ಕಾರವಾರದಲ್ಲಿ ಬೆಳ್ಳಂ ಬೆಳಗ್ಗೆ ಅಧಿಕಾರಿಗಳ ಮನೆಯ ಮೇಲೆ ಎಸಿಬಿ ದಾಳಿ ನಡೆಸಿ ಶಾಕ್ ನೀಡಿದೆ. ಕಾರವಾರದ ಎಸಿಬಿ ಡಿವೈ ಎಸ್ ಪಿ ಪ್ರಕಾಶ್ ನೇತ್ರತ್ವದ ತಂಡ ಹಾಗೂ ಹುಬ್ಬಳ್ಳಿಯ ಎಸಿಬಿ ಅಧಿಕಾರಿಗಳು ಪ್ರತ್ಯೇಕವಾಗಿ ಎರಡು ತಂಡಗಳ ಮೂಲಕ ದಾಳಿ ನಡೆಸಿದೆ. ಕುಮಟಾ ಮೂಲದ ಪಿ.ಡಬ್ಲು ಡಿ ಇಂಜಿನಿಯರ್ ರಾಜೀವ್ ನಾಯ್ಕ ಹಾಗೂ ಜಿಲ್ಲಾ ನೋಂದಣಾಧಿಕಾರಿ ಶ್ರೀಧರ್ ಎಸಿಬಿ ದಾಳಿಗೆ ಒಳಗಾದ ಅಧಿಕಾರಿಗಳಾಗಿದ್ದಾರೆ. ಕಾರವಾರ ನಗರದ ಎಂ.ಜಿ ರಸ್ತೆಯಲ್ಲಿರುವ ಬೃಂದಾವನ ಅಪಾರ್ಟ ಮೆಂಟ್, ಹಬ್ಬುವಾಡದ ಮನೆಯ ಮೇಲೆ ಎರಡು ತಂಡಗಳು ದಾಳಿ ನಡೆಸಿದ್ದು ಆಧಾಯಕ್ಕಿಂತ ಹೆಚ್ಚಿನ ಸಂಪತ್ತು ಹೊಂದಿದ ಹಿನ್ನಲೆಯಲ್ಲಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
Top Stories
ಮುಂಡಗೋಡಿನಲ್ಲಿ ಆರ್.ವಿ.ದೇಶಪಾಂಡೆ ಜನ್ಮದಿನ ಆಚರಣೆ, ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ..!
ಅಗಡಿಯಲ್ಲಿ ಜೋಡೇತ್ತುಗಳ ಕಳ್ಳತನ, ಕೊಟ್ಟಿಗೆಯಲ್ಲಿ ಕಟ್ಟಿದ್ದ ಎತ್ತುಗಳನ್ನೇ ಹೊತ್ತೊಯ್ದ ಕಳ್ಳರು..!
ಮುಂಡಗೋಡ ನೆಹರು ನಗರದಲ್ಲಿ ಜೇನುದಾಳಿ 6 ಜನರಿಗೆ ಗಾಯ, ಮೂವರು ಗಂಭೀರ..!
ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಕಾಲಿಗೆ ಪೊಲೀಸರ ಗುಂಡೇಟು
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಲಾರಿ, ಕಾರಿನಲ್ಲಿ ಇಬ್ಬರು ಸಿಲುಕಿ ನರಳಾಟ, ಹೊರತೆಗೆಯಲು ಹರಸಾಹಸ..!
ತಿಂಗಳಾಂತ್ಯಕ್ಕೆ ಹೆಬ್ಬಾರ್ ಹಾಗೂ ST ಸೋಮಶೇಖರ್, ಬಿಜೆಪಿ ಪಕ್ಷದಿಂದ ಉಚ್ಚಾಟನೆ ಗ್ಯಾರಂಟಿ- ಲಿಂಗರಾಜ ಪಾಟೀಲ್
ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ
ಇದುವರೆಗೆ 2500 ಕ್ಕೂ ಆಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್
SSLC ಪರೀಕ್ಷೆಗಳು ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲಿ, ಪೂರ್ವಭಾವಿ ಸಭೆಯಲ್ಲಿ ಡೀಸಿ ಲಕ್ಷ್ಮಿಪ್ರಿಯ ಅಧಿಕಾರಿಗಳಿಗೆ ತಾಕೀತು..!
ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!
ಹುನಗುಂದದಲ್ಲಿ ರೇಣುಕಾಚಾರ್ಯರ ಜಯಂತಿ ಉತ್ಸವ..!
ಬಂಕಾಪುರ ಬಳಿ ಮುಡಸಾಲಿ ವ್ಯಕ್ತಿಯ ಅನುಮಾನಾಸ್ಪದ ಸಾವು..? ಅಪಘಾತವಾ..? ಕೊಲೆಯಾ..?
ಹುನಗುಂದ ಗ್ರಾಪಂ PDO ಮಂಜುನಾಥ್ ಗೆ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿ..!
ಮಾರ್ಚ್ 9 ರಂದು ರವಿವಾರ ಕಾರವಾರದಲ್ಲಿ ಪೊಲೀಸ್ ರನ್ 2025ರ ಮ್ಯಾರಾಥಾನ್ 5K ಓಟ..!
ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ ಹೃದಯಾಘಾತದಿಂದ ನಿಧನ..!
ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ :ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ
ಭೀಮಾತೀರದಲ್ಲಿ ಸಾಂಸ್ಕೃತಿಕ ಸಂಭ್ರಮ, ಬರಗುಡಿ ಗ್ರಾಮದ ಜಾತ್ರೆಗೆ ಕ್ಷಣಗಣನೆ..! ಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪಾರಂಪರಿಕ ಮೆರಗು..!
ಟಿಬೇಟಿಯನ್ ಕಾಲೋನಿ ಬಳಿ ಜ. 18 ರಂದು ನಡೆದಿದ್ದ ಕಾರ್ ಮರಕ್ಕೆ ಡಿಕ್ಕಿ, ಉಲ್ಟಾ ಪಲ್ಟಾ ಕೇಸು..?
ನಂದಿಕಟ್ಟಾ ಸೊಸೈಟಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ..!
ಮುಂಡಗೋಡ ತಾಲೂಕಿನ ನಂದಿಕಟ್ಟಾ ಸೊಸೈಟಿಯ ನೂತನ ಅಧ್ಯಕ್ಷರಾಗಿ ಸುಧಾಕರ್ ಮೋರೆ, ಉಪಾಧ್ಯಕ್ಷರಾಗಿ ಬಸವಣ್ಣೆವ್ವ ಶಿವಪುತ್ರಪ್ಪ ಅಗಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಸೊಸೈಟಿ ನಿರ್ದೇಶಕರ ಮಧ್ಯ ನಡೆದ ಒಪ್ಪಂದದಂತೆ,ನಿಕಟ ಪೂರ್ವ ಅಧ್ಯಕ್ಷ ತುಕಾರಾಮ್ ಔಂಡೋಜಿ ಒಂದು ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರಿಂದ ಇಂದು ಚುನಾವಣೆ ಘೋಷಣೆ ಮಾಡಲಾಗಿತ್ತು, ಹಾಗಾಗಿ ಇಂದು ಸೊಸೈಟಿ ಹಾಲ್ ನಲ್ಲಿ ನಡೆದ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಯಾಗಿ, ಸುಧಾಕರ್ ಮೋರೆ ಅಧ್ಯಕ್ಷರಾಗಿ, ಬಸವಣ್ಣೆವ್ವ ಶಿವಪುತ್ರಪ್ಪ ಅಗಡಿ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಚುನಾವಣಾಧಿಕಾರಿಯಾಗಿ, ಶಿರಸಿಯ ಸಹಕಾರಿ ಸಂಘದ ಕ್ಷೇತ್ರ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗುಡಿಕೇರಿ ಕಾರ್ಯ ನಿರ್ವಹಿಸಿದರು. ಈ ವೇಳೆ ಸೊಸೈಟಿಯ ಕಾರ್ಯದರ್ಶಿಯಾದ ಅರ್ಜುನ ಪುರದವರ, ಹಾಗೂ ಸಿಬ್ಬಂದಿಗಳು, ಕಮೀಟಿಯ ನಿರ್ದೇಶಕರು, ಗ್ರಾಮ ಪಂಚಾಯತ್ ಸದ್ಯಸರಾದ ರಮೇಶ್ ನೇಮಣ್ಣನವರ, ಸಂತೋಷ ಬೋಸಲೆ, ಪರಶುರಾಮ್ ಕಬ್ಬೆರ್ ಊರಿನ ಪ್ರಮುಖರಾದ ಕಲ್ಲನಗೌಡ್ರ, ಪರಶುರಾಮ್ ಮೆಂತೆಕಾರ್, ನಿಂಗಣ್ಣ ಕವಟೆ, ಸೋಮಲಿಂಗ ಕಾಂಬಳೆ, ಮಂಜುನಾಥ್ ಮೋರೆ, ಕೇದಾರಿ ಮುಗಳಿ, ಸುರೇಶ ಕಮ್ಮಾರ್, ಸುಧೀರ್ ಕಾಂಬಳೆ, ಶಿವಾಜಿ...
ಮೈನಳ್ಳಿ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್, ಕೆಂದಲಗೇರಿಯ ವ್ಯಕ್ತಿಗೆ ಗಂಭೀರ ಗಾಯ..!
ಮುಂಡಗೋಡ: ತಾಲೂಕಿನ ಮೈನಳ್ಳಿ ಸಮೀಪದಲ್ಲಿ ಬೈಕ್ ಅಪಘಾತವಾಗಿದೆ. ಬೈಕ್ ಸವಾರನೊಬ್ಬ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಕೆಂದಲೆಗೇರಿ ಗ್ರಾಮದ ನೂರ್ ಅಹ್ಮದ್ (30) ಎಂಬುವವನೇ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಈತ ಕೆಂದಲಗೇರಿ ಗ್ರಾಮದಿಂದ ಯಲ್ಲಾಪುರ ರಸ್ತೆ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ, ಈ ವೇಳೆ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬವೂ ಮುರಿದಿದೆ. ಸದ್ಯ ಬೈಕ್ ಸವಾರನ ಸ್ಥಿತಿ ಗಂಭೀರವಾಗಿದ್ದು, ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹುನಗುಂದದಲ್ಲಿ ಅಪರಿಚಿತ, ಅರೆನಗ್ನ ವ್ಯಕ್ತಿಯ ತಿರುಗಾಟದ ಆತಂಕ, ಪೊಲೀಸರ ವಶಕ್ಕೆ ಒಪ್ಪಿಸಿದ ಗ್ರಾಮಸ್ಥರು..!
ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ಇಂದು ಸಂಜೆ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪರಿಚಿತ ವ್ಯಕ್ತಿಯೊಬ್ಬ ಅರೆನಗ್ನ ಸ್ಥಿತಿಯಲ್ಲಿ ಏಕಾಏಕಿ ಮನೆಗಳಿಗೆ ನುಗ್ಗಿ ಅವಾಚ್ಯವಾಗಿ ನಿಂದಿಸುತ್ತಿದ್ದ. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯನ್ನು ಕಂಡ ಜನ ಅಕ್ಷರಶಃ ಆತಂಕಕ್ಕೀಡಾಗಿದ್ದರು. ಆತ ಬಿಹಾರಿ..! ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಂಡುಬಂದ. ಆದ್ರೆ ಜನ ಮಾತ್ರ ಆತ ನಡೆದುಕೊಂಡ ರೀತಿ ನೋಡಿ ಭಯಭೀತಗೊಂಡು ಆತನನ್ನು ಕಳ್ಳ ಇರಬಹುದು ಅಂತ ಭಾವಿಸಿದ್ರು. ಹೀಗಾಗಿ, ತಕ್ಷಣವೇ 112 ಪೊಲೀಸರಿಗೆ ಕರೆ ಮಾಡಿದ್ರು. ಅಷ್ಟೊತ್ತಿಗಾಗಲೇ ಆ ವ್ಯಕ್ತಿಯನ್ನು ಹುಡುಕಿಕೊಂಡು ಟಿಬೇಟಿಯನ್ ವ್ಯಕ್ತಿಯೊಬ್ಬ ಬಂದಿದ್ದ. ಆ ಅಪರಿಚಿತ ವ್ಯಕ್ತಿಯನ್ನು ನೋಡಿ ಈತ ನಮ್ಮವನು ಅಂತಾ ಹೇಳಿದ. ಹೀಗಾಗಿ, ಆತ ಬಿಹಾರ ಮೂಲದವನು ಅಂತಾ ಗೊತ್ತಾಯ್ತು. ಕೆಲಸಕ್ಕೆ ಅಂತಾ ಟಿಬೇಟಿಯನ್ ಕಾಲೋನಿಗೆ ಬಂದಿದ್ದ ವ್ಯಕ್ತಿ ಬೆಳಿಗ್ಗೆಯಿಂದಲೇ ಮನೆಬಿಟ್ಟು ಎಲ್ಲೆಂದರಲ್ಲಿ ತಿರುಗಾಡುತ್ತಿದ್ದ. 112 ಪೊಲೀಸರು ಬಂದ್ರು.. ಅಪರಿಚಿತ ವ್ಯಕ್ತಿ, ಆತಂಕ ಸೃಷ್ಟಿಸಿದ್ದಾನೆ ಅನ್ನೊ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ 112...
ನ್ಯಾಸರ್ಗಿಯಲ್ಲಿ ವಿಷಕಾರಿ ಹಾವು ಕಚ್ಚಿ ಯುವಕ ದಾರುಣ ಸಾವು..!
ಮುಂಡಗೋಡ: ನ್ಯಾಸರ್ಗಿಯಲ್ಲಿ ಮೊಬೈಲ್ ನಲ್ಲಿ ಮಾತಾನಾಡುತ್ತ ಹಾವು ತುಳಿದ ಕಾರಣ ವಿಷಕಾರಿ ಹಾವು ಕಚ್ಚಿ ಯುವಕನೊರ್ವ ಮೃತಪಟ್ಟ ಘಟನೆ ನಡೆದಿದೆ. ಚಂದ್ರು ಗೂಳಪ್ಪ ಜಮಾತಿ(30) ಎಂಬ ಯುವಕನೇ ವಿಷಕಾರಿ ಹಾವಿಗೆ ಬಲಿಯಾಗಿದ್ದಾನೆ. ನಿನ್ನೆ ಬೆಳಿಗ್ಗೆ ತನ್ನ ಹಿತ್ತಲಿನಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಚಂದ್ರು, ವಿಷಕಾರಿ ಹಾವಿನ ಮೇಲೆ ಹೆಜ್ಜೆಯಿಟ್ಟಿದ್ದಾನೆ. ಹೀಗಾಗಿ, ಹಾವು ರೋಷದಿಂದ ಕಚ್ಚಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಂಡಗೋಡಿನಲ್ಲಿ ವಿ.ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ಶುರು..!
ಮುಂಡಗೋಡ: ತಹಶೀಲ್ದಾರ್ ಕಚೇರಿಯಲ್ಲಿ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿರುಸಿನ ಮತದಾನ ಶುರುವಾಗಿದೆ. ಬೆಳಗಿನಿಂದಲೂ ಶಿಕ್ಷಕರು ಬಂದು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಮತದಾನ ನಡೆಯುವ ತಹಶೀಲ್ದಾರ್ ಕಚೇರಿಯ ಸುತ್ತ ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 144 ಸೆಕ್ಸೆನ್ ಜಾರಿ ಮಾಡಲಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಮುಂಡಗೋಡ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ಇನ್ನು, ಮತದಾರರ ಯಾದಿಯನ್ನು ಹಿಡಿದು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮ ಬೆಂಬಲಿಗರ ಜೊತೆ ಒಂದೆಡೆ ಕುಳಿತು ಮತದಾನ ಪ್ರಕ್ರಿಯೆಗಳು ಸುಗಮವಾಗಿ ನಡೆಯಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಹೆದರಿಕೊಂಡಿದ್ದ ಹುಲಿಹೊಂಡದ ಹುಡುಗಿಗೆ ಹುರುಪು ತುಂಬಿದ ಪೊಲೀಸ್ ಇನ್ಸಪೆಕ್ಟರ್..! ಸುಖಾಂತ್ಯಗೊಂಡ ಕೇಸ್..!
ಮುಂಡಗೋಡ ಪಿಐ ಗದರಿಸಿದ್ರು ಅಂತಾ ಶಾಲೆ ಬಿಟ್ಟು ಮನೆಯಲ್ಲೇ ಕುಳಿತ ಹುಲಿಹೊಂಡದ ವಿದ್ಯಾರ್ಥಿನಿಯ ಮನೆಗೆ, ಖುದ್ದು ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ ಭೇಟಿ ನೀಡಿ ಬಾಲಕಿಗೆ ದೈರ್ಯ ತುಂಬಿದ್ದಾರೆ. ಈ ಮೂಲಕ ಅದೇನೋ ಕೆಲಸದ ಟೆನ್ಶೆನ್ ನಲ್ಲಿ ಆಗಿ ಹೋಗಿದ್ದ ಘಟನೆಗೆ ಮಮ್ಮಲ ಮರುಗಿದ್ದಾರೆ. ಸದ್ಯ ಬಾಲಕಿ ಚೇತರಿಸಿಕೊಂಡು ಶಾಲೆಗೆ ಹೋಗಲು ರೆಡಿಯಾಗಿದ್ದಾಳೆ. ಹಾಗಂತ ಬಾಲಕಿಯ ಕುಟುಂಬಸ್ಥರು ತಿಳಿಸಿದ್ದಾರೆ. ಈ ಕುರಿತು ಪಬ್ಲಿಕ್ ಫಸ್ಟ್ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಹೀಗಾಗಿ, ವರದಿ ಪ್ರಸಾರವಾದ ಬೆನ್ನಲ್ಲೇ ಪಿಐ ಸಾಹೇಬ್ರು ಬಾಲಕಿಯ ಮನೆಗೆ ಭೇಟಿ ನೀಡಿ ದೈರ್ಯ ತುಂಬುವ ಕೆಲಸ ಮಾಡಿದ್ರು. ಹೀಗಾಗಿ ನಮ್ಮ ಮಗಳು ಈಗ ಚೇತರಿಸಿಕೊಂಡಿದ್ದಾಳೆ ಇನ್ನೆರಡು ದಿನದಲ್ಲಿ ಶಾಲೆಗೂ ಹಾಜರಾಗ್ತಾಳೆ. ಸಾಹೇಬ್ರು ಬಂದು ಹೋದ ನಂತರ ಲವ ಲವಿಕೆಯಿಂದ ಇದ್ದಾಳೆ. ಅಲ್ದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಮ್ಮ ಮಗಳಿಗೆ ದೈರ್ಯ ತುಂಬಿದ್ದಾರೆ ಅಂತಾ ಬಾಲಕಿಯ ತಾಯಿ ಮಾಹಿತಿ ನೀಡಿದ್ರು. ನಮ್ಮ...
“ಚರ್ಮ ಸುಲಿದು ಬಿಡ್ತಿನಿ” ಅಂದ್ರಂತೆ ಮುಂಡಗೋಡ ಪಿಐ ಸಾಹೇಬ್ರು, ಅಷ್ಟಕ್ಕೇ, ಶಾಲೆ ಬಿಟ್ಟು ಮನೆಯಲ್ಲೇ ಕುಳಿತ್ಲು ಹುಲಿಹೊಂಡದ ಬಾಲಕಿ..!
ಮುಂಡಗೋಡ: ಪೊಲೀಸರೆಂದ್ರೆ ಯಾರಿಗೆ ತಾನೆ ಭಯ ಇಲ್ಲ ಹೇಳಿ..? ಪುಟ್ಟ ಹುಡುಗರಿಗೆ “ಹೇ ಪೊಲೀಸು ಮಾಮಾ ಬಂದ” ಅಂತಾ ಒಂದು ಮಾತು ಹೇಳಿದ್ರೆ ಸಾಕು ಮಕ್ಕಳು ಗಡ ಗಡ ನಡುಗಿ ಅಡಗಿಕೊಳ್ತವೆ. ಅಂತಹದ್ದೊಂದು ಭಯ ಖಾಕಿಗಳನ್ನ ಕಂಡ್ರೆ ಬಹುತೇಕ ಮಕ್ಕಳಿಗೆ ಇದ್ದೇ ಇರತ್ತೆ. ಹೀಗಿದ್ದಾಗ, ಖುದ್ದು ಪೊಲೀಸ್ರೇ ಪುಟ್ಟ ಬಾಲಕಿಯೋರ್ವಳಿಗೆ ಧಮ್ಕಿ ಹಾಕಿದ್ರೆ ಹೇಗಾಗಬೇಡ..? ಇಂತದ್ದೇ ಒಂದು ಘಟನೆ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ನಡೆದಿದೆ. ಆಕೆ 13 ರ ಬಾಲಕಿ..! ಹೌದು, ಆಕೆಯ ವಯಸ್ಸು ಕೇವಲ 13 ವರ್ಷ, ಈಗಷ್ಟೇ ಹುಲಿಹೊಂಡದಲ್ಲಿ ಏಳನೇ ತರಗತಿ ಪಾಸ್ ಆಗಿ, ಎಂಟನೇ ತರಗತಿಗಾಗಿ ಮುಂಡಗೋಡಿನ ಜೂನಿಯರ್ ಕಾಲೇಜಿಗೆ ಅಡ್ಮಿಷನ್ ಮಾಡಿಸಿದ್ದಾಕೆ. ಹೀಗಿದ್ದಾಗ ಈ ಪುಟ್ಟ ಬಾಲಕಿ ಈಗ ಮನೆಯಲ್ಲಿ ವಿಲ ವಿಲ ಒದ್ದಾಡುತ್ತಿದ್ದಾಳೆ. ಯಾರೇ ಹತ್ರ ಬಂದ್ರೂ ಭಯಗೊಂಡು ಅಳುತ್ತಿದ್ದಾಳೆ. ಗಡ ಗಡ ನಡುಗುತ್ತಿದ್ದಾಳೆ. ನಾನು ಇನ್ನೇಲೆ ಮುಂಡಗೋಡಿನ ಶಾಲೆಗೆ ಹೋಗೋದೇ ಇಲ್ಲ, ಅವ್ರು ನನ್ನ ಚರ್ಮ ಸುಲಿದು ಬಿಡ್ತಾರೆ, ನನ್ನ...
ಸಚಿವ ಹೆಬ್ಬಾರ್ ಮೂಲ ಬಿಜೆಪಿಗರನ್ನು ಮೂಲೆಗುಂಪು ಮಾಡಿದ್ದಾರೆ-ಸಂತೋಷ ರಾಯ್ಕರ್ ಆರೋಪ
ಯಲ್ಲಾಪುರ ಕ್ಷೇತ್ರದ ಬಿಜೆಪಿಯಲ್ಲಿ ಯಾಕೋ ಅಸಮಾಧಾನ, ಒಳಗುದಿ, ಮುಸುಕಿನ ಗುದ್ದಾಟಗಳು ಬಗೆಹರಿಯುವ ಲಕ್ಷಣಗಳು ಇಲ್ಲವೇ ಇಲ್ಲ ಅನಿಸ್ತಿದೆ. ಇಲ್ಲಿ ಮೂಲ ಹಾಗೂ ವಲಸಿಗರ ನಡುವಿನ ಆಂತರಿಕ ಕಲಹ ಈಗ ಬಹುತೇಕ ಬಹಿರಂಗವಾಗಿಯೇ ಸಿಡಿದೇಳುವಂತೆ ಮಾಡ್ತಿದೆ. ಈಗ ಇದರ ಭಾಗವಾಗೇ ಮುಂಡಗೋಡಿನ ಬಿಜೆಪಿ ಮುಖಂಡ ಸಂತೋಷ ರಾಯ್ಕರ್ ಮಳಗಿ, ಬಿಜೆಪಿ ತೊರೆದಿದ್ದಾರೆ. ಜೆಡಿಎಸ್ ನಿಂದ ಸ್ಪರ್ಧಿಸುವ ತೀರ್ಮಾನ ಮಾಡಿದ್ದಾರೆ. ಹಾಗಂತ ಅವ್ರೇ ಹೇಳಿಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪಕ್ಕಾ..! ಅಂದಹಾಗೆ, ಯಲ್ಲಾಪುರ ಕ್ಷೇತ್ರದ ಬಿಜೆಪಿಯಲ್ಲಿ ಪಕ್ಷಕ್ಕಾಗಿ ದಶಕಗಳಿಂದಲೂ ಬೆವರು ಹರಿಸಿದವನ್ನ ಅಕ್ಷರಶಃ ಮೂಲೆಗುಂಪು ಮಾಡಲಾಗ್ತಿದೆ ಅಂತಾ ಆರೋಪಿಸಿರೋ ಸಂತೋಷ ರಾಯ್ಕರ್, ಸಚಿವ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಗಳಿಗೆಯಿಂದಲೇ ಇಲ್ಲಿನ ಬಿಜೆಪಿಯ ಮೂಲ ಕುಳಗಳಿಗೆ ಇನ್ನಿಲ್ಲದ ಬೇಸರ ಉಂಟಾಗಿದೆ. ನಮಗೆ ಉಸಿರಾಡಲೂ ಸಾಧ್ಯವಾಗಿಲ್ಲ. ಹೀಗಾಗಿ ನಾನು ಬಿಜೆಪಿ ಪಕ್ಷ ತೊರೆಯುತ್ತಿದ್ದೇನೆ, ಈ ಮೂಲಕ ಜೆಡಿಎಸ್ ಸೇರ್ಪಡೆಯಾಗಿದ್ದೇನೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಏನಿಲ್ಲವೆಂದ್ರೂ 25 ರಿಂದ 30...
ಕಾರವಾರ ರೈಲ್ವೆ ಪೊಲೀಸರ ಕಾರ್ಯಾಚರಣೆ, 2 ಕೋಟಿ ಹವಾಲ ಹಣ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ..!
ಕಾರವಾರ: ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಹವಾಲ ಹಣ ಸಾಗಟ ಮಾಡುತ್ತಿದ್ದ ಆರೋಪಿಯನ್ನು ಕಾರವಾರ ರೈಲ್ವೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಕಾರವಾರ ತಾಲೂಕಿನ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ಮಂಗಳೂರು ಎಕ್ಸ್ಪ್ರೆಸ್ ರೈಲಿನಲ್ಲಿ ದಾಳಿ ನಡೆಸಿರೋ ಪೊಲೀಸರು, ಮುಂಬೈನಿಂದ ಮಂಗಳೂರಿಗೆ ಹವಾಲ ಹಣ ಸಾಗಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಮನೋಹರ್ ಸಿಂಗ್ ಅಲಿಯಾಸ ಚೇನ್ ಸಿಂಗ್ ಎಂಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆತನಿಂದ ಎರಡು ಕೋಟಿ ಹಣ ವಶಕ್ಕೆ ಪಡೆದಿದ್ದಾರೆ. ಕಾರವಾರ ಗ್ರಾಮೀಣ ಠಾಣೆಗೆ ಆರೋಪಿಯನ್ನು ರೈಲ್ವೇ ಪೊಲೀಸರು ಒಪ್ಪಿಸಿದ್ದಾರೆ.