21 ವರ್ಷ ದೇಶ ಕಾಯ್ದ ವೀರ ಯೋಧನಿಗೆ ಮುಂಡಗೋಡಿಗರ ಭವ್ಯ ಸ್ವಾಗತ ಹೇಗಿತ್ತು ಗೊತ್ತಾ..?


ಮುಂಡಗೋಡ; ಅವ್ರು ಬರೋಬ್ಬರಿ 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದೇಶ ಕಾಯ್ದವರು. ಈಗಷ್ಟೇ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸುತ್ತಿರೋ ದೀರ ಯೋಧ. ಬಿಎಸ್ ಎಫ್ ಯೋಧನಾಗಿ ದೇಶದ ಗಡಿ ಕಾಯ್ದ ವೀರನಿಗೆ ಇ‌ಂದು ಮುಂಡಗೋಡಿಗರು ಹೃದಯಪೂರ್ವಕ ಸ್ವಾಗತ ಕೋರಿದ್ರು.

ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಯೋಧ ಗಣಪತಿ ರವಳಪ್ಪನವರ್ ರವರಿಗೆ ಭವ್ಯ ಸ್ವಾಗತ ಕೋರಲಾಯಿತು. ಹಾರ ಹಾಕಿ ಗೌರವಪೂರ್ವಕ ಸನ್ಮಾನಿಸಲಾಯಿತು. ಪಟಾಕಿ ಸಿಡಿಸಿ ಯೋಧನ ಆಗಮನಕ್ಕೆ ಸಂಭ್ರಮಿಸಲಾಯಿತು. ನೂರಾರು ಬೈಕ್ ಗಳನ್ನೇರಿ ಜಯಕಾರಗಳೊಂದಿಗೆ ಯೋಧನಿಗೆ ಮೆರವಣಿಗೆ ಮೂಲಕ ಸ್ವಗ್ರಾಮಕ್ಕೆ ಕರೆತರಲಾಯಿತು.

error: Content is protected !!