Home ಅಪಘಾತ

Category: ಅಪಘಾತ

Post
ಧಾರವಾಡದ ವಿವಿಧೆಡೆ ಭಾರೀ ಮಳೆ: ಸಿಡಿಲಿಗೆ ಓರ್ವ ರೈತ ಬಲಿ..!

ಧಾರವಾಡದ ವಿವಿಧೆಡೆ ಭಾರೀ ಮಳೆ: ಸಿಡಿಲಿಗೆ ಓರ್ವ ರೈತ ಬಲಿ..!

ಧಾರವಾಡ ತಾಲೂಕಿನ ಹಲವೆಡೆ ಭಾನುವಾರ ಭರ್ಜರಿ ಮಳೆಯಾಗಿದ್ದು, ಸಿಡಿಲಿಗೆ ಓರ್ವ ರೈತ ಬಲಿಯಾಗಿರುವ ಘಟನೆ ಧಾರವಾಡ ತಾಲೂಕಿನ ಹನುಮನಹಾಳ ಗ್ರಾಮದಲ್ಲಿ ನಡೆದಿದೆ. ಭೀಮನಗೌಡ ಮಲ್ಲನಗೌಡ ಪಾಟೀಲ (65) ಎಂಬುವವರೇ ಸಿಡಿಲಿಗೆ ಬಲಿಯಾದವರು. ಭೀಮನಗೌಡ ಅವರು ಆಕಳನ್ನು ತೆಗೆದುಕೊಂಡು ತಮ್ಮ ಹೊಲಕ್ಕೆ ಹೋಗಿ ಶೇಂಗಾ ಸೋಸುವ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ವಿಪರೀತ ಮಳೆಯಾಗಲು ಆರಂಭಿಸಿದ್ದರಿಂದ ಭೀಮನಗೌಡ ಅವರು ಆಕಳನ್ನು ತೆಗೆದುಕೊಂಡು ಮರಳಿ ಮನೆ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಅವರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಗರಗ...

Post
ಊಟ ಮಾಡಿ ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ರೂಲರ್.! ಇಬ್ಬರು ದಾರುಣ ಸಾವು

ಊಟ ಮಾಡಿ ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ರೂಲರ್.! ಇಬ್ಬರು ದಾರುಣ ಸಾವು

ಹಾವೇರಿ; ಊಟ ಮಾಡಿ ರಸ್ತೆಯ ಪಕ್ಕದಲ್ಲಿ ಮಲಗಿದವರ ಮೇಲೆ ರೋಡ್ ರೂಲರ್ ಹರಿದು ಇಬ್ಬರು ಕಾರ್ಮಿಕರ ಸಾವು ಕಂಡ ದಾರುಣ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರಿನಲ್ಲಿ ನಡೆದಿದೆ. ಸಿದ್ದು(24), ಪ್ರೀತಮ್ ( 25) ರೂಲರ್ ಅಡಿಗೆ ಸಿಲುಕಿ ಸಾವು ಕಂಡ ದುರ್ಧೈವಿಗಳು. ಮೊಟೇಬೆನ್ನೂರಿನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು, ಮಾಧ್ಯಾಹ್ನದ ವೇಳೆ ಊಟ ಮಾಡಿ ರೂಲರ್ ಪಕ್ಕದಲ್ಲಿ ಮಲಗಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಸ್ಥಳಕ್ಕೆ ಬ್ಯಾಡಗಿ ಪೊಲೀಸರು ಬೇಟಿ ನೀಡಿ,...

Post
ನಿರಂತರ ಮಳೆ: ಕಲಕೇರಿಯಲ್ಲಿ ಮನೆ ಗೋಡೆ ಕುಸಿದು ಬಿದ್ದು ಮಹಿಳೆಗೆ ಗಾಯ..!ಕಿಮ್ಸ್ ಗೆ ರವಾನೆ.‌!

ನಿರಂತರ ಮಳೆ: ಕಲಕೇರಿಯಲ್ಲಿ ಮನೆ ಗೋಡೆ ಕುಸಿದು ಬಿದ್ದು ಮಹಿಳೆಗೆ ಗಾಯ..!ಕಿಮ್ಸ್ ಗೆ ರವಾನೆ.‌!

ಮುಂಡಗೋಡ ತಾಲೂಕಿನಲ್ಲಿ ನಿರಂತರ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ತಾಲೂಕಿನ ಕಲಕೇರಿ ಪ್ಲಾಟ್ ಹೊನ್ನಿಕೊಪ್ಪದಲ್ಲಿ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರಿಗೆ ಗಂಭೀರ ಗಾಯವಾಗಿದೆ.. ಕಲಕೇರಿ ಪ್ಲಾಟ್ ಹೊನ್ನಿಕೊಪ್ಪದ ಅಟೆಲ್ ಸಾಬ್ ಅತ್ತಾರ್ ಎಂಬುವವರಿಗೆ ಸೇರಿದ ಮನೆಯ ಗೋಡೆ ನಿರಂತರ ಮಳೆಯ ಕಾರಣಕ್ಕೆ ಕುಸಿದು ಬಿದ್ದಿದೆ. ಪರಿಣಾಮ ಪಕ್ಕದ ಮನೆಯ ಸಾತವ್ವ ಭೀಮಣ್ಣ ಬೆಂಗಳೂರ (50) ಎಂಬುವ ಮಹಿಳೆಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಮಹಿಳೆಯನ್ನು ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು, ಸದ್ಯ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ...

Post
ಕಿರೇಸೂರ್ ಸಮೀಪ ಲಾರಿ ಕಾರ್ ಡಿಕ್ಕಿ ; ಒಂದೇ ಕುಟುಂಬದ ಮೂವರು ಸಾವು..!

ಕಿರೇಸೂರ್ ಸಮೀಪ ಲಾರಿ ಕಾರ್ ಡಿಕ್ಕಿ ; ಒಂದೇ ಕುಟುಂಬದ ಮೂವರು ಸಾವು..!

ಹುಬ್ಬಳ್ಳಿ,: ತಾಲೂಕಿನ ಕಿರೆಸೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ‌ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕೊಪ್ಪಳ ತಾಲೂಕಿನ ಮಂಗಳಾಪುರ ಗ್ರಾಮದ ನಿವಾಸಿಗಳಾದ ಜಾಫರ್​ಸಾಬ್ ​(60), ಮೊಹ್ಮದ್ ಮುಸ್ತಫಾ (36), ಶೋಹೆಬ್ (6) ಮೃತ ದುರ್ದೈವಿಗಳು. ಅಪಘಾತದಲ್ಲಿ ಗಂಭೀರ ಗಾಯಗೊಂಡ ಮೂವರನ್ನು ಧಾರವಾಡದ ‌ಎಸ್​ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಜಾಪರಸಾಬ್ ಓಮಿನ್ ಕಾರ್​ನಲ್ಲಿ ಕುಟುಂಬದವರ ಜೊತೆ ಪಾರ್ಶವಾಯು ಔಷಧಿ ತರಲು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಳಗಾ ಗ್ರಾಮದಲ್ಲಿನ ಸೇಂಟ್ ಮೇರಿ ಆಸ್ಪತ್ರೆಗೆ ಹೋಗಿದ್ದರು. ಔಷಧಿ ಪಡೆದು...

Post
ಬಸ್ ಹಾಗೂ ಕಾರ್ ನಡುವೆ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ಸಾವು..!

ಬಸ್ ಹಾಗೂ ಕಾರ್ ನಡುವೆ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ಸಾವು..!

ಗದಗ: ಸಾರಿಗೆ ಬಸ್ ಮತ್ತು ಕಾರ್ ನಡುವೆ ಭಿಕರ ಅಪಘಾತ ನಡೆದಿದೆ. ಪರಿಣಾಮ ಕಾರನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಗದಗ ಜಿಲ್ಲೆ ನರಗುಂದ ತಾಲೂಕು ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಹಾವೇರಿ ಮೂಲದ ರುದ್ರಪ್ಪ ಅಂಗಡಿ(55), ಪತ್ನಿ ರಾಜೇಶ್ವರಿ (45), ಮಗಳು ಐಶ್ವರ್ಯ (16), ಮಗ ವಿಜಯ(12) ಸಾವು ಕಂಡಿದ್ದಾರೆ. ಇಳಕಲ್ ನಿಂದ ಹುಬ್ಬಳ್ಳಿ ಗೆ ಹೊರಟ್ಟಿದ್ದ ಸಾರಿಗೆ ಬಸ್, ಹಾವೇರಿಯಿಂದ ಕಲ್ಲಾಪೂರ ಕಡೆಗೆ ಹೊರಟ್ಟಿದ್ದ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ‌. ಮೃತರು...

Post
ಮುಂಡಗೋಡ ಮಹಾಲೆ ಮಿಲ್ ಬಳಿ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಗಂಭೀರ..!ಹೊಸ ಓಣಿಯ ಈ ಯುವಕನ ಸ್ಥಿತಿಗೆ ಕಾರಣ ಯಾರು..?

ಮುಂಡಗೋಡ ಮಹಾಲೆ ಮಿಲ್ ಬಳಿ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಗಂಭೀರ..!ಹೊಸ ಓಣಿಯ ಈ ಯುವಕನ ಸ್ಥಿತಿಗೆ ಕಾರಣ ಯಾರು..?

ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಮಹಾಲೆ ಮಿಲ್ ಹತ್ತಿರ ಭೀಕರ ಅಪಘಾತವಾಗಿದೆ. PWD ಇಲಾಖೆಯ ಬೇಜವಾಬ್ದಾರಿ ಹಾಗೂ ಸರ್ಕಾರದ ಖಬರಗೇಡಿತನಕ್ಕೆ ಈ ರಸ್ತೆ ಅನ್ನೋದು ಯಮರೂಪಿಯಾಗಿದೆ. ನಿತ್ಯವೂ ಹಲವರು ಇಲ್ಲಿ ಎದ್ದು, ಬಿದ್ದು ಓಡಾಡುವಂತಾಗಿದೆ. ಅಂತದ್ದರಲ್ಲಿ ಇವಾಗ ಮತ್ತೊಂದು ಅಪಘಾತಕ್ಕೆ ಇದೇ ರಸ್ತೆಯ ಗುಂಡಿಗಳು ಕಾರಣವಾಗಿವೆ. ಅಂದಹಾಗೆ, ಮುಂಡಗೋಡ ಪಟ್ಟಣದ ಹೊರ ವಲಯದ ಮಹಾಲೆ ಮಿಲ್ ಬಳಿ ರಸ್ತೆ ಗುಂಡಿಗೆ ಬೈಕ್ ಸವಾರನೊಬ್ಬ ಬಿದ್ದಿದ್ದಾನೆ. ಹೀಗಾಗಿ, ಗಂಭೀರ ಗಾಯಗೊಂಡಿರೋ ಬೈಕ್ ಸವಾರನನ್ನು ಸ್ಥಳೀಯರು 108 ಅಂಬ್ಯುಲೆನ್ಸ್ ಮೂಲಕ...

Post
ಮುಂಡಗೋಡ ಬಸವನ ಹೊಂಡದಲ್ಲಿ ವ್ಯಕ್ತಿಯ ಶವ ಪತ್ತೆ, ಆತ್ಮಹತ್ಯೆ ಮಾಡಿಕೊಂಡನಾ ಕಂಬಾರಗಟ್ಟಿಯ ಶಿವಾಜಿ..?

ಮುಂಡಗೋಡ ಬಸವನ ಹೊಂಡದಲ್ಲಿ ವ್ಯಕ್ತಿಯ ಶವ ಪತ್ತೆ, ಆತ್ಮಹತ್ಯೆ ಮಾಡಿಕೊಂಡನಾ ಕಂಬಾರಗಟ್ಟಿಯ ಶಿವಾಜಿ..?

ಮುಂಡಗೋಡ ಪಟ್ಟಣದ ಬಸವನ ಹೊಂಡದಲ್ಲಿ ವ್ಯಕ್ತಿಯೋರ್ವನ ಶವ ದೊರೆತಿದೆ. ಬೆಳ್ಳಂ ಬೆಳಿಗ್ಗೆ ಹೊಂಡದಲ್ಲಿ ಶವ ತೇಲುತ್ತಿರುವುದನ್ನು ಕಂಡ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪಿಎಸ್ಐ ಪರಶುರಾಮ್ ಟೀಂ ಸ್ಥಳಕ್ಕೆ ಧಾವಿಸಿ ಶವ ಹೊರತೆಗೆದಿದ್ದಾರೆ‌. ಇನ್ನು ಹೊಂಡದಲ್ಲಿ ಪತ್ತೆಯಾಗಿರೋ ಶವ ಮುಂಡಗೋಡ ಪಟ್ಟಣದ ಕಂಬಾರಗಟ್ಟಿಯ ಶಿವಾಜಿ ಬಿಸೆಟ್ಟಿ (60) ಅಂತಾ ಗುರುತಿಸಲಾಗಿದೆ. ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತಾ ಶಂಕಿಸಲಾಗಿದೆ. ಸದ್ಯ ಶವ ಹೊರತೆಗೆಯಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  

Post
ಟ್ರ್ಯಾಕ್ಟರ್ ಹಾಗೂ ಇಂಜೀನ್ ನಡುವೆ ಸಿಲುಕಿ ದಾರುಣ ಸಾವು ಕಂಡ ಚಾಲಕ, ಗುಡ್ಡ ಹತ್ತಿಸುವಾಗ ದುರಂತ..!

ಟ್ರ್ಯಾಕ್ಟರ್ ಹಾಗೂ ಇಂಜೀನ್ ನಡುವೆ ಸಿಲುಕಿ ದಾರುಣ ಸಾವು ಕಂಡ ಚಾಲಕ, ಗುಡ್ಡ ಹತ್ತಿಸುವಾಗ ದುರಂತ..!

ಹಾನಗಲ್: ಟ್ಯ್ರಾಕ್ಟರ್ ಇಂಜಿನ್ ಮತ್ತು ಟ್ರೆಲರ್ ಮಧ್ಯ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಹಾನಗಲ್ ತಾಲೂಕಿನ ಆಡೂರ ಗ್ರಾಮದಲ್ಲಿ ನಡೆದಿದೆ‌. ಬಂಕಾಪೂರ ಗ್ರಾಮದ ಯಲ್ಲಪ್ಪ ಉಳಿವೆಪ್ಪ ವಳಗೇರಿ (40) ಮೃತ ದುರ್ದೈವಿಯಾಗಿದ್ದಾನೆ. ಈತ ಬಂಕಾಪೂರ ಗ್ರಾಮದಿಂದ ಆಡೂರ ಗ್ರಾಮಕ್ಕೆ ಟ್ರ್ಯಾಕ್ಟರ್ ನಲ್ಲಿ ಎಂ.ಸ್ಯಾಂಡ್ ಉಸುಕು ತಂದಿದ್ದ. ಗ್ರಾಮದಲ್ಲಿರುವ ಗುಡ್ಡವನ್ನ ಹತ್ತಿಸುವ ವೇಳೆ ಅವಘಡ ನಡೆದಿದೆ. ಏಕಾಏಕಿ ಟ್ರ್ಯಾಕ್ಟರ್ ಇಂಜಿನ್ ಮೆಲಕ್ಕೆ ಹಾರಿದ ಪರಿಣಾಮ ಇಂಜಿನ್ ಮತ್ತು ಟ್ರೆಲರ್ ನಡುವೆ ಟ್ರ್ಯಾಕ್ಟರ್ ಚಾಲಕ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಆಡೂರ ಪೊಲೀಸ್...

Post
ಶಿರಸಿ ಸಮೀಪ ಸ್ಕೂಟಿ, ಕಾರು ಅಪಘಾತ, ನಂದಿಗಟ್ಟಾ ಮೂಲದ ಗ್ರಾಪಂ ಕಾರ್ಯದರ್ಶಿ ದಾರುಣ ಸಾವು..!

ಶಿರಸಿ ಸಮೀಪ ಸ್ಕೂಟಿ, ಕಾರು ಅಪಘಾತ, ನಂದಿಗಟ್ಟಾ ಮೂಲದ ಗ್ರಾಪಂ ಕಾರ್ಯದರ್ಶಿ ದಾರುಣ ಸಾವು..!

ಮುಂಡಗೋಡ: ತಾಲೂಕಿನ ನಂದಿಗಟ್ಟಾದ ಮಾರುತಿ ರಾಧಾಪುರ ಅಪಘಾತದಲ್ಲಿ ಮೃತಪಟ್ಟಿದ್ದಾರೆ‌. ಶಿರಸಿ ಸಮೀಪದ ಕೋಳಿಗಾರ್ ಬಳಿ ನಡೆದ ಸ್ಕೂಟಿ ಹಾಗೂ ಕಾರ್ ನಡುವಿನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಶಿರಸಿ ತಾಲೂಕಿನ ಸಾಲ್ಕಣಿ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಾರುತಿ ರಾದಾಪುರ, ಗುರುವಾರ ಬೆಳಿಗ್ಗೆ ಕರ್ತವ್ಯಕ್ಕಾಗಿ ಆಫೀಸಿಗೆ ತೆರಳುತ್ತಿದ್ದ ವೇಳೆ, ಕೋಳಿಗಾರ ಸಮೀಪ ಸ್ಕೂಟಿ ಹಾಗು ಕಾರು ಮುಖಾಮುಕಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಲು ರವಾನಿಸುವ ಸಂದರ್ಭದಲ್ಲೇ ದಾರಿ...

Post
ಪಂಪಸೆಟ್ ದುರಸ್ತಿ ವೇಳೆ ವಿದ್ಯುತ್ ತಗುಲಿ ತಂದೆ ಮಗ ದಾರುಣ ಸಾವು

ಪಂಪಸೆಟ್ ದುರಸ್ತಿ ವೇಳೆ ವಿದ್ಯುತ್ ತಗುಲಿ ತಂದೆ ಮಗ ದಾರುಣ ಸಾವು

ಹಾವೇರಿ: ಪಂಪ್‌ಸೆಟ್ ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ತಂದೆ-ಮಗ ಸಾವನ್ನಪ್ಪಿರುವ ಘಟನೆ ರಾಣೇಬೆನ್ನೂರು ತಾಲ್ಲೂಕಿನ ಪತ್ತೇಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕರಬಸಪ್ಪ ಕಡೇನಾಯಕನಹಳ್ಳಿ (50) ಹಾಗೂ ಅವರ ಪುತ್ರ ದರ್ಶನ ಕಡೇನಾಯಕನಹಳ್ಳಿ (26) ಎಂದು ಗುರುತಿಸಲಾಗಿದೆ. ಕರಬಸಪ್ಪ ಮತ್ತು ದರ್ಶನ ಇಬ್ಬರೂ ಸೇರಿಕೊಂಡು ಪಂಪ್ ಸೆಟ್ ದುರಸ್ತಿ ಮಾಡಲು ಮುಂದಾಗಿದ್ದರು. ಭತ್ತದ ಬೆಳೆಗೆ ನೀರು ಹಾಯಿಸಲು ಮೋಟಾರ್‌ ಆನ್ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶಕ್ಕೆ ಪಂಪ್ ಸೆಟ್ ಮೇಲೆಯೇ ಬಿದ್ದು ಇಬ್ಬರೂ ಸ್ಥಳದಲ್ಲೇ...

error: Content is protected !!