ಹುಬ್ಬಳ್ಳಿ: ಅಪರಿಚಿತ ಶವವೊಂದು ನೀರಿನಲ್ಲಿ ತೇಲಿಕೊಂಡು ಬಂದಿರುವ ಘಟನೆ ಹುಬ್ಬಳ್ಳಿಯ ಹೆಗ್ಗೇರಿಯ ನಾಲಾದಲ್ಲಿ ನಡೆದಿದೆ. ಸುಮಾರು 35 ವರ್ಷದ ಆಸುಪಾಸಿನ ವ್ಯಕ್ತಿಯ ಶವವು ನಾಲಾದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಯುವ ಮುಖಂಡ ಪರ್ವೀಜ್ ಕಟ್ಟಿಮನಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರು ಶವವನ್ನು ಹೊರ ತೆಗೆದು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಮೃತ ವ್ಯಕ್ತಿಯ ಬಗ್ಗೆ ಹಾಗೂ ಆತನ ಸಾವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ....
Top Stories
ಮುಂಡಗೋಡಿನಲ್ಲಿ ಇಂದು ಪೊಲೀಸ್ ಜನಸಂಪರ್ಕ ಸಭೆ..! ಎಸ್ಪಿ ಎಂ ನಾರಾಯಣ್ ರಿಂದ ಮಹತ್ವದ ಹೆಜ್ಜೆ..!!
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
Category: ಅಪರಾಧ ಜಗತ್ತು
ಹುಡೇಲಕೊಪ್ಪ ಬಳಿ ಬೈಕ್, ಬೊಲೆರೋ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಬೈಕ್ ಸವಾರ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡ: ತಾಲೂಕಿನ ಶಿರಸಿ ರಸ್ತೆಯ ಹುಡೇಲಕೊಪ್ಪ ಬಳಿ ಭೀಕರ ಅಪಘಾತ ನಡೆದಿದೆ. ಬೊಲೆರೊ ಪಿಕ್ ಅಪ್ ಹಾಗೂ ಬೈಕ್ ನಡುವೆ ಮುಖಾ ಮುಕಿ ಡಿಕ್ಕಿಯಾಗಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾನೆ. ತಾಲೂಕಿನ ಅಟ್ಟಣಗಿಯ ರಾಜೇಶ್ ಚಲವಾದಿ(21) ಸ್ಥಳದಲ್ಲೇ ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಶ್ರೀಕಾಂತ್ ಅನ್ನೋ ಮತ್ತೋರ್ವ ಬೈಕ್ ಹಿಂಬದಿಯ ಸವಾರ ಗಂಭೀರ ಗಾಯಗೊಂಡಿದ್ದಾನೆ. ಗಾಯಗೊಂಡ ಯುವಕನನ್ನು ಚಿಕಿತ್ಸೆಗಾಗಿ ಸದ್ಯ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಇನ್ನು ಅಪಘಾತದ ತೀವ್ರತೆಗೆ ಬೊಲೆರೋ ಪಿಕ್...
ತೋಟಕ್ಕೆ ಹಾಕಿದ್ದ ವಿದ್ಯುತ್ ಬೇಲಿಗೆ ತಾಗಿ ವ್ಯಕ್ತಿ ದಾರುಣ ಸಾವು..!
ಶಿರಸಿ: ವಿದ್ಯುತ್ ತಂತಿ ಬೇಲಿ ತಗುಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಶಿರಸಿ ತಾಲೂಕಿನ ಮತ್ತೀಘಟ್ಟಾ ಸಮೀಪದ ಸೂರಗುಪ್ಪದಲ್ಲಿ ನಡೆದಿದೆ. ಲವ ಗೌಡ (38) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಕಾಡು ಪ್ರಾಣಿ ಹಾವಳಿಯಿಂದ ತೋಟವನ್ನು ರಕ್ಷಿಸಿಕೊಳ್ಳುವ ಉದ್ದೇಶಕ್ಕೆ ಹಾಕಿದ್ದ ಐಬೇಕ್ಸ್ ಬೇಲಿಗೆ ತಗುಲಿ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಕ್ರೈಂ ವಿಭಾಗದ ಪಿಎಸ್ಐ. ಶ್ಯಾಮ ಪಾವಸ್ಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಗ್ಗಿನಕೇರಿಯ ಕಬ್ಬಿನ ಗದ್ದೆಯಲ್ಲಿ ಹೆಣವಾದ ಯುವಕ..! ಅಷ್ಟಕ್ಕೂ ಅಲ್ಲಿ ನಡೆದದ್ದೇನು..?
ಮುಂಡಗೋಡ: ತಾಲೂಕಿನ ಉಗ್ಗಿನಕೇರಿಯಲ್ಲಿ ನಡೆಯಬಾರದ ದುರಂತವೊಂದು ನಡೆದು ಹೋಗಿದೆ. ರಾತ್ರಿ ಕಾಡಿನಲ್ಲಿ ಮರ ಕಡಿಯಲು ಹೋಗಿದ್ದ ಅಂತಾ ಹೇಳಲಾದ ವ್ಯಕ್ತಿಯೋರ್ವ ಹೆಣವಾಗಿದ್ದಾನೆ. ಪ್ರದೀಪ್ ಜುಜೇ ಸಿದ್ಧಿ(35) ಎಂಬುವ ವ್ಯಕ್ತಿ ಪ್ರಾಣ ಕಳೆದುಕೊಂಡವ. ಈತ ಸೋಮವಾರ ತಡರಾತ್ರಿ ತನ್ನ ಮತ್ತೊಬ್ಬ ಸಂಗಡಿಗನೊಂದಿಗೆ ಉಗ್ಗಿನಕೇರಿ ಅರಣ್ಯ ಪ್ರದೇಶದಲ್ಲಿ ಮರ ಕಡಿಯಲು ಹೋಗಿದ್ದ ಎನ್ನಲಾಗಿದೆ. ಈ ವೇಳೆ ಮರ ಕಡಿದು ಮರದ ತುಂಡನ್ನು ಹೊತ್ತು ತರುತ್ತಿದ್ದಾಗ ಉಗ್ಗಿನಕೇರಿ ಗ್ರಾಮದ ಹೊರವಲಯದಲ್ಲಿನ ಕಬ್ಬಿನ ಗದ್ದೆಯಲ್ಲಿ, ಕಾಡು ಪ್ರಾಣಿಗಳ ಹತೋಟಿಗೆ ಹಾಕಲಾಗಿದ್ದ ವಿದ್ಯುತ್ ಲೈನ್...
ದ್ವಿತೀಯ PUC ಪರೀಕ್ಷೆ ರದ್ದಾಗಿದ್ದಕ್ಕೆ ಈ ವಿದ್ಯಾರ್ಥಿನಿಯದ್ದು ಎಂಥ ದುರಂತ ನೋಡಿ..!
ಶಿರಸಿ: ಸಾಮಾನ್ಯವಾಗಿ ಪರೀಕ್ಷೆಗಳು ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದ್ರಲ್ಲೂ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಈಗಿನ ಉದ್ಯೋಗ ಕ್ಷೇತ್ರದಲ್ಲಿ ಬೇಸ್ ಅಂತಾನೆ ಪರಿಗಣಿಸಲ್ಪಟ್ಟಿದೆ. ಹಲವಾರು ವಿದ್ಯಾರ್ಥಿಗಳು ಪರೀಕ್ಷೆ ರದ್ದಾದ ಖುಷಿಯಲ್ಲಿರುತ್ತಾರೆ. ಆದ್ರೆ ಕೆಲವು ವಿದ್ಯಾರ್ಥಿಗಳು ಪರೀಕ್ಷೆಗೆ ಅಂತಾನೆ ಊಟ, ನಿದ್ದೆ ಬಿಟ್ಟು ಓದೋ ಉದಾಹರಣೆಗಳು ಕೂಡ ಇವೆ. ಅದ್ರಲ್ಲೂ ಈ ಕೋವಿಡ್ ಅನ್ನೋದು ಬಂದಮೇಲೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅಧೋಗತಿಯಾಗಿದೆ. ಸರ್ಕಾರಗಳೂ ಕೂಡ ಪದೇ ಪದೇ ನಿರ್ಣಯಗಳನ್ನ ಬದಲಿಸುತ್ತಿರೋದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ...
ನ್ಯಾಸರ್ಗಿಯಲ್ಲಿ ಇಸ್ಪೀಟು ಅಡ್ಡೆ ಮೇಲೆ ಪೊಲೀಸರ ದಾಳಿ: ನಾಲ್ವರ ವಿರುದ್ಧ ಕೇಸ್..!
ಮುಂಡಗೋಡ: ತಾಲೂಕಿನ ನ್ಯಾಸರ್ಗಿಯಲ್ಲಿ ಇಸ್ಪೀಟು ಆಟದಲ್ಲಿ ತೊಡಗಿದ್ದ ವೇಳೆ ಮುಂಡಗೋಡ ಪೊಲೀಸರು ದಾಳಿ ಮಾಡಿ 4 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೈಲಾರಿ ಮಹದೇವಪ್ಪ ಸಾಗರ, ಮಂಜುನಾಥ್ ಹನ್ಮಂತಪ್ಪ ಉಪಾದ್ಯಾಯ, ಬಸವಂತಪ್ಪ ಲಕ್ಷ್ಮಣ ಮಡ್ಡಿ ಹಾಗೂ ಮಂಜುನಾಥ ನಾಗಪ್ಪ ಧರ್ಮೋಜಿ ಎಂಬುವ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನು ದಾಳಿ ವೇಳೆ 2,200 ರೂ.ನಗದು ಹಾಗೂ ಇಸ್ಪೀಟು ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಭಾರಿ ಮಳೆಯಿಂದ ಶೇಂಗಾ ಬೆಳೆ ಮಣ್ಣುಪಾಲು; ಮನನೊಂದ ರೈತ ಆತ್ಮಹತ್ಯೆ..!
ಮುಂಡಗೋಡ: ತಾಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಸಾಲಬಾಧೆಯಿಂದ ರೈತನೊಬ್ಬ ಕಾಡಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದೇವೇಂದ್ರಪ್ಪ ಈರಪ್ಪ ತೆಗ್ಗಳ್ಳಿ(60) ಎಂಬುವ ರೈತನೇ ಆತ್ಮಹತ್ಯೆಗೆ ಶರಣಾಗಿದ್ದಾನೆ. 4 ಎಕರೆ ಜಮೀನು ಹೊಂದಿರೋ ರೈತ ಈ ವರ್ಷ 1ಲಕ್ಷ 20 ಸಾವಿರ ರೂಪಾಯಿ ಖರ್ಚು ಮಾಡಿ ಶೇಂಗಾ ಬೆಳೆದಿದ್ದ. ಆದ್ರೆ ಇತ್ತಿಚೆಗೆ ಸುರಿದ ಭಾರೀ ಮಳೆಯಿಂದ ಬೆಳೆದಿದ್ದ ಶೇಂಗಾ ಎಲ್ಲಾ ಹಾಳಾಗಿತ್ತು. ಹೀಗಾಗಿವಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆ ಕೈಕೊಟ್ಟ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ...
ಕಾತೂರಿನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಎಗರಿಸಿದ ಕಳ್ಳರು..!
ಮುಂಡಗೋಡ: ತಾಲೂಕಿನ ಕಾತೂರು ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳುವು ಮಾಡಿದ ಘಟನೆ ನಡೆದಿದೆ. ಶಿರಾಜ್ ಬೊಮ್ನಳ್ಳಿ ಎಂಬುವವರ ಹೀರೋ ಹೊಂಡಾ ಸ್ಪೆಂಡರ್ ಪ್ರೊ ಬೈಕ್ ಕಳ್ಳತನವಾಗಿದೆ. ಮನೆ ಮುಂದೆ ನಿಲ್ಲಿಸಿದ್ದಾಗ ರಾತ್ರಿ ಯಾರೋ ಖದೀಮರು ಬಂದು ಬೈಕ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಅಂತಾ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಶಿರಾಜ್ ಬೊಮ್ನಳ್ಳಿ ದೂರು ದಾಖಲಿಸಿದ್ದಾರೆ
ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಪೊಲೀಸರ ವಶಕ್ಕೆ..!
ಭಟ್ಕಳ: ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ಪೊಲೀಸರಿಂದ ಮಹಿಳೆ ಬಂಧನವಾಗಿದೆ. ಖತೀಜಾ ಮೆಹರಿನ್ ಬಂಧಿತ ಪಾಕಿಸ್ತಾನಿ ಮಹಿಳೆಯಾಗಿದ್ದು ಭಟ್ಕಳ ಮೂಲದ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್ ಎಂಬುವನನ್ನು 8 ವರ್ಷದ ಹಿಂದೆ ದುಬೈನಲ್ಲಿವಿವಾಹವಾಗಿದ್ದ ಮಹಿಳೆ, 2014ರಲ್ಲಿ ಪ್ರವಾಸಿ ವೀಸಾ ಪಡೆದು 3 ತಿಂಗಳು ಭಾರತಕ್ಕೆ ಬಂದು ವಾಪಸ್ಸಾಗಿದ್ದಳು. ಆನಂತರ, 2015ರಲ್ಲಿ ಕಳ್ಳಮಾರ್ಗದ ಮೂಲಕ ಯಾವುದೇ ದಾಖಲೆ ನೀಡದೇ ಅಕ್ರಮವಾಗಿ ಭಾರತದೊಳಕ್ಕೆ ಪ್ರವೇಶ ಮಾಡಿದ್ದಳು. ಭಟ್ಕಳದ ನವಾಯತ...
ಉದಾಸಿ ಅಂತಿಮ ದರ್ಶನದ ವೇಳೆ ಮೊಬೈಲ್ ಕಳ್ಳರ ಕೈಚಳಕ: ಸಿಕ್ಕಿಬಿದ್ದು ಒದೆ ತಿಂದ ಯುವಕ.!
ಹಾನಗಲ್: ಬಿಜೆಪಿ ಹಿರಿಯ ಶಾಸಕ ಸಿ.ಎಂ. ಉದಾಸಿ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ. ಈ ವೇಳೆ ಜೇಬುಗಳ್ಳರು ಕೈ ಚಳಕ ತೋರಿದ್ದಾರೆ. ಎಷ್ಟೊ ಜನರ ಮೊಬೈಲ್ ಎಗರಿಸಿದ್ದಾರೆ. ಇನ್ನು ಹೀಗೆ ಜೇಬಿಗೆ ಕತ್ತರಿ ಹಾಕುತ್ತಿರುವಾಗಲೇ, ರೆಡ್ ಹ್ಯಾಂಡ್ ಆಗಿ ಓರ್ವ ಖತರ್ನಾಕ ಜೇಬುಗಳ್ಳ ತಗಲಾಕ್ಕೊಂಡಿದ್ದ. ಜೇಬು ಕತ್ತರಿಸುವಾಗಲೆ ಕಳ್ಳನನ್ನು ಹಿಡಿದು ಸಾರ್ವಜನಿಕರು ಛಳಿ ಬಿಡಿಸಿದ್ದಾರೆ. ನಂತರ ಪೊಲೀಸರಿಗೆ ಕಳ್ಳನನ್ನು ಒಪ್ಪಿಸಿದ್ದಾರೆ. ಹಾನಗಲ್ ಪೊಲೀಸ್ರು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಜನಸಂದಣಿಯಲ್ಲಿ ಜೇಬಿಗೆ ಕತ್ತರಿ ಹಾಕಿಸಿಕೊಂಡವರ ಗೋಳು...