ಮುಂಡಗೋಡ: ತಾಲೂಕಿನ ಮಜ್ಜಿಗೇರಿ ಬಳಿಯ ಕಾಡಿನಲ್ಲಿ ಚಿರತೆ ಪ್ರತ್ಯಕ್ಷವಾಗಿರೋ ಅನುಮಾನ ದಟ್ಟವಾಗಿದೆ. ಕಾಡಿನಲ್ಲಿ ಮೇಯಲು ಹೋಗಿದ್ದ ಬರೋಬ್ಬರಿ 12 ಕುರಿಗಳನ್ನು ಚಿರತೆ ಕೊಂದು ಹಾಕಿದೆ ಅಂತಾ ಹೇಳಲಾಗ್ತಿದೆ. ಮಜ್ಜಿಗೇರಿ ಗ್ರಾಮದ ಬರಮಣ್ಣ ಉಗ್ರಾಣಿ ಎಂಬುವವರಿಗೆ ಸೇರಿದ 10 ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ. ನಿನ್ನೆ ಸಂಜೆ 4 ಗಂಟೆಯ ಹೊತ್ತಿನಲ್ಲಿ ಚಿರತೆಯನ್ನು ಬರಮಣ್ಣ ನೋಡಿದ್ದಾರೆ ಎನ್ನಲಾಗಿದೆ. ಆದ್ರೆ, ಹಾಗೆ ಚಿರತೆ ಕಂಡ ತಕ್ಷಣವೇ ಭಯದಿಂದ ಕಾಲ್ಕಿತ್ತಿರೊ ಬರಮಣ್ಣ ಉಗ್ರಾಣಿಯವರ 10 ಕುರಿಗಳು ಹಾಗೆ ಬೇರೆಯವರ 2 ಕುರಿಗಳು ನಾಪತ್ತೆಯಾಗಿವೆ. ರಾತ್ರಿ ಹುಡುಕಾಡಿದ್ರೂ ಕುರಿಗಳು ಪತ್ತೆಯಾಗಿರಲಿಲ್ಲ. ಆದ್ರೆ, ಬೆಳಿಗ್ಗೆ ಕಾಡಿನಲ್ಲಿ ಕುರಿಗಳು ಮೃತಪಟ್ಟಿರೋದು ಪತ್ತೆಯಾಗಿದೆ. 6 ಕುರಿಗಳ ಮೃತದೇಹಗಳು ಪತ್ತೆಯಾಗಿವೆ. ಹೀಗಾಗಿ, ಚಿರತೆಯೇ ಕುರಿಗಳನ್ನು ತಿಂದು ಹಾಕಿದೆ ಅನ್ನೋ ಅನುಮಾನ ಶುರುವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಗಮನಿಸಬೇಕಿದೆ.
Top Stories
ಇದು 108 ಅಂಬುಲೆನ್ಸ್ ಸಿಬ್ಬಂದಿಯ ಪ್ರಮಾಣಿಕ, ಮಾನವೀಯ ಕಾರ್ಯ.. 6 ತಿಂಗಳ ನಂತ್ರ ವ್ಯಕ್ತಿಯ ವಸ್ತುಗಳು ಮರಳಿದ್ದೇ ರೋಚಕ..?
ನಿವೃತ್ತ IPS ಅಧಿಕಾರಿ DG-IGP ಓಂ ಪ್ರಕಾಶ್ ಬರ್ಬರ ಹತ್ಯೆ..! ಪತ್ನಿಯೇ ಕೊಲೆ ಮಾಡಿರೋ ಶಂಕೆ..!
ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬಿದ್ದ ಕಾರವಾರ, ನಗರಸಭೆಯ ಮಾಜಿ ಸದಸ್ಯನ ಭೀಕರ ಹತ್ಯೆ, ಸತೀಶ್ ಕೊಳಂಕರ್ ನ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ..!
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ಮುಂಡಗೋಡ ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ರಜೆಯಿಲ್ಲ..!
ಮುಂಡಗೋಡ: ನಾಳೆ ಶುಕ್ರವಾರ ಮುಂಡಗೋಡ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ ಅಂತಾ ತಹಶೀಲ್ದಾರ್ ಶಂಕರ್ ಗೌಡಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಆದೇಶ ನೀಡಿರುವಂತೆ ಕರಾವಳಿ ಭಾಗದ ತಾಲೂಕುಗಳಾದ ಕಾರವಾರ, ಅಂಕೋಲಾ, ಭಟ್ಕಳ, ಕುಮಟಾ, ಹೊನ್ನಾವರ ಹಾಗೂ ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಜೋಯಿಡಾ ತಾಲೂಕಿನ ಶಾಲಾ ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗಿದೆ. ಆದ್ರೆ, ಮುಂಡಗೋಡ ತಾಲೂಕಿಗೆ ರಜೆ ನೀಡಲಾಗಿಲ್ಲ ಅಂತಾ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.
ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಮನವಿ..!
ಮುಂಡಗೋಡ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಇಂದು, ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು. ಬೆಂಗಳೂರಿನಲ್ಲಿ ನಡೆದ ಸತ್ಯಾಗ್ರಹಕ್ಕೆ ಬೆಂಬಲಿಸಿ ಹಾಗೂ ಬೇಡ ಜಂಗಮ, ಬುಡ್ಗ ಜಂಗಮ, ಮಾಲ ಜಂಗಮದವರಾದ ನಮಗೆ ಸಂವಿಧಾನಾತ್ಮಕವಾಗಿ ಸಿಗುವ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ವಿತರಿಸುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಂಗಮ ಸಮುದಾಯದಿಂದ ಮನವಿ ನೀಡಲಾಯಿತು. ಬೇಡ ಜಂಗಮರಿಗೆ ಸಂವಿಧಾನಾತ್ಮಕವಾಗಿ ಸಿಗುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟ ನ್ಯಾಯ ಸಮ್ಮತವಾಗಿದೆ. ಸತ್ಯ ಪ್ರತಿಪಾದನಾ ಸತ್ಯಾಗ್ರಹದ ನೇತೃತ್ವ ವಹಿಸಿರುವ ನ್ಯಾಯವಾದಿ ಬಿ. ಡಿ. ಹಿರೇಮಠ ಅವರು ಬೇಡ ಜಂಗಮ ಸಮುದಾಯದ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ಹೋರಾಟಕ್ಕೆ ನಮ್ಮೇಲ್ಲರ ಬೆಂವಲವಿದೆ ಅಂತಾ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ವೇಳೆ, ರುದ್ರಮನಿ ಶಾಸ್ತ್ರಿಗಳು, ಬಸಯ್ಯ ಶಾಸ್ತ್ರಿಗಳು, ಮಂಜುನಾಥ್ ಹಿರೇಮಠ, ಶಿವಯೋಗಿ ಕೂಡಲಮಠ, ಚನ್ನಬಸಯ್ಯ ಹಿರೇಮಠ, ನಿಂಗಯ್ಯ ಸುರಗಿ ಮಠ,...
ಬೋಟ್ ನಲ್ಲಿ ನದಿ ದಾಟುತ್ತಿದ್ದ ವೇಳೆ ನದಿಯಲ್ಲೇ ಸಿಲುಕಿದ ಐವರ ರಕ್ಷಣೆ..!
ಕಾರವಾರ: ಗ್ರಾಮದಿಂದ ಗ್ರಾಮಕ್ಕೆ ನದಿಯಲ್ಲಿ ಬೋಟ್ ಮೂಲಕ ದಾಟುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಬೋಟು ಕೆಟ್ಟು ಐವರು ಗ್ರಾಮಸ್ಥರು ಗಂಗಾವಳಿ ನದಿಯ ಮಧ್ಯೆ ಸಿಲುಕಿಕೊಂಡಿದ್ದ ಘಟನೆ ನಡೆದಿದೆ. ಅಂಕೋಲಾ ತಾಲೂಕಿನ ಡೋಂಗ್ರಿ ಪಂಚಾಯತಿ ವ್ಯಾಪ್ತಿಯ ರಾಮನಗುಳಿಯಿಂದ ಡೋಂಗ್ರಿಗೆ ಸಂಪರ್ಕಿಸುವ ತೂಗುಸೇತುವೆ ಕಳೆದ ಎರಡು ವರ್ಷಗಳ ಹಿಂದೆ ಗಂಗಾವಳಿಯ ನೆರೆಗೆ ಕೊಚ್ಚಿ ಹೋಗಿತ್ತು. ಇದರಿಂದಾಗಿ ಸದ್ಯ ಇಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯ ಕೂಡ ಪ್ರಗತಿಯಲ್ಲಿತ್ತು. ಆದ್ರೆ, ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಈ ತಾತ್ಕಾಲಿಕ ಸೇತುವೆಯ ಮೇಲೂ ನೀರು ಹರಿದು ರಾಮನಗುಳಿಯಿಂದ ಡೋಂಗ್ರಿಗೆ ಸಂಪರ್ಕ ಕಡಿತಗೊಂಡಿದ್ದು, ಹತ್ತಾರು ಹಳ್ಳಿಗಳ ಜನತೆ ನಡುಗಡ್ಡೆಯಲ್ಲಿ ಜೀವನ ನಡೆಸುವಂತಾಗಿದೆ. ಈ ಎರಡೂ ಗ್ರಾಮಗಳ ನಡುವೆ ಓಡಾಟಕ್ಕೆ ಸದ್ಯ ಬೋಟನ್ನು ಬಳಸಲಾಗುತ್ತಿದ್ದು, ಹೀಗೆ ಗುಳ್ಳಾಪುರದಿಂದ ಡೋಂಗ್ರಿಗೆ ಬೋಟಿನಲ್ಲಿ ತೆರಳುತ್ತಿದ್ದ ಐವರು ರಭಸದ ಗಂಗಾವಳಿ ನದಿಯ ನಡುವೆ ಸಿಲುಕಿದ್ದಾರೆ. ಈ ಬೋಟು ಈ ಮೊದಲು ಹಾಳಾಗಿತ್ತು. ನಿನ್ನೆಯಷ್ಟೆ ದುರಸ್ತಿ ಮಾಡಿ ನದಿಗೆ ಇಳಿಸಲಾಗಿತ್ತು...
ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ, ರಕ್ಷಣೆ ಮಾಡಿದ್ದು ಹೇಗೆ ಗೊತ್ತಾ..?
ಕಾರವಾರ: ತಾಲೂಕಿನ ಗೋಟೆಗಾಳಿ ಗ್ರಾಮದಲ್ಲಿ ಬೃಹತ್ ಕಾಳಿಂಗ ಸರ್ಪ ಪತ್ತೆಯಾಗಿದೆ. ಇಲ್ಲಿನ ವಾಸು ಪೆಡ್ನೇಕರ್ ಎಂಬುವವರ ಮನೆಯ ಬಳಿ ಪ್ರತ್ಯಕ್ಷವಾಗಿದ್ದ ಕಾಳಿಂಗ ಸರ್ಪ ಕಂಡು ಕುಟುಂಬದವರು ಆತಂಕಗೊಂಡಿದ್ರು. ಹಾಗೆ, ಕಾಳಿಂಗ ಸರ್ಪ ಕಂಡು ಅತಂಕಗೊಂಡ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಹೀಗಾಗಿ, ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಾಳಿಂಗ ರಕ್ಷಣೆ ಮಾಡಲಾಗಿದೆ. ಬರೋಬ್ಬರಿ 12 ಅಡಿ..! ಅಲ್ಲಿ ಪ್ರತ್ಯಕ್ಷವಾಗಿದ್ದ ಕಾಳಿಂಗ ಸರ್ಪ ಬರೋಬ್ಬರಿ 12 ಅಡಿಗೂ ಹೆಚ್ಚು ಉದ್ದವಾಗಿದೆ. ಆಹಾರ ಹುಡುಕಿಕೊಂಡು ಜನವಸತಿ ಪ್ರದೇಶಕ್ಕೆ ಆಗಮಿಸಿರುವ ಕಾಳಿಂಗ ಸರ್ಪ ಕಂಡು ಸ್ಥಳೀಯರು ಆತಂಕಗೊಂಡಿದ್ದರು. ಹೀಗಾಗಿ, ಕಾಳಿಂಗ ಸರ್ಪ ರಕ್ಷಣೆ ಬಳಿಕ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು, ಸೆರೆಹಿಡಿದ ಕಾಳಿಂಗ ಸರ್ಪವನ್ನು ಅರಣ್ಯ ಸಿಬ್ಬಂದಿಗಳು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಭೀಕರ ಅಪಘಾತ, ನಿಡಸೋಸಿ ಮಠದ ಶ್ರೀಗಳು ಅದೃಷ್ಟವಶಾತ್ ಪಾರು..!
ಧಾರವಾಡ – ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರ ಅಂತ್ಯಕ್ರಿಯೆಗೆ ಬಂದಿದ್ದ ಶ್ರೀಗಳ ಕಾರು ಅಪಘಾತವಾಗಿದೆ. ಬೆಳಗಾವಿ ಹೊರವಲಯದ ತೇಗೂರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತವಾಗಿದೆ. ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಪ್ರಯಾಣಿಸುತ್ತಿದ್ದ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿದ್ದು, ಕಾರ್ ಪಲ್ಟಿಯಾಗಿ ಕಾರ ನುಜ್ಜುಗುಜ್ಜಾಗಿದೆ. ಆದ್ರೆ ಏರಬ್ಯಾಗ ಇದ್ದಿದ್ದರಿಂದ ಅದೃಷ್ಟವಶಾತ್ ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶ್ರೀಗಳ ಕಾಲಿಗೆ ಚಿಕ್ಕಪುಟ್ಟ ಗಾಯವಾಗಿದೆ. ಸದ್ಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿ ಚಾಲಕ ರಮೇಶ ಮಾಳಿ ಸೇರಿದಂತೆ ಇಬ್ಬರು ಆಪ್ತ ಸಹಾಯಕರು ಕಾರಿನಲ್ಲಿದ್ದರು. ಎಲ್ಲರಿಗೂ ಸಣ್ಣ ಪುಟ್ಟ ಗಾಯ ಹೊರತುಪಡಿಸಿದರೆ ಯಾವುದೇ ಗಂಭೀರ ಪ್ರಮಾಣದ ಗಾಯಗಳಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಗಡಿಭಾಗದಲ್ಲಿ ಅಪಾರ ಭಕ್ತ ಸಮೂಹ ಹೊಂದಿರುವ ಶ್ರೀಗಳು, ಸರಳತೆಯ ಮೂಲಕ ಉತ್ತರ ಕರ್ನಾಟಕದ ನಡೆದಾಡುವ ದೇವರು ಅಂತಲೇ ಪ್ರಖ್ಯಾತಿ ಪಡೆದಿದ್ದಾರೆ. ಹೀಗಾಗಿ, ಜಗದ್ಗುರು ಪಂಚಮ ಶಿವಲಿಂಗೇಶ್ವರ ಕಾರು ಅಪಾಘತವಾಗಿರುವ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ...
21 ವರ್ಷ ದೇಶ ಕಾಯ್ದ ವೀರ ಯೋಧನಿಗೆ ಮುಂಡಗೋಡಿಗರ ಭವ್ಯ ಸ್ವಾಗತ ಹೇಗಿತ್ತು ಗೊತ್ತಾ..?
ಮುಂಡಗೋಡ; ಅವ್ರು ಬರೋಬ್ಬರಿ 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದೇಶ ಕಾಯ್ದವರು. ಈಗಷ್ಟೇ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸುತ್ತಿರೋ ದೀರ ಯೋಧ. ಬಿಎಸ್ ಎಫ್ ಯೋಧನಾಗಿ ದೇಶದ ಗಡಿ ಕಾಯ್ದ ವೀರನಿಗೆ ಇಂದು ಮುಂಡಗೋಡಿಗರು ಹೃದಯಪೂರ್ವಕ ಸ್ವಾಗತ ಕೋರಿದ್ರು. ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಯೋಧ ಗಣಪತಿ ರವಳಪ್ಪನವರ್ ರವರಿಗೆ ಭವ್ಯ ಸ್ವಾಗತ ಕೋರಲಾಯಿತು. ಹಾರ ಹಾಕಿ ಗೌರವಪೂರ್ವಕ ಸನ್ಮಾನಿಸಲಾಯಿತು. ಪಟಾಕಿ ಸಿಡಿಸಿ ಯೋಧನ ಆಗಮನಕ್ಕೆ ಸಂಭ್ರಮಿಸಲಾಯಿತು. ನೂರಾರು ಬೈಕ್ ಗಳನ್ನೇರಿ ಜಯಕಾರಗಳೊಂದಿಗೆ ಯೋಧನಿಗೆ ಮೆರವಣಿಗೆ ಮೂಲಕ ಸ್ವಗ್ರಾಮಕ್ಕೆ ಕರೆತರಲಾಯಿತು.
ನಾಳೆ ಗುರುವಾರವೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಿಸಿ ಡೀಸಿ ಆದೇಶ..!
ಮುಂಡಗೋಡ ತಾಲೂಕಿನಲ್ಲಿ ಮಳೆಯ ಅರ್ಬಟ ಮುಂದುವರೆದ ಹಿನ್ನೆಲೆಯಲ್ಲಿ ನಾಳೆ ಗುರುವಾರವೂ ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಸೂಚನೆ ನೀಡಲಾಗಿದ್ದು. ಹವಾಮಾನ ಇಲಾಖೆ ನೀಡಿರೋ ಮುನ್ಸೂಚನೆ ಹಿನ್ನೆಲೆಯಲ್ಲಿ, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನಾಳೆ ಗುರುವಾರವೂ ರಜೆ ಘೋಷಣೆ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಭಾರೀಮಳೆ ಸುರಿಯೋ ಮುನ್ಸೂಚನೆ ನೀಡಲಾಗಿದ್ದು, ಎಚ್ಚರಿಕೆ ವಹಿಸುವಂತೆ ತಾಲೂಕಾಡಳಿತಗಳಿಗೆ ಸಂದೇಶ ರವಾನಿಸಲಾಗಿದೆ.
ಟಿಬೇಟಿಯನ್ ಕಾಲೋನಿಯಲ್ಲಿ ದಲೈ ಲಾಮಾರ 87 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ..!
ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಇಂದು ನೊಬೆಲ್ ಪ್ರಶಸ್ತಿ ಪುರಸ್ಕೃತ, ಟಿಬೇಟಿಗರ ಧರ್ಮಗುರು ದಲೈ ಲಾಮಾರವರ 87 ನೇ ಜನ್ಮ ದಿನದ ಸಂಭ್ರಮ ಕಳೆ ಕಟ್ಟಿದೆ. ಟಿಬೇಟಿಯನ್ ಕಾಲೋನಿಯ ಕ್ಯಾಂಪ್ ನಂ.3 ರ ಕಮ್ಯುನಿಟಿ ಹಾಲ್ ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ದಲೈ ಲಾಮಾರವರ ಹುಟ್ಟು ಹಬ್ಬದ ನಿಮಿತ್ತ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಅಪರ ಜಿಲ್ಲಾಧಿಕಾರಿ ರಾಜೂ ಮೊಗವೀರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ರು. ಇನ್ನು, ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ಟಿಬೇಟಿಗರು, ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದ್ರು. ವಿವಿಧ ವೇಷ ಭೂಷಣಗಳೊಂದಿಗೆ ದಲೈ ಲಾಮಾರವರ ಹುಟ್ಟುಹಬ್ಬದ ಸಂಭ್ರಮದಲ್ಲಿ ತೊಡಗಿದ್ದರು.
ಭಾರೀ ಮಳೆ, ಗೋಕರ್ಣ ಬಳಿ ರಸ್ತೆ ಮೇಲೆ ಗುಡ್ಡ ಕುಸಿತ, ರಸ್ತೆ ಸಂಚಾರ ಅಸ್ತವ್ಯಸ್ತ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ, ಅವಾಂತರಗಳು ಸೃಷ್ಟಿಯಾಗಿವೆ. ಕುಮಟಾ ತಾಲೂಕಿನ ಗೋಕರ್ಣ ಕ್ರಾಸ್ ಬಳಿ ಗುಡ್ಡ ಕುಸಿತವಾಗಿದೆ. ಗೋಕರ್ಣದ ಮಾದನಗೇರಿಯ ಬಳಿ ಗುಡ್ಡ ಕುಸಿತವಾಗಿದ್ದು, ಐಆರ್ಬಿ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಗುಡ್ಡ ಕುಸಿತವಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಗುಡ್ಡ ಕುಸಿತದಿಂದಾಗಿ, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು, ಹೀಗಾಗಿ, ವಾಹನಗಳಿಗೆ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೆದ್ದಾರಿಗೆ ಬಿದ್ದ ಮಣ್ಣನ್ನ ತೆರವುಗೊಳಿಸುವ ಕಾರ್ಯ ಚುರುಕುಗೊಳಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.