ಮತ್ತೋರ್ವ ಅಪ್ಪು ಅಭಿಮಾನಿಯ ಆತ್ಮಹತ್ಯೆ..! ಪುಟ್ಟ ಮಗುವನ್ನೇ ಮರೆತ ಅಭಿಮಾನಿ..!!

ಚಿಕ್ಕಮಗಳೂರು: ನಟ ಪುನೀತ್ ಸಾವಿನಿಂದ ಮನನೊಂದು ಮತ್ತೋರ್ವ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ರಾಂಪುರದಲ್ಲಿ ನಡೆದಿದೆ.

ಶರತ್ (30) ಆತ್ಮಹತ್ಯೆ‌ಮಾಡಿಕೊಂಡ ಅಭಿಮಾನಿಯಾಗಿದ್ದಾ‌ನೆ. ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ‌. ಪುನೀತ್ ರಾಜಕುಮಾರ್ ವಿಧಿವಶರಾದ ಸುದ್ದಿ ತಿಲಕಿಯುತ್ತಿದ್ದಂತೆ ನಿನ್ನೆಯಿಂದಲೂ ಅಳುತ್ತಿದ್ದ ಶರತ್‍ಗೆ ಮನೆಯವರಿಂದ ಸಮಾಧಾನ ಹೇಳಿದ್ರೂ ನೋವು ಕಡೆ ನೆಯಾಗಿರಲಿಲ್ಲ‌

ಟಿವಿ ನೋಡುತ್ತಿದ್ದವನು ಏಕಾಏಕಿ ರೂಮಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು, ಹೋಟೆಲ್‍ಗಳಿಗೆ ಮರದ ಹೊಟ್ಟು ತುಂಬುವು ಕೆಲಸ ಮಾಡುತ್ತಿದ್ದ ಶರತ್ ಗೆ
ಒಂದು ಪುಟ್ಟ ಮಗುವಿದ್ದು, ಸಧ್ಯ ಪತ್ನಿ ಎಂಟು ತಿಂಗಳ ಗರ್ಭೀಣಿಯಾಗಿದ್ದಾರೆ.

ಚಿಕ್ಕ ಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!