ಮುಂಡಗೋಡ: ತಾಲೂಕಿನ ಉಗ್ಗಿನಕೇರಿಯಲ್ಲಿ ನಡೆಯಬಾರದ ದುರಂತವೊಂದು ನಡೆದು ಹೋಗಿದೆ. ರಾತ್ರಿ ಕಾಡಿನಲ್ಲಿ ಮರ ಕಡಿಯಲು ಹೋಗಿದ್ದ ಅಂತಾ ಹೇಳಲಾದ ವ್ಯಕ್ತಿಯೋರ್ವ ಹೆಣವಾಗಿದ್ದಾನೆ.
ಈ ವೇಳೆ ಮರ ಕಡಿದು ಮರದ ತುಂಡನ್ನು ಹೊತ್ತು ತರುತ್ತಿದ್ದಾಗ ಉಗ್ಗಿನಕೇರಿ ಗ್ರಾಮದ ಹೊರವಲಯದಲ್ಲಿನ ಕಬ್ಬಿನ ಗದ್ದೆಯಲ್ಲಿ, ಕಾಡು ಪ್ರಾಣಿಗಳ ಹತೋಟಿಗೆ ಹಾಕಲಾಗಿದ್ದ ವಿದ್ಯುತ್ ಲೈನ್ ಮೇಲೆ ಆಕಸ್ಮಿಕವಾಗಿ ಬಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಅಂತಾ ಅನುಮಾನ ವ್ಯಕ್ತವಾಗಿದೆ. ಇನ್ನು ಈತನೊಂದಿಗೆ ಬಂದಿದ್ದ ಮತ್ತೋರ್ವ ವ್ಯಕ್ತಿಯೂ ದುರಂತ ನಡೆದ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎನ್ನಲಾಗಿದೆ.
ಕಬ್ಬಿನ ಗದ್ದೆಗೆ ಹೈ ಪವರ್ ವಿದ್ಯುತ್ ಬೇಲಿ ಹಾಕಲಾಗಿತ್ತಾ..?
ಸಹಜವಾಗಿ, ಕಬ್ಬಿನ ಗದ್ದೆಗೆ ಕಾಡುಪ್ರಾಣಿಗಳಿಂದ ರಕ್ಷಣೆಗಾಗಿ ವ್ಯವಸ್ಥಿತವಾಗಿ ಐಬೇಕ್ಸ್ ಹಾಕಲಾಗುತ್ತದೆ. ಆದ್ರೆ ಐಬೇಕ್ಸ್ ಹಾಕಿದ್ರೆ ಅಲ್ಲಿ ಯಾವ ಜೀವ ಹಾನಿಯಾಗುವುದಿಲ್ಲ. ಅದು ಕೇವಲ ಕಾಡುಪ್ರಾಣಿಗಳಿಗೆ ಭಯ ಪಡಿಸಲು ಹಾಕಲಾಗಿರತ್ತೆ. ಆದ್ರೆ ಇಲ್ಲಿ ನೇರವಾಗಿ ಬೋರವೆಲ್ ಗೆ ಸಂಪರ್ಕ ಕಲ್ಪಿಸಿದ್ದ ತ್ರೀ ಫೇಸ್ ವಿದ್ಯುತ್ ನ್ನೇ ಬೇಲಿಗೆ ಬಳಸಲಾಗಿತ್ತಾ..? ಹೀಗಾಗಿನೇ ಇಂತಹದ್ದೊಂದು ದುರಂತ ಸಂಭವಿಸಿತಾ..? ಎನ್ನುವ ಪ್ರಶ್ನೆಗಳು ಎದ್ದಿವೆ.
ಅದು ನಿಜವೇ ಆಗಿದ್ದರೆ, ಹಾಗೆ ಹೈ ಪವರ್ ವಿದ್ಯುತ್ ಬೇಲಿ ಹಾಕಲು ಆ ಗದ್ದೆಯ ಮಾಲೀಕರಿಗೆ ಪರವಾನಗಿ ಕೊಟ್ಟವರು ಯಾರು..? ಅರಣ್ಯ ಇಲಾಖೆ ಅಧಿಕಾರಿಗಳಿಗೆ ಇದು ಕಂಡೇ ಇಲ್ವಾ..? ಹಾಗಂತ ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.
ಅದು ನಿಜವೇ ಆಗಿದ್ದರೆ, ಇಂತಹದ್ದೊಂದು ವ್ಯವಸ್ಥೆಗೆ ಅದೇಷ್ಟು ಕಾಡು ಪ್ರಾಣಿಗಳು ಬಲಿಯಾಗಿರಬೇಡ..? ಅನ್ನೋದು ಪರಿಸರ ಪ್ರೇಮಿಗಳ ಪ್ರಶ್ನೆ. ಆದ್ರೆ, ತನಿಖೆಯ ನಂತರವಷ್ಟೇ ಸತ್ಯ ಹೊರಬರಬೇಕಿದೆ.
ಸಧ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ, ಅರಣ್ಯ ಅಧಿಕಾರಿಗಳೂ ಸ್ಥಳಕ್ಕೆ ಬಂದಿದ್ದಾರೆ. ಇನ್ನು ಹೆಸ್ಕಾಂ ಮುಂಡಗೋಡ ವಿಭಾಗದ ಅಧಿಕಾರಿಗಳೂ ಪರಿಶೀಲಿಸುತ್ತಿದ್ದಾರೆ. ಸೂಕ್ತ ತನಿಖೆಯ ಅವಶ್ಯಕತೆಯೂ ಇದೆ. ಅಂದಾಗ ಮಾತ್ರ ಅಸಲು ಅಲ್ಲಿ ನಡೆದದ್ದು ಏನು ಅಂತಾ ತಿಳಿಯಲಿದೆ.
******************
ಈ ಸ್ಟೋರಿನೂ ಒಮ್ಮೆ ನೋಡಿ..