ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಗುರುವೀರಯೋಗೇಂದ್ರ ಸ್ವಾಮೀಜಿಯ ತೆಪ್ಪದ ರಥೋತ್ಸವ ಶೃದ್ಧಾಭಕ್ತಿಯಿಂದ ಜರುಗಿತು. ಇಲ್ಲಿನ ಕಲ್ಯಾಣಿಯಲ್ಲಿ ನಡೆದ ತೆಪ್ಪದ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಹೊಂಡದ ದಡದಲ್ಲಿ ನಿಂತಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದರು ಭಕ್ತಿ ತೋರಿದ್ರು. ಸಂಜೆಯಾಗುತ್ತಿದ್ದಂತೆ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ತೆಪ್ಪದ ರಥವು ಕೆರೆಯಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದಂತೆ, ಭಕ್ತರ ಜಯಘೋಷಗಳು ಮೊಳಗಿದವು.
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
Category: ಉತ್ತರ ಕನ್ನಡ
ಟಿಬೇಟಿಯನ್ ಕಾಲೋನಿಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಕೋವಿಡ್ ಕಟ್ಟೇಚ್ಚರ..!
ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಗಳಲ್ಲಿ ಕೆಲಸಕ್ಕೆ ಹೋಗುವ ಸುತ್ತ ಮುತ್ತಲ ಹಳ್ಳಿಗಳ ಕೂಲಿ ಕಾರ್ಮಿಕರಿಗೆ ಆತಂಕ ಶುರುವಾಗಿದೆ. ರವಿವಾರ ತಾಲೂಕಿನ ಹುನಗುಂದ ಗ್ರಾಮದ ಮಹಿಳೆಯೋರ್ವಳಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದ್ದು ಮತ್ತಷ್ಟು ಆತಂಕಕ್ಕೇ ಕಾರಣವಾಗಿದೆ. ನಿತ್ಯವೂ ಇಲ್ಲಿನ ಟಿಬೇಟಿಯನ್ ಕಾಲೋನಿಗಳಿಗೆ ಕೆಲಸಕ್ಕೆ ತೆರಳುವ ನೂರಾರು ಕಾರ್ಮಿಕರು ತಕ್ಷಣವೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆಯಾ ಗ್ರಾಮಗಳ ಗ್ರಾಮ ಪಂಚಾಯತಿಗಳು ಸೂಚನೆ ನೀಡಿವೆ.
ಹುನಗುಂದಕ್ಕೆ ಮತ್ತೆ ವಕ್ಕರಿಸಿದ ಕೊರೋನಾ, ಓರ್ವ ಮಹಿಳೆಗೆ ಸೋಂಕು ದೃಢ..!
ಮುಂಡಗೋಡ: ತಾಲೂಕಿನ ಹುನಗುಂದದಲ್ಲಿ ಮತ್ತೆ ಕೊರೊನಾ ಎಂಟ್ರಿ ಕೊಟ್ಟಿದೆ. ಟಿಬೇಟಿಯನ್ ಕಾಲೋನಿಗೆ ಮನೆಕೆಲಸಕ್ಕೆ ಹೋಗುತ್ತಿದ್ದ ಹುನಗುಂದದ ಮಹಿಳೆಯೊಬ್ಬಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಅಂತಾ ಗ್ರಾಮ ಪಂಚಾಯತಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇಲ್ಲಿನ ಮಹಿಳೆ ಪ್ರತಿನಿತ್ಯ ಟಿಬೇಟಿಯನ್ ಕಾಲೋನಿಗೆ ಮನೆಕೆಲಸಕ್ಕೆ ಅಂತಾ ಅಡುಗೆ ಮಾಡಲು ಹೋಗುತ್ತಿದ್ದಳು ಎನ್ನಲಾಗಿದೆ. ಹೀಗಾಗಿ, ಟಿಬೇಟಿಯನ್ ಕಾಲೋನಿಯಲ್ಲಿ ಕೋವಿಡ್ ಟೆಸ್ಟ್ ಮಾಡಿದ್ದರು. ನಂತರ ಆ ವರದಿಯಲ್ಲಿ ಮಹಿಳೆಗೆ ಕೊರೋನಾ ದೃಢ ಪಟ್ಟಿದೆ. ಹೀಗಾಗಿ, ಗ್ರಾಮ ಪಂಚಾಯತಿ ಸದಸ್ಯರುಗಳು, ಸಿಬ್ಬಂದಿಗಳು ಸೋಂಕಿತೆಯ ಮನೆಗೆ ಭೇಟಿ ನೀಡಿ...
ಹುನಗುಂದ ಗ್ರಾಮದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ..!
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ಕಾರ್ತಿಕ ಅಮವಾಸ್ಯೆಯ ನಿಮಿತ್ತ ಕಾರ್ತಿಕೋತ್ಸವ ಆಚರಿಸಲಾಯಿತು. ವಿವಿದ ಚಿತ್ರಗಳ ರೂಪದಲ್ಲಿ ದೀಪ ಬೆಳಗಿಸಿ ಭಕ್ತರು ಸಂಭ್ರಮಿಸಿದ್ರು. ದೇವಸ್ಥಾನದ ಅಂಗಳದಲ್ಲಿ ರಂಗೋಲಿ ಬಿಡಿಸಿ ಅದರ ಪ್ರಕಾರವೇ ದೀಪಗಳನ್ನು ಬೆಳಗಿಸಿದ್ರು. ಕಾರ್ತಿಕ ದೀಪ ಬೆಳಗಿಸೋ ಮೊದಲು ದೇವಿಗೆ ವಿಶೇಷ ಪೂಜೆ ಮಾಡಲಾಯಿತು.. ಇನ್ನು ಕಾರ್ತಿಕೋತ್ಸವದ ನಂತರ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ನಿದ್ದೆಯಿಂದ ಎದ್ದ ಮುಂಡಗೋಡ PWD, ಅಮ್ಮಾಜಿ ಕೆರೆ ದಂಡೆಯ ಮೇಲೆ ಸುರಕ್ಷತಾ ಕ್ರಮ..!
ಮುಂಡಗೋಡ: ಪಟ್ಟಣದ ಹೊರ ವಲಯದಲ್ಲಿ ಇತ್ತಿಚೆಗೆ ಸಂಭವಿಸಿದ ಕಾರು ದುರಂತದಲ್ಲಿ ದಂಪತಿಗಳು ಮೃತಪಟ್ಟ ಹಿನ್ನೆಲೆಯಲ್ಲಿ, ಹೀಗಾಗಿ, ಅಪಘಾತಗಳಿಗೆ ಆಮಂತ್ರಣ ನೀಡುತ್ತಿದ್ದ ಅಮ್ಮಾಜಿ ಕೆರೆಯ ದಂಡೆಯ ಮೇಲೆ ಬೇಲಿ ಹಾಕಲಾಗಿದೆ. ಇಲ್ಲಿನ ಪಿಡಬ್ಲ್ಯೂಡಿ ಇಲಾಖೆ ಈಗಷ್ಟೆ ಎಚ್ಚೆತ್ತುಕೊಂಡಿದ್ದು ಕೆರೆಯ ದಂಡೆಯ ಮೇಲೆ ಕಟ್ಟಿಗೆಯ ಕಂಬಗಳನ್ನು ನಿಲ್ಲಿಸಿ ಅದಕ್ಕೆ ಕೆಂಪು ಪಟ್ಟಿಯನ್ನು ಕಟ್ಟಲಾಗಿದೆ. ಅಲ್ಲದೇ ಸಣ್ಣ ಸಣ್ಣ ಚೀಲಗಳನ್ನು ತುಂಬಿ ಇಡಲಾಗಿದೆ.. ಇದ್ರಿಂದ ರಾತ್ರಿ ಸಮಯದಲ್ಲಿ ಅಪಘಾತ ಸಂಭವಿಸುವುದನ್ನು ಕೊಂಚ ತಪ್ಪಿಸಲು ಕ್ರಮ ಕೈಗೊಂಡಿದೆ.
ಮುಂಡಗೋಡ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕೋತ್ಸವ, ವರ್ಧಂತಿ ಉತ್ಸವ..!
ಮುಂಡಗೋಡ: ಪಟ್ಟಣದ ಇಂದಿರಾನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಇಂದು ಕಾರ್ತಿಕ ಅಮವಾಸ್ಯೆಯ ನಿಮಿತ್ತ ಕಾರ್ತಿಕೋತ್ಸವ ಹಾಗೂ 18 ನೇ ವರ್ಧಂತಿ ಉತ್ಸವ ಕಾರ್ಯಕ್ರಮ ನಡೆಯುತ್ತಿದೆ.. ಇಂದು ಬೆಳಗಿನಿಂದಲೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಹೋಮ ಹವನಗಳು ನಡಯುತ್ತಿವೆ. ಸಂಜೆ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಲಿದೆ.. ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ದೇವಸ್ಥಾನದಲ್ಲಿ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.
ಸಿದ್ದನಕೊಪ್ಪದ ಸ್ಪರ್ಧಾ ಹೋರಿಗೆ ಹುಟ್ಟುಹಬ್ಬದ ಸಂಭ್ರಮ..!
ಮುಂಡಗೋಡ: ತಾಲೂಕಿನ ಸಿದ್ದನಕೊಪ್ಪದಲ್ಲಿ ವಿಶೇಷ ಹುಟ್ಟುಹಬ್ಬ ಆಚರಿಸಲಾಗಿದೆ. ಸ್ಪರ್ಧಾ ಹೋರಿಗೆ ಜನ್ಮ ದಿನ ಆಚರಣೆ ಮಾಡಲಾಗಿದೆ.. ಹೋರಿಗೆ ವಿಶೇಷ ಅಲಂಕಾರ ಮಾಡಿ, ಕೇಕು ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಲಾಗಿದೆ. ನೂರಾರು ಜನರು ಸೇರಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಹೋರಿಯ ಗುಣಗಾನ ಮಾಡಲಾಯಿತು. ಈ ವೇಳೆ ಗ್ರಾಮಸ್ಥರು ಹಾಗೂ ಹೋರಿಯ ಮಾಲೀಕರು ಕುಣಿದು ಕುಪ್ಪಳಿಸಿದ್ರು.. ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.. ಈ ಸಂದರ್ಭದಲ್ಲಿ ಮಳಗಿಯ ಬಿಜೆಪಿ ಮುಖಂಡ ಸಂತೋಷ ಶೇಟ್ ರಾಯ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು..
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಕಂಚಿನ ಪುತ್ಥಳಿ ಸ್ಥಾಪನೆಗೆ ಲಕ್ಷ ರೂ. ದೇಣಿಗೆ..!
ಮುಂಡಗೋಡ: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಲು ಬಿಜೆಪಿ ಯುವ ಧುರೀಣ ಸಂತೋಷ ರಾಯ್ಕರ ಅವರು ಒಂದು ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ. ಬಳಿಕ ಮಾತನಾಡಿದ ಸಂತೋಷ ರಾಯ್ಕರ, ಹಿಂದೂ ಧರ್ಮದ ರಕ್ಷಣೆಗಾಗಿ ಶಿವಾಜಿ ಮಹಾರಾಜರ ಪುತ್ಥಳಿ ಪ್ರತಿಷ್ಠಾಪಿಸುವ ಮೂಲಕ ಅವರ ಆದರ್ಶ, ತತ್ವ ಸಿದ್ಧಾಂತ ಮತ್ತು ಇತಿಹಾಸವನ್ನು ಜನರಲ್ಲಿ ಮನವರಿಕೆ ಮಾಡಿಕೊಡಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿ ವತಿಯಿಂದ ಸಂತೋಷ ರಾಯ್ಕರ ಅವರನ್ನು ಗೌರವಿಸಲಾಯಿತು. ಟ್ರಸ್ಟ್‌ನ ಅಧ್ಯಕ್ಷ ಕಾಳೇಶ...
ಅಮ್ಮಾಜಿ ಕೆರೆಗೆ ಕಾರು ಬಿದ್ದ ಕೇಸ್; ಮೃತರ ಅಂತಿಮ ದರ್ಶನ ಪಡೆದ ಸಚಿವ ಹೆಬ್ಬಾರ್..!
ಮುಂಡಗೋಡ : ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆಯಲ್ಲಿ ಕಾರು ಕೆರೆಗೆ ಬಿದ್ದ ಪರಿಣಾಮ ಅರಶಿಣಗೇರಿ ಗ್ರಾಮದ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ದಂಪತಿಗಳು ಮೃತಪಟ್ಟ ಅಹಿತಕರ ಘಟನೆ ಸಂಭವಿಸಿದ್ದು. ಘಟನೆ ಬಗ್ಗೆ ತಿಳಿದ ತಕ್ಷಣ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಮುಂಡಗೋಡದ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ನಾಗಭೂಷಣ ಹಾವಣಗಿ, ಪ್ರಮುಖರಾದ ಉಮೇಶ್ ಬಿಜಾಪುರ, ಕೆ.ಸಿ.ಗಲಭಿ, ಸಂಜೀವ್...
ಮುಂಡಗೋಡ ಅಮ್ಮಾಜಿ ಕೆರೆಯಲ್ಲಿ ಕಾರು ದುರಂತ, ವಿಧಿಯಾಟಕ್ಕೆ ಬಲಿಯಾದವರು ಅರಶಿಣಗೇರಿ ದಂಪತಿಗಳು..!
ಮುಂಡಗೋಡ: ಹೊರವಲಯದ ಅಮ್ಮಾಜಿ ಕೆರೆಯಲ್ಲಿ ಕಾರು ಕೆರೆಗೆ ಬಿದ್ದ ಪರಿಣಾಮ ದಂಪತಿಗಳಿಬ್ಬರೂ ದಾರುಣ ಸಾವು ಕಂಡಿದ್ದಾರೆ. ನಸುಕಿನ ಜಾವ ಸಂಭವಿಸಿರಬಹುದಾದ ಘಟನೆ ಅಂತಾ ಹೇಳಲಾಗ್ತಿರೋ ಅಪಘಾತ ನಡೆದಿರೊದೇ ವಿಚಿತ್ರ. ಅಷ್ಟಕ್ಕೂ ಈ ಸಾವು ಅನ್ನೋದು ಇಷ್ಟು ಸಲೀಸಾ ಅನ್ನೋದೇ ಬಹುದೊಡ್ಡ ವಾಸ್ತವ..! ಮೃತರು ದಂಪತಿಗಳು..! ಬೆಂಗಳೂರು ನೋಂದಣಿ ಹೊಂದಿರುವ ಮಾರುತಿ ಸ್ವಿಪ್ಟ್ ಕಾರು ಇದಾಗಿದ್ದು, ಮೂಲತಃ ಮುಂಡಗೋಡ ತಾಲೂಕಿನ ಅರಶಿಣಗೇರಿಯವರಾದ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ಮೃತಪಟ್ಟ ದಂಪತಿಗಳಾಗಿದ್ದಾರೆ. ಕರವಳ್ಳಿಯಲ್ಲಿ ಸಂಬಂಧಿಯೊಬ್ಬರು ಅಸು ನೀಗಿದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗಾಗಿ...