ಮುಂಡಗೋಡ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ಜೈನ ಮುನಿಯ ಭೀಕರ ಹತ್ಯೆ ಖಂಡಿಸಿ ಮುಂಡಗೋಡಿನಲ್ಲಿ ಶುಕ್ರವಾರ ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ನೇತೃತ್ವದಲ್ಲಿ ವಿವಿಧ ಸಂಘಟನೆ ಮುಖಂಡರು ಪ್ರತಿಭಟನಾ ಮೆರವಣಿಗೆ ನಡೆಸಿದ್ರು.

ಪಟ್ಟಣದ ನಿರೀಕ್ಷಣಾ ಮಂದಿರದಿಂದ ಹೊರಟ ಸಾತ್ವಿಕ ಪ್ರತಿಭಟನಾ ಮೆರವಣಿಗೆ, ಶಿವಾಜಿ ವೃತ್ತದಲ್ಲಿ ಸಾಗಿ ಬಂದಿತು, ನಂತರ ತಹಶೀಲ್ದಾರ ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದ್ರು. ಮುನಿಗಳ‌ ಮೇಲಿನ ಭೀಕರ ಹತ್ಯೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ಒದಗಿಸಬೇಕು, ಅಲ್ಲದೇ ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಅಂತಾ ಮನವಿಯಲ್ಲಿ ಆಗ್ರಹಿಸಿದ್ರು.

ಮಾತೆಯವರ ಮಾತು..!
ಇದಕ್ಕೂ ಮೊದಲು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತೆಯವರು, ಸಮಾಜದಲ್ಲಿ ಇಂತಹ ಕೃತ್ಯ ನಿಜಕ್ಕೂ, ಯಾರೂ ಉಹಿಸಲೂ ಸಾಧ್ಯವಾಗದ ರೀತಿಯಲ್ಲಿ ಭಯಾನಕವಾಗಿ ನಡೆದಿದೆ. ಹೀಗಾಗಿ, ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಸಮಾಜದಲ್ಲಿ ಶ್ರೀಗಳಿಗೆ, ಮಠಾಧೀಶರಿಗೆ ಸೂಕ್ತ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ರು. ಅಲ್ಲದೇ, ಮುನಿಶ್ರೀ ಹತ್ಯೆ ಘಟನೆಯನ್ನು ಉಗ್ರವಾಗಿ ಖಂಡಿಸಿದ್ರು‌.

ರಾಜಕೀಯ ಸಲ್ಲದು..!
ಇನ್ನು, ಮುನಿಶ್ರೀ ಹತ್ಯೆಯ ವಿಚಾರದಲ್ಲಿ ಕೆಲವರು ಜಾತೀಯತೆಯ ಬಣ್ಣ ಬಳಿದು, ರಾಜಕೀಯ ಮಾಡುತ್ತಿರೋದು ಸರಿಯಲ್ಲ ಅಂತಾ ಮಾತೆ ಬಸವೇಶ್ವರಿ ಖೇಧ ವ್ಯಕ್ತ ಪಡಿಸಿದ್ರು. ಈ ವಿಚಾರದಲ್ಲಿ ರಾಜಕೀಯ ಬಳಸದೇ ತಪ್ಪಿತಸ್ಥರು ಯಾರೇ ಇದ್ದರೂ ಅಂತವರ ವಿರುದ್ಧ ಸೂಕ್ರ ಕ್ರಮ ಜರುಗಿಸಲೇಬೇಕಿದೆ ಅಂತಾ ಸರ್ಕಾರಕ್ಕೆ ಮನವಿ ಮಾಡಿದ್ರು.

ಈ ವೇಳೆ ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ, ಸಾಧನಾ ಸಂಸ್ಥೆಯ ಇಸಾಬೆಲ್ಲಾ, ಜೈನ ಸಮಾಜದ ಅಧ್ಯಕ್ಷ ಧರಣೇಂದ್ರ ಅಂಗಡಿ, ಯಲ್ಲಪ್ಪ ಏಗಪ್ಪನವರ್, ಫಣಿರಾಜ್ ಹದಳಗಿ, ಆರ್.ಜೆ.ಬೆಳ್ಳೇನವರ್, ಕಸಾಪ ತಾಲೂಕಾಧ್ಯಕ್ಷ ವಸಂತ ಕೊಣಸಾಲಿ, ಮಹದೇಶ್ವರ ಲಿಂಗದಾಳ, ಬಿ.ಕೆ.ಪಾಟೀಲ್, ನಾಗರಾಜ್ ಹದಳಗಿ, ಶ್ರೀಧರ್ ಛಬ್ಬಿ, ಭರತ್ ಹದಳಗಿ, ಬಸವರಾಜ್ ಬುದ್ದಣ್ಣವರ್ ಸೇರಿದಂತೆ ಮನೆಯಲ್ಲಿ ಮಹಾಮನೆ ಸತ್ಸಂಗ ಕಾರ್ಯಕ್ರಮದ ಪದಾಧಿಕಾರಿಗಳು, ತಾಲೂಕಿನ ವಿವಿಧ ಸಮಾಜದ ಮುಖಂಡರು, ಮಹಿಳೆಯರು ಭಾಗಿಯಾಗಿದ್ರು.

error: Content is protected !!