ಇದು ನಾಗಲೋಕದ ಅಚ್ಚರಿ..! ಸರ್ಪ ಸಲ್ಲಾಪದ ಅಪರೂಪದ ಕ್ಷಣಗಳು.. ಅಲ್ಲಿ ಯಾರ ಹಂಗೂ ಇಲ್ಲ..ಯಾವ ಭಯಗಳೂ ಸುಳಿಯೋಕೆ ಛಾನ್ಸೇ ಇಲ್ಲ.. ಯಾಕಂದ್ರೆ ಅದು ಆ ಎರಡು ನಾಗಗಳ ಏಕಾಂತ ಸಮಯ.. ಅಕ್ಷರಶಃ ರಸಮಯ ಗಳಿಗೆಗಳು.. ಯಸ್, ನಿಡಗುಂದಿ ತಾಲೂಕಿನ ನಿಡಗುಂದಿ ಪುನರ್ವಸತಿ ಕೇಂದ್ರದ ಬಳಿ ಎರಡು ಸರ್ಪಗಳು ಸಮ್ಮಿಲನಗೊಂಡಿದ್ದವು. ಇಲ್ಲಿನ ಕಾಲುವೆ ಬಳಿ ಇಂದು ಸಾಯಂಕಾಲ 3ರಿಂದ 4 ಗಂಟೆಯ ವರೆಗೆ ಅಂದ್ರೆ ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಹಾವುಗಳು ಹೀಗೆ ಸಮ್ಮಿಲನಗೊಂಡಿದ್ದವು. ಸರ್ಪಗಳ ಮಿಲನ ಮಹೋತ್ಸವವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಪರೂಪದ ಈ ದೃಶ್ಯಗಳು ನೋಡುಗರಿಗೆ ರೋಮಾಂಚಕಗೊಳಿಸಿವೆ.
Top Stories
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಸಿಂಗನಳ್ಳಿಯಲ್ಲಿ ಅಡಿಕೆ ಕಳ್ಳರ ಹಾವಳಿ, ಮನೆಯ ಪಕ್ಕದಲ್ಲೇ ಒಣ ಹಾಕಿದ್ದ ಅಡಿಕೆ ಕದ್ದೊಯ್ದ ಕಳ್ಳರು..!
ನಂದಿಕಟ್ಟಾ ಭಾಗದಲ್ಲಿ ಕೈಗೆಟುಕದ “ಕರೆಂಟು”..! ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣವೇ ಕಗ್ಗಂಟು..!!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ಜನ ಕಂಗಾಲಾಗಿದ್ದಾರೆ. ನಿತ್ಯವೂ ಇಲ್ಲಿನ ಜನ್ರು ಕತ್ತಲೆಯಲ್ಲೇ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಮನೆಯಲ್ಲೇ ಕುಳಿತು ಆನ್ ಲೈನ್ ಕ್ಲಾಸ್ ಗಾಗಿ ಕಾಯ್ತಿರೊ ಮಕ್ಕಳ ಗೋಳು ಹೇಳತೀರದ್ದು. ಯಾಕಂದ್ರೆ ಇಲ್ಲಿ ಕರೇಂಟೇ ಇರಲ್ಲ. ಕಣ್ಣಾ ಮುಚ್ಚಾಲೆ..! ನಿಜ, ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅದೇನು ಸಮಸ್ಯೆಯೋ ಗೊತ್ತಿಲ್ಲ. ಇಲ್ಲಿ ವಿದ್ಯುತ್ ಬಹುತೇಕ ಇರೋದೇ ಇಲ್ಲ. ಐದು ನಿಮಿಷ ಬಂದ್ರೆ, ಮತ್ತೆ ಒಂದು ಗಂಟೆ ಕರೇಂಟು ಕೈ ಕೊಡುತ್ತದೆ. ಪ್ರತೀ ಕ್ಷಣವೂ ಕಣ್ಣಾಮುಚ್ಚಾಲೆ ಆಟ ಅಡತ್ತೆ ಇಲ್ಲಿನ ಕರೆಂಟು.. ವಿದ್ಯಾರ್ಥಿಗಳ ಪರದಾಟ.. ಗ್ರಾಮದಲ್ಲಿ ಕರೆಂಟು ಕಣ್ಣಾ ಮುಚ್ಚಾಲೆಯಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಕಿರಿಕಿರಿ ಶುರುವಾಗಿದೆ. ಯಾಕಂದ್ರೆ ಈಗ ಕೊರೋನಾ ಸಂಕಷ್ಟದ ಮದ್ಯೆ ಶಾಲೆಗೆ ಹೋಗಲಾಗದೆ ಮನೆಯಲ್ಲೇ ಕುಳಿತು, ಆನ ಲೈನ್ ಪಾಠ ಕೇಳುತ್ತಿರೋ ಮಕ್ಕಳಿಗೆ ಕರೆಂಟು ಕಣ್ಣಾಮುಚ್ಚಾಲೆ ಇನ್ನಿಲ್ಲದ ಕಿರಿಕಿರಿ ತಂದಿದೆ. ಇನ್ಮೇಲೆ ದೂರದರ್ಶನದ ಮೂಲಕವೂ ಮಕ್ಕಳಿಗೆ ಪಾಠ ಹೇಳಿಕೊಡುವ ವ್ಯವಸ್ಥೆ ಜಾತಿಯಾಗುತ್ತಿದೆ. ಹೀಗಾಗಿ, ವಿದ್ಯುತ್ ಇಲ್ಲದೇ...
ಅಬ್ಬಾ..!! ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ಹೇಗೆ ನೆಲಸಮಗೊಳಿಸಿದ್ರು ಗೊತ್ತಾ..?
ಮುಂಡಗೋಡ: ತಾಲೂಕಿನ ಓಣಿಕೇರಿ ಗ್ರಾಮದ ಜನ ಇವತ್ತು ಒಂದು ಕ್ಷಣ ರೋಮಾಂಚಕ ಅನುಭವ ಪಡೆದುಕೊಂಡ್ರು. ಗ್ರಾಮದಲ್ಲಿ ಕುಡಿಯುವ ನೀರು ಸರಭರಾಜು ಮಾಡುವ ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ನೆಲಸಮಗೊಳಿಸಲಾಯಿತು. ಹೌದು, ಮುಂಡಗೋಡ ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ಸುಮಾರು 8ರಿಂದ 10 ವರ್ಷ ಹಳೆಯ, ಸಂಪೂರ್ಣ ಶಿಥಿಲಗೊಂಡಿದ್ದ ಕುಡಿಯುವ ನೀರಿನ ಟ್ಯಾಂಕ್ ಇತ್ತು. ನೀರಿನ ಟ್ಯಾಂಕ್ ಸಂಪೂರ್ಣವಾಗಿ ಶಿಥಿಲಗೊಂಡಿದ್ದ ಕಾರಣ ನೀರಿನ ಟ್ಯಾಂಕ್ ಪಕ್ಕದ ಮನೆಯ ಮಾಲೀಕರಾದ ರವಿ ಸಹದೇವಪ್ಪ ಸುಭಾಂಜಿ ಅವರ ಮನೆ ಮೇಲೆ ಯಾವುದೇ ಕ್ಷಣದಲ್ಲಾದ್ರೂ ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಹೀಗಾಗಿ, ಸಹದೇವಪ್ಪ ಸುಭಾಂಜಿಯವರು ಗ್ರಾಮ ಪಂಚಾಯತಿಗೆ ಈ ಕುರಿತು ಮನವಿ ಸಲ್ಲಿಸಿದ್ದರು. ಹೀಗಾಗಿ, ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದ ನೀರಿನ ಟ್ಯಾಂಕ್ ಜೆಸಿಬಿಗಳ ಸಹಾಯದಿಂದ ನೆಲಸಮಗೊಳಿಸಲಾಯಿತು. ಟ್ಯಾಂಕ್ ನೆಲಸಮಗೊಳಿಸುವ ಕಾರ್ಯ ವ್ಯವಸ್ಥಿತವಾಗಿ ನಿರ್ವಹಿಸಲಾಯಿತು. ಕ್ಷಣಾರ್ಧದಲ್ಲೇ ಇಡಿ ಟ್ಯಾಂಕ್ ನೆಲಕ್ಕುರುಳಿದಾಗ ಇಡೀ ಗ್ರಾಮಸ್ಥರಿಗೆ ಒಂದು ಕ್ಷಣ ರೋಮಾಂಚಕ ಅನುಭವ ಆಯ್ತು.
ಚವಡಳ್ಳಿ ರಸ್ತೆಯ ಗುಂಡಿ ಮುಚ್ಚಲು ಎದ್ದು ಬಂದ ಅಧಿಕಾರಿಗಳು..! ತುಂಬಾ ಥ್ಯಾಂಕ್ಸ್ ಅಂದ ಗ್ರಾಮಸ್ಥರು..!!
ಮುಂಡಗೋಡ:ತಾಲೂಕಿನ ಚೌಡಳ್ಳಿ, ಕ್ಯಾಸನಕೇರಿ ರಸ್ತೆಯ ಅದ್ವಾನಕ್ಕೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಲೇಟ್ ಆದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಹುತೇಕ ಹಳ್ಳಿಗಳಿಗೆ ರಸ್ತೆ ಸಂಪರ್ಕವನ್ನೇ ಬಂದ್ ಮಾಡಿದ್ದ ಚೌಡಳ್ಳಿ ರಸ್ತೆಗೆ ತೆಪೆ ಹಚ್ಚಲಾಗಿದೆ. ಅಂದಹಾಗೆ, ಇದು ಪಬ್ಲಿಕ್ ಫಸ್ಟ್ ಬಿಗ್ ಇಂಪ್ಯಾಕ್ಟ್.. ಆಕ್ರೋಶದ ಕಟ್ಟೆಯೊಡೆದಿತ್ತು..! ಹೌದು, ಮುಂಡಗೋಡ ತಾಲೂಕಿನ ಚೌಡಳ್ಳಿ, ಮಲವಳ್ಳಿ, ಲಕ್ಕೊಳ್ಳಿ, ಕ್ಯಾಸನಕೇರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆಯಲ್ಲಿ ನೀರಾವರಿ ಯೋಜನೆಗಾಗಿ ಪೈಪಲೈನ್ ಕಾಮಗಾರಿ ಮಾಡಲಾಗಿತ್ತು. ಪೈಪಲೈನ್ ಅಳವಡಿಸಲು ರಸ್ತೆಯಲ್ಲೇ ಗುಂಡಿ ತೆಗೆದು ಪೈಪಲೈನ್ ಜೋಡಿಸಲಾಗಿತ್ತು. ಆದ್ರೆ ಹಾಗೆ ಗುಂಡಿ ತೋಡಿ, ಪೈಪುಗಳನ್ನು ಮುಚ್ಚಿದ ನಂತರ ಸಮರ್ಪಕವಾಗಿ ಗುಂಡಿಗಳನ್ನು ಮುಚ್ಚಿಯೇ ಇರಲಿಲ್ಲ. ಹೀಗಾಗಿ, ಇತ್ತಿಚೆಗೆ ಮಳೆ ಬಂದಾಗ ಗುಂಡಿಗೆ ಹಾಕಲಾಗಿದ್ದ ಮಣ್ಣು ಸಂಪೂರ್ಣ ಕುಸಿದು, ರಸ್ತೆಯಲ್ಲಿ ವಾಹನಗಳಿರಲಿ, ಜನರೂ ಓಡಾಡದಂತ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತ ಪಡಿಸ್ತಿದ್ದರು. ಪ್ರತಿಧ್ವನಿಸಿದ್ದ ಪಬ್ಲಿಕ್ ಫಸ್ಟ್..! ಹಾಗೆ ಸಂಕಷ್ಟಕ್ಕೊಳಗಾಗಿದ್ದ ಗ್ರಾಮಗಳ ಜನರ ಆಕ್ರೋಶದ ದನಿಯನ್ನು, ಪಬ್ಲಿಕ್ ಫಸ್ಟ್...
16 ಕಿಮೀ ಜಿರೋ ಟ್ರಾಫಿಕ್ ನಲ್ಲಿ ಅಂಬ್ಯುಲೆನ್ಸ್ ಮೂಲಕ “ಲಿವರ್” ರವಾನೆ..!
ಹುಬ್ಬಳ್ಳಿ: ಎಸ್ ಡಿಎಂ ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿ, ಜಿರೋ ಟ್ರಾಫಿಕ್ ನಲ್ಲೇ ಲೀವರ್ ರವಾನೆ ಮಾಡಲಾಗಿದೆ. ಲಿವರ್ ಸಾಗಿಸಲು ಆಂಬ್ಯುಲೆನ್ಸ್ ಗೆ ಹುಬ್ಬಳ್ಳಿ ಪೊಲೀಸ್ರು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ರು. ಹುಬ್ಬಳ್ಳಿಯ SDM ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ, 16 ಕಿಲೋಮೀಟರ್ ದೂರ ಕ್ರಮಿಸಲು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಇನ್ನು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೊಬ್ಬರಿಗೆ ಲೀವರ್ ಅವಶ್ಯವಾಗಿತ್ತು. ಎಸ್ ಡಿಎಂ ಆಸ್ಪತ್ರೆಯಲ್ಲಿ ಬ್ರೇನ್ ಡೆಡ್ ಆದ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಎರಡು ಕಿಡ್ನಿ, ಕಣ್ಣು, ಲೀವರ್ ದಾನ ಮಾಡಲಾಗಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಆ ವ್ಯಕ್ತಿಯ ಲೀವರ್ ರವಾನೆ ಮಾಡಲಾಗಿದೆ.
ರಮೇಶ್ ಜಾರಕಿಹೊಳಿ ನಿಗೂಢ ನಡೆ: RSS ಮುಖಂಡರ ಭೇಟಿ ಹಿಂದಿನ ಮರ್ಮವೇನು..?
ಬೆಳಗಾವಿ: ಸಿಡಿ ಪ್ರಕರಣದಲ್ಲಿ ಸಿಲುಕಿ ಸಚಿವಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಶನಿವಾರ ಬೆಳಗ್ಗೆ ಆರ್ ಎಸ್ಎಸ್ ಪ್ರಭಾವಿ ನಾಯಕ ಅರವಿಂದರಾವ್ ದೇಶಪಾಂಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸಚಿವ ಸ್ಥಾನಕ್ಕಾಗಿ..? ಅಥಣಿಯ ದೇಶಪಾಂಡೆ ಮನೆಗೆ ತೆರಳಿದ ಜಾರಕಿಹೊಳಿ, ಸಚಿವಸ್ಥಾನ ಮರಳಿ ಪಡೆಯುವ ದಿಸೆಯಲ್ಲಿ ಸಂಘ ಪರಿವಾರದ ಮೂಲಕ ಒತ್ತಡ ಹೇರುವ ಪ್ರಯತ್ನ ಮಾಡಿದರೆಂದು ಗೊತ್ತಾಗಿದೆ. ಮಹಾರಾಷ್ಟ್ರಕ್ಕೆ ತೆರಳಿದ್ದ ವೇಳೆ ನಾಗಪುರದ ಆರ್ ಎಸ್ಎಸ್ ಕಚೇರಿಗೂ ಅವರು ಭೇಟಿ ನೀಡಿದ್ದರು. ಅರವಿಂದ ರಾವ್ ದೇಶಪಾಂಡೆ ಜೊತೆಗಿನ ಮಾತುಕತೆಯ ವಿವರ ನೀಡಲು ನಿರಾಕರಿಸಿದ ರಮೇಶ ಜಾರಕಿಹೊಳಿ ಮಾಧ್ಯಮಗಳ ಜೊತೆ ಮಾತನಾಡದೆ ತೆರಳಿದರು. ಸುತ್ತೂರು ಮಠಕ್ಕೂ ಬೇಟಿ..! ನಿನ್ನೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಸಧ್ಯದ ಪ್ರಭಾವಿ ಲಿಂಗಾಯತ ಸ್ವಾಮೀಜಿ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಜೊತೆಗೂ ಮಾತುಕತೆ ನಡೆಸಿದ್ದಾರೆ. ಇನ್ನು 8 -10 ದಿನದಲ್ಲಿ ತಾವು ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡುವ ಸಾಧ್ಯತೆಯನ್ನು ಅವರು ಬಹಿರಂಗ ಪಡಿಸಿದ್ದು, ತನ್ಮೂಲಕ ಮುಖ್ಯಮಂತ್ರಿಗಳಿಗೆ ಗಡುವು ನೀಡಿದ್ದಾರೆ. ಸಚಿವಸ್ಥಾನಕ್ಕೆ ರಾಜಿನಾಮೆ...
ಸಚಿವ ಹೆಬ್ಬಾರ್ ವಿರುದ್ಧ ಮಾನನಷ್ಟ ಮೊಕದ್ದಮೆ..! 1ರೂ.ಪರಿಹಾರ ಕೋರಿ ಮೊಕದ್ದಮೆ ದಾಖಲಿಸಿದ ನಟ..!! ಏನಿದು ಕತೆ..?
ಬೆಂಗಳೂರು: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಬೆಂಗಳೂರು ಸಿಟಿ ಸಿವಿಲ್ ಕೋರ್ಟನಲ್ಲಿ ಚಿತ್ರ ನಟ ಚೇತನ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಕೇವಲ 1 ರೂ. ಕೇಸ್.. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಸಚಿವ ಹೆಬ್ಬಾರ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ಕೇವಲ ಒಂದು ರೂಪಾಯಿ ಮಾನನಷ್ಟ ಪರಿಹಾರ ಕೋರಿ ನಟ ಚೇತನ್ ಮೊಕದ್ದಮೆ ದಾಖಲಿಸಿದ್ದಾರೆ. ಏನಿದು ವಿವಾದ..? ಇತ್ತಿಚೆಗೆ ನಟ ಚೇತನ್ ಬ್ರಾಹ್ಮಣರ ವಿರುದ್ಧ ಮಾತನಾಡಿದ್ರು ಅಂತಾ ಸಚಿವ ಶಿವರಾಮ್ ಹೆಬ್ಬಾರ್ ಗರಂ ಆಗಿದ್ರು. ಚೇತನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲೇ ಠಕ್ಕರ್ ಕೊಟ್ಟಿದ್ರು. ಬ್ರಾಹ್ಮಣರ ವಿರುದ್ಧ ಮಾತನಾಡಿದ್ದ ನಟ ಚೇತನರ ಮೇಲೆ ಕೇಸು ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದ್ರು. ಕೇವಲ 1 ರೂ. ಪರಿಹಾರ ಬೇಕಂತೆ..! ಹೀಗಾಗಿ, ನಟ ಚೇತನ ಸಚಿವ ಹೆಬ್ಬಾರ್ ವಿರುದ್ಧ ತಿರುಗಿಬಿದ್ದಿದ್ದಾರೆ. ಹೆಬ್ಬಾರ್ ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದಾರೆ. ನನಗೆ ಅದ್ರಿಂದ ಮಾನಹಾನಿಯಾಗಿದೆ. ಹೀಗಾಗಿ, ನನಗೆ 1 ರೂ. ಮಾನಹಾನಿ...
ಕ್ರಿಕೆಟ್ ನಲ್ಲಿ “ವಿರಾಟ” ಪರ್ವ ಕೊನೆಯಾಗತ್ತಾ..? ನಾಯಕತ್ವ ಬದಲಾಗತ್ತಾ..?
ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ ನ ಅಪ್ರತಿಮ ಆಟಗಾರ. ಬ್ಯಾಟ್ಸ್ ಮೆನ್ ಆಗಿ ಕ್ರೀಸ್ ಗೆ ಅಂಟಿಕೊಂಡು ನಿಂತ್ರೆ ಸುನಾಮಿಯಂತೆ ರನ್ಗಳು ಹರಿದುಬರುತ್ತೆ. ಎದುರಾಳಿಯ ಸವಾಲು ಎಷ್ಟೇ ಇರಲಿ, ಬ್ಯಾಟ್ ಝಳಪಿಸಲು ಶುರು ಮಾಡಿದ್ರೆ ಚೇಸಿಂಗ್ ಗಾಡ್. ಇನ್ನು ಫಿಟ್ ನೆಸ್ ಬಗ್ಗೆ ಹೇಳುವುದೇ ಬೇಡ. ಮಿಂಚಿನ ಗತಿಯಲ್ಲಿ ಓಡಾಡುತ್ತಾ ಚುರುಕಿನ ಫೀಲ್ಡಿಂಗ್ ಮೂಲಕ ಗಮನ ಸೆಳೆಯುತ್ತಾರೆ. ಆಕ್ರಮಣಕಾರಿ ಪ್ರವೃತ್ತಿ, ಹೋರಾಟ ಛಲ, ಗೆಲ್ಲಲೇಬೇಕು ಅನ್ನೋ ಹಠ ಹಾಗೂ ಸೋಲನ್ನು ಒಪ್ಪಿಕೊಳ್ಳದಂತಹ ಮನಸ್ಥಿತಿಯ ಆಟಗಾರ. ಒಬ್ಬ ಆಟಗಾರನಾಗಿ ವಿರಾಟ್ ಕೊಹ್ಲಿಯವರಲ್ಲಿ ಯಾವುದೇ ಒಂದು ತಪ್ಪನ್ನು ಹುಡುಕಲು ಸಾಧ್ಯವಿಲ್ಲ. ನಾಯಕನಾಗಿ ಮಿಂಚಲೇ ಇಲ್ಲ..! ಆದ್ರೆ ನಾಯಕನಾಗಿ ವಿರಾಟ್ ಕೊಹ್ಲಿ ಇಷ್ಟವಾಗುವುದಿಲ್ಲ. ನಾಯಕತ್ವದ ಗುಣಗಳಿದ್ರೂ ವಿರಾಟ್ ಕೊಹ್ಲಿ ಸತತವಾಗಿ ಎಡವುತ್ತಿದ್ದಾರೆ. ತನ್ನ ಮನೋಭಾವನೆ ಮತ್ತು ತೆಗೆದುಕೊಳ್ಳುವ ನಿರ್ಧಾರಗಳಿಂದ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಮೈದಾನದಲ್ಲಿ ವಿರಾಟ್ ಕೊಹ್ಲಿ ತಾನೊಬ್ಬ ವಿಶ್ವದ ಶ್ರೇಷ್ಠ ತಂಡದ ನಾಯಕ ಎಂಬುದನ್ನು ಮರೆತುಬಿಡುತ್ತಾರೆ. ಒಬ್ಬ ಆಕ್ರಮಣಕಾರಿಯಾಗಿ ಆಟಗಾರನಾಗಿ ಕಾಣುತ್ತಾರೆ ಹೊರತು ಒಬ್ಬ ನಾಯಕನಾಗಿ...
ಕಾರವಾರ ಕದಂಬ ನೌಕಾನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವರ ವೈಮಾನಿಕ ವೀಕ್ಷಣೆ..!
ಕಾರವಾರ: ಭಾರತೀಯ ಐಎನ್ಎಸ್ ಕದಂಬ ನೌಕಾನೆಲೆಗೆ ಗುರುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಭೇಟಿ ನೀಡಿ ಸೀಬರ್ಡ್ ಯೋಜನೆಯ ಎರಡನೇ ಹಂತದ ಯೋಜನೆಯ ಬಗ್ಗೆ ಪರಿವಿಕ್ಷಣೆ ಮಾಡಿದ್ದಾರೆ. ಗೋವಾ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ಕಾರವಾರದ ಅರಗಾದಲ್ಲಿರುವ ಐಎನ್ಎಸ್ ಕದಂಬ ನೌಕಾನೆಲೆಗೆ ಗುರುವಾರ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರೊಂದಿಗೆ ಆಗಮಿಸಿದರು. ವೆಸ್ಟರ್ನ್ ನೇವಲ್ ಕಮಾಂಡ್ ಫ್ಲಾಗ್ ಆಫೀಸರ್ ಆಗಿರುವ ಕಮಾಂಡಿಂಗ್ ವೈಸ್ ಅಡ್ಮಿರಲ್ ಆರ್. ಹರಿಕುಮಾರ್ ಹಾಗೂ ಕರ್ನಾಟಕ ನೌಕಾ ಪ್ರದೇಶದ ಫ್ಲಾಗ್ ಆಫೀಸರ್ ರಿಯಲ್ ಅಡ್ಮಿರಲ್ ಮಹೇಶ್ ಸಿಂಗ್ ಅವರು ನೌಕಾನೆಲೆ ಹ್ಯಾಲಿಪ್ಯಾಡ್ನಲ್ಲಿ ಕೇಂದ್ರ ಸಚಿವರನ್ನು ಸ್ವಾಗತಿಸಿದರು. ಕಾಮಗಾರಿ ವೀಕ್ಷಣೆ..! ಸೀಬರ್ಡ್ ಪ್ರವೇಶದ ಬಳಿಕ ನೌಕಾನೆಲೆಯ ಸುತ್ತಲೂ ತೆರಳಿ ವೀಕ್ಷಣೆ ನಡೆಸಿದ ಸಚಿವರು ಶಿಪ್ ರಿಪೇರ್ ಯಾರ್ಡ್ ಬಳಿ ಹಡಗುಗಳನ್ನು ಲಿಫ್ಟ್ ಮಾಡುವ ಸಾಮರ್ಥ್ಯದ ಪ್ರದರ್ಶನವನ್ನು ವೀಕ್ಷಿಸಿದರು. ಇಲ್ಲಿನ ವಿವಿಧ ಸೈಟ್ಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ಸೀಬರ್ಡ್ ಯೋಜನೆಯ ಎರಡನೇ ಹಂತದ ವಿಸ್ತರಣೆ...
ಇದು ಟಿಬೇಟಿಯನ್ ಕಾಲೋನಿಯಲ್ಲಿ ಕಂಡ ಅದ್ಭುತ ದೃಷ್ಯ..! ನೋಡಿದ್ರೆ ಮೈ ಜುಮ್ ಅನ್ನತ್ತೆ..!!
ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ.6 ರಲ್ಲಿ ಇವತ್ತು ಒಂದು ಅದ್ಭುತ ನಡೆದಿದೆ. ಕಾಳಿಂಗ ಸರ್ಪವೊಂದು ಗಿಡದ ಮೇಲೇರಿ ಹೆಡೆ ಎತ್ತಿ ಸ್ವಚ್ಚಂದವಾಗಿ ಆಟವಾಡಿದೆ. ಯಸ್, ಇದು ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಕಂಡು ಬಂದ ಅದ್ಭುತ ದೃಷ್ಯ. ಹೇಗಿದೆ ಅಂತಾ ಈ ವಿಡಿಯೋ ನೋಡಿ..