ಮುಂಡಗೋಡ: ತಾಲೂಕಿನ ಅರಶಿಣಗೇರಿ ಕೆರೆಯ ಕಾಲುವೆಯನ್ನು ಆದಷ್ಟು ಬೇಗ ದುರಸ್ತಿ ಮಾಡಿಸಿ ರೈತರಿಗೆ ಬೇಸಿಗೆ ಬೆಳೆ ಬೆಳೆಯಲು ಅನುವು ಮಾಡಿಕೊಡಬೇಕಾಗಿ ರೈತರು ಮನವಿ ಮಾಡ್ತಿದಾರೆ. ಅರಶಿಣಗೇರಿ, ಅಗಡಿ ಹುನಗುಂದ ಗ್ರಾಮಗಳ ರೈತರ ಜೀವನಾಡಿಯಾಗಿರೋ ಅರಶಿಣಗೇರಿ ಕೆರೆಯ ಕಾಲುವೆಯನ್ನು ಈಗಾಗಲೇ ದುರಸ್ಥಿ ಕಾರ್ಯ ಮಾಡಿರೋ ಚಿಕ್ಕ ನೀರಾವರಿ ಇಲಾಖೆ ಅರ್ದಮರ್ದ ಕೆಲಸ ಮಾಡಿ ಹೋಗಿದ್ದಾರೆ ಅಲ್ಲದೇ ಹಾಗೆ ಮಾಡಿರೋ ಕೆಲಸವನ್ನೂ ಕಳಪೆಯಾಗಿ ಮಾಡಿದ್ದಾರೆ. ಹೀಗಾಗಿ ಈ ಕೂಡಲೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕಾಲುವೆಯ ದುರಸ್ತಿ ಮಾಡಿ, ಕಾಮಗಾರಿ...
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
Category: ಉತ್ತರ ಕನ್ನಡ
ನಂದಿಕಟ್ಟಾದಲ್ಲಿ ಎಗ್ ರೈಸ್ ಅಂಗಡಿ ಕಳ್ಳತನಕ್ಕೆ ವಿಫಲ ಯತ್ನ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ಎಗ್ ರೈಸ್ ಅಂಗಡಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ನಂದಿಕಟ್ಟಾ ಗ್ರಾಮದ ಮಂಜುನಾಥ್ ಎಂಬ ಯುವಕ ಕೆಲವರ್ಷಗಳಿಂದ ಎಗ್ ರೈಸ್ ಶಾಪ್ ನಡೆಸುತ್ತಿದ್ದ ನಿನ್ನೆ ಮಧ್ಯರಾತ್ರಿ ಕಳ್ಳರು ಕಳ್ಳತನ ಮಾಡಲು ಅಂಗಡಿಯ ಹಿಂದಿನ ಗೋಡೆಯನ್ನು ಒಡೆಯಲು ಯತ್ನಿಸಿದ್ದಾರೆ. ಆದ್ರೆ, ಅಂಗಡಿಯಲ್ಲಿ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಟ್ರ್ಯಾಕ್ಟರ್ ಟೇಪ್ ರಿಕಾರ್ಡರ್ ತೆಗೆದಿರೋ ಕಳ್ಳರು ಅದನ್ನ ಅಲ್ಲೇ ಬಿಟ್ಟು ಹೋಗಿದ್ದಾರೆ. ಅಂಗಡಿ ಹಿಂದುಗಡೆ ಗೋಡೆಗೆ ಕನ್ನ ಹಾಕಿರೋ ಕಳ್ಳರು ರಂದ್ರ...
ಮುಂಡಗೋಡಿನ ಶಿವಾಜಿ ಸರ್ಕಲ್ ನಲ್ಲಿ ಬಿಜೆಪಿ ಗೆಲುವಿನ ಸಂಭ್ರಮ..!
ಮುಂಡಗೋಡ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿಗರು ಪಟಾಕಿ ಸಿಡಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದ್ರು. ಬಿಜೆಪಿ ಪರವಾಗಿ ಘೋಷಣೆ ಕೂಗಿದ್ರು. ಕುಣಿದು ಕುಪ್ಪಳಿಸಿದ ಕಾರ್ಯಕರ್ತರು ಶಿವರಾಮ್ ಹೆಬ್ಬಾರ್ ಪರವಾಗಿಯೂ ಘೋಷಣೆ ಕೂಗಿ ಸಂಭ್ರಮಿಸಿದ್ರು. ಈ ವೇಳೆ ಬಿಜೆಪಿಯ ಹಲವು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ರು.
ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಕೋತಿಗಳ ಸಾಮ್ರಾಜ್ಯ..!
ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ನಿತ್ಯವೂ ಮಂಗಗಳ ತುಂಟಾಟ ಮಿತಿ ಮೀರಿದೆ.. ಯಾರ ಭಯವೂ ಇಲ್ಲದೇ ಮಂಗಗಳು ಇಲ್ಲಿ ಮಾಡೋ ಕೀಟಲೆಗಳು ಕೆಲವೊಮ್ಮೆ ಸಾರ್ವಜನಿಕರಿಗೆ ಫಜೀತಿ ತಂದಿಡುತ್ತಿವೆ. ಶಿವಾಜಿ ಸರ್ಕಲ್ ಬಳಿಯ ಬಿಲ್ಡಿಂಗ್ ಗಳ ಮೇಲೆ ವಾನರ ಸೇನೆ ಜಿಗಿದಾಡುತ್ತಿವೆ. ವಿದ್ಯುತ್ ಲೈನ್ ಗಳು ಮಂಗಗಳ ಜಿಗಿದಾಟಕ್ಕೆ ಹರಿದು ಹೋಗುತ್ತಿವೆ. ಇನ್ನು ಸರ್ಕಲ್ ನಲ್ಲಿ ಕಟ್ಟಿರೋ ವಿವಿಧ ಬ್ಯಾನರ್ ಗಳನ್ನು ಹರಿದು ಹಾಕುತ್ತಿವೆ. ಹೀಗಾಗಿ, ಸಾರ್ವಜನಿಕರಿಗೆ ಮಂಗಗಳ ಕೀಟಲೆಗಳದ್ದೇ ಸಮಸ್ಯೆಯಾಗಿದೆ.
ನಂದಿಕಟ್ಟಾದಲ್ಲಿ ಮೆಕ್ಕೆಜೋಳ ಬೆಳೆದ ಅನ್ನದಾತರಿಗೆ ಸನ್ಮಾನ ಕಾರ್ಯ..
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಖಾಸಗಿ ಮೆಕ್ಕೆಜೋಳ ಬೀಜ ಬಿತ್ತಿ ಉತ್ತಮ ಫಸಲು ಪಡೆದ ರೈತರಿಗೆ ಕಂಪನಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉತ್ತಮವಾಗಿ ಫಸಲು ಬೆಳೆದ ನಂದಿಕಟ್ಟಾದ ರೈತ ಶಿವಾಜಿ ರಾಧಾಪುರ ಹಾಗೂ ಹುಲಿಹೊಂಡ ಗ್ರಾಮದ ರೈತ ಸಿದ್ದಣ್ಣ ವಾಲೀಕಾರ್ ಗೆ ಸನ್ಮಾನಿಸಲಾಯಿತು. ಈ ವೇಳೆ ನಂದಿಕಟ್ಟಾ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು, ಮುಖಂಡರು ಭಾಗಿಯಾಗಿದ್ರು.
ಗಬ್ಬೇದ್ದು ಹೋಗಿದೆ ಹುನಗುಂದ ಬಸವಣ್ಣ ಹೊಂಡ, ಪಿಡಿಓ ಸಾಹೇಬ್ರೇ ಒಂದಿಷ್ಟು ಗಮನಿಸಿ..!
ಹುನಗುಂದ ಗ್ರಾಮ ಪಂಚಾಯತಿಯ ಪಿಡಿಓ ಸಾಹೇಬ್ರೇ ಒಮ್ಮೆಯಾದ್ರೂ ನೀವು ಗ್ರಾಮದಲ್ಲಿರೋ ಬಸವಣ್ಣ ದೇವರ ಹೊಂಡ ಕಣ್ತುಂಬ ನೋಡಿದ್ದೀರಾ..? ಅಧ್ಯಕ್ಷರೇ, ನೀವಾದ್ರೂ ಈ ಹೊಂಡದ ಅವ್ಯವಸ್ಥೆ, ಗಬ್ಬೇದ್ದು ಹೋಗಿರೋ ಪರಿಯನ್ನ ಕಂಡಿದ್ದೀರಾ.. ದಯವಿಟ್ಟು ಒಮ್ಮೆ ಬಂದು ದರ್ಶನ ಮಾಡ್ಕೊಳ್ಳಿ, ಹಾಗಂತ, ಬಸವಣ್ಣ ಹೊಂಡದ ಅಕ್ಕಪಕ್ಕದ ಜನ ಹಿಡಿಶಾಪ ಹಾಕ್ತಿದಾರೆ. ಆದ್ರೆ, ಹುನಗುಂದ ಗ್ರಾಮ ಪಂಚಾಯತಿಯ ಪಿಡಿಓ ಸಾಹೇಬ್ರು ಮಾತ್ರ ಗಪ್ ಚುಪ್ ಆಗಿದ್ದಾರೆ. ಈಗ ಈ ದೃಷ್ಯದಲ್ಲಿ ನೀವು ನೋಡಿರೋ ಈ ಹೊಂಡ ಒಂದು ಕಾಲದಲ್ಲಿ ಇಡೀ ಊರಿನ...
ಮುಂಡಗೋಡ ತಾಲೂಕಿನಲ್ಲಿ ಶೇ. 99.53 ರಷ್ಟು ಶಾಂತಿಯುತ ಮತದಾನ..! ಭದ್ರತೆಯಲ್ಲಿ ಕಾರವಾರಕ್ಕೆ ಮತಪೆಟ್ಟಿಗೆ ರವಾನೆ..!!
ಮುಂಡಗೋಡ: ತಾಲೂಕಿನಲ್ಲಿ ಇಂದು ವಿಧಾನ ಪರಿಷತ್ ಚುನಾವಣೆಯ ಮತದಾನ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಶೇ. 99.53 ರಷ್ಟು ಮತದಾನವಾಗಿದೆ. ಗುಂಜಾವತಿ ಗ್ರಾಮ ಪಂಚಾಯತಿಯ ಓರ್ವ ಮಹಿಳಾ ಸದಸ್ಯೆ ಮತದಾನ ಮಾಡಿಲ್ಲ. ಈ ಕಾರಣದಿಂದ ಶೇ.100 ರಷ್ಟು ಮತದಾನವಾಗಿಲ್ಲ. ಬೆಳಗಿನಿಂದಲೂ ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲೂ ಮತದಾರರು ಸಂಯಮದಿಂದಲೇ ಬಂದು ಮತದಾನ ಮಾಡಿದ್ರು. ಬಹುತೇಕ ಮದ್ಯಾಹ್ನದಷ್ಟೊತ್ತಿಗೆ ಮತದಾನ ಸಂಪೂರ್ಣತೆಯ ಮಟ್ಟ ತಲುಪಿತ್ತು. ಕೆಲವು ಕಡೆ ಮಾತ್ರ ಒಂದಿಷ್ಟು ತಡವಾಗಿ ಬಂದು ಮತದಾರರು ಮತದಾನ ಮಾಡಿದ್ರು. ತಾಲೂಕಿನಲ್ಲಿ ಬಹುತೇಕ ಗ್ರಾಮ ಪಂಚಾಯತಿ ಸದಸ್ಯರುಗಳು...
ಮತ್ತೆ ಮಳೆಯ ಆತಂಕ, ಫಸಲು ಕಟಾವಿಗೆ ಯಂತ್ರಗಳ ಮೊರೆ ಹೋದ ರೈತ..!
ಮುಂಡಗೋಡ: ತಾಲೂಕಿನಲ್ಲಿ ಮತ್ತೆ ಮಳೆಯ ಆತಂಕ ಶುರುವಾಗಿದೆ ಹೀಗಾಗಿ, ಅನ್ನದಾತರು ಫಸಲುಗಳ ರಕ್ಷಣೆಗೆ ಮತ್ತೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಮಳೆಯ ಆತಂಕದ ನಡುವೆ ಭತ್ತದ ಕೊಯ್ಲಿಗೆ ಮುಂದಾಗಿದ್ದಾನೆ ರೈತ.. ಇನ್ನು, ಈ ಸಾರಿ ಮಳೆಯಲ್ಲಿ ಸಿಲುಕಿ ಸಂಪೂರ್ಣ ಹಾಳಾದ ಸ್ಥಿತಿಯಲ್ಲಿರೋ ಭತ್ತದ ಫಸಲು ಕಟಾವು ಮಾಡಲು ರೈತ ಭತ್ತ ಕಟಾವು ಮಾಡುವ ಯಂತ್ರಗಳ ಮೊರೆ ಹೋಗಿದ್ದಾನೆ.. ಹೀಗಾಗಿ ತಾಲೂಕಿನೆಲ್ಲೆಡೆ ಈಗ ಭತ್ತ ಕಟಾವು ಮಾಡೋ ಯಂತ್ರಗಳ ಸದ್ದೇ ಕೇಳುತ್ತಿದೆ. ಸಮಯವೂ ಉಳಿಯತ್ತೆ ಕೆಲಸವೂ ಕಡಿಮೆಯಾಗತ್ತೆ ಅನ್ನೋ ಕಾರಣಕ್ಕೆ...
ನಂದಿಕಟ್ಟಾದಲ್ಲೂ ವಿಧಾನ ಪರಿಷತ್ ಚುನಾವಣೆಗೆ ಬಿರುಸಿನ ಮತದಾನ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲೂ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ಇಲ್ಲಿನ ಗ್ರಾಮ ಪಂಚಾಯತಿ ಸದಸ್ಯರು ಮತದಾನ ಮಾಡಿದ್ರು. ಮತದಾನಕ್ಕೂ ಮೊದಲು ಸದಸ್ಯರೇಲ್ಲರೂ ಒಂದೆಡೆ ಸೇರಿ ಸಭೆ ಮಾಡಿದ್ರು. ಮತದಾನ ಪ್ರಕ್ರಿಯೆಯ ಕುರಿತು ಚರ್ಚಿಸಿದ್ರು. ಮತದಾನ ಮಾಡುವ ವಿಧಾನಗಳ ಬಗ್ಗೆ ತಿಳುವಳಿಕೆ ಹಂಚಿಕೊಂಡ್ರು.. ಆನಂತರದಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ರು. ಅಂದಹಾಗೆ, ಮತದಾನ ಕೇಂದ್ರದಲ್ಲಿ ಸುಗಮ ಮತದಾನಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗಿದ್ದು ಅಧಿಕಾರಿಗಳು ಬಿಗಿಯಾದ ಕ್ರಮಗಳನ್ನು ಕೈಗೊಂಡಿದ್ದಾರೆ.
ಹುನಗುಂದದಲ್ಲಿ ವಿ.ಪರಿಷತ್ ಚುನಾವಣೆ ಭರ್ಜರಿ ಮತದಾನ..!
ಮುಂಡಗೋಡ: ತಾಲೂಕಿನಲ್ಲಿ ವಿಧಾನ ಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಬೆಳಗಿನಿಂದಲೂ ಭರ್ಜರಿಯಾಗೇ ನಡೆದಿದೆ. ತಾಲೂಕಿನ ಹುನಗುಂದದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರು ಮತದಾನ ಮಾಡಿದ್ರು. ಮತದಾನಕ್ಕೂ ಮೊದಲು ಹುನಗುಂದದ ಶ್ರೀ ವಿಠಲ ರುಕ್ಮಾಯಿ ಹರಿ ಮಂದಿರದಲ್ಲಿ ಪೂಜೆ ಸಲ್ಲಿಸಿದ ಸದಸ್ಯರು, ಅಲ್ಲೇ ಸಭೆ ನಡೆಸಿದ್ರು. ಆ ನಂತರದಲ್ಲಿ ಇಲ್ಲಿನ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ರು. ಅದ್ರಂತೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರೂ ಕೂಡ ಇಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮತದಾನ...