ಮುಂಡಗೋಡ: ತಾಲೂಕಿನ ಕೊಪ್ಪ ಬಳಿ ಬೀಕರ ಅಪಘಾತ ಸಂಭವಿಸಿದೆ. ಲಾರಿ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸ್ಕಿಡ್ ಆಗಿ ಲಾರಿಯಡಿ ಬಿದ್ದು ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ.
Video Player
00:00
00:00
ನಂದಿಕಟ್ಟಾ ಗ್ರಾಮದ ಷರೀಫ್ ಎಂಬುವ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಇನ್ನು ಮತ್ತೋರ್ವ ಸವಾರ ವಿಶ್ವನಾಥ್ ಸವಣೂರ್ ಗಂಭೀರ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾನೆ. ಇಬ್ಬರೂ ಯುವಕರು ನಂದಿಕಟ್ಟಾ ಗ್ರಾಮದಿಂದ ಮುಂಡಗೋಡಿಗೆ ಹೋಗುವ ವೇಳೆ, ಮುಂಡಗೋಡ ಕಡೆಗೆ ಹೋಗುತ್ತಿದ್ದ ಲಾರಿ ಓವರ್ ಟೇಕ್ ಮಾಡಲು ಹೋಗಿ ಅನಾಹುತ ಸಂಭವಿಸಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.