ಟ್ರ್ಯಾಕ್ಟರ್ ಹಾಗೂ ಇಂಜೀನ್ ನಡುವೆ ಸಿಲುಕಿ ದಾರುಣ ಸಾವು ಕಂಡ ಚಾಲಕ, ಗುಡ್ಡ ಹತ್ತಿಸುವಾಗ ದುರಂತ..!

ಹಾನಗಲ್: ಟ್ಯ್ರಾಕ್ಟರ್ ಇಂಜಿನ್ ಮತ್ತು ಟ್ರೆಲರ್ ಮಧ್ಯ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಹಾನಗಲ್ ತಾಲೂಕಿನ ಆಡೂರ ಗ್ರಾಮದಲ್ಲಿ ನಡೆದಿದೆ‌.

ಬಂಕಾಪೂರ ಗ್ರಾಮದ ಯಲ್ಲಪ್ಪ ಉಳಿವೆಪ್ಪ ವಳಗೇರಿ (40) ಮೃತ ದುರ್ದೈವಿಯಾಗಿದ್ದಾನೆ. ಈತ ಬಂಕಾಪೂರ ಗ್ರಾಮದಿಂದ ಆಡೂರ ಗ್ರಾಮಕ್ಕೆ ಟ್ರ್ಯಾಕ್ಟರ್ ನಲ್ಲಿ ಎಂ.ಸ್ಯಾಂಡ್ ಉಸುಕು ತಂದಿದ್ದ. ಗ್ರಾಮದಲ್ಲಿರುವ ಗುಡ್ಡವನ್ನ ಹತ್ತಿಸುವ ವೇಳೆ ಅವಘಡ ನಡೆದಿದೆ.

ಏಕಾಏಕಿ ಟ್ರ್ಯಾಕ್ಟರ್ ಇಂಜಿನ್ ಮೆಲಕ್ಕೆ ಹಾರಿದ ಪರಿಣಾಮ ಇಂಜಿನ್ ಮತ್ತು ಟ್ರೆಲರ್ ನಡುವೆ ಟ್ರ್ಯಾಕ್ಟರ್ ಚಾಲಕ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಆಡೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!