ಅಗಲಿದ ದಲಿತ ಕವಿ ಡಾ.ಸಿದ್ದಲಿಂಗಯ್ಯ, ಕಳೆದ ವರ್ಷ ಬನವಾಸಿಯಲ್ಲಿ ಪಂಪ ಪ್ರಶಸ್ತಿ ಸ್ವೀಕರಿಸಿದ್ದ ಕ್ಷಣ ಇನ್ನೂ ಅಚ್ಚ ಹಸಿರು..!

ಶಿರಸಿ: ಇಂದು ನಾಡಿನ ಹಿರಿಯ ಸಾಹಿತಿ, ದಲಿತ ಕವಿ, ಡಾ. ಸಿದ್ದಲಿಂಗಯ್ಯ ವಿಧಿವಶರಾಗಿದ್ದಾರೆ. ಹಿರಿಯ ಕವಿಯ ನಿಧನಕ್ಕೆ ನಾಡಿನೆಲ್ಲೆಡೆ ಸಂತಾಪ ವ್ಯಕ್ತವಾಗಿದೆ.

ಅಂದಹಾಗೆ, ದಲಿತ ಕವಿ ಸಿದ್ದಲಿಂಗಯ್ಯನವರಿಗೆ ಕಳೆದ ವರ್ಷವಷ್ಟೇ ಶಿರಸಿಯ ಬನವಾಸಿ ಕದಂಬೋತ್ಸವದಲ್ಲಿ ಪಂಪ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಕಳೆದ ವರ್ಷ ಫೆಬ್ರವರಿ 8, 2020ರಲ್ಲಿ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆದಿದ್ದ ಕದಂಬೋತ್ಸವದಲ್ಲಿ ಡಾ.ಸಿದ್ದಲಿಂಗಯ್ಯ ಪಂಪ ಪ್ರಶಸ್ತಿ ಸ್ವೀಕರಿಸಿದ್ದರು.

ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಿಂದ ಪ್ರಶಸ್ತಿ ಸ್ವೀಕರಿಸಿದ್ದ ಸಾಹಿತಿ ಇಂದು ಅಗಲಿದ್ದು ಬನವಾಸಿಯಲ್ಲಿ ಸಾಹಿತ್ಯಾಸಕ್ತರು ನೆನಪಿಸಿಕೊಂಡಿದ್ದಾರೆ.

error: Content is protected !!