ಹುಡೇಲಕೊಪ್ಪ ಬಳಿ ಬೈಕ್, ಬೊಲೆರೋ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಬೈಕ್ ಸವಾರ ಸಾವು, ಮತ್ತೋರ್ವ ಗಂಭೀರ..!

ಮುಂಡಗೋಡ: ತಾಲೂಕಿನ ಶಿರಸಿ ರಸ್ತೆಯ ಹುಡೇಲಕೊಪ್ಪ ಬಳಿ ಭೀಕರ ಅಪಘಾತ ನಡೆದಿದೆ. ಬೊಲೆರೊ ಪಿಕ್ ಅಪ್ ಹಾಗೂ ಬೈಕ್ ನಡುವೆ ಮುಖಾ ಮುಕಿ ಡಿಕ್ಕಿಯಾಗಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾನೆ.

ತಾಲೂಕಿನ ಅಟ್ಟಣಗಿಯ ರಾಜೇಶ್ ಚಲವಾದಿ(21) ಸ್ಥಳದಲ್ಲೇ ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಶ್ರೀಕಾಂತ್ ಅನ್ನೋ ಮತ್ತೋರ್ವ ಬೈಕ್ ಹಿಂಬದಿಯ ಸವಾರ ಗಂಭೀರ ಗಾಯಗೊಂಡಿದ್ದಾನೆ. ಗಾಯಗೊಂಡ ಯುವಕನನ್ನು ಚಿಕಿತ್ಸೆಗಾಗಿ ಸದ್ಯ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.


ಇನ್ನು ಅಪಘಾತದ ತೀವ್ರತೆಗೆ ಬೊಲೆರೋ ಪಿಕ್ ಅಪ್ ವಾಹನದ ಮುಂಬಾಗ ನುಜ್ಜುಗುಜ್ಜಾಗಿದೆ. ಘಟನಾ ಸ್ಥಳದ ಪಕ್ಕದಲ್ಲೇ ಪಲ್ಟಿಯಾಗಿ ಬಿದ್ದಿದೆ. ಹಾಗೆ ಪಲ್ಟಿಯಾಗಿ ಬಿದ್ದಿರೋ ವಾಹನದ ಅಡಿಯಲ್ಲಿ ಬೈಕ್ ಸವಾರ ಸಿಲುಕಿಕೊಂಡಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.

ಇನ್ನು ಗಾಯಗೊಂಡಿದ್ದ ಮತ್ತೊಬ್ಬ ಹಿಂಬದಿಯ ಬೈಕ್ ಸವಾರ ರಸ್ತೆಯ ಮೇಲೆ ಬಿದ್ದಿದ್ದು ದಾರಿ ಹೋಕರು ರಸ್ತೆಯ ಪಕ್ಕಕ್ಕೆ ಸ್ಥಳಾಂತರಿಸಿ, ಅಂಬ್ಯಲೆನ್ಸ್ ಗೆ ಕರೆ‌ಮಾಡಿದ್ದಾರೆ. ಹಾಗೆ, ಬೊಲೆರೋ ವಾಹನ ಚಾಲಕರಿಗೆ ಯಾವ ಮಟ್ಟಿಗಿನ ಗಾಯವಾಗಿದೆ ಮಾಹಿತಿ ಲಭ್ಯವಾಗಿಲ್ಲ.‌

ಇನ್ನು ಘಟನಾ ಸ್ಥಳಕ್ಕೆ ಮುಂಡಗೋಡ ಪಿಎಸ್ ಐ ಬಸವರಾಜ ಮುಬನೂರು ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Pages: 1 2
error: Content is protected !!