ಕಾರವಾರ: ತಾಲೂಕಿನ ಗೋಟೆಗಾಳಿ ಗ್ರಾಮದಲ್ಲಿ ಬೃಹತ್ ಕಾಳಿಂಗ ಸರ್ಪ ಪತ್ತೆಯಾಗಿದೆ. ಇಲ್ಲಿನ ವಾಸು ಪೆಡ್ನೇಕರ್ ಎಂಬುವವರ ಮನೆಯ ಬಳಿ ಪ್ರತ್ಯಕ್ಷವಾಗಿದ್ದ ಕಾಳಿಂಗ ಸರ್ಪ ಕಂಡು ಕುಟುಂಬದವರು ಆತಂಕಗೊಂಡಿದ್ರು.
ಹಾಗೆ, ಕಾಳಿಂಗ ಸರ್ಪ ಕಂಡು ಅತಂಕಗೊಂಡ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಹೀಗಾಗಿ, ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಾಳಿಂಗ ರಕ್ಷಣೆ ಮಾಡಲಾಗಿದೆ.
ಬರೋಬ್ಬರಿ 12 ಅಡಿ..!
ಅಲ್ಲಿ ಪ್ರತ್ಯಕ್ಷವಾಗಿದ್ದ ಕಾಳಿಂಗ ಸರ್ಪ ಬರೋಬ್ಬರಿ 12 ಅಡಿಗೂ ಹೆಚ್ಚು ಉದ್ದವಾಗಿದೆ. ಆಹಾರ ಹುಡುಕಿಕೊಂಡು ಜನವಸತಿ ಪ್ರದೇಶಕ್ಕೆ ಆಗಮಿಸಿರುವ ಕಾಳಿಂಗ ಸರ್ಪ ಕಂಡು ಸ್ಥಳೀಯರು ಆತಂಕಗೊಂಡಿದ್ದರು. ಹೀಗಾಗಿ, ಕಾಳಿಂಗ ಸರ್ಪ ರಕ್ಷಣೆ ಬಳಿಕ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು, ಸೆರೆಹಿಡಿದ ಕಾಳಿಂಗ ಸರ್ಪವನ್ನು ಅರಣ್ಯ ಸಿಬ್ಬಂದಿಗಳು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.