ಹುಬ್ಬಳ್ಳಿ: ಅಪರಿಚಿತ ಶವವೊಂದು ನೀರಿನಲ್ಲಿ ತೇಲಿಕೊಂಡು ಬಂದಿರುವ ಘಟನೆ ಹುಬ್ಬಳ್ಳಿಯ ಹೆಗ್ಗೇರಿಯ ನಾಲಾದಲ್ಲಿ ನಡೆದಿದೆ.
ಸುಮಾರು 35 ವರ್ಷದ ಆಸುಪಾಸಿನ ವ್ಯಕ್ತಿಯ ಶವವು ನಾಲಾದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಯುವ ಮುಖಂಡ ಪರ್ವೀಜ್ ಕಟ್ಟಿಮನಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಇನ್ನು ಸ್ಥಳಕ್ಕೆ ಭೇಟಿ ನೀಡಿದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರು ಶವವನ್ನು ಹೊರ ತೆಗೆದು ಪರಿಶೀಲನೆ ನಡೆಸುತ್ತಿದ್ದಾರೆ.
ಅಲ್ಲದೇ ಮೃತ ವ್ಯಕ್ತಿಯ ಬಗ್ಗೆ ಹಾಗೂ ಆತನ ಸಾವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸ್ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.