ತೋಟಕ್ಕೆ ಹಾಕಿದ್ದ ವಿದ್ಯುತ್ ಬೇಲಿಗೆ ತಾಗಿ ವ್ಯಕ್ತಿ ದಾರುಣ ಸಾವು..!

ಶಿರಸಿ: ವಿದ್ಯುತ್ ತಂತಿ ಬೇಲಿ ತಗುಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಶಿರಸಿ ತಾಲೂಕಿನ ಮತ್ತೀಘಟ್ಟಾ ಸಮೀಪದ ಸೂರಗುಪ್ಪದಲ್ಲಿ ನಡೆದಿದೆ.

ಲವ ಗೌಡ (38) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಕಾಡು ಪ್ರಾಣಿ ಹಾವಳಿಯಿಂದ ತೋಟವನ್ನು ರಕ್ಷಿಸಿಕೊಳ್ಳುವ ಉದ್ದೇಶಕ್ಕೆ ಹಾಕಿದ್ದ ಐಬೇಕ್ಸ್ ಬೇಲಿಗೆ ತಗುಲಿ ಸ್ಥಳದಲ್ಲೇ ಸಾವು ಕಂಡಿದ್ದಾನೆ.

ಕ್ರೈಂ ವಿಭಾಗದ ಪಿಎಸ್ಐ. ಶ್ಯಾಮ ಪಾವಸ್ಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!