Home #Public first newz

Tag: #Public first newz

Post
ನ್ಯಾಸರ್ಗಿಯಲ್ಲಿ ಹರಿದು ಬಿದ್ದ ವಿದ್ಯುತ್ ತಂತಿ ತುಳಿದು ಎರಡು ಶ್ವಾನಗಳ ದಾರುಣ ಸಾವು..!

ನ್ಯಾಸರ್ಗಿಯಲ್ಲಿ ಹರಿದು ಬಿದ್ದ ವಿದ್ಯುತ್ ತಂತಿ ತುಳಿದು ಎರಡು ಶ್ವಾನಗಳ ದಾರುಣ ಸಾವು..!

 ಮುಂಡಗೋಡ: ತಾಲೂಕಿನ ನ್ಯಾಸರ್ಗಿಯಲ್ಲಿ ವಿದ್ಯುತ್ ಅವಘಡವಾಗಿದೆ. ನಿರಂತರ ಮಳೆಯಿಂದ, ರಾತ್ರಿ ವೇಳೆ ವಿದ್ಯುತ್ ತಂತಿ ಹರಿದು ಬಿದ್ದಿದೆ. ಪರಿಣಾಮ ವಿದ್ಯತ್ ತಂತಿ ಸ್ಪರ್ಶಿಸಿ ಎರಡು ನಾಯಿಗಳು ಸ್ಥಳದಲ್ಲೇ ದಾರುಣ ಸಾವು ಕಂಡಿವೆ. ತಪ್ಪಿದ ಭಾರೀ ಅನಾಹುತ..! ಬಹುತೇಕ ಪುಟ್ಟ ಪುಟ್ಟ ಮಕ್ಕಳು ಓಡಾಡುವ ಸ್ಥಳ ಇದಾಗಿದೆ. ಅಲ್ಲದೇ ಮನೆಯ ಎದುರಿಗೆ ಇಂತಹದ್ದೊಂದು ಘಟನೆ ನಡೆದಿದೆ. ವಿದ್ಯುತ್ ತಂತಿ ಮರಕ್ಕೆ ತಾಗಿಕೊಂಡು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ತಂತಿ ತುಂಡಾಗಿದೆ ಎನ್ನಲಾಗಿದೆ. ಅದೃಷ್ಟವಶಾತ್ ಜನರ ಜೀವ ಹಾನಿಯಾಗಿಲ್ಲ‌‌....

Post
ತಹಶೀಲ್ದಾರ್ ಕಚೇರಿಯಲ್ಲಿ ರಾಷ್ಟ್ರಧ್ವಜ ನಿರ್ವಹಣೆ ಕಾರ್ಯಾಗಾರ..!

ತಹಶೀಲ್ದಾರ್ ಕಚೇರಿಯಲ್ಲಿ ರಾಷ್ಟ್ರಧ್ವಜ ನಿರ್ವಹಣೆ ಕಾರ್ಯಾಗಾರ..!

ಮುಂಡಗೋಡ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಇಂದು, ಸ್ವಾತಂತ್ರ ಭಾರತದ ಅಮೃತ ಮಹೋತ್ಸವ 2022 ರ ಪ್ರಯುಕ್ತ ರಾಷ್ಟ್ರಧ್ವಜ ನಿರ್ವಹಣೆ ತರಬೇತಿ ಕಾರ್ಯಾಗಾರ ನಡೆಯಿತು. ಮುಂಡಗೋಡ ತಹಶೀಲ್ದಾರ್ ಶಂಕರ್ ಗೌಡಿ ದೀಪ ಬೆಳಗಿಸುವ ಮೂಲಕ ಕಾರ್ಯಾಗಾರ ಉದ್ಘಾಟಿಸಿದ್ರು‌. ತಾಲೂಕಾಡಳಿತ ಮುಂಡಗೋಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಭಾರತ ಸೇವಾದಲದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರೋ ತರಬೇತಿ ಕಾರ್ಯಾಗಾರದಲ್ಲಿ ರಾಷ್ಟ್ರಧ್ವಜ ನಿರ್ವಹಣೆಯ ಕುರಿತು ತಹಶೀಲ್ದಾರ್ ಶಂಕರ್ ಗೌಡಿ ಮಾಹಿತಿ‌ ನೀಡಿದ್ರು. ಕಾರ್ಯಕ್ರಮದಲ್ಲಿ ಭಾರತ್ ಸೇವಾದಲದ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ, ಕ್ಷೇತ್ರ...

Post
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಮುಂಡಗೋಡಿನ “ಮಾಸ್” ಹುಡುಗ್ರ ಸ್ಟೆಪ್..!

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಮುಂಡಗೋಡಿನ “ಮಾಸ್” ಹುಡುಗ್ರ ಸ್ಟೆಪ್..!

 ಮುಂಡಗೋಡಿನ ಯುವಕರ ಪಡೆಯೊಂದು ತಾಲೂಕಿನ ಹೆಮ್ಮೆಗೆ ಕಾರಣವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗೋ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಂಡಗೋಡಿನ ನೃತ್ಯ ಪಟುಗಳು ಭಾಗಿಯಾಗಿದ್ದಾರೆ. ಇಂದು ರವಿವಾರ ರಾತ್ರಿ ನಮ್ಮ ಹೆಮ್ಮೆಯ ಯುವಕರ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಅಂದಹಾಗೆ, ಮುಂಡಗೋಡಿನ ಮಾಸ್ ಅಕಾಡೆಮಿಯ ಹುಲಿಗಳು ಇವ್ರು. ಸಂದೀಪ್ ಕೋರಿ, ಸಾನಿಕಾ ಪವಾರ್,ರಂಜಿತಾ ಜೀವಣ್ಣವರ, ಮನೋಜ್ ಮೆತ್ರಾಣಿ ಎಂಬುವ ಡ್ಯಾನ್ಸ್ ಕಲಿಗಳು ಟಿವಿ ಪರದೆಯ ಮೇಲೆ ಇಂದು ಮಿಂಚಲಿದ್ದಾರೆ. ಪ್ರತೀ ಶನಿವಾರ, ರವಿವಾರ ಜೀ ಕನ್ನಡ...

Post
ಭಟ್ಕಳದಲ್ಲಿ ಮಹಾಮಳೆಗೆ ಮನೆ ಮೇಲೆ ಕುಸಿದ ಗುಡ್ಡ, ಮನೆಯಡಿ ಸಿಲುಕಿದ ನಾಲ್ವರು..!

ಭಟ್ಕಳದಲ್ಲಿ ಮಹಾಮಳೆಗೆ ಮನೆ ಮೇಲೆ ಕುಸಿದ ಗುಡ್ಡ, ಮನೆಯಡಿ ಸಿಲುಕಿದ ನಾಲ್ವರು..!

 ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮತ್ತೆ ಜೋರಾಗಿದೆ. ಕರಾವಳಿ, ಮಲೆನಾಡು ಸೇರಿ ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಮಳೆ-ಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅದ್ರಂತೆ, ಭಟ್ಕಳ ತಾಲೂಕಿನಲ್ಲಿ ಮಹಾಮಳೆ ಆತಂಕದ ಛಾಯೆ ಮೂಡಿಸಿದೆ.  ಮಳೆಯಿಂದಾಗಿ ಹಲವು ಭಾಗಗಳಲ್ಲಿ ಅವಘಡಗಳು ಉಂಟಾಗಿದೆ‌. ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ಮನೆಯ ಮೇಲೆ ಗುಡ್ಡ ಕುಸಿದಿದೆ. ಹೀಗೆ ಕುಸಿದ ಗುಡ್ಡದ ಅಡಿಯಲ್ಲಿ ಇರುವ ಮನೆಯಲ್ಲಿ ನಾಲ್ವರು ಸಿಲುಕಿದ್ದಾರೆ. ಲಕ್ಷ್ಮೀ ನಾಯ್ಕ, ಅವರ ಮಗಳು ಲಕ್ಷ್ಮೀ, ಮಗ ಅನಂತ್ ನಾಯ್ಕ್ (32),...

Post
ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಮಟ್ಯಾಶ್,  ತಡರಾತ್ರಿ ಅಮೇರಿಕ ಸೇನೆಯಿಂದ ಉಗ್ರನ ಸಂಹಾರ..!

ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಮಟ್ಯಾಶ್, ತಡರಾತ್ರಿ ಅಮೇರಿಕ ಸೇನೆಯಿಂದ ಉಗ್ರನ ಸಂಹಾರ..!

ವಾಷಿಂಗ್ಟನ್: ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಅಲ್ ಖೈದಾ ಸಂಘಟನೆಯ ನಾಯಕ ಅಮ್ಮಾನ್ ಅಲ್ ಜವಾಹಿರಿಯನ್ನು ಅಮೆರಿಕದ ವಾಯುಪಡೆ ಸೋಮವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಹತ್ಯೆಗೈದಿದೆ. ಈ ಕುರಿತು ಟ್ವಿಟರ್‌ನಲ್ಲಿ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಅವರು ಅಮೇರಿಕಾ ಏರ್ ಸ್ಟೈಕ್ ನಡೆಸಿರುವುದನ್ನು ದೃಢಪಡಿಸಿದ್ದಾರೆ. ಜುಲೈ 31 ರಂದು ಕಾಬೂಲ್ ನಗರದ ಶೆರ್ಪುರ್ ಪ್ರದೇಶದ ವಸತಿ ಗೃಹದ ಮೇಲೆ ಅಮೇರಿಕಾ ಸೇನೆಯಿಂದ ವಾಯುದಾಳಿ ನಡೆಸಲಾಗಿದೆ ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಈ ದಾಳಿಯನ್ನು ಬಲವಾಗಿ ಖಂಡಿಸುತ್ತದೆ. ಇದು ಅಂತರರಾಷ್ಟ್ರೀಯ...

Post
ಮುಂಡಗೋಡಿನಲ್ಲಿ ಮೊಬೈಲ್ ಎಗರಿಸಿದ್ದವನಿಗೆ ಬಿತ್ತು ಬಿಸಿ ಬಿಸಿ ಗೂಸಾ..!

ಮುಂಡಗೋಡಿನಲ್ಲಿ ಮೊಬೈಲ್ ಎಗರಿಸಿದ್ದವನಿಗೆ ಬಿತ್ತು ಬಿಸಿ ಬಿಸಿ ಗೂಸಾ..!

ಮುಂಡಗೋಡ; ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಮೊಬೈಲ್ ಕಳ್ಳತನ ಮಾಡಿದ್ದ ವ್ಯಕ್ತಿಗೆ ಧರ್ಮದೇಟು ಬಿದ್ದಿದೆ. ಪಟ್ಟಣದ ಮೊಬೈಲ್ ಶಾಪ್ ಒಂದರಲ್ಲಿ ಮೊಬೈಲ್ ಖರೀಧಿಸುತ್ತಿದ್ದಾಗ, ಹಿಂದಿನಿಂದ ಬಂದ ವ್ಯಕ್ತಿ ಮೊಬೈಲ್ ಎಗರಿಸಿಕೊಂಡು ಹೋಗಿದ್ದಾನೆ. ನಂತರ ಮೊಬೈಲ್ ಕಳೆದುಕೊಂಡ ಇಬ್ಬರು ವ್ಯಕ್ತಿಗಳು ಮೊಬೈಲ್ ಕಳ್ಳನಿಗಾಗಿ ತಡಕಾಡಿದ್ದಾರೆ. ನಂತ್ರ ಶಿವಾಜಿ ಸರ್ಕಲ್ ನಲ್ಲಿ ಅಚಾನಕ್ಕಾಗಿ ಮೊಬೈಲ್ ಕಳ್ಳ ತಗಲಾಕ್ಕೊಂಡಿದ್ದಾನೆ. ಹೀಗಾಗಿ, ಮೊಬೈಲ್ ಕಳೆದುಕೊಂಡಿದ್ದ ಇಬ್ಬರು ವ್ಯಕ್ತಿಗಳು ಮೊಬೈಲ್ ಕಳ್ಳನಿಗೆ ಗೂಸಾ ನೀಡಿದ್ದಾರೆ. ನಂತರ ಪೊಲೀಸ್ ಠಾಣೆಗೆ ಮೊಬೈಲ್ ಕಳ್ಳನನ್ನು ಕರೆದುಕೊಂಡು ಹೋಗಿದ್ದಾರೆ...

Post
ಸಾಲಗಾಂವ್ ನಲ್ಲಿ ಕೋವಿಡ್ ಸ್ಫೋಟ, ತಾಲೂಕಿನಲ್ಲಿ ಇಂದು 24 ಪಾಸಿಟಿವ್..!

ಸಾಲಗಾಂವ್ ನಲ್ಲಿ ಕೋವಿಡ್ ಸ್ಫೋಟ, ತಾಲೂಕಿನಲ್ಲಿ ಇಂದು 24 ಪಾಸಿಟಿವ್..!

ಮುಂಡಗೋಡ: ತಾಲೂಕಿನಲ್ಲಿ ಇಂದು 24 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ‌ ಅಂತಾ ಅರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಸಾಲಗಾಂವ ಗ್ರಾಮ ಒಂಚಾಯತಿ ವ್ಯಾಪ್ತಿ ಒಂದರಲ್ಲೇ ಬರೋಬ್ಬರಿ 10 ಜನರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ಇನ್ನುಳಿದಂತೆ, ಮುಂಡಗೋಡ ಪಟ್ಟಣದಲ್ಲಿ-2, ಟಿಬೇಟಿಯನ್ ಕ್ಯಾಂಪ್ STS ಶಾಲೆಯ 5 ವಿದ್ಯಾರ್ಥಿಗಳು ಸೇರಿದಂತೆ- 6, ಕಾತೂರ- 1, ಇಂದೂರ- 2, ಪಾಳಾ- 1, ಕಲಕೇರಿ – 1, ಸಾಲಗಾಂವ್- 10 ರಾಮಾಪುರ 1 ಪ್ರಕರಣ ದೃಢಪಟ್ಟಿದೆ.

error: Content is protected !!