Miss World: ಹೈದರಾಬಾದ್‌ : ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ, ಥೈಲ್ಯಾಂಡ್‌ನ ಓಪಲ್ ಸುಚಾಟಾ 2025 ರ ಮಿಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

72 ನೇ ಆವೃತ್ತಿಯ ಮಿಸ್ ವರ್ಲ್ಡ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಜ್ಕೋವಾ ತಮ್ಮ ಕಿರೀಟವನ್ನು ಹೊಸ ಪ್ರಶಸ್ತಿ ವಿಜೇತರಿಗೆ ಹಸ್ತಾಂತರಿಸಿದರು. ಇಥಿಯೋಪಿಯಾದ ಹ್ಯಾಸೆಟ್‌ ಡೆರೆಜೆ ಮೊದಲ ರನ್ನರ್‌‌ಅಪ್‌ ಆದರೆ, 2ನೇ ರನ್ನರ್‌ ಅಪ್‌ ಆಗಿ ಪೋಲೆಂಡ್‌ನ ಮಜಾ ಕ್ಲಾಜ್ಡಾ ಹೊರಹೊಮ್ಮಿದರು.

ಓಪಲ್ ಅವರು ಮಿಸ್ ವರ್ಲ್ಡ್ ಕಿರೀಟವನ್ನು ಗೆದ್ದಿದ್ದಕ್ಕೆ ಥೈಲ್ಯಾಂಡ್ ಸಂತೋಷಪಡುತ್ತಿದ್ದರೆ, ಭಾರತದ ಪ್ರತಿನಿಧಿ ನಂದಿನಿ ಗುಪ್ತಾ ಟಾಪ್ 8 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆಯಲು ವಿಫಲರಾದರು.

ಈ ವರ್ಷ, ಪ್ರಪಂಚದಾದ್ಯಂತದ 108 ಸ್ಪರ್ಧಿಗಳು ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು, ಮತ್ತು ವಿಜೇತರಿಗೆ 2024 ರ ವಿಶ್ವ ಸುಂದರಿ ಕ್ರಿಸ್ಟಿನಾ ಪಿಸ್ಜ್ಕೋವಾ ಕಿರೀಟವನ್ನು ಧರಿಸಿದರು.
ವಿಶ್ವ ಸುಂದರಿ ಕಿರೀಟ ಸುಮಾರು 8 ಕೋಟಿ ರೂ. ಬೆಳೆ ಬಾಳುತ್ತದೆ.

ವಿಶೇಷ ಎಂದರೆ ಭಾರತ ಇದು 3ನೇ ಬಾರಿ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯ ವಹಿಸಿದೆ. ಈ ಹಿಂದೆ 1996 ಮತ್ತು 2024ರಲ್ಲಿ ಭಾರತದಲ್ಲಿ ಈ ಪ್ರತಿಷ್ಠಿತ ಸ್ಪರ್ಧೆ ನಡೆದಿತ್ತು. ಮುಂಬೈನಲ್ಲಿ ನಡೆದ ಅತ್ಯಂತ ಯಶಸ್ವಿ 71 ನೇ ಆವೃತ್ತಿಯ ನಂತರ, ಭಾರತ ಮತ್ತೊಮ್ಮೆ ಪ್ರತಿಷ್ಠಿತ ಸ್ಪರ್ಧೆಯನ್ನು ಆಯೋಜಿಸುವ ಮೂಲಕ 72 ನೇ ಮಿಸ್ ವರ್ಲ್ಡ್ ಆವೃತ್ತಿಯು ಇತಿಹಾಸ ನಿರ್ಮಿಸಿದೆ, ಅಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಜ್ಕೋವಾ ಪ್ರಶಸ್ತಿ ಗೆದ್ದಿದ್ದರು.

error: Content is protected !!