ಇದೇ ತಿಂಗಳು ಮದುವೆಯಿತ್ತು..! ಆದ್ರೆ ಮದುಮಗ ಮಾತ್ರ ಇವತ್ತು ರೈಲಿಗೆ ತಲೆ ಕೊಟ್ಟು ಬಿಟ್ಟ..! ಯಾಕೆ ಹೀಗಾಯ್ತು..?

ಹಾವೇರಿ: ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಆಗಬೇಕಿದ್ದ ಯುವಕ ರೈಲು ಹಳಿಗೆ ಬಿದ್ದು ಸಾವು ಕಂಡ ಘಟನೆ ಹಾವೇರಿ ನಗರದ ಹೊರವಲಯದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಹಾವೇರಿ ಬಸವೇಶ್ವರ ನಗರದ ನಿವಾಸಿ, ವೀರೇಶ್ ಬೆನಕಪ್ಪನವರ (36), ಮೃತ ಯುವಕನಾಗಿದ್ದು ಇತ್ತೀಚೆಗಷ್ಟೇ ಮದುವೆ ನಿಶ್ಚಿತಾರ್ಥವಾಗಿತ್ತು. ಈ ತಿಂಗಳು 28 ರಂದು ಹಾವೇರಿಯಲ್ಲಿ ಮದವೆ ಕೂಡ ನಿಶ್ಚಯವಾಗಿತ್ತು. ಆದ್ರೆ ಮಾನಸಿಕ ಖಿನ್ನತೆಗೆ ಒಳಗಾಗಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಶಂಕೆ ವ್ಯಕ್ತವಾಗಿದೆ.

ಇನ್ನು ಸ್ಥಳಕ್ಕೆ ರೈಲ್ವೆ ಪೋಲಿಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಹಾವೇರಿ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!