ಮುಂಡಗೋಡ ಶಿಕ್ಷಕಿಯ ಚಿನ್ನ ದರೋಡೆ ಕೇಸ್, ಕೊನೆಗೂ ಸಿಕ್ಕಾಯ್ತಾ ಕಳ್ಳರ ಸುಳಿವು..? ಅಬ್ಬಾ “ಗುಂತಕಲ್” ಗುಮ್ಮಾಗಳು ಇಷ್ಟೊಂದು ಡೇಂಜರ್ರಾ..?

ಮುಂಡಗೋಡ ಶಿಕ್ಷಕಿಯ ಚಿನ್ನ ದರೋಡೆ ಕೇಸ್, ಕೊನೆಗೂ ಸಿಕ್ಕಾಯ್ತಾ ಕಳ್ಳರ ಸುಳಿವು..? ಅಬ್ಬಾ “ಗುಂತಕಲ್” ಗುಮ್ಮಾಗಳು ಇಷ್ಟೊಂದು ಡೇಂಜರ್ರಾ..?

ಮುಂಡಗೋಡ: ಪ್ರಿಯ ಓದುಗರೇ, ತಮಗೆ ನಿನ್ನೆನೇ ಹೇಳಿದ್ವಿ ಅಲ್ವಾ..? ನಮ್ಮ ಮುಂಡಗೋಡ ಪೊಲೀಸ್ ಠಾಣೆಯಲ್ಲಿನ ಯುವ ಪೊಲೀಸರು ಅದೇಷ್ಟು ಸ್ಟ್ರಾಂಗ್ ಇದ್ದಾರೆ ಅಂತಾ.. ಅದು ಮತ್ತೊಮ್ಮೆ ಸಾಬೀತಾಗಿದೆ. ನಿನ್ನೆ ಶನಿವಾರ ಮುಂಡಗೋಡಿನಲ್ಲಿ ನಡೆದಿದ್ದ ಶಿಕ್ಷಕಿಯ ಮಾಂಗಲ್ಯ ಸರ ದೋಚಿದ್ದ ಕೇಸಿಗೆ ಸಂಬಂಧಿಸಿದಂತೆ ಖತರ್ನಾಕ ಖದೀಮರ ಸುಳಿವು ಬಹುತೇಕ ಸಿಕ್ಕಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಈ ಬಲಿಷ್ಟ ಟೀಂ ಒಂದು ಹಂತದಲ್ಲಿ ಮಹತ್ವದ ಸುಳಿವು ಹೆಕ್ಕಿ ತೆಗೆದಿದೆ. ಇನ್ನೇನು ಕನ್ಪರ್ಮ್ ಅಂತಾ ಆದರೇ ಆರೋಪಿಗಳನ್ನ ಹೆಡೆಮುರಿ ಕಟ್ಟೋದೊಂದೇ ಬಾಕಿ ಇದೆ ಎನ್ನುವ ಮಾಹಿತಿ ಇದೆ. “ಇಲ್ಲ” ಗಳ ನಡುವೆ..! ಅಸಲು, ನಿನ್ನೆ ಶನಿವಾರ ಶಾಲೆಯಿಂದ ಮನೆಗೆ ಹೊರಟಿದ್ದ ಶಿಕ್ಷಕಿಗೆ ಆಘಾತ ಕಾದಿತ್ತು. ಶಿಕ್ಷಕಿಯ ಮಾಂಗಲ್ಯ ಸರವನ್ನು ಹಾಡಹಗಲೇ ಕಿತ್ತುಕೊಂಡು ಪರಾರಿಯಾಗಿದ್ದ ಖತರ್ನಾಕ ಖದೀಮರು ಇಡೀ ಮುಂಡಗೋಡಿಗರನ್ನೇ ಒಂದುಕ್ಷಣ ಬೆಚ್ಚಿ ಬೀಳುವಂತೆ ಮಾಡಿದ್ದರು. ಘಟನೆ ಬಳಿಕ ಎಚ್ಚೆತ್ತುಕೊಂಡಿದ್ದ ನಮ್ಮ ಪೊಲೀಸು ಸಾಹೇಬರುಗಳು, ತಕ್ಷಣವೇ ತಮ್ಮ ಪಡೆಗೆ ಕೆಲಸ ವಹಿಸಿದ್ದರು, ಹೇಗೋ ಗೊತ್ತಿಲ್ಲ ಮೊದಲು...

ಮುಂಡಗೋಡಿನಲ್ಲಿ ಹಾಡಹಗಲೇ ಶಿಕ್ಷಕಿಯ ಮಾಂಗಲ್ಯ ಸರ ದೋಚಿದ ಖದೀಮರು, ಏನಾಗ್ತಿದೆ ನಮ್ಮೂರಲ್ಲಿ..? ಪೊಲೀಸರ ಭಯವೇ ಹೋಯ್ತಾ..?

ಮುಂಡಗೋಡಿನಲ್ಲಿ ಹಾಡಹಗಲೇ ಶಿಕ್ಷಕಿಯ ಮಾಂಗಲ್ಯ ಸರ ದೋಚಿದ ಖದೀಮರು, ಏನಾಗ್ತಿದೆ ನಮ್ಮೂರಲ್ಲಿ..? ಪೊಲೀಸರ ಭಯವೇ ಹೋಯ್ತಾ..?

ಮುಂಡಗೋಡ ಪಟ್ಟಣದ ಸರ್ಕಾರಿ ಮಾದರಿ ಶಾಲೆಯ ಶಿಕ್ಷಕಿಯೋರ್ವರ ಬಂಗಾರದ ಚೈನ್ ಎಗರಿಸಿದ್ದಾರೆ ಕಳ್ಳರು. ಬೈಕ್ ಮೇಲೆ ಬಂದಿದ್ದ ಇಬ್ಬರು ಏಕಾಏಕಿ ಶಿಕ್ಷಕಿಯ ಕೊರಳಲ್ಲಿದ್ದ ಮಾಂಗಲ್ಯದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ನಡೆದು ಹೋದ ಘಟನೆಯಲ್ಲಿ, ಶಿಕ್ಷಕಿಯ ಮೂಕ ರೋಧನವಷ್ಟೇ ಬಾಕಿ ಉಳಿದಿದೆ. ಮಟ ಮಟ ಮದ್ಯಾಹ್ನವೇ..! ಅಂದಹಾಗೆ, ಶನಿವಾರ ಮದ್ಯಾಹ್ನ ಸರಿಸುಮಾರು 12- 40 ಗಂಟೆಯ ಹೊತ್ತಲ್ಲಿ, ಮಾದರಿ ಶಾಲೆಯ ದೈಹಿಕ ಶಿಕ್ಷಕಿ ಸರೋಜಾ ಮಹೇಶ್ ಬೈಂದೂರ್ ಶಾಲೆಯಿಂದ ಬಸ್ ನಿಲ್ದಾಣಕ್ಕೆ ಕಾಲ್ನಡಿಯಲ್ಲೇ ಹೊರಟಿದ್ದರು. ಈ ವೇಳೆ, ಹೊಸಓಣಿಯ ವಿ.ಎಸ್. ಕೊಣಸಾಲಿಯವರ ಮನೆ ಹತ್ತಿರ ಶಿಕ್ಷಕಿಯ ಹಿಂದಿನಿಂದ ಬೈಕಿನಲ್ಲಿ ಬಂದ ಕಳ್ಳರು ಕೃತ್ಯ ಎಸಗಿದ್ದಾರೆ. ಬೈಕ್ ಹಿಂದುಗಡೆ ಕುಳಿತ ವ್ಯಕ್ತಿ ಶಿಕ್ಷಕಿಯ ಕೊರಳಿಗೆ ಕೈ ಹಾಕಿ ಏಕಾ ಏಕಿ ಮಾಂಗಲ್ಯ ಸರ ಕಿತ್ತುಕೊಂಡಿದ್ದಾನೆ. ಸುಮಾರು 85 ಸಾವಿರ ರೂ.‌ ಮೌಲ್ಯದ 22 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಇದಾಗಿದ್ದು, ಶಿಕ್ಷಕಿ ಗಾಬರಿಗೊಂಡು ಚೀರಾಡಿದ್ದಾರೆ. ಆದ್ರೆ, ಅಷ್ಟೊತ್ತಿಗಾಗಲೇ ಚಾಲಾಕಿ ಕಳ್ಳರು...

ಸನವಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಒದ್ದಾಡಿ ಪ್ರಾಣ ಬಿಟ್ಟ ಎತ್ತು, ರಕ್ಷಿಸಲು ಹೋದ ರೈತನ ದುರಂತ ಸಾವು..!

ಸನವಳ್ಳಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಒದ್ದಾಡಿ ಪ್ರಾಣ ಬಿಟ್ಟ ಎತ್ತು, ರಕ್ಷಿಸಲು ಹೋದ ರೈತನ ದುರಂತ ಸಾವು..!

ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ರೈತನೋರ್ವ ತನ್ನ ಎತ್ತು ಬದುಕಿಸಲು ಹೋಗಿ ಆತನೂ ವಿದ್ಯುತ್ ಗೆ ಬಲಿಯಾಗಿದ್ದಾನೆ. ಗದ್ದೆಯಲ್ಲಿ ಕೆಲಸ ಮಾಡುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಜೀವಗಳು ದುರಂತ ಸಾವು ಕಂಡಿವೆ. ಸನವಳ್ಳಿ ಗ್ರಾಮದ ಈರಪ್ಪ ಯಲ್ಲಪ್ಪ ಕೆರೆಹೊಲದವರ (65) ಎಂಬುವವರೇ ವಿದ್ಯುತ್ ಆಘಾತಕ್ಕೆ ಬಲಿಯಾದವರು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿಗೆ ಸ್ಪರ್ಶಿಸಿ ಎತ್ತು ಒದ್ದಾಡುತ್ತಿತ್ತು. ಈ ವೇಳೆ ಇದನ್ನು ಕಂಡ ರೈತ ತನ್ನ ಎತ್ತು ರಕ್ಷಣೆ ಮಾಡಲು ದುಮುಕಿದ್ದಾನೆ. ಈ ವೇಳೆ ವಿದ್ಯುತ್ ರೈತನಿಗೂ ಆಕ್ರಮಿಸಿ ಆತನೂ ಕೂಡ ಸಾವು ಕಂಡಿದ್ದಾನೆ ಅಂತಾ ಹೇಳಲಾಗ್ತಿದೆ. ಸದ್ಯ ಮುಂಡಗೋಡ ಪೊಲೀಸರು, ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಮುಂಡಗೋಡಿನಲ್ಲಿ ಮಾತೆ ಬಸವೇಶ್ವರಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ..!

ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಮುಂಡಗೋಡಿನಲ್ಲಿ ಮಾತೆ ಬಸವೇಶ್ವರಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ..!

  ಮುಂಡಗೋಡ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ಜೈನ ಮುನಿಯ ಭೀಕರ ಹತ್ಯೆ ಖಂಡಿಸಿ ಮುಂಡಗೋಡಿನಲ್ಲಿ ಶುಕ್ರವಾರ ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ನೇತೃತ್ವದಲ್ಲಿ ವಿವಿಧ ಸಂಘಟನೆ ಮುಖಂಡರು ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಪಟ್ಟಣದ ನಿರೀಕ್ಷಣಾ ಮಂದಿರದಿಂದ ಹೊರಟ ಸಾತ್ವಿಕ ಪ್ರತಿಭಟನಾ ಮೆರವಣಿಗೆ, ಶಿವಾಜಿ ವೃತ್ತದಲ್ಲಿ ಸಾಗಿ ಬಂದಿತು, ನಂತರ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದ್ರು. ಮುನಿಗಳ‌ ಮೇಲಿನ ಭೀಕರ ಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ಒದಗಿಸಬೇಕು, ಅಲ್ಲದೇ ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಅಂತಾ ಮನವಿಯಲ್ಲಿ ಆಗ್ರಹಿಸಿದ್ರು. ಮಾತೆಯವರ ಮಾತು..! ಇದಕ್ಕೂ ಮೊದಲು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತೆಯವರು, ಸಮಾಜದಲ್ಲಿ ಇಂತಹ ಕೃತ್ಯ ನಿಜಕ್ಕೂ, ಯಾರೂ ಉಹಿಸಲೂ ಸಾಧ್ಯವಾಗದ ರೀತಿಯಲ್ಲಿ ಭಯಾನಕವಾಗಿ ನಡೆದಿದೆ. ಹೀಗಾಗಿ, ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ...

ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಶಿಗ್ಗಾವಿಯಲ್ಲಿ ಜೈನರೂ ಸೇರಿ ವಿವಿಧ ಸಮಾಜಗಳಿಂದ ಪ್ರತಿಭಟನಾ ಮೆರವಣಿಗೆ..!

ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಶಿಗ್ಗಾವಿಯಲ್ಲಿ ಜೈನರೂ ಸೇರಿ ವಿವಿಧ ಸಮಾಜಗಳಿಂದ ಪ್ರತಿಭಟನಾ ಮೆರವಣಿಗೆ..!

 ಶಿಗ್ಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ಜೈನ ಮುನಿಯ ಭೀಕರ ಹತ್ಯೆ ಖಂಡಿಸಿ ಶಿಗ್ಗಾವಿ ತಾಲೂಕಿನ ಜೈನ ಸಮಾಜದ ಬಾಂಧವರು, ಮಠಾಧೀಶರು ಹಾಗೂ ವಿವಿಧ ಸಮಾಜದ ಮುಖಂಡರು ಶಿಗ್ಗಾವಿಯಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಪಟ್ಟಣದ ಮಹಾವೀರ ವೃತ್ತದಿಂದ ಹೊರಟ ಮೌನ ಪ್ರತಿಭಟನಾ ಮೆರವಣಿಗೆ, ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸಾಗಿ ಬಂದಿತು, ನಂತರ ವಿರಕ್ತಮಠದ ಶ್ರೀ ಸಂಗನಬಸವ ಶ್ರೀಗಳು ಜೂನ ಮುನಿಶ್ರೀಯವರ ಭೀಕರ ಹತ್ಯೆಯನ್ನು ಖಂಡಿಸಿ ಮಾತನಾಡಿದ್ರು‌. ಸಮಾಜದಲ್ಲಿ ಶ್ರೀಗಳಿಗೆ, ಮಠಾಧೀಶರಿಗೆ ಸೂಕ್ತ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ರು. ಅಲ್ಲದೇ, ಮುನೀಶ್ರೀ ಹತ್ತೆ ಘಟನೆಯನ್ನು ಉಗ್ರವಾಗಿ ಖಂಡಿಸಿದ್ರು‌. ನಂತರ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದ್ರು. ಮುನಿಗಳ‌ ಮೇಲಿನ ಭೀಕರ ಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ಒದಗಿಸಬೇಕು, ಅಲ್ಲದೇ ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಅಂತಾ ಮನವಿಯಲ್ಲಿ ಆಗ್ರಹಿಸಿದ್ರು. ಈ ವೇಳೆ ತಾಲೂಕಿನ ವಿವಿಧ ಗ್ರಾಮಗಳ...

ಮಳಗಿಯಲ್ಲಿ ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು..!

ಮಳಗಿಯಲ್ಲಿ ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು..!

ಮುಂಡಗೋಡ ತಾಲೂಕಿನ ಧರ್ಮಾ ಕಾಲೋನಿಯಲ್ಲಿ 44 ವರ್ಷದ ವ್ಯಕ್ತಿಯೋರ್ವ ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಳಗಿ ಧರ್ಮಾ ಕಾಲೋನಿಯ ಉದಯ್ ಶೇಖಪ್ಪ ಹಸಲಾರ್ (44) ಎಂಬುವವನೇ ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

ಮುಂಡಗೋಡ ಹೊರವಲಯದಲ್ಲಿ ಬೈಕ್ ಅಪಘಾತ, ನಂದಿಕಟ್ಟಾದ ಇಬ್ಬರಿಗೆ ಗಾಯ..!

ಮುಂಡಗೋಡ ಹೊರವಲಯದಲ್ಲಿ ಬೈಕ್ ಅಪಘಾತ, ನಂದಿಕಟ್ಟಾದ ಇಬ್ಬರಿಗೆ ಗಾಯ..!

ಮುಂಡಗೋಡ ಪಟ್ಟಣದ ಹೊರವಲಯದಲ್ಲಿ ಅಪಘಾತವಾಗಿದೆ‌. ಮುಂಡಗೋಡಿನಿಂದ ಕಲಘಟಗಿ ಮಾರ್ಗವಾಗಿ ನಂದಿಕಟ್ಟಾ ಹೋಗುತ್ತಿದ್ದ ಬೈಕ್ ಸವಾರರಿಬ್ಬರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಪರಿಣಾಮ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ನಂದಿಕಟ್ಟಾ ಗ್ರಾಮದ ಹನುಮಂತ ಭೋವಿ ಮತ್ತು ಬಸವರಾಜ ಎಂಬುವವರೇ ಗಾಯಗೊಂಡವರಾಗಿದ್ದು. 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಮತ್ತು ಮಲ್ಲಪ್ಪ ಇವರು ಪ್ರಥಮ ಚಿಕಿತ್ಸೆ ನೀಡಿ ತಾಲ್ಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಂಡಗೋಡಿನ ಹುಬ್ಬಳ್ಳಿ ರಸ್ತೆ ತುಂಬ ಯಮರೂಪಿ ಗುಂಡಿಗಳು, ಇನ್ನೇಷ್ಟು ಬಲಿ ಬೇಕು ಅಧಿಕಾರಿಗಳೇ..?

ಮುಂಡಗೋಡಿನ ಹುಬ್ಬಳ್ಳಿ ರಸ್ತೆ ತುಂಬ ಯಮರೂಪಿ ಗುಂಡಿಗಳು, ಇನ್ನೇಷ್ಟು ಬಲಿ ಬೇಕು ಅಧಿಕಾರಿಗಳೇ..?

 ಮುಂಡಗೋಡ; ಪಟ್ಟಣದ ಹುಬ್ಬಳ್ಳಿ ಶಿರಸಿ ರಸ್ತೆಯ ಅದ್ವಾನಗಳಿಂದಾಗಿ ಜನ ರೋಶಿ ಹೋಗಿದ್ದಾರೆ. ಅದ್ರಲ್ಲೂ ಹುಬ್ಬಳ್ಳಿ ರಸ್ತೆಯಲ್ಲಿ ಬಿದ್ದಿರೋ ಯಮರೂಪಿ ರಸ್ತೆ ಗುಂಡಿಗಳಿಂದ ಅದೇಷ್ಟೋ ಬಡಪಾಯಿಗಳ ಪ್ರಾಣಗಳೇ ಹಾರಿಹೋಗುತ್ತಿವೆ. ಹೀಗಿದ್ದಾಗಲೂ ಆ್ಯಟಲಿಸ್ಟ್ ಇಂತಹ ಯಮರೂಪಿ ಗುಂಡಿಗಳಿಗೆ ಮಣ್ಣು ಹಾಕಿ ಸಾರಿಸುವ ಕನಿಷ್ಟ ಖಬರ್ರೂ ಇಲ್ಲಿನ PWD ಇಲಾಖೆಯ ಅಧಿಕಾರಿಗಳಿಗೆ ಬಂದಂತಿಲ್ಲ. ಹೀಗಾಗಿ, ಈ ರಸ್ತೆಯಲ್ಲಿ ಓಡಾಡೋ ಜನ ನಿತ್ಯವೂ ಹಿಡಿಶಾಪ ಹಾಕ್ತಿದಾರೆ ಅಧಿಕಾರಿಗಳಿಗೆ. ಕುರುಡಾದ್ರಾ ಅಧಿಕಾರಿಗಳು..? ಅಸಲು, ಮುಂಡಗೋಡ ಪಟ್ಟಣದಿಂದ ಹುಬ್ಬಳ್ಳಿ ಕಡೆಗೆ ನೀವು ಹೊರಟ್ರೆ, ಜಸ್ಟ್ ಮಿನಿ ವಿಧಾನಸೌಧ ಇದೆಯಲ್ಲ, ಅದರ ಹತ್ತಿರವೇ ಅಂದ್ರೆ ವೀರಶೈವ ಮುಕ್ತಿಧಾಮದ ಎದುರಲ್ಲಿ ಅದೊಂದು ಯಮರೂಪಿ ಗುಂಡಿ ಜೀವಗಳನ್ನ ಬಲಿ ಪಡೆಯಲು ಕಾಯ್ದು ಕುಳಿತಿದೆ. ಇಲ್ಲಿ ವಾಹನ ಸವಾರರು, ಬೈಕ್ ಸವಾರರು ಜಾಗರೂಕತೆಯಿಂದಲೇ ಸಂಚರಿಬೇಕಿದೆ. ಇಲ್ಲಿ ಸಂಚರಿಸುವಾಗ ಕಿಂಚಿತ್ತು ಗಮನ ಮರೆತ್ರೆ ಮುಗೀತು. ಬಿದ್ದು ಆಸ್ಪತ್ರೆ ಸೇರೋದು ಗ್ಯಾರಂಟಿಯೇ. ಹೀಗಿದ್ದಾಗ, ಇದರ ಬಗ್ಗೆ ಸಾಕಷ್ಟು ಬಾರಿ ಸಾರ್ವಜನಿಕರು, ವಾಹನ ಸವಾರರು ಇಲಾಖೆ ಅಧಿಕಾರಿಗಳ ಗಮನಕ್ಕೆ...

ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯ ಮುನ್ಸೂಚನೆ..!

ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯ ಮುನ್ಸೂಚನೆ..!

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಕರಾವಳಿ (Coastal Karnataka) ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 16ರವರೆಗೂ ಭಾರಿ ಮಳೆಯಾಗುವ (Heay Rain) ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದ್ದು ಭಾರತೀಯ ಹವಾಮಾನ ಇಲಾಖೆ (IMD) ಯೆಲ್ಲೋ ಅಲರ್ಟ್‌ ಜಾರಿ ಮಾಡಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರದಲ್ಲಿ ಮೋಡಕವಿದ ವಾತಾವರಣವಿದ್ದು, ಮಳೆಯಾಗುವ ಸಂಭವವಿದೆ. ಉಡುಪಿಯಲ್ಲಿ ಸುರಿದ ಭಾರೀ ಮಳೆಯಿಂದ ಕಾಪು ತಾಲೂಕು ಇನ್ನಂಜೆ -ಕಲ್ಯಾ ನಡುವೆ ಸಂಪರ್ಕ ಕಡಿತಗೊಂಡಿದೆ. ಮಾರ್ಕೊಡಿ ಹೊಳೆಯ ನೀರಿನಿಂದ ಎರಡು ಗ್ರಾಮದ ಸಂಪರ್ಕ ಕಡಿತಗೊಂಡಿದ್ದು, ನೂರಾರು ಎಕರೆ ಭತ್ತದ ಬೇಸಾಯ ನೀರು ಪಾಲಾಗಿದೆ.

ಚಿಕ್ಕೋಡಿಯಲ್ಲಿ ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಮುಂಡಗೋಡ ತಾಲೂಕಾ ಜೈನ ಸಮಾಜದಿಂದ ಪ್ರತಿಭಟನಾ ಮೆರವಣಿಗೆ..!

ಚಿಕ್ಕೋಡಿಯಲ್ಲಿ ಜೈನ ಮುನಿಯ ಬರ್ಬರ ಹತ್ಯೆಗೆ ಖಂಡನೆ, ಮುಂಡಗೋಡ ತಾಲೂಕಾ ಜೈನ ಸಮಾಜದಿಂದ ಪ್ರತಿಭಟನಾ ಮೆರವಣಿಗೆ..!

 ಮುಂಡಗೋಡ: ಚಿಕ್ಕೋಡಿಯಲ್ಲಿ ಜೈನ ಮುನಿಯ ಭೀಕರ ಹತ್ಯೆ ಖಂಡಿಸಿ ಮುಂಡಗೋಡ ತಾಲೂಕಿನ ಜೈನ ಸಮಾಜದ ಬಾಂಧವರು ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಪಟ್ಟಣದ ಶಿರಸಿ ರಸ್ತೆಯಲ್ಲಿರೋ ಜಿನಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ, ಶಿವಾಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘಟನೆಯನ್ನು ಉಗ್ರವಾಗಿ ಖಂಡಿಸಿದ್ರು‌. ಮುನಿಗಳಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿದ್ರು. ನಂತರ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದ್ರು. ಮುನಿಗಳ‌ ಮೇಲಿನ ಭೀಕರ ಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ಒದಗಿಸಬೇಕು, ಅಲ್ಲದೇ ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಅಂತಾ ಮನವಿಯಲ್ಲಿ ಆಗ್ರಹಿಸಿದ್ರು. ಈ ವೇಳೆ ತಾಲೂಕಿನ ವಿವಿಧ ಗ್ರಾಮಗಳ ಜೈನ ಸಮಾಜದ ಮುಖಂಡರು, ಮಹಿಳೆಯರು ಭಾಗಿಯಾಗಿದ್ರು.

error: Content is protected !!