಕಾರಣದ ಬಗ್ಗೆ ಆತ್ಮಾವಲೋಕನ ಮಾಡುತ್ತೇವೆ.ಹಾನಗಲ್ ನಲ್ಲಿ ಸೋಲು ಆಗಿದೆ. ಮಾಜಿ ಸಿಎಂ ಒಬ್ಬರು ಈ ಫಲಿತಾಂಶ ಮುಂದಿನ ಚುನಾವಣೆ ದಿಕ್ಸೂಚಿ ಎಂದಿದ್ದಾರೆ. ಅವರು ಮುಖ್ಯಮಂತ್ರಿ ಇದ್ದಾಗಲೂ ಉಪ ಚುನಾವಣೆಯಲ್ಲಿ ಸೋತಿದ್ರು. ಸಿಎಂ ಬಸವರಾಜ್ ಬೊಮ್ಮಾಯಿ ಸರ್ವತೋಮುಖ ಅಭಿವೃದ್ದಿಗೆ ಒತ್ತು ನೀಡಿದ್ದಾರೆ. ಎಲ್ಲ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತಿದ್ದಾರೆ, 2023 ರ ಚುನಾವಣೆಯಲ್ಲಿ ಪೂರ್ಣಬಹುಮತದ ಸರ್ಕಾರ ತರುವಲ್ಲಿ ಯಶಸ್ವಿ ಆಗುತ್ತಾರೆ ಅಂತಾ ವಿಶ್ವಾಸ ವ್ಯಕ್ತ ಪಡಿಸಿದ್ರು. *************************************** ಜಾಹೀರಾತುಗಳು
ಎಸಿಬಿ ಬಲೆಗೆ ಬಿದ್ದ PSI, ಬೈಕ್ ಹತ್ತಿ ಎಸ್ಕೇಪ್; ಪೊಲೀಸರನ್ನೇ ಬೆನ್ನತ್ತಿ ಹಿಡಿದ ಜನ..!
ತುಮಕೂರು: ಗುಬ್ಬಿ ತಾಲೂಕು ಸಿ.ಎಸ್.ಪುರ ಠಾಣೆಯಲ್ಲಿ ಇಂದ ಸಾರ್ವಜನಿಕರೇ ದಂಗಾಗುವಂತಹ ಘಟನೆ ನಡೆದಿದೆ. ಎಸಿಬಿ ದಾಳಿಯಿಂದ ತಪ್ಪಿಸಿಕೊಂಡು ಪಿಎಸ್ ಐ ಓಡಿ ಹೋಗಿದ್ದಾನೆ. ಹೀಗಾಗಿ, ಹಾಗೆ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಪಿಎಸ್ ಐ ರನ್ನು ಹಿಡಿಯಲು ಸಾರ್ವಜನಿಕರೇ ಬೆನ್ನತ್ತಿದ್ದಾರೆ. ಹಾಗೇ ಎಸಿಬಿಯಿಂದ ತಪ್ಪಿಸಿಕೊಂಡು ಓಡಿಹೋದ ಪಿಎಸ್ ಐ ಹೆಸರು, ಸೋಮಶೇಖರ್.. ಇವತ್ತು ನಡೆದಿದ್ದಿಷ್ಟು..! ಅಂದಹಾಗೆ, ಇವತ್ತು ಲಂಚಬಾಕತನದ ವಿರುದ್ಧ ಪಿಎಸ್ ಐ ಹಾಗೂ ಮುಖ್ಯಪೇದೆಯ ವಿರುದ್ಧ ಎಸಿಬಿಗೆ ದೂರು ಬಂದ ಹಿನ್ನೆಲೆ, ಎಸಿಬಿ ಅಧಿಕಾರಿಗಳು, ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದರು. ಸಿ.ಎಸ್.ಪುರ ಪಿಎಸ್ಐ ಮತ್ತು ಮುಖ್ಯ ಪೇದೆಯನ್ನು ಎಸಿಬಿ ಬಲೆಗೆ ಕೆಡವಿದ್ದರು. ಬರೋಬ್ಬರಿ 16 ಸಾವಿರ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿಯೇ ಬಲೆಗೆ ಬಿದ್ದಾಗಿತ್ತು. ಹೀಗಾಗಿ, ಎಸಿಬಿ ಅಧಿಕಾರಿಗಳು ಲಂಚಬಾಕ ಆರೋಪಿ ಪಿಎಸ್ ಐ ಸೋಮಶೇಖರ್ ನ್ನು, ವಶಕ್ಕೆ ಪಡೆದಿದ್ದರು. ಇನ್ನೇನು ವಿಚಾತಣೆ ಮುಗಿಸಿ ಜಸ್ಟ್ ಊಟ ಮಾಡೋಣ ಅಂತಾ ಎಸಿಬಿ...
ಕಾರವಾರದಲ್ಲಿ ಸಂಭ್ರಮದ ರಾಜ್ಯೋತ್ಸವ, ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ ಹೆಬ್ಬಾರ್..!
ಕಾರವಾರ: 66 ನೇ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಧ್ವಜಾರೋಹಣ ನೆರವೇರಿಸಿದ್ರು. ತೆರೆದ ವಾಹನದಲ್ಲಿ ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದ ಸಚಿವ ಹೆಬ್ಬಾರ್, ಸಮಾರಂಭದಲ್ಲಿ ಭಾಷಣ ಮಾಡಿದ್ರು. ಈ ವೇಳೆ ಶಾಸಕಿ ರೂಪಾಲಿ ನಾಯ್ಕ್ , ಜಿಲ್ಲಾಧಿಕಾರಿ ಮುಲೈ ಮುಹಿಲಿನ್, ನೂತನ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಸೇರಿ ಹಲವರು ಉಪಸ್ಥಿತರಿದ್ದರು. ಇನ್ನು, ಇಂದಿನ 66 ನೇ ರಾಜ್ಯೋತ್ಸವದ ಸಂಭ್ರಮ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಂಭ್ರಮಿಸಿದೆ. *************************************** ಜಾಹೀರಾತುಗಳು
ಇಂದೂರು ಕೊಪ್ಪದ ವ್ಯಕ್ತಿಯ ಶವ ಅಮರಗೋಳದಲ್ಲಿ ಪತ್ತೆ..! ರೈಲ್ವೆ ಹಳಿಯ ಪಕ್ಕದಲ್ಲೇ ಸತ್ತುಬಿದ್ದವನ ಸುತ್ತ ಅನುಮಾನದ ಹುತ್ತ..!
ಮುಂಡಗೋಡ: ತಾಲೂಕಿನ ಕೊಪ್ಪ (ಇಂದೂರು) ಗ್ರಾಮದ ವ್ಯಕ್ತಿಯೋರ್ವನ ಶವ ಹುಬ್ಬಳ್ಳಿ ಸಮೀಪದ ಅಮರಗೋಳ ಬಳಿ ರೈಲ್ವೆ ಹಳಿಯ ಪಕ್ಕದಲ್ಲಿ ದೊರೆತಿದೆ. ಮಂಜುನಾಥ್ ಬಸಪ್ಪ ಬೆಲವಂತರ(35) ಎಂಬುವವನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಅಮರಗೋಳ ಈತನ ಪತ್ನಿಯ ತವರೂರು, ಪತ್ನಿ ತವರು ಮನೆಯಲ್ಲೇ ಇದ್ದ ಕಾರಣಕ್ಕೆ,, ಕಳೆದ ಹತ್ತು ದಿನಗಳ ಹಿಂದೆ ಅಮರಗೋಳಕ್ಕೆ ಹೋಗಿದ್ದ ಮಂಜುನಾಥ್, ನಿನ್ನೆ ರಾತ್ರಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ. ಸಧ್ಯ ಸ್ಥಳಕ್ಕೆ ಭೇಟಿ ನೀಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಂದಿಗಟ್ಡಾ ಗ್ರಾಮದಲ್ಲೂ ನಟ ಪುನೀತ ರಾಜಕುಮಾರ್ ಗೆ ಅಭಿಮಾನಿಗಳ ಶೃದ್ದಾಂಜಲಿ..!
ಮುಂಡಗೋಡ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಶೃದ್ದಾಂಜಲಿ ಅರ್ಪಿಸಿದ್ರು. ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ರು. ನಟ ಪುನಿತ್ ಅಕಾಲಿಕಮರಣ ರಾಜ್ಯಕ್ಕೆ ತುಂಬಲಾರದ ನಷ್ಟ ಅಂತಾ ಶೋಕ ವ್ಯಕ್ತಪಡಿಸಿರೋ ಅಭಿಮಾನಿಗಳು ಅಪ್ಪು ಮತ್ತೊಮ್ಮೆ ಗುಟ್ಟಿ ಬಾ ಅಂತಾ ಘೋಷಣೆ ಕೂಗಿದ್ರು.
ಹುನಗುಂದ ಗ್ರಾಮದಲ್ಲೂ ನಟ ಪುನೀತ್ ರಾಜಕುಮಾರ್ ಗೆ ಅಭಿಮಾನಿಗಳ ಶೃದ್ದಾಂಜಲಿ..!
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದಲ್ಲಿ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಶೃದ್ದಾಂಜಲಿ ಅರ್ಪಿಸಿದ್ರು. ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ರು. ನಟ ಪುನಿತ್ ಅಕಾಲಿಕಮರಣ ರಾಜ್ಯಕ್ಕೆ ತುಂಬಲಾರದ ನಷ್ಟ ಅಂತಾ ಶೋಕ ವ್ಯಕ್ತಪಡಿಸಿರೋ ಅಭಿಮಾನಿಗಳು ಅಪ್ಪು ಮತ್ತೊಮ್ಮೆ ಗುಟ್ಟಿ ಬಾ ಅಂತಾ ಘೋಷಣೆ ಕೂಗಿದ್ರು. ಈ ವೇಳೆ ಗ್ರಾಪಂ ಸದಸ್ಯ ಈಶ್ವರಗೌಡ ಅರಳಿಹೊಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು..
ಮತ್ತೋರ್ವ ಅಪ್ಪು ಅಭಿಮಾನಿಯ ಆತ್ಮಹತ್ಯೆ..! ಪುಟ್ಟ ಮಗುವನ್ನೇ ಮರೆತ ಅಭಿಮಾನಿ..!!
ಚಿಕ್ಕಮಗಳೂರು: ನಟ ಪುನೀತ್ ಸಾವಿನಿಂದ ಮನನೊಂದು ಮತ್ತೋರ್ವ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ರಾಂಪುರದಲ್ಲಿ ನಡೆದಿದೆ. ಶರತ್ (30) ಆತ್ಮಹತ್ಯೆಮಾಡಿಕೊಂಡ ಅಭಿಮಾನಿಯಾಗಿದ್ದಾನೆ. ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುನೀತ್ ರಾಜಕುಮಾರ್ ವಿಧಿವಶರಾದ ಸುದ್ದಿ ತಿಲಕಿಯುತ್ತಿದ್ದಂತೆ ನಿನ್ನೆಯಿಂದಲೂ ಅಳುತ್ತಿದ್ದ ಶರತ್ಗೆ ಮನೆಯವರಿಂದ ಸಮಾಧಾನ ಹೇಳಿದ್ರೂ ನೋವು ಕಡೆ ನೆಯಾಗಿರಲಿಲ್ಲ ಟಿವಿ ನೋಡುತ್ತಿದ್ದವನು ಏಕಾಏಕಿ ರೂಮಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು, ಹೋಟೆಲ್ಗಳಿಗೆ ಮರದ ಹೊಟ್ಟು ತುಂಬುವು ಕೆಲಸ ಮಾಡುತ್ತಿದ್ದ ಶರತ್ ಗೆ ಒಂದು ಪುಟ್ಟ ಮಗುವಿದ್ದು, ಸಧ್ಯ ಪತ್ನಿ ಎಂಟು ತಿಂಗಳ ಗರ್ಭೀಣಿಯಾಗಿದ್ದಾರೆ. ಚಿಕ್ಕ ಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಂದೂರು ಹಾಗೂ ಹುನಗುಂದದಲ್ಲಿ ನಟ ಪುನೀತ್ ರಾಜಕುಮಾರ್ ಗೆ ಅಭಿಮಾನಿಗಳ ಶೃದ್ದಾಂಜಲಿ..!
ಮುಂಡಗೋಡ: ತಾಲೂಕಿನ ಇಂದೂರು ಹಾಗೂ ಹುನಗುಂದ ಗ್ರಾಮಗಳಲ್ಲಿ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಶೃದ್ದಾಂಜಲಿ ಅರ್ಪಿಸಿದ್ರು. ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ರು. ನಟ ಪುನಿತ್ ಅಕಾಲಿಕಮರಣ ರಾಜ್ಯಕ್ಕೆ ತುಂಬಲಾರದ ನಷ್ಟ ಅಂತಾ ಶೋಕ ವ್ಯಕ್ತಪಡಿಸಿರೋ ಅಭಿಮಾನಿಗಳು ಅಪ್ಪು ಮತ್ತೊಮ್ಮೆ ಹುಟ್ಟಿ ಬಾ ಅಂತಾ ಘೋಷಣೆ ಕೂಗಿದ್ರು.
ಆಹಾರ ಇಲಾಖೆಯ ಕಚೇರಿ ಮೇಲೆ ಎಸಿಬಿ ದಾಳಿ.! ಅಧಿಕಾರಿಯನ್ನು ವಶಕ್ಕೆ ಪಡೆದ ಎಸಿಬಿ..!
ಧಾರವಾಡದಲ್ಲಿ ಎಸಿಬಿ ದಾಳಿಯಾಗಿದೆ. ಆಹಾರ ನಾಗರಿಕ ಸರಬರಾಜು ಇಲಾಖೆಯ ಮೇಲೆ ದಾಳಿಯಾಗಿದ್ದು, ಸಾರ್ವಜನಿಕರಿಂದ ಹೆಚ್ಚು ಹಣ ತಗೆದುಕೊಳ್ಳುತ್ತಿದ್ದಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಆಹಾರ ಇಲಾಖೆಯ ಶಿರಸ್ತೇದಾರ ಶಿವಶಂಕರ ಹಿರೇಮಠ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ಹೀಗಾಗಿ, ಶಿರಸ್ತೇದಾರ ಶಿವಶಂಕರ್ ಹಿರೇಮಠರನ್ನು ವಶಕ್ಕೆ ಪಡೆದಿರೋ ಎಸಿಬಿ ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ.