ಮುಂಡಗೋಡ; ಪಟ್ಟಣದ ಹುಬ್ಬಳ್ಳಿ ಶಿರಸಿ ರಸ್ತೆಯ ಅದ್ವಾನಗಳಿಂದಾಗಿ ಜನ ರೋಶಿ ಹೋಗಿದ್ದಾರೆ. ಅದ್ರಲ್ಲೂ ಹುಬ್ಬಳ್ಳಿ ರಸ್ತೆಯಲ್ಲಿ ಬಿದ್ದಿರೋ ಯಮರೂಪಿ ರಸ್ತೆ ಗುಂಡಿಗಳಿಂದ ಅದೇಷ್ಟೋ ಬಡಪಾಯಿಗಳ ಪ್ರಾಣಗಳೇ ಹಾರಿಹೋಗುತ್ತಿವೆ. ಹೀಗಿದ್ದಾಗಲೂ ಆ್ಯಟಲಿಸ್ಟ್ ಇಂತಹ ಯಮರೂಪಿ ಗುಂಡಿಗಳಿಗೆ ಮಣ್ಣು ಹಾಕಿ ಸಾರಿಸುವ ಕನಿಷ್ಟ ಖಬರ್ರೂ ಇಲ್ಲಿನ PWD ಇಲಾಖೆಯ ಅಧಿಕಾರಿಗಳಿಗೆ ಬಂದಂತಿಲ್ಲ. ಹೀಗಾಗಿ, ಈ ರಸ್ತೆಯಲ್ಲಿ ಓಡಾಡೋ ಜನ ನಿತ್ಯವೂ ಹಿಡಿಶಾಪ ಹಾಕ್ತಿದಾರೆ ಅಧಿಕಾರಿಗಳಿಗೆ.
ಕುರುಡಾದ್ರಾ ಅಧಿಕಾರಿಗಳು..?
ಅಸಲು, ಮುಂಡಗೋಡ ಪಟ್ಟಣದಿಂದ ಹುಬ್ಬಳ್ಳಿ ಕಡೆಗೆ ನೀವು ಹೊರಟ್ರೆ, ಜಸ್ಟ್ ಮಿನಿ ವಿಧಾನಸೌಧ ಇದೆಯಲ್ಲ, ಅದರ ಹತ್ತಿರವೇ ಅಂದ್ರೆ ವೀರಶೈವ ಮುಕ್ತಿಧಾಮದ ಎದುರಲ್ಲಿ ಅದೊಂದು ಯಮರೂಪಿ ಗುಂಡಿ ಜೀವಗಳನ್ನ ಬಲಿ ಪಡೆಯಲು ಕಾಯ್ದು ಕುಳಿತಿದೆ. ಇಲ್ಲಿ ವಾಹನ ಸವಾರರು, ಬೈಕ್ ಸವಾರರು ಜಾಗರೂಕತೆಯಿಂದಲೇ ಸಂಚರಿಬೇಕಿದೆ. ಇಲ್ಲಿ ಸಂಚರಿಸುವಾಗ ಕಿಂಚಿತ್ತು ಗಮನ ಮರೆತ್ರೆ ಮುಗೀತು. ಬಿದ್ದು ಆಸ್ಪತ್ರೆ ಸೇರೋದು ಗ್ಯಾರಂಟಿಯೇ. ಹೀಗಿದ್ದಾಗ, ಇದರ ಬಗ್ಗೆ ಸಾಕಷ್ಟು ಬಾರಿ ಸಾರ್ವಜನಿಕರು, ವಾಹನ ಸವಾರರು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾರೂ ಕ್ಯಾರೇ ಅಂತಿಲ್ಲವಂತೆ.
ಒಂದು ಜೀವ ಬಲಿ..!
ಇನ್ನು, ಇದೇ ಹುಬ್ಬಳ್ಳಿ ರಸ್ತೆಯಲ್ಲಿ ರಸ್ತೆಯಲ್ಲಿ ಸಂಚರಿಸಬೇಕಂದ್ರೆ ಮುಂಡಗೋಡಿನಿಂದ ಬಾಚಣಕಿ ಜಲಾಶಯದವರೆಗೂ ಅಕ್ಷರಶಃ ಭಯಾನಕವೇ ಆಗಿದೆ. ಹೆಜ್ಜೆಗೊಂದರಂತೆ ಸಿಗುವ ರಸ್ತೆಗುಂಡಿಗಳಿಗೆ ಜೀವಗಳನ್ನು ಒತ್ತೆಯಿಟ್ಟು ಸಂಚರಿಸಬೇಕಾದ ಅನಿವಾರ್ಯತೆ ಇದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಇದೇ ರಸ್ತೆ ಗುಂಡಿಗೆ ಬಿದ್ದು ಮುಂಡಗೋಡಿನ ಓರ್ವ ಬೈಕ್ ಸವಾರ ಮೃತಪಟ್ಟಿದ್ದ. ಆ ಹೊತ್ತಲ್ಲಿ ಈ ರಸ್ತೆ ಗುಂಡಿಗಳ ವಿರುದ್ಧ ಜನ ಆಕ್ರೋಶದ ಮಾತು ಆಡಿದ್ರು. ಮಾರನೇ ದಿನ ಮರೆತು ಬಿಟ್ರು. ಆದ್ರೆ, ನಿರ್ಲಕ್ಷ ವಹಿಸುವ ಅಧಿಕಾರಿಗಳಿಗೆ ಕಿವಿ ಹಿಂಡಿ ಕೆಲಸ ಮಾಡಿಸುವ ಜವಾಬ್ದಾರಿಗಳೇ ಮರೆತು ಹೋದವು.
ತಕ್ಷಣವೇ ಗುಂಡಿ ಮುಚ್ಚಲಿ..!
“ಲೋಕ” ಉಪಯೋಗಿ ಅಧಿಕಾರಿಗಳೇ ನಿಮಗೆ ಸಾರ್ವಜನಿಕರ ಪ್ರಾಣಗಳ ಮೇಲೆ ಕಿಂಚಿತ್ತಾದ್ರೂ ಕಾಳಜಿ ಇದ್ರೆ ತಕ್ಷಣವೇ ಯಮರೂಪಿ ರಸ್ತೆ ಗುಂಡಿಗಳನ್ನ ಮುಚ್ಚಿ. ಇಲ್ಲವಾದಲ್ಲಿ ಇಂತಹ ಗುಂಡಿಗಳ ಅಡಿ ಬಿದ್ದು ನರಳುವ ಜನರ ಶಾಪ ನಿಮಗೆ ತಟ್ಟದೇ ಇರಲ್ಲ. ನೆನಪಿರಲಿ ಇದು ಮುಂಡಗೋಡಿಗರ ಆಕ್ರೋಶ..