Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಗೆದ್ದುಬಂದು ಜಿಲ್ಲೆಗೆ ಚಿಕಿತ್ಸೆ ನೀಡಬೇಕು: ಕೈ ಅಭ್ಯರ್ಥಿ ಡಾ.ಅಂಜಲಿಗೆ ರಾಘವೇಶ್ವರ ಶ್ರೀ ಆಶೀರ್ವಾದ

ಗೆದ್ದುಬಂದು ಜಿಲ್ಲೆಗೆ ಚಿಕಿತ್ಸೆ ನೀಡಬೇಕು: ಕೈ ಅಭ್ಯರ್ಥಿ ಡಾ.ಅಂಜಲಿಗೆ ರಾಘವೇಶ್ವರ ಶ್ರೀ ಆಶೀರ್ವಾದ

ಗೋಕರ್ಣ: ‘ಆರಿಸಿ ಬಂದು ಜಿಲ್ಲೆಗೆ ಚಿಕಿತ್ಸೆ ನೀಡಬೇಕು’ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಆಶೀರ್ವಾದ ನೀಡಿದರು. ಗೋಕರ್ಣದ ಅಶೋಕೆಯಲ್ಲಿ ಡಾ.ಅಂಜಲಿ ಅವರು ರಾಘವೇಶ್ವರ ಶ್ರೀಗಳನ್ನ ಭೇಟಿಯಾದರು. ಈ ವೇಳೆ ಫಲಪುಷ್ಪ ನೀಡಿ ಗುರು ಗೌರವ ಸಲ್ಲಿಸಿದರು. ಶ್ರೀಗಳು ಕೆಲ ಹೊತ್ತು ಚುನಾವಣೆ ಹಾಗೂ ಜಿಲ್ಲೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು‌. ಕೊನೆಯಲ್ಲಿ ಡಾ.ಅಂಜಲಿ ಅವರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ ಅವರು, ‘ಮನಃಪೂರ್ವಕವಾಗಿ ಆಶೀರ್ವದಿಸುವೆ....

Post
ಬಾಚಣಕಿ ಬಳಿ ಅಪಘಾತ, ಅರಷಿಣಗೇರಿಯ ವ್ಯಕ್ತಿ ಸ್ಥಳದಲ್ಲೇ ಸಾವು..!

ಬಾಚಣಕಿ ಬಳಿ ಅಪಘಾತ, ಅರಷಿಣಗೇರಿಯ ವ್ಯಕ್ತಿ ಸ್ಥಳದಲ್ಲೇ ಸಾವು..!

ಮುಂಡಗೋಡ ತಾಲೂಕಿನ ಬಾಚಣಕಿ ಬಳಿ ಲಾರಿ ಹಾಗೂ ಸ್ಕೂಟಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಅರಷಿಣಗೇರಿಯ ಸ್ಕೂಟಿ ಸವಾರ ಸ್ಥಳದಲ್ಲೇ ಸಾಚನ್ನಪ್ಪಿದ್ದಾನೆ. ಬಸವರಾಜ್ ಶಿವನಗೌಡರ್ (50) ಎಂಬುವ ಸ್ಲೂಟಿ ಸವಾರನೇ ಅಪಘಾತದಲ್ಲಿ ಮೃತಪಟ್ಟಿದ್ದು, ಸಂಜೆ ಮುಂಡಗೋಡಿನಿಂದ ಸ್ಕೂಟಿ ಮೇಲೆ ಅರಷಿಣಗೇರಿಗೆ ಬರುತ್ತಿದ್ದಾಗ ಲಾರಿ ಡಿಕ್ಕಿಯಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಪಕ್ಷಕ್ಕೆ ದ್ರೋಹ ಮಾಡಿದವ್ರು ಯಾವತ್ತೂ ಉದ್ಧಾರ ಆಗಲ್ಲ- ರೂಪಾಲಿ ನಾಯ್ಕ್

ಪಕ್ಷಕ್ಕೆ ದ್ರೋಹ ಮಾಡಿದವ್ರು ಯಾವತ್ತೂ ಉದ್ಧಾರ ಆಗಲ್ಲ- ರೂಪಾಲಿ ನಾಯ್ಕ್

  ಮುಂಡಗೋಡ: ಪಕ್ಷಕ್ಕೆ ದ್ರೋಹ ಮಾಡಿದವ್ರು ಯಾವತ್ತಿಗೂ ಉದ್ಧಾರ ಆಗಲ್ಲ ಅಂತಾ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ್, ಪರೋಕ್ಷವಾಗಿ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ರು. ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವ್ರು, ಪಕ್ಷದಲ್ಲಿ ಬಂದು ಸ್ಥಾನಮಾನ ಪಡೆದು, ಪಕ್ಷದ ಶಾಲು ಹಾಕಿಕೊಂಡು ಮೆರೆದವರು ಈಗ ಮತ್ತೆ ಪಕ್ಷ ಬಿಡುತ್ತಿದ್ದಾರೆ. ಅಲ್ಲದೇ ಪಕ್ಷದ ಕಾರ್ಯಕರ್ತರಿಗೆ ಆತಂಕಗೊಳಿಸುವ ವಾತಾವರಣ ನಿರ್ಮಿಸುತ್ತಿದ್ದಾರೆ....

Post
ಮುಂಡಗೋಡಿನಲ್ಲಿ ಬಿಜೆಪಿ ಸಮಾವೇಶ..! ಬಿಜೆಪಿ ಶಾಸಕ ಹೆಬ್ಬಾರರ ಭಾವಚಿತ್ರವೇ ನಾಪತ್ತೆ..!  ಬಿಜೆಪಿಗೆ ಬೇಡವಾದ್ರಾ ಹೆಬ್ಬಾರ್..?

ಮುಂಡಗೋಡಿನಲ್ಲಿ ಬಿಜೆಪಿ ಸಮಾವೇಶ..! ಬಿಜೆಪಿ ಶಾಸಕ ಹೆಬ್ಬಾರರ ಭಾವಚಿತ್ರವೇ ನಾಪತ್ತೆ..! ಬಿಜೆಪಿಗೆ ಬೇಡವಾದ್ರಾ ಹೆಬ್ಬಾರ್..?

ಮುಂಡಗೋಡಿನಲ್ಲಿಂದು ಬಿಜೆಪಿ ಕಾರ್ಯಕರ್ತರ ಸಮಾವೇಶ ನಡೆಯುತ್ತಿದೆ. ಉತ್ತರ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆದ್ರೆ, ಈ ಸಮಾವೇಶದ ವೇದಿಕೆಯಲ್ಲಿ ಹಾಕಿರೋ ಬ್ಯಾನರ್ ನಲ್ಲಿ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ರವರ ಭಾವಚಿತ್ರವನ್ನೇ ಹಾಕಿಲ್ಲ. ಅಂದಹಾಗೆ, ಇಂದು ನಡೆಯುತ್ತಿರೋ ಸಮಾವೇಶದಲ್ಲಿ ಬಹುತೇಕ ಜಿಲ್ಲಾ ನಾಯಕರು ಭಾಗವಹಿಸಿಲಿದ್ದಾರೆ ಎನ್ನಲಾಗ್ತಿದೆ. ಈ ಕಾರಣಕ್ಕಾಗಿನೇ, ವೇದಿಕೆಯ ಬ್ಯಾನರನಲ್ಲಿ ರಾಷ್ಟ್ರ ನಾಯಕರು, ರಾಜ್ಯ ನಾಯಕರು ಹಾಗೂ ಜಿಲ್ಲಾಮಟ್ಟದ ನಾಯಕರುಗಳ ಭಾವಚಿತ್ರ ಹಾಕಲಾಗಿದೆ. ಜೊತೆಗೆ ಬಿಜೆಪಿಯ...

Post
ಶಿರಸಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಕೈ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತು..!

ಶಿರಸಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಕೈ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತು..!

ಶಿರಸಿ: ನಮ್ಮ ನೆಲ, ನಮ್ಮ ಜಲ ರಕ್ಷಣೆಯ ಜೊತೆಗೆ ನಮ್ಮ ಸಂಸ್ಕೃತಿಯನ್ನ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುವ ಹಂಬಲವಿದೆ; ಇದು ನನ್ನ ಗ್ಯಾರಂಟಿಯಾಗಿದ್ದು, ಇದಕ್ಕಾಗಿ ನಿಮ್ಮ ಆಶೀರ್ವಾದ ಬೇಕಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮನವಿ ಮಾಡಿದರು‌. ಶಿರಸಿಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಜನರ ಜಮೀನು ನಮ್ಮವರಿಗೇ ಸಿಗಬೇಕು. ಅವರಿಗೆ ಅವರ ಹಕ್ಕು ದೊರಕಿಸಿಕೊಡುವ ಕಾರ್ಯ ಮಾಡಬೇಕಿದೆ. ನಮ್ಮ ಜನರಿಗೆ ಉದ್ಯೋಗ...

Post
ಶಿವರಾಮ್ ಹೆಬ್ಬಾರ್ ಅಸಲಿ ಆಟ ಶುರು, ಕಾಂಗ್ರೆಸ್ ಸೇರಲ್ವಂತೆ ಸಾಹೇಬ್ರು..!

ಶಿವರಾಮ್ ಹೆಬ್ಬಾರ್ ಅಸಲಿ ಆಟ ಶುರು, ಕಾಂಗ್ರೆಸ್ ಸೇರಲ್ವಂತೆ ಸಾಹೇಬ್ರು..!

ಇದು ನಿಜಕ್ಕೂ ಮುಂಡಗೋಡ ಯಲ್ಲಾಪುರ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾದ ಸುದ್ದಿ. ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಸದ್ಯ ಕಾಂಗ್ರೆಸ್ ಸೇರೋದಿಲ್ಲ‌. ಬದಲಾಗಿ, ಹೆಬ್ಬಾರ್ ರವರ ಸುಪುತ್ರ ವಿವೇಕ್ ಹೆಬ್ಬಾರ್ ಇನ್ನೇನು ಕೆಲವೇ ದಿನಗಳಲ್ಲಿ ಕೈ ಹಿಡಿಯಲಿದ್ದಾರೆ ಅನ್ನೋದು ಕನ್ಪರ್ಮ್ ಆಗ್ತಿದೆ. ಈ ಮೂಲಕ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪಕ್ಷದಲ್ಲಿದ್ದುಕೊಂಡೇ ಅಕ್ಷರಶಃ ತಟಸ್ತರಾಗಿ ಕಮಲ ಪಾಳಯಕ್ಕೆ ಡಿಚ್ಚಿ ಕೊಡುವ ಎಲ್ಲಾ ತಯಾರಿ ಮಾಡಿಕೊಂಡಿದ್ದಾರಂತೆ ಹೆಬ್ಬಾರ್ ಸಾಹೇಬ್ರು..! ಹಳ್ಳಿ ಹಳ್ಳಿಗಳಲ್ಲೂ ಸಭೆ..! ಇಂತಹದ್ದೊಂದು ಕಾರ್ಯತಂತ್ರ ರೂಪಿಸಿಕೊಂಡಿರೋ ಶಿವರಾಮ್ ಹೆಬ್ಬಾರ್,...

Post
ಎದುರಾಳಿ ಬಿಜೆಪಿ ಮನೆ ಬಿಟ್ಟು, ನಮ್ಮ ಮನೆಗೆ ಬರುವವರನ್ನು ಸ್ವಾಗತಿಸೋಣ..!   ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಸ್ವಾಗತ..!!

ಎದುರಾಳಿ ಬಿಜೆಪಿ ಮನೆ ಬಿಟ್ಟು, ನಮ್ಮ ಮನೆಗೆ ಬರುವವರನ್ನು ಸ್ವಾಗತಿಸೋಣ..! ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಸ್ವಾಗತ..!!

ಮುಂಡಗೋಡ: ಚುನಾವಣೆಯೆಂಬ ಪರೀಕ್ಷೆ ಬಂದಿದೆ. ಎದುರಾಳಿ ಬಿಜೆಪಿ ಮನೆಯನ್ನ ಬಿಟ್ಟು ನಮ್ಮ ಮನೆಗೆ ಬರಲು ಹೊರಟಿರುವವರಿಗೆ ಸ್ವಾಗತ ಮಾಡಬೇಕಿದೆ. ಕಾಂಗ್ರೆಸ್ ಎಂಬುದು ದೊಡ್ಡ ಸಮುದ್ರ. ನಮಗೆ ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇದೆ. ಯಾವ ಟೈಮ್ ನಲ್ಲಿ ಯಾವ ಆಪರೇಷನ್ ಮಾಡಬೇಕೆಂಬುದೂ ನನಗೆ ಗೊತ್ತಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು. ಮುಂಡಗೋಡಿನಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಎಷ್ಟೇ ಗುಂಪಿದ್ದರೂ, ವೈಮಸ್ಸಿದ್ದರೂ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ...

Post
ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಕೈ ಕಾರ್ಯಕರ್ತರಿಂದ ವಿರೋಧ..! ಹೆಬ್ಬಾರ್ ವಿರುದ್ಧ ಪೋಸ್ಟರ್ ಅಂಟಿಸಿ ಆಕ್ರೋಶ ಹೊರ ಹಾಕಿದ ಕಾರ್ಯಕರ್ತರು..!!

ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಕೈ ಕಾರ್ಯಕರ್ತರಿಂದ ವಿರೋಧ..! ಹೆಬ್ಬಾರ್ ವಿರುದ್ಧ ಪೋಸ್ಟರ್ ಅಂಟಿಸಿ ಆಕ್ರೋಶ ಹೊರ ಹಾಕಿದ ಕಾರ್ಯಕರ್ತರು..!!

 ಶಿರಸಿ: ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಪೋಸ್ಟರ್ ಅಂಟಿಸಿ ವಿರೋಧ ವ್ಯಕ್ತಪಡಿಸಿದ್ದಾರೆ “ಕೈ” ಕಾರ್ಯಕರ್ತರು. ಶಿರಸಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶಿವರಾಮ್ ಹೆಬ್ಬಾರ್ ವಿರುದ್ಧ ಪೋಸ್ಟರ್ ಅಂಟಿಸಿರುವ ಕೈ ಕಾರ್ಯಕರ್ತರು, “ನಮ್ಮ‌‌ ಪಕ್ಷ, ನಮ್ಮ ಹಕ್ಕು, ಭ್ರಷ್ಟರಿಗಿಲ್ಲಿ ಜಾಗವಿಲ್ಲ” ಎಂದು ಪೋಸ್ಟರ್ ಅಂಟಿಸಿದ್ದಾರೆ. ಕಾಂಗ್ರೆಸ್ ‌ನಿಂದ‌ ಬಾಂಬೆ ಟೀಂ ಜತೆ ಬಿಜೆಪಿಗೆ ಹೋಗಿ ಸಚಿವರಾಗಿದ್ದ ಹೆಬ್ಬಾರ್ ಸಾಹೇಬ್ರು, ಈಗ ಮತ್ತೆ ಕೆಲವು...

Post
ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆ, ಕುತೂಹಲ‌ ಮೂಡಿಸಿದ ಅನಂತಣ್ಣನ ನಡೆ..! ಪತ್ರದ ಮೂಲಕ ನೀಡಿದ ಸಂದೇಶವಾದ್ರೂ ಏನು..?

ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆ, ಕುತೂಹಲ‌ ಮೂಡಿಸಿದ ಅನಂತಣ್ಣನ ನಡೆ..! ಪತ್ರದ ಮೂಲಕ ನೀಡಿದ ಸಂದೇಶವಾದ್ರೂ ಏನು..?

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಿಸ್ ಆಗುತ್ತಿದ್ದಂತೆ ಸಂಸದ, ಹಿಂದು ಪೈಯರ್ ಬ್ರ್ಯಾಂಡ್ ಅನಂತಕುಮಾರ್ ಹೆಗಡೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ತನ್ನ ಕ್ಷೇತ್ರದ ಬೆಂಬಲಿಗರಿಗೆ, ಮತದಾರರಿಗೆ ಪತ್ರದ ಮೂಲಕ ಮನದಾಳದ ಕೃತಜ್ಞತೆ ಸಲ್ಲಿಸಿದ್ದಾರೆ. ಅನಂತಣ್ಣನ ಪತ್ರದ ಸಾರಾಂಶ..! ಆತ್ಮೀಯ ಬಂಧುಗಳೇ, ಈ ಭೂಮಿಯಲ್ಲಿ ನನ್ನ ಲೌಕಿಕ ಬದುಕಿನಿಂದಾಚೆಗೂ ಒಂದು ಭವ್ಯವಾದ ಬದುಕಿದೆ ಎಂದೆನಿಸಿತ್ತು. ಅಂತಹ ಬದುಕನ್ನು ನೋಡುವ ತಹತಹ ಇತ್ತು, ತಳಮಳವೂ ಇತ್ತು. ಸೋಲು ಗೆಲುವಿನ ಆತಂಕದಿಂದಾಚೆ ಜೀವನವನ್ನು ನಿತ್ಯ ಸತ್ಯವಾಗಿಸುವ ಹಾಗೂ ಎಂದೂ...

Post
ಅನಂತಕುಮಾರ್ ಹೆಗಡೆಗೆ ಬಿಜೆಪಿ ಟಿಕೆಟ್ ಕೊನೆಗೂ ಮಿಸ್, ಕಾಗೇರಿಗೆ ಒಲಿದ ಬಿಜೆಪಿ ಟಿಕೆಟ್..!

ಅನಂತಕುಮಾರ್ ಹೆಗಡೆಗೆ ಬಿಜೆಪಿ ಟಿಕೆಟ್ ಕೊನೆಗೂ ಮಿಸ್, ಕಾಗೇರಿಗೆ ಒಲಿದ ಬಿಜೆಪಿ ಟಿಕೆಟ್..!

ಕೊನೆಗೂ ಅನಂತಕುಮಾರ್ ಹೆಗಡೆಯವರಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಿಸ್ ಆಗಿದೆ. ಬಿಜೆಪಿಯ ಅಭ್ಯರ್ಥಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಏಳು ಬಾರಿ ಗೆದ್ದು ಬೀಗಿದ್ದ ಅನಂತಣ್ಣನಿಗೆ ಬಿಜೆಪಿ ಠಕ್ಕರ್ ಕೊಟ್ಟಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿ ಕ್ಷೇತ್ರದಿಂದ ಮೂರು ಬಾರಿ ಹಾಗೂ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದರು, ಇನ್ನು ಕಳೆದ ವರ್ಷದ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಭೀಮಣ್ಣ ನಾಯ್ಕ ವಿರುದ್ಧ...

error: Content is protected !!