ಮುಂಡಗೋಡ; ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಮೊಬೈಲ್ ಕಳ್ಳತನ ಮಾಡಿದ್ದ ವ್ಯಕ್ತಿಗೆ ಧರ್ಮದೇಟು ಬಿದ್ದಿದೆ. ಪಟ್ಟಣದ ಮೊಬೈಲ್ ಶಾಪ್ ಒಂದರಲ್ಲಿ ಮೊಬೈಲ್ ಖರೀಧಿಸುತ್ತಿದ್ದಾಗ, ಹಿಂದಿನಿಂದ ಬಂದ ವ್ಯಕ್ತಿ ಮೊಬೈಲ್ ಎಗರಿಸಿಕೊಂಡು ಹೋಗಿದ್ದಾನೆ. ನಂತರ ಮೊಬೈಲ್ ಕಳೆದುಕೊಂಡ ಇಬ್ಬರು ವ್ಯಕ್ತಿಗಳು ಮೊಬೈಲ್ ಕಳ್ಳನಿಗಾಗಿ ತಡಕಾಡಿದ್ದಾರೆ.

ನಂತ್ರ ಶಿವಾಜಿ ಸರ್ಕಲ್ ನಲ್ಲಿ ಅಚಾನಕ್ಕಾಗಿ ಮೊಬೈಲ್ ಕಳ್ಳ ತಗಲಾಕ್ಕೊಂಡಿದ್ದಾನೆ. ಹೀಗಾಗಿ, ಮೊಬೈಲ್ ಕಳೆದುಕೊಂಡಿದ್ದ ಇಬ್ಬರು ವ್ಯಕ್ತಿಗಳು ಮೊಬೈಲ್ ಕಳ್ಳನಿಗೆ ಗೂಸಾ ನೀಡಿದ್ದಾರೆ. ನಂತರ ಪೊಲೀಸ್ ಠಾಣೆಗೆ ಮೊಬೈಲ್ ಕಳ್ಳನನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಆದ್ರೆ, ಮೊಬೈಲ್ ಕಳ್ಳ ಎಲ್ಲಿಯವನು ಏನು ಕತೆ ಅಂತಾ ಮಾಹಿತಿ ಲಭ್ಯವಾಗಿಲ್ಲ‌.

error: Content is protected !!