ಶ್ವಾನ ಪ್ರಿಯರೇ ಗಮನಿಸಿ..! ಈ ಶ್ವಾನದ ಹೊಟ್ಟೆಯಲ್ಲಿದೆ ಚಿನ್ನ..!!

ಸಾಮಾನ್ಯವಾಗಿ ನಮಗೆ ಭದ್ರತೆ ನೀಡಲೆಂದು ನಾಯಿ ಸಾಕುತ್ತೇವೆ. ಆದರೆ, ಇಲ್ಲೊಂದು ಕುಟುಂಬ ಮಾಡಿದ ಎಡವಟ್ಟಿಗೆ ಹಗಲು ರಾತ್ರಿ ತಮ್ಮ‌ಸಾಕು ನಾಯಿಗೆ ಭದ್ರತೆ ನೀಡುವಂತಾಗಿದೆ.

ಅಂದಹಾಗೆ, ಇದಕ್ಕೆಲ್ಲ ಕಾರಣ ಬಂಗಾರದ ಚೈನ್, ಹೌದು! ನೀವು ಇದನ್ನು ನಂಬಲೇ ಬೇಕು. ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದ ದಿಲೀಪಕುಮಾರ್ ಹಿರೇಮಠ ಅವರ ಪಮಾರಿನ್ ತಳಿಯ ನಾಯಿ ಮರಿ ಸದ್ಯ 2 ತಿಂಗಳದ್ದು, ಮನೆ ಮಂದಿಗೆಲ್ಲ ಅಚ್ಚುಮೆಚ್ಚು. ಆದರೆ, ಮಾಲೀಕನ ಬಂಗಾರ ಚೈನ್ ಈಗ ನಾಯಿಯ ಹೊಟ್ಟೆ ಸೇರಿಬಿಟ್ಟಿದೆ.

2 ತೊಲೆ ಬಂಗಾರದ ಚೈನನ್ನು ಕಚ್ಚಿ ತುಂಡು ಮಾಡಿ ತಿಂದುಬಿಟ್ಟಿದೆ ಶ್ವಾನ. ಈ ವೇಳೆ ಮಾಲೀಕ ನಿದ್ದೆಗೆ ಜಾರಿದ್ದರು. ಎಚ್ಚರವಾದಾಗ ನಾಯಿ ಬಳಿ ಚೈನ್ ತುಂಡುಗಳನ್ನು ಗಮನಿಸಿ ಶಾಕ್ ಆಗಿದ್ದಾರೆ. ಕೂಡಲೇ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಚಿಕ್ಕ ಮರಿಯಾದ ಕಾರಣ ಆಪರೇಷನ್ ಬೇಡವೆಂದು ಡಾಕ್ಟರ್ ತಿಳಿಸಿದ್ದಾರೆ.

ಇದೆ ವೇಳೆ ನಾಯಿ ಬಹಿರ್ದೆಸೆ ಮಾಡಿದ್ದು, ಒಂದೆರೆಡು ತುಂಡುಗಳು ಬಂದಿವೆ. ಸದ್ಯ ನಾಯಿಮರಿ ಹೊಟ್ಟೆಯಲ್ಲಿ 80 ಸಾವಿರ ರೂ. ಚಿನ್ನವಿದೆ ಇದರಿಂದ ಮನೆಮಂದಿಯೆಲ್ಲ ಹಗಲು ರಾತ್ರಿ ನಾಯಿಯನ್ನು ಕಾಯಬೇಕಾದ ಸ್ಥಿತಿ ಎದುರಾಗಿದೆ. ಆದ್ರೆ ಆ ನಾಯಿ ಮರಿ ಮಾತ್ರ ಆರಾಮಾಗಿ ತುಂಟಾಟ ಮಾಡ್ತಾ ಮನೆತುಂಬ ಕುಣಿದಾಡ್ತಿದೆ.

ಎಂತಾ ವಿಚಿತ್ರ ಅಲ್ವಾ..?

error: Content is protected !!