ಮುಂಡಗೋಡ: ತಾಲೂಕಿನ ಕೊಪ್ಪದಲ್ಲಿ ಎಮರ್ಜೆನ್ಸಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಕೊಪ್ಪ ಗ್ರಾಮದ ಚನ್ನಪ್ಪ ಬಸಪ್ಪ ಶ್ಯಾಬಾಳ್ (30) ಎಂಬುವವನೇ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವ. ನಿನ್ನೆ ಬಾನುವಾರ ಬೆಳಿಗ್ಗೆ ತನ್ನ ಗದ್ದೆಯಲ್ಲೇ ಎಮರ್ಜೆನ್ಸಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಹೀಗಾಗಿ, ತಕ್ಷಣವೇ ಆತನನ್ನು ತಾಲೂಕಾಸ್ಪತ್ರೆಗ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತ ಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ. ಇನ್ನು,ಯುವಕನ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಟಿಬೇಟಿಯನ್ ಕಾಲೋನಿಗೆ ಅಕ್ರಮ ಗೋ ಮಾಂಸ ಸಾಗಿಸುತ್ತಿದ್ದ ವಾಹನ ಸಮೇತ ಓರ್ವ ಪೊಲೀಸರ ವಶಕ್ಕೆ..?
ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಗೆ ಸಾಗಾಣಿಕೆ ಮಾಡಲಾಗುತ್ತಿದ್ದ ಅಕ್ರಮ ಗೋ ಮಾಂಸದ ವಾಹನವನ್ನು ಮುಂಡಗೋಡ ಪೊಲೀಸರು ಕಾರ್ಯಾಚರಣೆ ನಡೆಸಿ ಸೀಜ್ ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಕಲಘಟಗಿ ಕಡೆಯಿಂದ ಸಾಗಿಸಲಾಗುತ್ತಿದ್ದ ಸುಮಾರು ಒಂದು ಕ್ವಿಂಟಾಲ್ ಗೂ ಹೆಚ್ಚು ತೂಗುವ ಗೋಮಾಂಸವನ್ನು ವಾಹನ ಸಮೇತ ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಅನ್ನೊ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ಇನ್ನೂ ಬರಬೇಕಿದೆ.
ಹುನಗುಂದ ಬಿಜೆಪಿ ಸಭೆಯಲ್ಲಿ ಇದೇನಿದು ವಿಚಿತ್ರ..? ಸಚಿವರೇ ಬಂದ್ರೂ ಬೂತ್ ಅಧ್ಯಕ್ಷರುಗಳೇ ಬರಲಿಲ್ಲ ಯಾಕೆ..?
ಯಲ್ಲಾಪುರ ಕ್ಷೇತ್ರದಲ್ಲಿ ಇವಾಗ ಬಿಜೆಪಿ ಪಕ್ಷ ಸಂಘಟನೆಗಾಗಿ ಸಚಿವ ಶಿವರಾಮ್ ಹೆಬ್ಬಾರ್ ಪ್ರತೀ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಮೈದಡವಿ ಮಾತಾಡ್ತಿದಾರೆ. ಈಗಾಗಲೇ ಸಾಕಷ್ಟು ಕಡೆ ಇಂತಹ ಹತ್ತಾರು ಸಭೆ ಆಗಿ ಹೋಗಿದೆ. ಆದ್ರೆ ಅದೇಲ್ಲದರ ಪರಿಣಾಮ ಏನಾಗಿದೆ..? ಎಲ್ಲೇಲ್ಲಿ ಒಳಗುದಿಯ ಹೊಗೆ ಆಡ್ತಿದೆ ಅನ್ನೋದು ಖುದ್ದು ಹೆಬ್ಬಾರ್ ಸಾಹೇಬ್ರಿಗೆ ಅರ್ಥವಾಗಿದೆಯಾ.? ಹುನಗುಂದದ ಕತೆ ಏನು..? ನಿನ್ನೆ ಶುಕ್ರವಾರ ಹುನಗುಂದದ ವಿರಕ್ತ ಮಠದಲ್ಲಿ ಇದೇ ಹೆಬ್ಬಾರ್ ಸಾಹೇಬ್ರು ತಮ್ಮ ಅಜೆಂಡಾದಂತೆ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಮಾಡಿದ್ರು. ಅಲ್ಲಿ ಹುನಗುಂದ, ಅಗಡಿ, ಅತ್ತಿವೇರಿಯ ಕಾರ್ಯಕರ್ತರು ಭಾಗಿಯಾಗಿದ್ರು. ಆದ್ರೆ, ಅಲ್ಲಿನ ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರಲ್ಲಿ ಮುಖ್ಯವಾಗಿ ಭಾಗಿಯಾಗಬೇಕಿದ್ದ ಹುನಗುಂದ, ಅಗಡಿ, ಅತ್ತಿವೇರಿಯ ಬಹುತೇಕ ಬೂತ್ ಅಧ್ಯಕ್ಷರುಗಳೇ ಕಾಣಲಿಲ್ಲ. ಪದಾಧಿಕಾರಿಗಳೇ ಕಂಡು ಬರಲಿಲ್ಲ. ನಿಜ ಅಂದ್ರೆ ಅಲ್ಲಿ ಬಂದಿದ್ದು ಕೇವಲ ಕೆಲವೇ ಕೆಲವು ಮುಖಂಡರುಗಳು ಮಾತ್ರ. ಬೂತ್ ಅದ್ಯಕ್ಷರು ಯಾಕೆ ಬರಲಿಲ್ಲ..? ನೀವೇ ಯೋಚನೆ ಮಾಡಿ, ಖುದ್ದು ಸಚಿವ ಹೆಬ್ಬಾರ್ ಸಾಹೇಬ್ರು ತಮ್ಮ ಬಿಡುವಿಲ್ಲದ ಸಮಯದಲ್ಲಿ...
ಬಡ್ಡಿಗೇರಿ ಕ್ರಾಸ್ ಬಳಿ ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ..!
ಮುಂಡಗೋಡ: ತಾಲೂಕಿನ ಬಡ್ಡಿಗೇರಿ ಕ್ರಾಸ್ ಬಳಿ ಮಹಿಳೆಯೋರ್ವಳು 108 ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಲೂಕಿನ ಬಡ್ಡಿಗೇರಿ ಗ್ರಾಮದ 22 ವರ್ಷ ವಯಸ್ಸಿನ ಸಕ್ಕುಬಾಯಿ ಸಿದ್ದು ತೋರವತ್ ಎಂಬುವವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೆರಿಗೆ ನೋವು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲು 108 ಅಂಬ್ಯುಲೆನ್ಸ್ ಗೆ ಕುಟುಂಬಸ್ಥರು ಕರೆ ಮಾಡಿದ್ದಾರೆ. ಹೀಗಾಗಿ, ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ಸಾಗಿಸುವಾಗ, ಮಹಿಳೆಗೆ ತೀವ್ರ ಹೆರಿಗೆ ನೋವು ಇದ್ದ ಕಾರಣ ಬಡ್ಡಿಗೇರಿ ಕ್ರಾಸ್ ಬಳಿ ಸುರಕ್ಷಿತವಾಗಿ ಹೆರಿಗೆಯನ್ನು ಮಾಡಿಸಲಾಯಿತು. 108 ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ. ಬಳೂರ್, ಚಾಲಕ ಕೆಂಚೇಶ್ ಸೇರಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಸದ್ಯ, ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದು, ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.
ಶಿರಸಿ ಮಾರಿಕಾಂಬೆ ದರ್ಶನ ಪಡೆದ ನಟ ಶಿವರಾಜ್ ಕುಮಾರ್ ದಂಪತಿ..!
ಶಿರಸಿ: ಮಾರಿಕಾಂಬಾ ದೇವಸ್ಥಾನಕ್ಕೆ ನಟ ಶಿವರಾಜ್ ಕುಮಾರ್ ಇಂದು ದಂಪತಿ ಸಮೇತ ಭೇಟಿ ನೀಡಿದ್ರು.ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಪೀಠಗಳಲ್ಲೊಂದಾದ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ, ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ರು. ಪತ್ನಿ ಗೀತಾ ಶಿವರಾಜ್ ಕುಮಾರ್ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಟ ಶಿವರಾಜ್ ಕುಮಾರ್, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆಯೇ ಶಿರಸಿಗೆ ಆಗಮಿಸಿದ್ದಾರೆ. ಇಂದು ಶುಕ್ರವಾರದ ಹಿನ್ನೆಲೆಯಲ್ಲಿ ಮಾರಿಕಾಂಬೆಗೆ ಸೇವೆ ಸಲ್ಲಿಸಿದ್ದಾರೆ.
ಹುಲುಗೂರು ಶೂಟೌಟ್ ಗೆ ಮುಂಡಗೋಡಿನಲ್ಲಿ ಸುಪಾರಿ..? ಖಾಕಿ ಕಂಡು ಎಸ್ಕೇಪ್ ಆದ್ನಾ ಆರೋಪಿ..?
ಶಿಗ್ಗಾವಿ ತಾಲೂಕಿನ ಹುಲಗೂರಿನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಪತಿಯೇ ತನ್ನ ಪತ್ನಿಯ ಹತ್ಯೆಗೆ ಸುಪಾರಿ ಕೊಟ್ಟಿದ್ನಾ..? ಅಷ್ಟಕ್ಕೂ ಆ “ಸುಪಾರಿ” ಕೈ ಬದಲಾಯಿಸಿದ್ದು ಮುಂಡಗೋಡಿನಲ್ಲಾ..? ಯಸ್, ಇಂತಹದ್ದೊಂದು ಅನುಮಾನ ಶಿಗ್ಗಾವಿ ಪೊಲೀಸರಿಗೆ ತಲೆ ಹೊಕ್ಕಿದೆ. ಯಾಕಂದ್ರೆ, ಅವತ್ತು ಗುಂಡಿನ ದಾಳಿ ಮಾಡಲು ಬಂದಿದ್ದ ಆ ಇಬ್ಬರಲ್ಲಿ ಓರ್ವ ಮುಂಡಗೋಡ ತಾಲೂಕಿನ ಆ ಗ್ರಾಮದವನಂತೆ.. ಆದ್ರೆ, ಆತ ಈ ಕ್ಷಣದವರೆಗೂ ಪೊಲೀಸರ ಕೈಗೆ ಸಿಕ್ಕೇ ಇಲ್ಲ ಅನ್ನೋ ಮಾಹಿತಿ ಗೊತ್ತಾಗಿದೆ. ಆದ್ರೆ, ಪೊಲೀಸರು ಮಾತ್ರ ಸುಮ್ನೆ ಕುಳಿತಿಲ್ಲ. ಕಾರ್ಯಾಚರಣೆ ಜಾರಿಯಲ್ಲಿಟ್ಟಿದ್ದಾರೆ. ಇಬ್ಬರೂ ಸುಪಾರಿ ಪಡೆದ್ರಾ..? ಅಷ್ಟಕ್ಕೂ, ಮೇ 24 ರ ರಾತ್ರಿ ಸಲ್ಮಾ ಬಾನು ಹತ್ಯೆಗೆ ಗುಂಡು ಹಾರಿಸಿದ್ದ ಆ ಇಬ್ಬರೂ ವ್ಯಕ್ತಿಗಳು ಪತಿಯಿಂದಲೇ ಸುಪಾರಿ ಪಡೆದು ಕೃತ್ಯ ನಡೆಸಲು ಬಂದಿದ್ರು ಅನ್ನೋ ಅನುಮಾನ ಪೊಲೀಸರಿಗೆ ಬಲವಾಗಿದೆ. ಆದ್ರೆ, ಘಟನೆ ನಡೆದ ಕೆಲವೇ ಹೊತ್ತಲ್ಲಿ ಸಲ್ಮಾಬಾನು ಕೊಟ್ಟ ಮಾಹಿತಿ ಆಧಾರದಲ್ಲಿ ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿಯಲ್ಲಿ ಎಗ್ ರೈಸ್ ಬೇಯಿಸುತ್ತಿದ್ದ ಆಕೆಯ ಪತಿ...
ಕಾರವಾರದ ಕದಂಬ ನೌಕಾನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್..!
ಕಾರವಾರ: ಭಾರತೀಯ ನೌಕಾಪಡೆಯು ವಿಶ್ವದಲ್ಲಿ ಅತ್ಯುತ್ತಮವಾದ ಗೌರವ ಹೊಂದಿದೆ. ಅಮೆರಿಕದ ನೌಕಾಪಡೆಯು ಭಾರತೀಯ ನೌಕಾಪಡೆಯೊಂದಿಗೆ ಸಹಯೋಗ ಹೊಂದಲು ಉತ್ಸುಕವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು. ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿ ನೌಕಾ ಸಿಬ್ಬಂದಿಗಳ ಕುಟುಂಬದೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತದ ಕಡಲು ನೌಕಾದಳದಿಂದಾಗಿ ಸುರಕ್ಷಿತವಾಗಿದೆ. ದೇಶದ ಗಡಿಗಳು ಸುರಕ್ಷಿತವಾಗಿವೆ. ಇದರಲ್ಲಿ, ದೇಶದ ರಕ್ಷಣೆಯಲ್ಲಿ ತೊಡಗಿರುವ ಮೂರೂ ಪಡೆಗಳ ಕೊಡುಗೆಯಿದೆ. ಹಾಗಾಗಿ ಪ್ರಜೆಗಳಲ್ಲಿ ನಿಮ್ಮೆಲ್ಲರ ಬಗ್ಗೆ ಇರುವ ಗೌರವ ಮತ್ತು ಹೆಮ್ಮೆಯನ್ನು ನೀವು ಊಹಿಸಲೂ ಸಾಧ್ಯವಿಲ್ಲ. ನೀವು ದೇಶದ ಯುವಕರಿಗೆ ಪ್ರೇರಣೆ ನೀಡುತ್ತಿದ್ದೀರಿ ಎಂದು ಶ್ಲಾಘಿಸಿದರು. ವೃತ್ತಿಗಾಗಿ ಸಮುದ್ರದಲ್ಲಿ ಒಮ್ಮೆ ಹೊರಟರೆ ತಿಂಗಳುಗಟ್ಟಲೆ ಭೂಮಿಯನ್ನೇ ನೀವು ನೋಡುವುದಿಲ್ಲ. ಯಾರ ಜೊತೆಯಾದರೂ ಮಾತನಾಡುವುದಿದ್ದರೆ ಸಮುದ್ರದ ಜೊತೆಯೇ ಮಾತನಾಡಬೇಕು. ನೀರಿನ ಹೊರತಾಗಿ ಮತ್ತೇನೂ ಶಬ್ದವೂ ಕೇಳಿಸುವುದಿಲ್ಲ. ನಿಮ್ಮಂಥ ಮಕ್ಕಳನ್ನು ದೇಶ ಸೇವೆಗೆ ಕೊಡುಗೆಯಾಗಿ ನೀಡಿದ ಮಾತಾ ಪಿತರನ್ನು, ನಿಮ್ಮ ಪತ್ನಿಯರಿಗೆ ನಮಸ್ಕರಿಸುತ್ತೇನೆ ಎಂದರು. ಇಂದಿನ ಕಾರ್ಯಕ್ರಮ.. ಕೇಂದ್ರ ರಕ್ಷಣಾ...
ಕಾತೂರು ಬಳಿ ಶವ ಸಿಕ್ಕ ಕೇಸ್: ಟ್ರಾಕ್ಟರ್ ಮೇಲಿಂದ ಬಿದ್ದು ಸಾವು ಕಂಡನಾ ನಾಗನೂರಿನ ಶಂಭಣ್ಣ..?
ಮುಂಡಗೋಡ ತಾಲೂಕಿನ ನಾಗನೂರಿನಲ್ಲಿ ವ್ಯಕ್ತಿಯೋರ್ವನ ಶವ ಸಿಕ್ಕಿದೆ. ಕಾತೂರಿನಿಂದ ನಾಗನೂರಿಗೆ ತೆರಳುವ ಮಾರ್ಗದಲ್ಲಿ ಕಾತೂರಿನಿಂದ ಹೆಚ್ಚೂ ಕಡಿಮೆ 200 ಮೀಟರ್ ಅಂತರದಲ್ಲಿ ರಕ್ತಸಿಕ್ತವಾಗಿದ್ದ ಶವ ಸಿಕ್ಕಿದ್ದು ಬಹುತೇಕ ಆ ಭಾಗದಲ್ಲಿ ಭಯದ ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಆದ್ರೀಗ ಅದೊಂದು ಆಕಸ್ಮಿಕ ಅಪಘಾತ ಅನ್ನೋ ಮಾತುಗಳು ಕೇಳಿ ಬರ್ತಿವೆ. ಮರ್ಡರ್ ಅನಕೊಂಡಿದ್ರು..! ಶವ ಸಿಕ್ಕ ಸ್ಥಿತಿ ನೋಡಿದ್ರೆ, ಇದೊಂದು ಕೊಲೆನಾ ಅನ್ನೊ ಅನುಮಾನಕ್ಕೆ ತಂದು ನಿಲ್ಲಿಸತ್ತು. ಆದ್ರೆ ಮತ್ತೊಂದು ಮಗ್ಗಲಿನಲ್ಲಿ ನೋಡಿದ್ರೆ ಇದೊಂದು ಆಕಸ್ಮಿಕ ಅಪಘಾತದ ಸಾವು ಅನ್ನೊದು ಕಂಡು ಬಂದಿತ್ತು. ಯಾಕಂದ್ರೆ ಆ ಮನುಷ್ಯನ ಹೆಣ ಉರುಳಿಸುವಂತಹ ದುಶ್ಮನಿಗಳು ಅವನಿಗೆ ಯಾರೂ ಇಲ್ಲವಂತೆ, ಅಷ್ಟಕ್ಕೂ ಆತ ತುಂಬಾ ಸೂಕ್ಷ್ಮ ಹಾಗೂ ಸಂಭಾವಿತ ವ್ಯಕ್ತಿ. ಹೀಗಿದ್ದಾಗ ಯಾರಪ್ಪಾ ಅವನ ದುಷ್ಮನ್ ಆಗೋಕೆ ಸಾಧ್ಯ ಅಂತಿದಾರೆ ಅತನ ಸಂಬಂದಿಕರು. ಹಾಗಿದ್ರೆ ಆಗಿದ್ದೇನು..? ನಿನ್ನೆ ನಾಗನೂರಿನಿಂದ ಶಿರಸಿಗೆ ಟ್ರಾಕ್ಟರ್ ಮೂಲಕ ಇಟ್ಟಿಗೆ ತುಂಬಿಕೊಂಡು ಹೋಗಿದ್ದ ಜನರಲ್ಲಿ ಈತನೂ ಒಬ್ಬ. ಆದ್ರೆ, ಹಾಗೆ ಹೋಗಿದ್ದ...
ಶಿಗ್ಗಾವಿಯ ಹುಲಗೂರಲ್ಲಿ ನಡೆದ ಗುಂಡಿನ ದಾಳಿಗೂ, ಮುಂಡಗೋಡಿಗೂ ಏನದು ನಂಟು..? ಅಷ್ಟಕ್ಕೂ ಬಂದೂಕು ಯಾರದ್ದು..?
ಶಿಗ್ಗಾವಿ ತಾಲೂಕಿನ ಹುಲಗೂರಿನಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿಯ ಹಿಂದೆ ಮುಂಡಗೋಡ ತಾಲೂಕಿನ ಲಿಂಕ್ ಇದೆಯಾ..? ಹೌದು ಅಂತಿದೆ ಮೂಲಗಳು. ನಿನ್ನೆ ರಾತ್ರಿ ಹುಲಗೂರಿನ ತನ್ನ ಮನೆಯ ಜಗುಲಿಯಲ್ಲಿ ಕುಳಿತಿದ್ದ ಮಹಿಳೆ ಸಲ್ಮಾಬಾನು ಮೇಲೆ ಅಪರಿಚಿತ ಇಬ್ಬರು ವ್ಯಕ್ತಿಗಳು ಬೈಕ್ ಮೇಲೆ ಬಂದು ಒಂದು ಸುತ್ತು ಗುಂಡಿನ ದಾಳಿ ನಡೆಸಿದ್ರು. ಅದೃಷ್ಟವಶಾತ್ ಮಹಿಳೆಗೆ ಗುಂಡು ತಗುಲಿಲ್ಲ. ಅದ್ರೆ, ಸಿಡಿದ ಗುಂಡಿನ ರಭಸಕ್ಕೆ ಗೋಡೆ ಸೀಳಿ ಒಳ ನುಗ್ಗಿವೆ ಗುಂಡುಗಳು. ಪಕ್ಕಾ ಸುಳಿವು..? ಆದ್ರೆ, ಹುಲಗೂರಿನಲ್ಲಿ ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಬಚಾವಾಗಿದ್ದ ಸಲ್ಮಾಬಾನು ಈಗ ಪೊಲೀಸರ ಎದುರು ಒಂದಿಷ್ಟು ಇಂಟರ್ನಲ್ ಮಾಹಿತಿ ಬಿಚ್ಚಿಟ್ಟಿದ್ದಾಳೆ ಎನ್ನಲಾಗಿದೆ. ತನ್ನ ಪತಿಯೇ ನನ್ನ ಮೇಲೆ ಅಟ್ಯಾಕ್ ಮಾಡಿರಬಹುದು ಅನ್ನೋ ಶಂಕೆ ವ್ಯಕ್ತ ಪಡಿಸಿದ್ದಾಳೆ ಅನ್ನೊ ಬಾತ್ಮಿ ಬಂದಿದೆ. ಹೀಗಾಗಿ, ಸದ್ಯ ಶಿಗ್ಗಾವಿ ಪೋಲೀಸ್ರು ಆಕೆಯ ಪತಿಗಾಗಿ ನಿನ್ನೆ ರಾತ್ರಿಯಿಂದಲೇ ತಲಾಶ್ ಶುರುವಿಟ್ಟಿದ್ದಾರೆ. ಹೌದು, ನಿನ್ನೆ ರಾತ್ರಿ ನಡೆದ ಗುಂಡಿನ ದಾಳಿಯ ಅದೃಷ್ಟದಾಟದಲ್ಲಿ...
ಶಿಗ್ಗಾವಿಯ ಹುಲಗೂರಿನಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ, ಬೈಕ್ ಮೇಲೆ ಬಂದಿದ್ದವರು ಹಾರಿಸಿದ್ರು ಗುಂಡು..!
ಶಿಗ್ಗಾವಿ ತಾಲೂಕಿನಲ್ಲಿ ಮತ್ತೊಂದು ಪೈರಿಂಗ್ ನಡೆದಿದೆ. ಹುಲಗೂರಿನಲ್ಲಿ ಮನೆಯ ಹೊರಗಡೆ ಜಗುಲಿಯ ಮೇಲೆ ಕುಳಿತ ಮಹಿಳೆ ಮೇಲೆ ಬೈಕ್ ಮೇಲೆ ಬಂದಿದ್ದ ಅಪರಿಚಿತರಿಂದ ಕತ್ತಲಿನಲ್ಲೇ ಗುಂಡಿನ ದಾಳಿ ನಡೆದಿದೆ. ಅದೃಷ್ಟವಶಾತ್ ಗುಂಡಿನ ದಾಳಿಯಲ್ಲಿ ಮಹಿಳೆ ಬಚಾವ್ ಆಗಿದ್ದಾಳೆ. ಹುಲಗೂರಿನಲ್ಲಿ ತಡರಾತ್ರಿ ಮನೆಯ ಎದುರು ಕುಳಿತಿದ್ದ ಸಲ್ಮಾ ಎಂಬುವವಳ ಮೇಲೆ ಬೈಕ್ ನಲ್ಲಿ ಬಂದ ಮುಸುಕುಧಾರಿಗಳಿಂದ ಕತ್ತಲಿನಲ್ಲೇ ಒಂದು ಸುತ್ತು ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿ ನಡೆಯುತ್ತಲೇ ಮಹಿಳೆ ಮನೆಯ ಒಳಗೆ ಓಡಿದ್ದಾಳೆ. ಹೀಗಾಗಿ, ಹಾರಿ ಬಂದ ಗುಂಡುಗಳು ಗೋಡೆಗೆ ತಾಗಿವೆ. ಸ್ಥಳಕ್ಕೆ ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸೇರಿದಂತೆ ಶಿಗ್ಗಾವಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.