ಆ ಪುಟ್ಟ ಕಂದಮ್ಮನ ಸಾವಿಗೆ “ಅಯ್ಯೋ ಪಾಪ ಹೀಗೆ ಆಗಬಾರದಿತ್ತು” ಅಂದ್ರಷ್ಟೇ ಸಾಕಾ..? ಹಾಗಾದ್ರೆ ಇನ್ನೇಷ್ಟು ಬಲಿ ಬೇಕು..?

ಆ ಪುಟ್ಟ ಕಂದಮ್ಮನ ಸಾವಿಗೆ “ಅಯ್ಯೋ ಪಾಪ ಹೀಗೆ ಆಗಬಾರದಿತ್ತು” ಅಂದ್ರಷ್ಟೇ ಸಾಕಾ..? ಹಾಗಾದ್ರೆ ಇನ್ನೇಷ್ಟು ಬಲಿ ಬೇಕು..?

ನಿಜ, ಮಮ್ಮಲ ಮರುಗುತ್ತಿದೆ ಇಡೀ ಮುಂಡಗೋಡ..! ಹಾಗೇ ಒಮ್ಮೆ ಕಲ್ಪಿಸಿಕೊಳ್ಳಿ, ಆ ಕಂದಮ್ಮ ಸಾವು ಬದುಕಿನ ಮದ್ಯೆ ಹೋರಾಡುತ್ತ, ಹುಬ್ಬಳ್ಳಿಯ ಕಿಮ್ಸ್ ICU ಬೆಡ್ಡಿನ ಮೇಲೆ ನರಳಿತ್ತಿರೋ ಸಂದರ್ಭ, ಆ ಹೆತ್ತ ಕರುಳುಗಳು ಪಟ್ಟಿರೋ ಸಂಕಟ ಎಷ್ಟಿರಬಹುದು ಅಲ್ವಾ..? ಇದೇಲ್ಲ ಸಾಕ್ಷಿ ಕೇಳುವವರಿಗೆ ಯಾಕೆ ಅರ್ಥವಾಗ್ತಿಲ್ಲ..? ಇದು, ಮುಂಡಗೋಡ ತಾಲೂಕಿನ ಜನರ ಮಿಲಿಯನ್ ಡಾಲರ್ ಪ್ರಶ್ನೆ. ಸಾಕ್ಷಿ ಬೇಕಂತೆ..? ಎಲ್ಲಿಂದ ನಗಬೇಕೋ ಅರ್ಥವೇ ಅಗುತ್ತಿಲ್ಲ ಕಣ್ರಿ, ಆ ಮುಗ್ದ ಕಂದಮ್ಮನ ಸಾವಿಗೆ ಕಾರಣನಾದ ವೈದ್ಯನ ವಿರುದ್ಧ ಕ್ರಮ‌ ಕೈಗೊಳ್ಳಲು ಸಾಕ್ಷಿ ಬೇಕಂತೆ..! ಹಾಗಾದ್ರೆ ಇನ್ಮುಂದೆ, ಮುಂಡಗೋಡ ತಾಲೂಕಿನ ಹಳ್ಳಿಗಳ ಮುಗ್ದ ಜನರು ಇಲ್ಲಿನ ಖಾಸಗಿ ಆಸ್ಪತ್ರೆಗೆ ಹೋಗಬೇಕು ಅಂದ್ರೆ ಅದಕ್ಕೆ ಪೂರಕವಾದ ಸಾಕ್ಷಿ ಇಟ್ಕೊಂಡೆ ಹೋಗಬೇಕೆನೋ..? ಅಷ್ಟಕ್ಕೂ, ಸಾಕ್ಷಿಯ ಹೆಸರಲ್ಲಿ ಬಡವರನ್ನು ಹೆದರಿಸಿ ಇನ್ನೇಷ್ಟು ಮುಗ್ದ ಪ್ರಾಣಗಳ ಜೊತೆ ಚೆಲ್ಲಾಟವಾಡೋದು..? ಆ ಹೆತ್ತವರ ಕರುಳ ಕಣ್ಣೀರಿನ ಶಾಪ ಸುಮ್ನೆ ಬಿಡತ್ತಾ..? ಅಂದಹಾಗೆ, ಇಲ್ಲಿ ಸಾಕ್ಷಿ ಕೊಡಿ ಅಂತಾ ಕೇಳ್ತಿರೋರು ನಮ್ಮ ಪೊಲೀಸರು...

ಪೆಟ್ರೊಲ್ ಬೆಲೆ ಏರಿಕೆಗೆ ಖಂಡನೆ: ಮುಂಡಗೋಡಿನಲ್ಲಿ ಕಾಂಗ್ರೆಸ್ ಪ್ರತಿಭಟನೆ..!

ಪೆಟ್ರೊಲ್ ಬೆಲೆ ಏರಿಕೆಗೆ ಖಂಡನೆ: ಮುಂಡಗೋಡಿನಲ್ಲಿ ಕಾಂಗ್ರೆಸ್ ಪ್ರತಿಭಟನೆ..!

ಮುಂಡಗೋಡ: ಕೇಂದ್ರ ಸರ್ಕಾರ ಪದೇ ಪದೇ ತೈಲ ಬೆಲೆ ಏರಿಸುತ್ತಿರುವುದನ್ನು ಖಂಡಿಸಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಪೆಟ್ರೋಲ್ ಬಂಕ್ ನಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಶೀಘ್ರವೇ ಪೆಟ್ರೊಲ್ ದರ ಕಡಿಮೆ ಮಾಡುವಂತೆ ಆಗ್ರಹಿಸಿದ್ರು. ಈ ಸಂದರ್ಭದಲ್ಲಿ ಮುಂಡಗೋಡ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್. ಎಂ. ನಾಯಕ್ ಮುಂಡಗೋಡ ಉಸ್ತುವಾರಿಗಳಾದ ಸುರೇಶ್ ಸವಣೂರು, ಎಂ ಎನ್ ದುಂಡಿಸಿ, ಅಲಿ ಹಸನ್ ಬೆಂಡಿಗೇರಿ, ಧರ್ಮರಾಜ್ ನಡಿಗೇರ, ರಾಜು ಹಿರೇಮಠ, ಪಟ್ಟಣ ಪಂಚಾಯಿತಿ ಸದಸ್ಯರಾದ ಮಹಮ್ಮದ್ ಗೌಸ್ ಮಕಾನದಾರ, ಜಾಫರ ಹಂಡಿ, ನಾಗರಾಜ ಹಂಚಿನಮನಿ, ರಾಜು ಬೋವಿ, ಮಲ್ಲು ಗೌಳಿ, ಜೈನೂ ಬೆಂಡಿಗೇರಿ, ಅಲ್ಲಾವುದ್ದೀನ್, ಬಸವರಾಜ ಆಸ್ತಕಟ್ಟಿ, ಆಶಿಫ್ ಮಕಾಂದಾರ ಸೇರಿದಂತೆ ತಾಲ್ಲೂಕಿನ ಮುಖಂಡರುಗಳು, ಘಟಕದ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು

ಪೆಟ್ರೊಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ..!

ಪೆಟ್ರೊಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ..!

ದೇವರಹಿಪ್ಪರಗಿ: ಪಟ್ಟಣದ ಪೆಟ್ರೊಲ್ ಬಂಕ್ ಹತ್ತಿರ ಇಂದು ಕಾಂಗ್ರೆಸ್ ಕಾರ್ಯಕರ್ತರು. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು. ಪ್ರತಿಭಟನೆ ಮಾಡಿ ಮಾತನಾಡಿದ ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಗುಡಿಮನಿ, ದೇಶದಲ್ಲಿ ಸುಮಾರು ಏಳು ವರ್ಷಗಳಿಂದ ಪೆಟ್ರೊಲ್ ಬೆಲೆ ಏರುತ್ತಲೇ ಇದೆ. ದಿನನಿತ್ಯ ಬಳಸುವ ಗ್ಯಾಸ್ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಅಂತಾ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರ್ ಬಿಜಾಪುರ್, ಬಶೀರ್ ಬೇಪಾರಿ, ರಜಾಕ್ ಹರವಾಳ, ರಾಘವೇಂದ್ರ ಪಡಗಾನೂರ, ಯಾಕೂಬ್ ಶಹಪುರ್, ದಾದಾಪೀರ್ ಬೇಪಾರಿ, ಮಾಂತೇಶ್ ಚಲವಾದಿ, ರಾಕೇಶ್ ಮೇಲಿನಮನಿ, ಹಾಜಿಲಾಲ, ಮಸಳಿ ಹೀಗೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶ್ವಾನ ಪ್ರಿಯರೇ ಗಮನಿಸಿ..! ಈ ಶ್ವಾನದ ಹೊಟ್ಟೆಯಲ್ಲಿದೆ ಚಿನ್ನ..!!

ಶ್ವಾನ ಪ್ರಿಯರೇ ಗಮನಿಸಿ..! ಈ ಶ್ವಾನದ ಹೊಟ್ಟೆಯಲ್ಲಿದೆ ಚಿನ್ನ..!!

ಸಾಮಾನ್ಯವಾಗಿ ನಮಗೆ ಭದ್ರತೆ ನೀಡಲೆಂದು ನಾಯಿ ಸಾಕುತ್ತೇವೆ. ಆದರೆ, ಇಲ್ಲೊಂದು ಕುಟುಂಬ ಮಾಡಿದ ಎಡವಟ್ಟಿಗೆ ಹಗಲು ರಾತ್ರಿ ತಮ್ಮ‌ಸಾಕು ನಾಯಿಗೆ ಭದ್ರತೆ ನೀಡುವಂತಾಗಿದೆ. ಅಂದಹಾಗೆ, ಇದಕ್ಕೆಲ್ಲ ಕಾರಣ ಬಂಗಾರದ ಚೈನ್, ಹೌದು! ನೀವು ಇದನ್ನು ನಂಬಲೇ ಬೇಕು. ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದ ದಿಲೀಪಕುಮಾರ್ ಹಿರೇಮಠ ಅವರ ಪಮಾರಿನ್ ತಳಿಯ ನಾಯಿ ಮರಿ ಸದ್ಯ 2 ತಿಂಗಳದ್ದು, ಮನೆ ಮಂದಿಗೆಲ್ಲ ಅಚ್ಚುಮೆಚ್ಚು. ಆದರೆ, ಮಾಲೀಕನ ಬಂಗಾರ ಚೈನ್ ಈಗ ನಾಯಿಯ ಹೊಟ್ಟೆ ಸೇರಿಬಿಟ್ಟಿದೆ. 2 ತೊಲೆ ಬಂಗಾರದ ಚೈನನ್ನು ಕಚ್ಚಿ ತುಂಡು ಮಾಡಿ ತಿಂದುಬಿಟ್ಟಿದೆ ಶ್ವಾನ. ಈ ವೇಳೆ ಮಾಲೀಕ ನಿದ್ದೆಗೆ ಜಾರಿದ್ದರು. ಎಚ್ಚರವಾದಾಗ ನಾಯಿ ಬಳಿ ಚೈನ್ ತುಂಡುಗಳನ್ನು ಗಮನಿಸಿ ಶಾಕ್ ಆಗಿದ್ದಾರೆ. ಕೂಡಲೇ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಚಿಕ್ಕ ಮರಿಯಾದ ಕಾರಣ ಆಪರೇಷನ್ ಬೇಡವೆಂದು ಡಾಕ್ಟರ್ ತಿಳಿಸಿದ್ದಾರೆ. ಇದೆ ವೇಳೆ ನಾಯಿ ಬಹಿರ್ದೆಸೆ ಮಾಡಿದ್ದು, ಒಂದೆರೆಡು ತುಂಡುಗಳು ಬಂದಿವೆ. ಸದ್ಯ ನಾಯಿಮರಿ ಹೊಟ್ಟೆಯಲ್ಲಿ 80 ಸಾವಿರ ರೂ. ಚಿನ್ನವಿದೆ...

ಇದೇ ತಿಂಗಳು ಮದುವೆಯಿತ್ತು..! ಆದ್ರೆ ಮದುಮಗ ಮಾತ್ರ ಇವತ್ತು ರೈಲಿಗೆ ತಲೆ ಕೊಟ್ಟು ಬಿಟ್ಟ..! ಯಾಕೆ ಹೀಗಾಯ್ತು..?

ಇದೇ ತಿಂಗಳು ಮದುವೆಯಿತ್ತು..! ಆದ್ರೆ ಮದುಮಗ ಮಾತ್ರ ಇವತ್ತು ರೈಲಿಗೆ ತಲೆ ಕೊಟ್ಟು ಬಿಟ್ಟ..! ಯಾಕೆ ಹೀಗಾಯ್ತು..?

ಹಾವೇರಿ: ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಆಗಬೇಕಿದ್ದ ಯುವಕ ರೈಲು ಹಳಿಗೆ ಬಿದ್ದು ಸಾವು ಕಂಡ ಘಟನೆ ಹಾವೇರಿ ನಗರದ ಹೊರವಲಯದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಹಾವೇರಿ ಬಸವೇಶ್ವರ ನಗರದ ನಿವಾಸಿ, ವೀರೇಶ್ ಬೆನಕಪ್ಪನವರ (36), ಮೃತ ಯುವಕನಾಗಿದ್ದು ಇತ್ತೀಚೆಗಷ್ಟೇ ಮದುವೆ ನಿಶ್ಚಿತಾರ್ಥವಾಗಿತ್ತು. ಈ ತಿಂಗಳು 28 ರಂದು ಹಾವೇರಿಯಲ್ಲಿ ಮದವೆ ಕೂಡ ನಿಶ್ಚಯವಾಗಿತ್ತು. ಆದ್ರೆ ಮಾನಸಿಕ ಖಿನ್ನತೆಗೆ ಒಳಗಾಗಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಶಂಕೆ ವ್ಯಕ್ತವಾಗಿದೆ. ಇನ್ನು ಸ್ಥಳಕ್ಕೆ ರೈಲ್ವೆ ಪೋಲಿಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಹಾವೇರಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಗಲಿದ ದಲಿತ ಕವಿ ಡಾ.ಸಿದ್ದಲಿಂಗಯ್ಯ, ಕಳೆದ ವರ್ಷ ಬನವಾಸಿಯಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಿದ್ದ ಕ್ಷಣ ಇನ್ನೂ ಅಚ್ಚ ಹಸಿರು..!

ಅಗಲಿದ ದಲಿತ ಕವಿ ಡಾ.ಸಿದ್ದಲಿಂಗಯ್ಯ, ಕಳೆದ ವರ್ಷ ಬನವಾಸಿಯಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಿದ್ದ ಕ್ಷಣ ಇನ್ನೂ ಅಚ್ಚ ಹಸಿರು..!

ಶಿರಸಿ: ಇಂದು ನಾಡಿನ ಹಿರಿಯ ಸಾಹಿತಿ, ದಲಿತ ಕವಿ, ಡಾ. ಸಿದ್ದಲಿಂಗಯ್ಯ ವಿಧಿವಶರಾಗಿದ್ದಾರೆ. ಹಿರಿಯ ಕವಿಯ ನಿಧನಕ್ಕೆ ನಾಡಿನೆಲ್ಲೆಡೆ ಸಂತಾಪ ವ್ಯಕ್ತವಾಗಿದೆ. ಅಂದಹಾಗೆ, ದಲಿತ ಕವಿ ಸಿದ್ದಲಿಂಗಯ್ಯನವರಿಗೆ ಕಳೆದ ವರ್ಷವಷ್ಟೇ ಶಿರಸಿಯ ಬನವಾಸಿ ಕದಂಬೋತ್ಸವದಲ್ಲಿ ಪಂಪ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕಳೆದ ವರ್ಷ ಫೆಬ್ರವರಿ 8, 2020ರಲ್ಲಿ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದಿದ್ದ ಕದಂಬೋತ್ಸವದಲ್ಲಿ ಡಾ.ಸಿದ್ದಲಿಂಗಯ್ಯ ಪಂಪ ಪ್ರಶಸ್ತಿ ಸ್ವೀಕರಿಸಿದ್ದರು. ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಿಂದ ಪ್ರಶಸ್ತಿ ಸ್ವೀಕರಿಸಿದ್ದ ಸಾಹಿತಿ ಇಂದು ಅಗಲಿದ್ದು ಬನವಾಸಿಯಲ್ಲಿ ಸಾಹಿತ್ಯಾಸಕ್ತರು ನೆನಪಿಸಿಕೊಂಡಿದ್ದಾರೆ.

ಕಾತೂರಿನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಎಗರಿಸಿದ ಕಳ್ಳರು..!

ಕಾತೂರಿನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಎಗರಿಸಿದ ಕಳ್ಳರು..!

ಮುಂಡಗೋಡ: ತಾಲೂಕಿನ ಕಾತೂರು ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳುವು ಮಾಡಿದ ಘಟನೆ ನಡೆದಿದೆ. ಶಿರಾಜ್ ಬೊಮ್ನಳ್ಳಿ ಎಂಬುವವರ ಹೀರೋ ಹೊಂಡಾ ಸ್ಪೆಂಡರ್ ಪ್ರೊ ಬೈಕ್ ಕಳ್ಳತನವಾಗಿದೆ. ಮನೆ ಮುಂದೆ ನಿಲ್ಲಿಸಿದ್ದಾಗ ರಾತ್ರಿ ಯಾರೋ ಖದೀಮರು ಬಂದು ಬೈಕ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಅಂತಾ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಶಿರಾಜ್ ಬೊಮ್ನಳ್ಳಿ ದೂರು ದಾಖಲಿಸಿದ್ದಾರೆ

ಮುಂಡಗೋಡ ತಾಲೂಕಿನಲ್ಲಿ ಶನಿವಾರ ಕರೆಂಟು ಇರಲ್ಲ..! ಎಲ್ಲೇಲ್ಲಿ..?

ಮುಂಡಗೋಡ ತಾಲೂಕಿನಲ್ಲಿ ಶನಿವಾರ ಕರೆಂಟು ಇರಲ್ಲ..! ಎಲ್ಲೇಲ್ಲಿ..?

ಮುಂಡಗೋಡ: ಪಟ್ಟಣದಲ್ಲಿ ಹಾಗೂ ಟಿಬೇಟಿಯನ್ ಕಾಲೋನಿಗಳಲ್ಲಿ ನಾಳೆ ಶನಿವಾರ ವಿದ್ಯುತ್ ವ್ಯತ್ಯಯವಾಗಲಿದೆ ಅಂತಾ ಹೆಸ್ಕಾಂ ಮುಂಡಗೋಡ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಮುಂಡಗೋಡ ಉಪವಿಭಾಗದ 110/11 ಕೆ.ವಿ.ವಿದ್ಯುತ್ ಕೇಂದ್ರದಿಂದ ಮುಂಡಗೋಡ ಪಟ್ಟಣ ಹಾಗೂ ಟಿಬೇಟಿಯನ್ ಕಾಲೋನಿಗಳಿಗೆ ಹೊರಡುವ 11 ಕೆ.ವಿ.ಮಾರ್ಗದಲ್ಲಿ ತುರ್ತು ಕಾಮಗಾರಿ ಕೈಗೊಳ್ಳುತ್ತಿರೋ ಕಾರಣ, ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಅಂತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂಡಗೋಡ ತಾಲೂಕಿನಲ್ಲಿ ಇಂದು 14 ಜನ್ರಿಗೆ ಕೊರೋನಾ ಸೋಂಕು ದೃಢ..!

ಮುಂಡಗೋಡ ತಾಲೂಕಿನಲ್ಲಿ ಇಂದು 14 ಜನ್ರಿಗೆ ಕೊರೋನಾ ಸೋಂಕು ದೃಢ..!

ಮುಂಡಗೋಡ:ತಾಲೂಕಿನಲ್ಲಿ ಇಂದು 14 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ ಅಂತಾ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್ ಇಂಗಳೆ ಮಾಹಿತಿ ನೀಡಿದ್ದಾರೆ. ಪಟ್ಟಣದ ಗಾಂಧಿನಗರ- 1, ಹೊಸ ಓಣಿ-1, ತಹಶೀಲ್ದಾರ್ ಕ್ವಾಟರ್ಸ್ ನಲ್ಲಿ -2, ನೆಹರು ನಗರ-1, ಇಂದೂರು-1, ಜನಗೇರಿ-1, ಕವಲಗಿ-1, ಕೊಳಗಿ- 3 ಹಾಗೂ ಚೌಡಳ್ಳಿ ಗ್ರಾಮದಲ್ಲಿ 4 ಪಾಸಿಟಿವ್ ಪ್ರಕರಣಗಳು ದೃಢ ಪಟ್ಟಿವೆ.

ಬ್ರಾಹ್ಮಣರ ವಿರುದ್ಧ ನಟ ಚೇತನ್ ಹೇಳಿಕೆ:  ಸಚಿವ ಶಿವರಾಮ್ ಹೆಬ್ಬಾರ್ ಖಂಡನೆ..!

ಬ್ರಾಹ್ಮಣರ ವಿರುದ್ಧ ನಟ ಚೇತನ್ ಹೇಳಿಕೆ: ಸಚಿವ ಶಿವರಾಮ್ ಹೆಬ್ಬಾರ್ ಖಂಡನೆ..!

ಯಲ್ಲಾಪುರ: ಕನ್ನಡ ಚಿತ್ರ ನಟ ಚೇತನ್, ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ವಿರುದ್ಧವಾಗಿ ಅವಹೇಳನಕಾರಿಯಾಗಿ, ಪ್ರಚೋದನಕಾರಿಯಾಗಿ ಮಾತಾಡಿರುವುದು ತೀವ್ರ ಖಂಡನಾರ್ಹ ಅಂತಾ ಸಚಿವ ಶಿವರಾಮ್ ಹೆಬ್ಬಾರ್ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರೋ ಸಚಿವ್ರು, ಚೇತನ್ ಹೇಳಿಕೆ ಗಮನಕ್ಕೆ ಬಂದಿದ್ದು. ಮೊದಲಿಗೆ, ಆತನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ. ಇನ್ನು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ, ಜಾತಿಗಳಿಗೆ ಸ್ಥಾನಮಾನ ನೀಡಿದ್ದಾರೆ. ಈ ವ್ಯಕ್ತಿಯ ಹೇಳಿಕೆ ಸಂವಿಧಾನಕ್ಕೆ ವಿರೋಧವಾದುದು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವಂತಹದು ಅಂತಾ ಹೆಬ್ಬಾರ್ ಕಿಡಿ ಕಾರಿದ್ದಾರೆ. ಸಮಾಜದಲ್ಲಿ ತಾನು ಗುರುತಿಸಿಕೊಳ್ಳಬೇಕು ಅಂತಲೋ, ಗಂಜೀ ಕಾಸಿನ ಆಸೆಗೋ ಹೇಳಿಕೆ ಕೊಡೋ ಇಂತಹ ಸಮಾಜ ಕಂಟಕರನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ ಅಂತಾ ಇದೇ ವೇಳೆ ಹೆಬ್ಬಾರ್ ತಿಳಿಸಿದ್ದಾರೆ.  

error: Content is protected !!