ಮುಂಡಗೋಡ ತಾಲೂಕಿನ ಚವಡಳ್ಳಿಯಲ್ಲಿ ಭಾರಿ ಬದಲಾವಣೆಯ ಗಾಳಿ ಬೀಸಿದೆ. ಇದುವರೆಗೂ ಬಿಜೆಪಿಯ ನೆರಳಲ್ಲಿದ್ದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅಸಲು, ಬಿಜೆಪಿ ಚವಡಳ್ಳಿ ಘಟಕದ ಅಧ್ಯಕ್ಷರೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದ್ರೊಂದಿಗೆ ಇಬ್ಬರು ಗ್ರಾಮ ಪಂಚಾಯತಿ ಸದಸ್ಯರೂ ಸೇರಿದಂತೆ, ನೂರಾರು ಕಾರ್ಯಕರ್ತರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಅಂದಹಾಗೆ, ನಿಂಗಜ್ಜ ಕೋಣನಕೇರಿ ಚವಡಳ್ಳಿ ಭಾಗದ ಸಂಭಾವಿತ, ಪ್ರಭಾವಿ ಮುಖಂಡ. ಇವ್ರು ಬಿಜೆಪಿಯ ಚವಡಳ್ಳಿ ಘಟಕದ ಅಧ್ಯಕ್ಷರೂ ಆಗಿದ್ದವರು. ಆದ್ರೆ, ರವಿವಾರ ರಾತ್ರಿ ಬಿಜೆಪಿ ತೊರೆದಿದ್ದಾರೆ. ಇವ್ರೊಂದಿಗೆ ಇಬ್ಬರು ಗ್ರಾಪಂ ಸದಸ್ಯೆಯರು, ಸೊಸೈಟಿ ಸದಸ್ಯರುಗಳು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಇದ್ರಿಂದ ಈ ಭಾಗದಲ್ಲಿ ಬಿಜೆಪಿಗೆ ಭಾರಿ ಮರ್ಮಾಘಾತ ನೀಡಿದ್ದಾರೆ. ಅಸಲು, ಮುಂಡಗೋಡ ತಾಲೂಕಿನಲ್ಲಿ ಈಗ ಪಕ್ಷಾಂತರ ಪರ್ವ ಜೋರಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರುವವರು ಸಂಖ್ಯೆಗಿಂತ, ಬಿಜೆಪಿ ತೊರೆದು ಕಾಂಗ್ರೆಸ್ ಸೇರುವವರ ಸಂಖ್ಯೆಯೇ ಹೆಚ್ಚಾಗಿದೆ. ಇತ್ತಿಚೆಗಷ್ಟೇ ಬೆಡಸಗಾಂವ್ ನಲ್ಲಿ ಹಲವು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್...
Top Stories
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಶಿಗ್ಗಾಂವ ವಿಧಾನಸಭಾ ಕ್ಷೇತ್ರ: ಮೊದಲ ದಿನವೇ ನಾಲ್ಕು ನಾಮಪತ್ರ ಸಲ್ಲಿಕೆ
ಸಿಎಂ ವಿರುದ್ಧ ನೆಹರು ಓಲೇಕಾರ್ ಅವಾಚ್ಯ ಪದ ಬಳಕೆ ಹಿನ್ನೆಲೆ, ಶಿಗ್ಗಾವಿಯಲ್ಲಿ ಓಲೇಕಾರ ವಿರುದ್ಧ ಪ್ರತಿಭಟನೆ..!
ಶಿಗ್ಗಾವಿ: ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ನೆಹರು ಓಲೆಕಾರ್, ಸಿಎಂ ಬಸವರಾಜ್ ಬೊನ್ಮಾಯಿಯವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಹೇಳಿಕೆಯನ್ನು ಖಂಡಿಸಿ ಶಿಗ್ಗಾವಿ ಪಟ್ಟಣದಲ್ಲಿ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದಿಂದ ಪ್ರತಿಭಟನೆ ಮತ್ತು, ನೆಹರು ಓಲೆಕಾರ ಅವರ ಪ್ರತಿಕೃತಿ ದಹನ ಮಾಡಲಾಯಿತು. ಪಟ್ಟಣದ ರಾಣಿಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದ ಬಸವರಾಜ ಬೊಮ್ಮಾಯಿ ಅಭಿಮಾನಿಗಳು, ಜನತಾ ಬಜಾರ ವೃತ್ತದವರಗೆ ಸಾಗಿ ನೆಹರು ಓಲೆಕಾರ ಅವರ ಪ್ರತಿಕೃತಿಗೆ ಪಟಾಕಿ ಸುತ್ತಿ, ಸುಡುವ ಮೂಲಕ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ರು. ಬಿಜೆಪಿ ಮುಖಂಡ, ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಪಕ್ಷದಿಂದ ಟಿಕೆಟ ನೀಡಲಿಲ್ಲಾ ಎಂಬ ಕಾರಣಕ್ಕೆ ವಿಕೃತ ಮನಸ್ಸಿನ, ಹೀನ ಮನಸ್ಥಿತಿಯಿಂದ, ಮಾತನಾಡಿರುವ ಓಲೆಕಾರ ಅವರು ಶಿಗ್ಗಾವಿ, ಸವಣೂರು ಜನತೆಗೆ ಅವಮಾನ ಮಾಡಿದ್ದಾರೆ, ತಾಯಂದಿರಿಗೆ ಅವಮಾನ ಮಾಡಿದ್ದಾರೆ. ಗೌರವಾನ್ವಿತ ಮುಖ್ಯಮಂತ್ರಿಗಳ ಸ್ಥಾನದಲ್ಲಿರುವ ಬಸವರಾಜ ಬೊಮ್ಮಾಯಿ ಅವರಿಗೆ ಅವಾಚ್ಯ ಶಬ್ಧಗಳಿಂದ ಮಾತನಾಡಿ ಅವಮಾನ ಮಾಡಿರುವ ಅವರ ವಿರುದ್ದ ಸರಕಾರವು ಕಾನೂನು ರೀತಿ ಕ್ರಮ ಜರುಗಿಸಿ ಜಿಲ್ಲೆಯಿಂದ...
ಬಿಎಸ್ ವೈ ಪುತ್ರ ವಿಜಯೇಂದ್ರರಿಗೆ ಬಂಜಾರಾ ತಾಂಡಾದಲ್ಲಿ ಬಹಿಷ್ಕಾರ, ಧಿಕ್ಕಾರ ಕೂಗಿ ಆಕ್ರೋಶ..!
ಶಿಕಾರಿಪುರ: ಯಡಿಯೂರಪ್ಪ ಅವರ ಮಗ ವಿಜಯೇಂದ್ರರವರು ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ಚುನಾವಣಾ ಪ್ರಚಾರಕ್ಕೆಂದು ಬಂದಿದ್ದಾಗ ತಾಂಡಾದ ಜನರಿಂದ ಬಹಿಷ್ಕರಿಸಲಾಯಿತು, ಹಾಗೂ ತಾಂಡಾ ಬಚಾವೋ ಬಿಜೆಪಿ ಹಟಾವೋ ಎಂದು ಘೊಷಣೆ ಕೂಗಲಾಯಿತು. ಪ್ರಚಾರಕ್ಕೆಂದು ತಾಂಡಾಕ್ಕೆ ಬಂದಿದ್ದ ಬಿ.ವೈ. ವಿಜಯೇಂದ್ರರವರಿಗೆ ತಾಂಡಾದಲ್ಲಿ ಮಹಿಳೆಯರೂ ಸೇರಿದಂತೆ ಯುವಕರು ಧಿಕ್ಕಾರಗಳ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ರು. ರಾಜ್ಯದ ಎಲ್ಲಾ ಲಂಬಾಣಿ ತಾಂಡಾಗಳಲ್ಲೂ ಈ ರೀತಿ ಮಾಡಿದರೆ ಮಾತ್ರ ನಮ್ಮ ಬಂಜಾರರ ಒಗ್ಗಟ್ಟು ಏನೆಂಬುದನ್ನು ಅರ್ಥೈಸಬಹುದು. ನಮ್ಮ ಏಳಿಗೆಗೆ ಮುಂದಿನ ಪೀಳಿಗೆಗೆ ಕೊಳ್ಳಿ ಇಟ್ಟ ಸರ್ಕಾರಕ್ಕೆ ಗೊತ್ತಾಗುವುದು ಅಂತಾ ಆಕ್ರೋಶ ಹೊರಹಾಕಿದ್ರು. ಒಗ್ಗಟ್ಟು ಪ್ರದರ್ಶನ ಮಾಡಿ ಪ್ರಚಾರ ಮಾಡದಂತೆ ತಡೆ ನೀಡಿದ್ರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶಿರಸಿಗೆ ಹೊರಟ ಮಾಜಿ ಸಿಎಂ, ಬಿಜೆಪಿಗೆ ಮರ್ಮಾಘಾತ ಕೊಡೊದು ಫಿಕ್ಸ್..!
ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶಿರಸಿಗೆ ತೆರಳುತ್ತಿದ್ದಾರೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಬಳಿ ಸಮಯ ಕೇಳಿರೋ ಮಾಜಿ ಸಿಎಂ ಶೆಟ್ಟರ್ ಗೆ ಬೆಳಿಗ್ಗೆ 10.30 ಕ್ಕೆ ಬರುವಂತೆ ಕಾಗೇರಿ ತಿಳಿಸಿರೋ ಹಿನ್ನೆಲೆಯಲ್ಲಿ ಶಿರಸಿ ಕಡೆಗೆ ಪ್ರಯಾಣ ಬೆಳಿಸಿದ್ದಾರೆ. ಮಾಜಿ ಸಿಎಂ ಶೆಟ್ಟರ್ ಹೇಳಿದ್ದಿಷ್ಟು..! ಇದೇ ವೇಳೆ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಸದ್ಯ ಶಿರಸಿಗೆ ತೆರಳ್ತಾ ಇದ್ದೇನೆ. ಕಾಗೇರಿ ಅವರ ಬಳಿ ಸಮಯ ಕೇಳಿದ್ದು, 10:30 ಕ್ಕೆ ಬರಲು ಹೇಳಿದ್ದಾರೆ. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ರಾಜ್ಯಾದ್ಯಕ್ಷರಿಗೆ ಮಾತಾಡಿದ್ದೇನೆ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಡುತ್ತೇನೆ. ವಾಪಸ್ ಬಂದು ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇನೆ ಅಂತಾ ತಿಳಿಸಿದ್ದಾರೆ. ಸ್ಪರ್ಧೆ ಖಚಿತ..! ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಬಿಜೆಪಿ ನಾಯಕರಿಂದ ಮತ್ತೆ ಯಾವುದೇ ಕರೆ ಬಂದಿಲ್ಲ, ಕೊನೆಯ ವಿಸ್ಮಯ ನಡೆಯಲ್ಲ....
ಘಟಪ್ರಭಾ ನದಿಯಲ್ಲಿ ಮುಂಡಗೋಡಿನ ನಾಲ್ವರು ಯುವಕರ ಸಾವು ಕೇಸ್, ಚಿಕಿತ್ಸೆ ಫಲಿಸದೇ ಮತ್ತೋರ್ವ ಯುವಕ ಸಾವು..!
ಮುಂಡಗೋಡ: ತಾಲೂಕಿನ ಶಿರಗೇರಿ ಗ್ರಾಮದ ಯುವಕರು, ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿಯಲ್ಲಿ ಈಜಲು ಹೋಗಿ ಮೃತಪಟ್ಟವರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ. ನೀರಲ್ಲಿ ಮುಳುಗಿ ತೀವ್ರ ಅಸ್ವಸ್ಥ ಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಅನ್ನೊ ಮಾಹಿತಿ ಲಭ್ಯವಾಗಿದೆ. ತಾಲೂಕಿನ ಶಿರಗೇರಿ ಗ್ರಾಮದ ರಾಮಚಂದ್ರ ಜೋರೆ ಎಂಬುವನೆ ಸಾವನ್ನಪ್ಪಿದ ಮತ್ತೋರ್ವ ಯುವಕನಾಗಿದ್ದು, ನಿನ್ನೆ ಶುಕ್ರವಾರ ದುಪದಾಳ ಗ್ರಾಮದ ಸನಿಹ ಘಟಪ್ರಭಾ ನದಿಯಲ್ಲಿ 6ಜನ ಸ್ನೇಹಿತರು ಈಜಲು ಇಳಿದಿದ್ದರು ಈ ವೇಳೆ ನಾಲ್ವರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದು ಮತ್ತಿಬ್ಬರು ತೀವ್ರ ಅಸ್ವಸ್ಥಗೊಂಡಿದ್ದರು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರ; ಜೆಡಿಎಸ್ ಟಿಕೆಟ್ ನಾಗೇಶ್ ನಾಯ್ಕ್ ಪಾಲು, ಸಂತೋಷ ರಾಯ್ಕರ್ ಪಡೆ ತೀವ್ರ ಆಕ್ರೋಶ..!
ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ತನ್ನ ಅಭ್ಯರ್ಥಿ ಘೋಷಣೆ ಮಾಡಿದೆ. ಪ್ರೊ. ನಾಗೇಶ್ ನಾಯ್ಕ್ ಯಲ್ಲಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಆದ್ರೆ, ಜೆಡಿಎಸ್ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂತೋಷ ರಾಯ್ಕರ್ ಅಸಂತೋಷಗೊಂಡಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ.. ಜೆಡಿಎಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂತೋಷ ರಾಯ್ಕರ್ ತೀವ್ರ ಅಸಮಾಧಾನ ಗೊಂಡಿದ್ದಾರೆ. ಹೀಗಾಗಿ, ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಬಂಡಾಯದ ಬಾವುಟ ಹಾರಿಸಿದ್ದಾರೆ. ಹೀಗಾಗಿ, ಮೊದಲೇ ಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿರೋ ಜೆಡಿಎಸ್ ಇದ್ದವರಲ್ಲೇ ಒಡೆದು ಹೋಳಾಗಿದ್ದಾರೆ. ಇನ್ನು ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸಂತೋಷ ರಾಯ್ಕರ್ ಮಳಗಿ ಮುಂದಿನ ನಡೆ ಏನು ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.
ಘಟಪ್ರಭಾ ನದಿಯಲ್ಲಿ ಭೀಕರ ದುರಂತ, ಮುಂಡಗೋಡಿನ ನಾಲ್ವರು ಯುವಕರು ನದಿಯಲ್ಲಿ ಮುಳುಗಿ ಸಾವು..!
ಬೆಳಗಾವಿ ಜಿಲ್ಲೆಯ ಘಟಪ್ರಭಾದಲ್ಲಿ ಭಾರೀ ಅನಾಹುತ ಸಂಭವಿಸಿದೆ.. ಘಟಪ್ರಭಾ ನದಿಯಲ್ಲಿ ಮುಳುಗಿ ಮುಂಡಗೋಡ ತಾಲೂಕಿನ ನಾಲ್ವರು ಯುವಕರು ದಾರುಣ ಸಾವು ಕಂಡಿದ್ದಾರೆ. ಇಬ್ಬರು ಗಂಭೀರವಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮುಂಡಗೋಡ ತಾಲೂಕಿನ ಸಿರಿಗೇರಿ ಗ್ರಾಮದ ಸಂತೋಷ ಬಾಬು ಎಡಗೆ(19), ಅಜಯ್ ಬಾಬು ಜೋರೆ (19), ಕೃಷ್ಣ ಬಾಬು ಜೋರೆ (19), ಆನಂದ್ ವಿಷ್ಣು ಕೋಕರೆ (20) ನೀರಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇನ್ನು ಘಟನೆಯಲ್ಲಿ ರಾಮಚಂದ್ರ ವಿಷ್ಣು ಕೋಕರೆ, ವಿಠ್ಠಲ್ ಜಾನು ಕೋಕರೆ ನೀರಲ್ಲಿ ಮುಳುಗಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸದ್ಯ ಘಟಪ್ರಭಾದ KHA ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಮೃತ ಯುವಕರು ಘಟಪ್ರಭಾದಲ್ಲಿ ಬಾರ್ ನಲ್ಲಿ ಕೆಲಸಕ್ಕೆಂದು ಹೋಗಿದ್ದರು ಎನ್ನಲಾಗಿದೆ. ಇಂದು ಸ್ನಾನಕ್ಕೆ ನದಿಗೆ ಇಳಿದಾಗ ಘಟನೆ ನಡೆದಿದೆ ಎನ್ನಲಾಗಿದೆ. ಮೃತ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನೆಹರು ಓಲೇಕಾರ್ ಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಹಾವೇರಿಯಲ್ಲಿ ಸಿಎಂ ಭಾವಚಿತ್ರಕ್ಕೆ ಚಪ್ಪಲಿ ಏಟು ಹಾಕಿ ಆಕ್ರೋಶ, ಪ್ರತಿಭಟನೆ..!
ಹಾವೇರಿಯಲ್ಲಿ ಬಿಜೆಪಿ ಬಂಡಾಯದ ಬೆಂಕಿ ಧಗಧಗಿಸುತ್ತಿದೆ. ಹಾವೇರಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ರೆಬೆಲ್ ಶಾಸಕ ನೆಹರೂ ಓಲೇಕಾರ್ ಹಾಗೂ ಬೆಂಬಲಿಗರು ಬೀದಿಗಿಳಿದು ಆಕ್ರೋಶ ಹೊರಹಾಕಿದ್ದಾರೆ. ಸಿಎಂ ಬೊಮ್ಮಾಯಿ ಭಾವಚಿತ್ರ ಹರಿದು ಹಾಕಿ ಆಕ್ರೋಶ ವ್ಯಕ್ತ ಪಡಿಸಿ, ಬೊಮ್ಮಾಯಿ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿದ್ದಾರೆ. ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸುತ್ತಿರೋ ನೆಹರೂ ಓಲೇಕಾರ್ ಬೆಂಬಲಿಗರು, ಸಿಎಂ ಬೊಮ್ಮಾಯಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಈ ವೇಳೆ ನೆಹರೂ ಓಲೆಕಾರ್ ಬೆಂಬಲಿಗರನ್ನು ಪೊಲೀಸರು ತಡೆಯಲು ಮುಂದಾಗಿದ್ದಾರೆ. ಆದ್ರೆ, ಆಕ್ರೋಶಗೊಂಡಿರೋ ಬೆಂಬಲಿಗರು ರೆಬೆಲ್ ಶಾಸಕ ನೆಹರೂ ಓಲೇಕಾರ್ ನೇತೃತ್ವದಲ್ಲಿ ಬಿಜೆಪಿ ವಿರಿದ್ಧ ಕಿಡಿ ಕಾರಿದ್ದಾರೆ. ಹಾವೇರಿ ಕ್ಷೇತ್ರದಿಂದ ಟಿಕೆಟ್ ಸಿಗದ ಹಿನ್ನಲೆ. ಬುಗಿಲೆದ್ದಿರುವ ನೇಹರು ಓಲೇಕಾರ ಅಸಮಾಧಾನಗೊಂಡಿದ್ದಾರೆ, ಅನ್ಯಾಯ ಅನ್ಯಾಯ ನೆಹರು ಓಲೇಕಾರ ಗೆ ಅನ್ಯಾಯ ಎಂದು ಘೋಷಣೆ ಕೂಗುತ್ತ, ಬೇಕೆ ಬೇಕೆ ಟಿಕೆಟ್ ಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಹಿಗಾಗಿ, ಸಿಎಂ ಭಾವಚಿತ್ರಕ್ಕೆ ಚಪ್ಪಲಿ...
ಅಯ್ಯೋ ವಿಧಿಯೇ..! ಆಟೋ ಡಿಕ್ಕಿಯಾಗಿ ನಾಲ್ಕು ತಿಂಗಳ ಗರ್ಭಿಣಿ ದಾರುಣ ಸಾವು..!
ಅಂಕೋಲಾ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗರ್ಭಿಣಿ ಮಹಿಳೆಯೋರ್ವಳಿಗೆ ರಿಕ್ಷಾ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾವಿಕೇರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಶೋಭಾ ಗೋಪಾಲ ನಾಯಕ (28) ಎಂಬಾಕೆಯೆ ಮೃತಪಟ್ಟ ದುರ್ದೈವಿಯಾಗಿದ್ದಾಳೆ, ಮೃತ ಮಹಿಳೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು ಎನ್ನಲಾಗಿದೆ. ಈಕೆ ಪತಿಯ ಜೊತೆಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಟೋ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಆಟೋ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬದಿಗೆ ಬಂದು ಅಪಘಾತ ಪಡಿಸಿದ್ದಾನೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಮಹಿಳೆಯ ತಲೆಗೆ ಗಂಭೀರವಾಗಿ ಗಾಯಗೊಂಡು. ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಪಘಾತವಾಗಿರುವುದನ್ನ ಗಮನಿಸಿದ ಚಾಲಕ ಸ್ಥಳದಲ್ಲಿ ನಿಲ್ಲಿಸದೆ ಆಟೋದೊಂದಿಗೆ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈತರ ಜಮೀನಿಗೆ ತೆರಳುವ ರಸ್ತೆ ಅತಿಕ್ರಮಣ, ತೆರವುಗೊಳಿಸದೇ ಇದ್ರೆ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಅನ್ನದಾತರು..!
ಶಿಗ್ಗಾವಿಯಲ್ಲಿ ರಾಜಕೀಯ ಪ್ರಭಾವಿಗಳ ಕಾರಸ್ಥಾನದಿಂದ ರೈತರು ಕಂಗಾಲಾಗಿದ್ದಾರೆ. ನೂರಾರು ವರ್ಷಗಳಿಂದಲೂ ಇದ್ದ ಸಾರ್ವಜನಿಕ ರಸ್ತೆಯನ್ನು ಒತ್ತು ವರಿ ಮಾಡಿಕೊಂಡಿರೋ ಪ್ರಭಾವಿಗಳು ರೈತರಿಗೆ ಜೀವ ಹಿಂಡ್ತಿದಾರೆ ಅಂತಾ ರೈತರು ಆಕ್ರೋಶ ಹೊರಹಾಕಿದ್ದಾರೆ. ಈ ಕಾರಣಕ್ಕಾಗೇ ಚುನಾವಣೆ ಬಹಿಷ್ಕಾರ ಮಾಡುವ ತೀರ್ಮಾನ ಕೈಗೊಂಡಿದ್ದಾರೆ. ಈ ಕುರಿತು ಈಗಾಗಲೇ ಸರ್ಕಾರಕ್ಕೆ ಎಚ್ಚರಿಕೆಯ ಮನವಿ ಅರ್ಪಿಸಿದ್ದಾರೆ. ಮನವಿಯಲ್ಲೇನಿದೆ..? ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಚಾಕಾಪೂರ-ಕುರ್ಷಾಪುರ ಗ್ರಾಮದ ಪೈಕಿ, ಬಿಸನಳ್ಳಿ ಹೊಟ್ಟಾರ ಕಲ್ಯಾಣ ಗ್ರಾಮಗಳಿಂದ ಹೋಗಿ ಬರಲು 1834 ನೇ ರಿಂದಲೂ ಸಾರ್ವಜನಿಕ ಸರಕಾರಿ ಸರಹದ್ದಿನ ರಸ್ತೆ (ದಾರಿ) ಇದೆ. ಅಂದಹಾಗೆ, ಈ ರಸ್ತೆಯನ್ನು ಶ್ರೀಮತಿ, ಲಕ್ಷ್ಮೀಬಾಯಿ ಕೋಂ ವಾದಿರಾಜ ಶೆಟ್ಟಿ ಮತ್ತು ಅವರ ಮಗ ನರಹರಿ ವಾದಿರಾಜ ಕಟ್ಟಿ, ಎಂಬುವವರು ತಮ್ಮ ಜಮೀನಿನ ಚಾಕಾಪೂರ ಗ್ರಾಮದ ರಿ.ಸ.ನಂ: 18/1 ರಲ್ಲಿ ಪೆಟ್ರೋಲ್ ಬಂಕ್ ನ್ನು 2006 ರಲ್ಲಿ ಸ್ಥಾಪಿಸಿದ್ದಾರೆ. ಅದು ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಹೊಂದಿಕೊಂಡಿದೆ. ಹೀಗಿರೋ ಪೆಟ್ರೋಲ್ ಬಂಕನ ಪಶ್ಚಿಮ ದಿಕ್ಕಿನಲ್ಲಿ, ಉತ್ತರದಿಂದ...